ಅಲೆಮಾರಿ ಜೀವಕೆ ಆಸರೆಯ ನೀಡಿದೆ

0


ಮನಸ್ಸಿನ ಕಿಟಕಿಯ ಬಾಗಿಲನು ತೆರೆಯುತ
ತೆರೆಮರೆಯಲಿ ಮರೆಯಾಗಿ ಇಣುಕುತಲಿರುವೆ
ಕನಸಿನ ಪುಟಗಳ ಸಾಲಗಳ ಕೊರೆಯುತ
ನನ್ನೆದೆಯಲಿ ಮೆದುವಾಗಿ ಕುಟುಕುತಲಿರುವೆ
ಅಲೆಮಾರಿ ಜೀವಕೆ ಆಸರೆಯ ನೀಡಿದೆ ||
ವ್ಯಭಿಚಾರಿ ಭಾವಕೆ ನೀ ಸೆರೆಯ ನೀಡಿದೆ ||

ಆಪ್ಯಾಯಮಾನ ಯಾತನೆಯ ನೆಮ್ಮದಿಯ   
ತೆರೆದಿಟ್ಟು ಮುಳುಗಿದ ಏಕಾಂತಕೆ ಉಸಿರು ನೀಡಿದೆ
ದೇದೀಪ್ಯಮಾನ ಯೋಜನೆಯ ಮುನ್ನುಡಿಯ
ಬರೆದಿಟ್ಟು ಬಳಲಿದ ಲೇಖನಿಗೆ ಹುರುಪು ನೀಡಿದೆ ||ಅಲೆಮಾರಿ ಜೀವಕೆ ||

ಮನದ ಮುಗಿಲಲಿ ಭಾವನೆಯ ಗಾಳಿಪಟವ 
ಹಾರಿಬಿಟ್ಟು ಹರಿದ ದಾರಕೆ ಚೇತನವ ನೀಡಿದೆ
ಕನಸ ಮಗ್ಗುಲಲಿ ಅಪ್ರಮೇಯ ಕನವರಿಕೆಯ
ಬಚ್ಚಿಟ್ಟು ಕಳೆದ ಗಳಿಗೆಗೆ ಸಾಂತ್ವನವ  ನೀಡಿದೆ ||ಅಲೆಮಾರಿ ಜೀವಕೆ ||

ನಿಮ್ಮ
ಕಾಮತ್ ಕುಂಬ್ಳೆ

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.