ಅರೆ ಮಲೆನಾಡಿನ ಮಾಗಿ ಹಣ್ಣು 'ಗುಡ್ಡೇ ಗೇರು'

5

ಅರೆ ಮಲೆನಾಡಿನ ಮಾಗಿ ಹಣ್ಣು ಗುಡ್ಡೇ ಗೇರು

ಲೆನಾಡಿನ ಕಾಡಿನಲ್ಲಿ ಕಾಲ ಕಾಲಕ್ಕೆ ತಕ್ಕಂತೆ ಬಗೆಬಗೆಯ ಫಲಪುಷ್ಪಗಳು ದೊರೆಯುತ್ತವೆ. ಇವುಗಳಲ್ಲಿ ಕೆಲವು ಉಪಯೋಗಕ್ಕೆ ಬಾರವು. ಕೆಲವು ಗಿಡಮೂಲಿಕೆ ಔಷಧಕ್ಕೆ ಮಾತ್ರ ಬಳಕೆ. ಆದಗೆ ಈ ಗುಡ್ಡೇ ಗೇರು ಔಷಧಕ್ಕೆ, ತಿನ್ನಲಿಕ್ಕೆ, ನೋಡಲಿಕ್ಕೂ ಚೆಂದ ಈ ಹಣ್ಣುಗಳು. ರಾಜ್ಯದ ಬಹುತೇಕ ಕಡೆ ಕಂಡಬಂದರೂ ಅರೆಮಲೆನಾಡಿನಲ್ಲಿ ಅತಿ ಹೆಚ್ಚು ಕಾಣಸಿಗುತ್ತದೆ. ಅಸ್ಸಾಂ,ಗುಜರಾತ್,ಕೇರಳ ಮುಂತಾದ ಕಡೆಗೂ ಇದು ಕಾಣಸಿಗುತ್ತದೆ. ಏಷ್ಯಾದ ದಕ್ಷಿಣ ಭಾಗ, ದಕ್ಷಿಣ ಆಫ್ರಿಕಾ ಮುಂತಾದ ಜಗತ್ತಿನ ಇತರ ಪ್ರದೇಶಗಳಲ್ಲಯೂ ಕಂಡುಬರುವ ಇದರ ವೈಜ್ಞಾನಿಕ ಹೆಸರು 'ಸೇಮೋಕಾರ್ಪಸ್ ಅನಾಕಾರ್ಡಿಯಮ್'.

ಮಳೆಗಾಲದ ಆರಂಭದಲ್ಲಿ  ಹೂ ಬಿಡುವ ಇದು ಮಾಗಿಯ ಕಾಲಕ್ಕೆ, ಅಂದರೆ ನವೆಂಬರ್ - ಡಿಸೆಂಬರ್ ತಿಂಗಳಲ್ಲಿ ಮಾಗಿದ ಹಣ್ಣುಗಳು ಸಿಗುತ್ತವೆ. ಕಾಯಿ ಇದ್ದಾಗ ಕಾಯಿ ಮತ್ತು ಬೀಜ ಎರೆಡೂ ಹಸಿರಾಗಿರುತ್ತವೆ. ಕಾಯಿ ಹಣ್ಣಾದಾಗ ಹಳದಿ ಮಿಶ್ರಿತ ಕೆಂಪು ಬಣ್ಣದಿಂದ ಕೂಡಿರುತ್ತವೆ. ಕೆಂಪನೆಯ ಈ ಹಣ್ಣುಗಳು ಗಿಡದಲ್ಲಿದ್ದಾಗ ಅಂಲಕಾರಿಕ ವಿದ್ಯತ್ ದೀಪ ಹಚ್ಚಿದಂತೆ ಕಾಣುತ್ತವೆ. ತಿನ್ನಲು ಬಲು ರಿಚಿಯಾದ ಈ ಹಣ್ಣುಗಳು ಹಸಿಯಿದ್ದಾಗ ಮತ್ತು ಪೂರ್ಣ ಹಣ್ಣಾಗದಿದ್ದಾಗ ತಿನ್ನಲು ಒಗರಾಗಿದ್ದು ಗಂಟಲುಹಿ ಡಿಯುತ್ತವೆ. ಬಿಲಿಸಿನಲ್ಲಿ ಒಣಗಿಸಿ ಅಥವಾ ಹುರಿದು ತಿನ್ನುವುದರಿಂದ ರುಚಿ ಮತ್ತು ಸ್ವಾದ ಇನ್ನೂ ಹೆಚ್ಚಾಗಿರುತ್ತದೆಯಲ್ಲದೆ ಆರೋಗ್ಯದ ದೃಷ್ಟಿಯಿಂದಲೂ ಒಳ್ಳೆಯದು.  ಬಿಸಿಲಿನಲ್ಲಿ ಒಣಗಿಸಿಟ್ಟರೆ ತಿಂಗಳುಗಟ್ಟಲೆ ಇಟ್ಟುಕೊಂಡುತಿನ್ನಬಹುದಾಗಿದೆ. ಸರಮಾಡಿದ ಹಣ್ಣುಗಳನ್ನು ಆಲೆಮನೆಯ ಬೆಲ್ಲದ ಕೊಪ್ಪರಿಗೆಯಲ್ಲಿ ಅದ್ದು ತಿಂದರೆ ಅದರ ರುಚಿನೇ ಬೇರೆ.

ಗುಡ್ಡೇ ಗೇರಿನ ಔಷಧಿಯ ಗುಣ

ಮಲೆನಾಡಿನಲ್ಲಿ ಈ ಗುಡ್ಡೇ ಗೇರು ಔಷಧಿಯಾಗಿ ಹೆಚ್ಚು ಪರಿಚತ. ಇದರ ಸೊನೆ ಅಥವಾ ಎಣ್ಣಯ ಅಂಶ ಮೈಗೆ ತಾಗಿದರೆ, ಬೆಂಕಿ ತಗುಲಿದರಾಗುವ ಗುಳ್ಳೆಗಳಂತೆ ಮೈಮೇಲೆ ಗುಳ್ಳೆಗಳಾಗುತ್ತವೆ. ಅಲ್ಲದೆ ಗಂಭೀರವಲ್ಲದ ಗಾಯವಾಗಿ ಕಿರಿ ಕಿರಿಯುಂಟಾಗುತ್ತದೆ. ಇದರ ಎಣ್ಣಯಿಂದ ಬೆಂಕಿ ವೃಧ್ಧಿಸುತ್ತದೆ. ಆದ್ದರಿಂದ ಇದನ್ನು ' ಅಗ್ನಿ ವರ್ಧಕ'  'ಅಗ್ನಿಮುಖಿ' ಎಂದು ಕರೆಯುತ್ತಾರೆ.  ಈ ಹಣ್ಣಿನ ಉಪಯೋಗವಷ್ಟೇ ಅಲ್ಲದೆ ಇದರ ಕಪ್ಲು ಬೀಜಗಳೂ ಪ್ರಯೋಜನಕಾರಿ. ಈ ಬೀಜಗಳಿಂದ ಎಣ್ಣೆ ತೆಗೆಯುತ್ತಾರೆ. ಈ ಎಣ್ಣೆಯನ್ನು ಮೊರ, ಬುಟ್ಟಿ ಮುಂತಾದ ಮರದ ದಿನಬಳಕೆಯ ವಸ್ತುಗಳಿಗೆ ಹಚ್ಚುತ್ತಾರೆ. ಇದರಿಂದ ಆ ವಸ್ತುಗಳು ಹಚ್ಚುದಿನ ಬಾಳಿಕೆ ಬರುತ್ತವೆ. ಕಾಲಿಗೆ ಕೆಸರು ಹುಣ್ಣಾಗಬಾರದೆಂದು ಎಳೇ ಗೇರು ಬೀಜದ ಸೊನೆಯನ್ನು ಮಳೆಗಾಲದಲ್ಲಿ ಕಾಲಿನ ಬೆರಳುಗಳ ಸಂದಿಗೆ ಹಚ್ಚಿಕೊಳ್ಳುತ್ತಾರೆ. ಇದರ ಎಣ್ಣೆಯನ್ನು ಬಟ್ಟಯ ಮೇಲೆ, ಗೋಣಿಚೀಲದ ಮೇಲೆ ಗುರುತು ಮಾಡಲು, ಹೆಸರು ಬರೆಯಲು ಬಳಸುತ್ತಿದ್ದರು. ಕಾರಣ ಶಾಶ್ವತವಾಗಿರುತ್ತಿದೆ. ಆದ್ದರಿಂದ ಬ್ರಿಟೀಷರು ಇದನ್ನು ' ಮಾರ್ಕಿಂಗ್  ನೆಟ್ 'ಎಂದು ಕರೆಯುತ್ತಿದ್ದರು. ಒಣಗಿದ ಬೀಜಗಳ ಒಳಗಿರುವ ತಿರುಳು ಗೋಡಂಬಿಯಂತಿದ್ದು ಅದರಷ್ಟೇ ರುಚಿಯಾಗಿರುತ್ತದೆ. ಅಷ್ಟೇ ಅಲ್ಲದೆ ಹೆಚ್ಚಿನ ಪೌಷ್ಠಿಕಾಂಶ ಗಳನ್ನು ಒಳಗೊಂಡಿದೆ. ಇದನ್ನು ತಿನ್ನುವುದರಿಂದ ಬುಧ್ಧಿ ಶಕ್ತಿ ಹೆಚ್ಚಾಗುತ್ತದೆ. ಕಸ, ವಾತ ಸಂಬಂಧಿ ಕಾಯಿಲೆಗಳು ನಿವಾರಣೆಯಾಗುತ್ತವೆ. ನಿಯಮಿತವಾಗಿ ಇದನ್ನು ತಿನ್ನುತ್ತಾ ಬಂದರೆ ದೇಹ ದಪ್ಪವಾಗುತ್ತದೆ.

ದನಕರುಗಳಿಗೆ ದೃಷ್ಠತಾಗಿದರೆ, ದನಗಳು ತಮ್ಮ ಕರುಗಳಿಗೆ ಹಾಲು ಕುಡಿಸದಿದ್ದರೆ, ಹಿಂಡಿದ ಹಾಲು ವಾಸನೆ ಬಂದರೆ ಈ ಗೇರು ಬೀಜದಿಂದ ದೃಷ್ಠಿ ತೆಗೆದು ನಿವಾಳಿಸಿ ಚಲ್ಲುತ್ತಾರೆ. ಇದರಿಂದಲೋ ಏನೋ  ಇದಕ್ಕೆ ಸಂಸ್ಕೃತದಲ್ಲಿ " ಭೂತನಾಶನ" ಎಂದು ಕರೆಯುತ್ತಾರೆ. ದನ ಕರುಗಳ ಪೀಡೆ ಓಡಿಸುವ ಗೇರು ದೀಪಾವಳಿಯ ಹಟ್ಟಿ ಪೂಜೆಗೆ ಅವಶ್ಯವಾಗಿ ಬೇಕೇ ಬೇದು. "ಕೆಂದೆತ್ತಿನಕುಂಡ್ಯಾಗ ಕರೆ ಎತ್ತು ಹೊಕ್ಕಂಡತಿ". ಏನ್ ಹೇಳ್ಡ್ರಪ?  ಎಂಬ ಮೋಜಿನ ಒಗಟನ್ನು ಈ ಹಣ್ಣಿನ ಮೇಲೆ ಹೇಳುತ್ತಾರೆ.

ಹಿರಿಯ ಕಿರಿಯರೆನ್ನದೆ ಎಲ್ಲರೂ ಇಷ್ಟಪಟ್ಟು ಈ ಹಣ್ಣನ್ನು ತಿನ್ನುತ್ತಾರೆ ಮತ್ತು ಮನೆಗೆ ತರುತ್ತಾರೆ. ದನಕಾಯುವ ಹುಡುಗರು ಈ ಹಣ್ಣುಗಳನ್ನು ಸರ ಮಾಡಿ ಕರುವಿನ ಕೊರಳಿಗೆ ಕಟ್ಟಿಕೊಂಡು ಬರುವಾಗಿನ \ಅವರ ಸಡಗರ ಹೇಳತೀರದು. ಕೆಲವೊಮ್ಮೆ ಹಣ್ಣು ಕೊಯ್ಯಲು ಹೋಗಿ ಮರದಿಂದ ಕೆಲವರು ಬಿದ್ದದ್ದೂ ಉಂಟು. ಅಲ್ಲದೆ ದನ ಕಳೆದುಕೊಂಡು ಮನೆಯಲ್ಲಿ ಬೈಸಿಕೊಂಡ ಪ್ರಸಂಗಗಳೂ ಇವೆ. ಬರೀ ದನಕಾಯುವ ಹುಡುಗರಷ್ಟೇ ಅಲ್ಲದೆ ಶಾಲೆಗೆ ಹೋಗುವ ಹುಡುಗರೂ ಸಹ ಶಾಲೆ ತಪ್ಪಿಸಿ ಹಣ್ಣು ಕೊಯ್ಯಲು ಹೋಗಿ ಮೇಷ್ಟ್ರ ಜೊತೆ ಮಂಗಳರಾತಿ ಮಾಡಿಸಿಕೊಂಡ ನನ್ನಂಥವರೂ ಸಹ ಇದ್ದಾರೆ. ಕೆಲವು ಹುಡುಗರು ಹಣ್ಣಿನ ಸರಗಳನ್ನು ಹತ್ತಿರದ ಪೇಟೆಗೆ ತಂದು ಮಾರುವ ಮೂಲಕ ತಮ್ಮ ಕೈ ಕಾಸು ಸಂಪಾದಿಸಿಕೊಳ್ಳುತ್ತಾರೆ.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (4 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಲೇಖನವನ್ನು ಓದಲಾಗುತ್ತಿಲ್ಲ. ಈ ಗಿಡವನ್ನಾಗಲೀ, ಹಣ್ಣನ್ನಾಗಲೀ ನೋಡಿದ ನೆನಪಿಲ್ಲ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಾನ್ಯರೆ, ಲೇಖನವನ್ನು ವರ್ಡ್ ಪ್ಯಾಡ್ ನಿಂದ ನಕಲು ಮಾಡಿದ್ದರಿಂದ ಅದು ಸರಿಯಾಗಿ ಕಾಣುತ್ತಿರಲಿಲ್ಲ. ಈಗ ಸರಿಯಾಗಿದೆ. ದಯವಿಟ್ಟು ಓದಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಇಂಥ ಒಂದು ಹಣ್ಣು ಇದೆಯೆಂದು ಇದೇ ಮೊದಲ ಬಾರಿ ಕೇಳುತ್ತಿದ್ದೇನೆ. ಈ ಹಣ್ಣಿನ ಗಿಡವನ್ನು ನೆಟ್ಟು ಬೆಳೆಸಿ ತಳಿಯನ್ನು ರಕ್ಷಿಸಬೇಕಾಗಿದೆ ಹಾಗೂ ಆಸಕ್ತರಿಗೆ ಬೀಜ ಪ್ರಸಾರ ಮಾಡಿದರೆ ಒಳ್ಳೆಯದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗೇರು ಹಣ್ಣಿಗೂ (ಗೋಡಂಬಿ ಹಣ್ಣು) ಗುಡ್ಡೆ ಗೇರಿಗೂ ಏನಾದರೂ ಸಂಬಂಧ ಉಂಟಾ? ನೋಡಲು ಸ್ವಲ್ಪ ಹೋಲಿಕೆ ಇದೆ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೌದು ಶಶಿಧರರೇ, ಗೇರು (ಗೋಡಂಬಿ) ಮತ್ತು ಕೇರು (ಗುಡ್ಡೇ ಗೇರು) ಒಂದೇ ಸಸ್ಯವರ್ಗದ ಕುಟುಂಬಕ್ಕೆ ಸೇರಿದವು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಯುಗಾದಿ ಹಬ್ಬದಂದು ಗೇರು ಸೊನೆಯನ್ನು ಹಣೆಗೆ ಇರಿಸಿಕೊಳ್ಳುವ, ನಂತರ ಅಭ್ಯಂಜನ ಮಾಡುವ ಒಂದು ಪದ್ದತಿ ಇದ್ದ ಬಗ್ಗೆ ನನಗೆ ಅಸ್ಪಷ್ಟ ಅರಿವಿದೆ. ಆಗ ಈ ಗುಡ್ಡೆ ಗೇರನ್ನು ಉಪಯೋಗಿಸುತ್ತಿದ್ದರು. ಇದರಲ್ಲಿದ್ದ ಔಷಧ ಗುಣವೇ ಈ ಪದ್ದತಿಗೆ ಕಾರಣವಿರಬಹುದು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸಂಪೂರ್ಣ ಮಾಹಿತಿ ಒದಗಿಸುವ ಲೇಖನವನ್ನು ಚಿಕ್ಕದಾಗಿ ಮತ್ತು ಚೊಕ್ಕದಾಗಿ ಬರೆದಿದ್ದೀರಿ. ಇದನ್ನು ನಮ್ಮ ಬಳ್ಳಾರಿ ಸೀಮೆಯಲ್ಲಿ "ಕೇರು ಬೀಜ"ದ ಗಿಡ ಎನ್ನುತ್ತಾರೆ. ಇದರ ಹಣ್ಣಿನ ಮಾಲೆಯನ್ನು ನಾವು ಚಿಕ್ಕವರಿದ್ದಾಗ ತಿಂದದ್ದು ನೆನಪಿಗೆ ಬಂತು ಮತ್ತು ನಮ್ಮ ಕಡೆ ಅಗಸರು ಬಟ್ಟೆಗಳಿಗೆ ಇದರಿಂದ ಗುರುತು ಹಾಕುತ್ತಿದ್ದದ್ದು ನೆನಪಿಗೆ ಬಂತು. ಒಟ್ಟಿನಲ್ಲಿ ಬಹಳ ಒಳ್ಳೆಯ ಲೇಖನಕ್ಕೆ ಅಭಿನಂದನೆಗಳು ಅರುಣ್ ಕುಮಾರ್ ಅವರೆ. ನಿಮ್ಮಿಂದ ಇನ್ನಷ್ಟು ಮಾಹಿತಿಯುಕ್ತ ಲೇಖನಗಳು ಬರಲಿ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.