ಹುಚ್ಚ ಅಪಾಯಕಾರಿಯಲ್ಲ, ಮತ್ಯಾರು ?

0

"ಇನ್ನು ಸಾಕು ಈ ಮನುಷ್ಯನ ಸಹವಾಸ, ಒಂದಷ್ಟು ಕಡಿಮೆ ಸಂಬಳವಾದರೂ ಚಿಂತಿಲ್ಲ, ನಾವು ಮಾಡುವ ಕೆಲಸವನ್ನು ಮಾಡಲು ಬಿಟ್ಟರೆ ಅದಕ್ಕಿಂತ ಸಂತೋಷ ಮತ್ತೊಂದಿಲ್ಲ"...................

ಹೀಗೆ ಮನಸ್ಸಲ್ಲೇ ಮಂಡಿಗೆ ತಿನ್ನುವ ಅದೆಷ್ಟೋ ಸಹೋದ್ಯೋಗಿಗಳನ್ನ, ಅವರ ಚಿಂತೆಗಳನ್ನ ಕೇಳಿದ್ದೆ. ಆದರೆ ನಾ ಸೇರಿದ ಹೊಸ ಕೆಲಸಕ್ಕೆ ೨ ತಿಂಗಳಾಯಿತು ಅಷ್ಟೆ. ಅಷ್ಟರಲ್ಲೇ ಸಾಕಪ್ಪಾ ಸಾಕು ಅನ್ನಿಸಿದೆ, ಈ ಕಂಪೆನಿ, ಯಾವುದೇ ಕೆಲಸವನ್ನು ಮಾಡಲು ಮೊದಲಿಗೆ ಬೇಕಾಗಿರುವುದು ಯೋಜನೆ, ಮತ್ತು ಆ ಕೆಲಸಕ್ಕೆ ಬೇಕಾದ ಸರಿಯಾದ ಯೋಚನೆ, ಮುಂದೊದಗಿ ಬರಬಹುದಾದ ತೊಂದರೆಗಳ ಚಿಂತನೆ.

ಈ ಕಂಪೆನಿಯಲ್ಲಿ ನಾನು ದಿನದ ಮೊದಲಿನಿಂದಲೂ ಮಾಡಬೇಕಾಗಿರುವ ಕೆಲಸಗಳ ಪಟ್ಟಿಯನ್ನು ಅಂದಿನ ಹಿಂದಿನ ದಿನವೇ ಸರಿಮಾಡಿಕೊಂಡು ಬೆಳ್ಳಂಬೆಳಿಗ್ಗೆ ಆಫೀಸಿಗೆ ಕಾಲಿಡುತ್ತಿದ್ದಂತೆ, ನೆನ್ನೆಯ ಅಷ್ಟೂ ಯೋಜನೆಗಳನ್ನು ಒಮ್ಮೆಲೆ ಮುರಿದುಬಿಡುವ ಶತಮೂರ್ಖನ ಕೆಳಗೆ ಕೆಲಸ ಮಾಡುವ ನನ್ನ ಪರಿಸ್ಥಿತಿ ಮಾತ್ರ ವಿಚಿತ್ರ. ಕಂಪೆನಿಯ ಆಗುಹೋಗುಗಳ ಬಗ್ಗೆ ಒಂದು ಸುಧೀರ್ಘ ಯೋಚನೆಗಳನ್ನೇ, ಅದಕ್ಕೆ ತಕ್ಕುದಾದ ಯೋಜನೆಗಳನ್ನೇ ಮಾಡುವಂತಹ ಜನರ ಅನುಭವದ ಕೆಳಗೆ ಕೆಲಸ ಕಲಿತ ನನ್ನಂತವರಿಗೆ, ಕಂಪೆನಿ ಹುಟ್ಟಿ ಆರೇಳು ವರ್ಷಗಳಾದರೂ ಇನ್ನೂ ಟ್ರ್ಯೆಯಲ್ ಮತ್ತು ಎರರ್ಗಳನ್ನೇ ಮಾಡುತ್ತಿದ್ದರೆ ಹೇಗೆ ?

ಹಾಗಂತಾ ನಾವುಗಳು ಏನಾದರೂ ಹೊಸ ಯೋಜನೆಗಳನ್ನು ಮಾಡಿದರೆ ಅಥವಾ ಇತರೆ ಕಂಪೆನಿಗಳು ಈ ರೀತಿ ಅನುಸರಿಸುತ್ತಿವೆ ಎಂದು ಹೇಳಿದರೆ ಒಪ್ಪುವುದಿಲ್ಲ. ತಾನು ಹೇಳಿದ್ದೆ ಕಡೆ ಎಂಬುವ ವಾದ, ಆ ರೀತಿಯ ಅವಾಂತರಗಳ ಪಟ್ಟಿ ಇಲ್ಲಿದೆ ನೋಡಿ.

ಸನ್ನಿವೇಶ : ಮೀಟಿಂಗ್

ಮುಖ್ಯಸ್ಥ : ಕಂಪೆನಿಯಲ್ಲಿ ಫ್ಯೆಲಿಂಗ್ ವ್ಯವಸ್ಥೆ ಚೆನ್ನಾಗಿರಬೇಕು, ಪ್ರತಿಯೊಂದಕ್ಕೂ ಅದರದೇ ಆದ ಫ್ಯೆಲ್ ಅನುಸರಿಸಿ, ಸಹಿ ಹಾಕಬೇಕಾದರೆ ಆ ಫ್ಯೆಲಿನ ಅಷ್ಟು ಹಿಂದಿನ ವಿವರಗಳು ಅದರಲ್ಲಿರಬೇಕು.(೧೫ನೇ ಜೂನ್, ೧೦.೩೦ಕ್ಕೆ)
ನೌಕರರು : ಸರಿ ಸರ್, ಎಲ್ಲ ಕೆಲಸಗಾರರು ಮೊದಲಿನಿಂದಲೂ ಅದರಂತೆ ನಿರ್ವಹಿಸುತ್ತಿದ್ದರೂ, ಎದುರಾಡುವ ಧ್ಯೆರ್ಯವಿಲ್ಲದೆ, ಸರಿ ಎಂದಷ್ಟೆ ಹೇಳಿ ಬಂದರು.

ಸನ್ನಿವೇಶ : ಚೆಕ್ಕಿಗೆ ಸಹಿ ಹಾಕಿಸುವಾಗ

ಮುಖ್ಯಸ್ಥ : ಏನ್ರೀ ಇದು ಇಷ್ಟೊಂದು ಫ್ಯೆಲ್ ತಂದಿದ್ದೀರಾ, ಒಂದೊಂದು ಫ್ಯೆಲನ್ನ ಒಬ್ಬೊಬ್ಬ ಕಸ್ಟಮರ್ಗೆ ಇಟ್ಟಿರೆ ಹೇಗೆ ? ಒಂದೇ ಫ್ಯೆಲಿನಲ್ಲಿ ಎಲ್ಲವನ್ನೂ ತನ್ನಿ ಹೋಗಿ,(೧೬ನೇ ಜೂನ್ ೧೧.೧೦ಕ್ಕೆ)
ನೌಕರ : ಸರ್, ನೀವೆ ಮೊನ್ನೆ ಹೇಳಿದಿರಲ್ಲ, ಎಲ್ಲ ವೆಂಡರ್ಸ್ ಪೇಮೆಂಟ್ ಮಾಡುವಾಗ ಅವರಿಗೆ ಸಂಬಂಧಪಟ್ಟ ಫ್ಯೆಲನ್ನು ತರಲೆಂದು,
ಮುಖ್ಯಸ್ಥ : ನಾನು ಹೇಳಿದಂತೆ ಮಾಡ್ರಿ, ಇಷ್ಟೊಂದು ಫ್ಯೆಲ್ ವೇಸ್ಟ್ ಆಗಲಿಲ್ವಾ ಈಗ.
ನೌಕರ : ಸರಿ ಸರ್ ನೀವು ಹೇಳಿದಂತೆ ಮಾಡಿ ತಂದಿದ್ದೇನೆ.
ಮುಖ್ಯಸ್ಥ : xxx ಕಂಪೆನಿಗೆ ಕಡೆಯದಾಗಿ ಪಾವತಿ ಮಾಡಿದ್ದು ಯಾವಾಗ ? (೧೬ನೇ ಜೂನ್ ೧೨.೧೫ಕ್ಕೆ)
ನೌಕರ : ಹೋದ ತಿಂಗಳು ಸರ್, ಅವರ ಬಾಕಿ ಜಾಸ್ತಿಯಿದೆ.
ಮುಖ್ಯಸ್ಥ : ಅದರ ವಿವರವೆಲ್ಲಿ ?
ನೌಕರ : ಸರ್ ಇಲ್ಲಿದೆ ನೋಡಿ.
ಮುಖ್ಯಸ್ಥ : ಏನ್ರಿ ಇದು ಎಲ್ಲಾನು ಒಂದೇ ಕಡೆ ಫ್ಯೆಲ್ ಮಾಡಿದ್ದೀರಲ್ಲ, ಬೇರೆ ಬೇರೆಯಾಗಿ ತರಬೇಕು ಅಂತಾ ಹೇಳಿರಲಿಲ್ವಾ,
ನೌಕರ : ಸಾರ್ ನೀವೆ ಹೇಳಿದ್ರಲ್ಲಾ, ಎಲ್ಲಾನೂ ಒಂದಕ್ಕೆ ಫ್ಯೆಲಿಂಗ್ ಮಾಡಿ ಸಹಿಗೆ ತರಲು.
ಮುಖ್ಯಸ್ಥ : ನಾನೊಂದು ಹೇಳಿದ್ರೆ, ನೀವೊಂದು ಮಾಡ್ತಿರಾ, ಕೊಡಿ
ನೌಕರ : (ಸ್ವಗತ) ಅಬ್ಬಾ ಅಂತು ಸಹಿ ಆಯ್ತು :)

ಬಾಗಿಲಿನಿಂದ ಹೊರಬೀಳುತ್ತಿದ್ದಂತೆ...........

ಮುಖ್ಯಸ್ಥ : ರೀ ಬನ್ನಿ ಇಲ್ಲಿ, ಇದಕ್ಯಾಕೆ ಪೇಮೆಂಟ್ ಮಾಡ್ತಿದ್ದೀರಾ, ಅವನಿಗೆ ನಾನು ಹೇಳಿದ ಟ್ಯೆಮಿಗೆ ಮೆಟಿರೀಯಲ್ ಕಳಿಸೊಲ್ಲಾ, ಪೇಮೆಂಟ್ ಮಾಡಬೇಡಿ (ರೊಯ್ಯನೆ ಸಹಿ ಮಾಡಿದ ಚೆಕ್ಕನ್ನು ಹರಿದುಬಿಟ್ಟರು)
ನೌಕರ : ಸಾರ್ ಅವರು ಹಳೆಯ ಬಾಕಿ ಕೊಡದ ಹೊರತು ಮೆಟಿರಿಯಲ್ ಕೊಡೊಲ್ಲಾ ಅಂತಿದ್ದಾರೆ,
ಮುಖ್ಯಸ್ಥ : ನಾನು ನೋಡ್ಕೊತೀನಿ ಬಿಡಿ.

ಅಲ್ಲಿಗೆ ಸಹಿ ಮಾಡಿಸಿದ ಚೆಕ್, ಅದಕ್ಕಾಗಿ ವ್ಯಯಿಸಿದ ಸಮಯ ಎಲ್ಲಾ ನಿರ್ನಾಮ :)

ಸನ್ನಿವೇಶ : ಮೀಟಿಂಗ್ (ಜೂನ್ ೨೨, ೧೦.೩೦ಕ್ಕೆ)

ಮುಖ್ಯಸ್ಥ : ಇನ್ನೂ ಮುಂದೆ ಕಂಪೆನಿಯ ನೌಕರರು ನಾನು ಹೇಳಿದ ಕೆಲಸಗಳನ್ನು ಮಾತ್ರ ನೋಡಿಕೊಳ್ಳಬೇಕು,
ಅರವಿಂದ್, ನೀವು ಎಂದಿನಂತೆ ಅಕೌಂಟ್ಸ್ ಮತ್ತು ಫ್ಯೆನಾನ್ಸ್ ನೋಡ್ಕೋತಿರಾ,
ವಿಶ್ವನಾಥ್, ನೀವು ಸೇಲ್ಸ್ ನೋಡ್ಕೊಳ್ರಿ (ಆತ ಕಂಪೆನಿಯ ಅತಿ ಹಿರಿಯ ವ್ಯಕ್ತಿ, ಅವರಿಗೆ, ಫ್ಯೆನಾನ್ಸ್ ಬಿಟ್ರೆ ಬೇರೆನೂ ಗೊತ್ತಿಲ್ಲ)
ವಿಜಯ್, ನೀವು ಟ್ಯಾಕ್ಸೇಷನ್ ಮತ್ತು ಸ್ಟಾಟುಟರಿ ನೋಡ್ಕೊಳ್ರಿ, (ಈತನಿಗೆ ೫೫ ವರ್ಷ, ನಮ್ಮ ಸರ್ಕಾರಿ ಸಂಸ್ಥೆಗಳ ಓಡಾಟ ಸಹ್ಯವೇ ಎಂಬುದು ಅರಿವಿಲ್ಲ,ಮೇಲಾಗಿ ಸ್ಟೋರ್ಸ್ ಡಿಪಾರ್ಟ್ಮೆಂಟ್ ಇವರ ವೃತ್ತಿ)
ಅನಿತ, ನೀವು ಬ್ಯಾಂಕಿಂಗ್ ನೋಡ್ಕೊಳ್ಳಿ, ಲೇಬರ್ಸ್ ಪೇಮೆಂಟ್ ನೋಡ್ಕೊಳ್ಳಿ, ನನ್ನ ಲೋನ್, ಮತ್ತಿತರ ವ್ಯವಹಾರ ನೋಡ್ಕೊಳ್ಳಿ, (ಇನ್ನೂ ಈಗ ತಾನೇ ಕೆಲಸದ ಪ್ರಪಂಚಕ್ಕೆ ಕಾಲಿಡುತ್ತಿರುವ ಹುಡುಗಿ, ಈಗಷ್ಟೆ, ಡಿಗ್ರಿ ಮುಗಿಸಿ ಬಂದಿದ್ದಾಳೆ)
ಪ್ರಸಾದ್, ನೀವು ಅಕೌಂಟ್ಸ್ ಅಸಿಸ್ಟ್ ಮಾಡ್ರಿ ಅರವಿಂದ್ಗೆ (ಆತನಿಗೆ ಅಕೌಂಟ್ಸ್ ಗಂಧ ಗಾಳಿಯೇ ಗೊತ್ತಿಲ್ಲ, ಆತ ಬಿ.ಎ. ಪದವಿಧರ, ಸ್ಟೋರ್ಸ್ ಆತನ ಐದು ವರ್ಷಗಳ ಅನುಭವ)

ಅಬ್ಬಾ ಮೀಟಿಂಗ್ ಸಮಾಪ್ತಿ :)

ಸನ್ನಿವೇಶ : ಮತ್ತೊಂದು ರೀತಿಯ ಚೆಕ್ ಸಹಿ ಪ್ರಸಂಗ

ಅನಿತ : ಸಾರ್ ಈ ಲೋನ್ ಅಕೌಂಟಿಗೆ ಹಣ ತುಂಬಲು ನಿಮ್ಮ ಸಹಿ ಬೇಕಿತ್ತು.
ಮುಖ್ಯಸ್ಥ : ಯಾವುದ್ರೀ ಅದು,
ಅನಿತ : xxxxx ಲೋನ್ ಸರ್,
ಮುಖ್ಯಸ್ಥ : ಕೊಡಿ, (ಸಹಿ ಮಾಡುವ ಮುನ್ನಾ ಯೋಚಿಸುತ್ತಾ ) ಅನಿತ ನಮ್ಮ ಕಂಪೆನಿಯ ಈ ತಿಂಗಳ ಸೇಲ್ಸ್ ಎಷ್ಟಾಗಿದೆ ?
ಅನಿತ : ಸರ್ ಗೊತ್ತಿಲ್ಲ, ವಿಶ್ವನಾಥ್ ಸೇಲ್ಸ್ ಹ್ಯಾಂಡಲ್ ಮಾಡ್ತಿದ್ದಾರೆ
ಮುಖ್ಯಸ್ಥ : ನೀವೇನ್ರಿ ಅದೆಲ್ಲಾ ತಿಳ್ಕೊಂಡು ಬರಬೇಕು ಇಲ್ಲಿ ಅಂತಾ ಗೊತ್ತಿಲ್ವಾ ?
ಅನಿತ : ಸರಿ ಸಾರ್ ಕೇಳಿಕೊಂಡು ಬರ್ತಿನಿ,
ಮುಖ್ಯಸ್ಥ : ಬೇಡಾ ಇರಿ, ವಿಶ್ವನಾಥ್ನ ನಾನೇ ಕರೀತಿನಿ, (ಟ್ರಿಣ್ ........ ಟ್ರಿಣ್..) ವಿಶ್ವನಾಥ್ ಬನ್ರಿ ಇಲ್ಲಿ
ವಿಶ್ವನಾಥ್ : ಸರ್ ಮೇ ಐ ಕಂಮಿನ್ (ಒಳಗೆ ಬರಬಹುದಾ ಅಂತಾ ಕೇಳುತ್ತಾ )
ಮುಖ್ಯಸ್ಥ : ಬನ್ರಿ ನಿಮಗೇನು ಅರಿಶಿನ ಕುಂಕುಮ ಕೊಡಬೇಕಾ ? ನಮ್ಮ ಸೇಲ್ಸ್ ಎಷ್ಟಾಗಿದೆ ಅಂತಾ ಅನಿತಾಗೆ ಯಾಕೆ ಹೇಳಲಿಲ್ಲ, ನೀವು ?
ವಿಶ್ವನಾಥ್ : ಸರ್ ಅದು........... ಅಕೌಂಟ್ಸ್ ಡಿಪಾರ್ಟ್ಮೆಂಟಿಗೆ ಎಷ್ಟು ವಿಚಾರಗಳು ತಿಳಿಸಬೇಕೋ ಅಷ್ಟು ತಿಳಿಸಿದ್ದೇನೆ, ಅವರು ಬಾಬ್ತುಗಳು, ರಸೀತಿಗಳ ವಿವರ ಕೊಟ್ಟಿದ್ದೀನಿ,
ಮುಖ್ಯಸ್ಥ : ಬರೀ ಇಷ್ಟು ಕೊಡಬೇಕು, ಇಷ್ಟು ಬರುತ್ತೆ ಸೇಲ್ಸ್ ಅಂತಾ ಕೊಟ್ರೆ ಸಾಕಾ, ಇನ್ನು ಮೇಲೆ ಪ್ರತಿ ಸೇಲ್ಸ್ ವಿಚಾರವನ್ನು ಅನಿತಾಗೆ ಹೇಳಬೇಕು.
ವಿಶ್ವಾನಾಥ್ : ಸರಿ ಸರ್
ಮುಖ್ಯಸ್ಥ : ಸೇಲ್ಸ್ ಟ್ಯಾಕ್ಸ್ ಕಟ್ಟಿದ್ರೇನ್ರಿ ಈ ತಿಂಗಳು ?
ವಿಶ್ವನಾಥ್ : ಸರ್ ಅದು ವಿಜಯ್ ಅವರು ನೋಡ್ಕೊಳ್ತಿದ್ದಾರೆ.
ಮುಖ್ಯಸ್ಥ : ನೀವು ತಿಳ್ಕೊಳ್ಳಬಾರ್ದು ಅಂತಾ ನಾನು ಹೇಳಿದ್ದೀನಾ.

ಕಡೆಗೆ ಆ ಲೋನ್ಗೆ ಸಹಿ ಆಗಲೇ ಇಲ್ಲಾ ಇವತ್ತು..................., :)

ಮುಂದುವರೆಯುವುದು//////////////////////...................

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಪ್ರತಿಕ್ರಿಯೆಗಳು

ಅರವಿಂದ್,

ಏನಪ್ಪ ನಿನ್ನ ವ್ಯವಸ್ಥೆ ...... (ಸ್ವಲ್ಪ ದಿನ ಹೊದರೆ ನೀವ್ಯಾರು ಅಂತ ಕೇಳಿದರೂ ಕೇಳಬಹುದು ಹುಷಾರು.....)
ಹುಚ್ಹನ ಮದುವೆಲಿ ಉಂಡೊನೆ ಜಾಣ ಅಂತರೆ ಆದ್ರೆ ನಿನ್ನ ಕಥೆ ಅಷ್ಟೆ ......

--ಗೌಡ್ರು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್ ಮುಖ್ಯಸ್ಥನಿಗೆ ಆಂಟಿ ವೈರಸ್ ನಿಂದ ಒಮ್ಮೆ ಸ್ಕ್ಯಾನ್ ಮಾಡಿಸಿ ಇಲ್ಲಂದ್ರೆ ಎಲ್ಲರಿಗೂ ವೈರಸ್ ಹರಡಿ (ನಿಮಗೂ ಸೇರಿ) ಮುಂದೆ ಏನಾಗತ್ತೋ ಗೊತ್ತಿಲ್ಲ. :) ಈ ನಡುವೆ ವೈರಸ್ ಗಳದ್ದೇ ಕಾರುಬಾರು... :D

ನಾಗರಾಜ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವೈರಸ್ ಸ್ಕ್ಯಾನ್ ಮಾಡುವ ಜವಾಬ್ದಾರಿ ಯಾರದು ಎಂಬ ಗೊಂದಲ ಉಂಟಾಗದಿದ್ದರೆ ಪುಣ್ಯ.:D: :-D :lol:

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ನಿಮ್ಮ ಈ ಲೇಕನ ಓದಿ ಡಿಡಿ ೧ ರಲ್ಲಿ ತುಂಬಾ ಹಿಂದೆ ಬರುತಿದ್ದ ಮೀಟಿಂಗ್ ಅನ್ನೋ ಹಾಸ್ಯ ಪ್ರಹಸನ ನೆನಪಾಯಿತು :D :D :D

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಿನಯ್

ಮೀಟಿಂಗ್ ನಾನು ನೋಡಿದ್ದೇನೆ, ಆದರೆ ಈ ಆಫೀಸು ಅದನ್ನೂ ಮೀರಿಸುತ್ತದೆ :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅರವಿಂದ್
ಇಷ್ಟು ದಿನದಿಂದ ಯಾಕ್ ಮಾಯಾ ಆಗೋಗಿದೀರ ಅಂತ ಈಗ ಗೊತ್ತಾಯ್ತು...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮಂಜು

ಇಷ್ಟು ದಿನವಾದರೂ ಬದುಕಿರೋದೆ ಹೆಚ್ಚು :)

ಅರವಿಂದ್

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.