ಅಪ್ಪ..

2.666665

 ಅಪ್ಪ

=====
 
ಮೂರು ದಿನದ 
ತನ್ನ ಮಗುವಿನ ಮುಖ ಕಂಡು 
ಸಾರ್ಥಕತೆಯಲ್ಲಿ ಮೈಮರೆತವ
...
ಮೂರು ತಿಂಗಳ 
ಮಗುವಿನ ನಗುವ ಕಂಡು 
ನಲಿವಲಿ ಮುದದಲಿ ತೇಲಿದವ 
...
ಮೂರು ವರ್ಷದ 
ಮಗುವಿನ ನುಡಿ ಕೇಳಿ ಆನಂದಿಸಿದವ
...
ಹದಿಮೂರು ವರ್ಷದ 
ಮಗುವಿನ ಬುದ್ದಿವಂತಿಕೆಗೆ ಹೆಮ್ಮೆ ಪಟ್ಟವ
...
ಇಪ್ಪತ ಮೂರು ವರ್ಷದ 
ಮಗನ
ಸ್ವಾರ್ಥಕ್ಕೆ ಬೆಚ್ಚಿಬಿದ್ದವ
...
ಮುವತ್ತ ಮೂರನೆ ವಯಸ್ಸಿನಲ್ಲಿ
ತನ್ನ ಆಸ್ತಿಯನ್ನು ತನಗೆ ಕೊಟ್ಟುಬಿಡು
ಎನ್ನುವ ಮಗನ ಮಾತಿಗೆ 
ಕಣ್ತುಂಬಿ ನಿಂತಿದ್ದಾನೆ
.....................  ಅಪ್ಪ 
 
ಚಿತ್ರವನ್ನು internet ನಿಂದ ಪಡೆದು ಬದಲಾಯಿಸಿದೆ.
 
========================================
 
ಕಳೆದವಾರದ ಕೊನೆಯಲ್ಲಿ ಬರೆದೆ, ಪ್ರಥಮವಾಗಿ ಸಂಪದದಲ್ಲಿ ಪ್ರಕಟಿಸುವ 
ವ್ರತಕ್ಕೆ ಭಂಗಬರಬಾರದೆಂದು ಹಾಗೆ ಇಟ್ಟು , ಈಗ ಹಾಕುತ್ತಿರುವೆ :))
 
ಬ್ಲಾಗ್ ವರ್ಗಗಳು: 
ಸರಣಿ: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

:) ಪಾಪ್ಪ.. -ಗಣೇಶ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಅಪ್ಪನ ಅಪ್ಪನೂ ಹೀಗೆಯೇ ಹೇಳಿರಬಹುದೇ?
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

>> ಅಪ್ಪನ ಅಪ್ಪನೂ ಹೀಗೆಯೇ ಹೇಳಿರಬಹುದೇ? .ಖಂಡೀತ ನಿಜ ಶ್ರೀಕರ್ . ಕೆಳಗೆ ಹನುಮಂತ ಪಾಟಿಲರ ಅಭಿಪ್ರಾಯ ಓದಿ. ಅಲ್ಲದೆ ಈ ವಾಕ್ಯ ಓದಿ. "ಅವ್ರವ್ರು ಅವ್ರವ್ರ ಅಪ್ಪ ಅಮ್ಮಂಗೆ 'ಎನೇನ್' ಮಾಡಿರ್ತಾರೊ ಅವ್ರವ್ರ ಮಕ್ಳು ಅವ್ರವ್ರಿಗೆ 'ಅದನ್ನೆ' ಮಾಡ್ತಾರೆ" ‍ಮಾಸ್ಟರ್ ಹಿರಣಯ್ಯರವರ ನಾಟಕದ್ದು. ಆದರು ಯಾವುದು ಯಾವಗಲು ನಿಜವಲ್ಲ ಕೆಲವೊಮ್ಮೆ ಶ್ರದ್ದೆಯಿಂದ ಅಪ್ಪ ಅಮ್ಮನ ಸೇವೆ ಮಾಡಿದ ಮಕ್ಕಳಿಗೆ ಆ ಕ್ರಿಯೆಗೆ ವಿರುದ್ದವಾದ ಮಕ್ಕಳು ಇರುತ್ತಾರೆ . ಹೀಗೆ ಅಂತ ಯಾವುದೆ ತರ್ಕವಿಲ್ಲ. ನಡೆಯುತ್ತ ಇರುತ್ತದೆ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

:)) ವಂದನೆಗಳು ಗಣೇಶರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೆ ವಂದನೆಗಳು ' ಅಪ್ಪ ' ಬಹಳ ಸಮರ್ಥವಾದ ಕವನ, ಕವನದ ಬಂಧ ಮಗ ಬಾಲ್ಯದಿಂದ ಯೌವನದ ವರೆಗೆ ತನ್ನ ತಂದೆಗೆ ಮಾಡಿಸುವ ದರ್ಶನದ ಬಗೆಯನ್ನು ಮನಮುಟ್ಟುವಂತ ನಿರೂಪಿಸಿದ್ದೀರಿ. ತಂದೆ ಮಗನ ಈ ಸಂಭಂಧ ನಿರತಂರ. ಅಪ್ಪ ಕಾಲಗತಿಯಲ್ಲಿ ಕಳೆದು ಹೋಗು ತ್ತಾನೆ, ಮಗ ಅಪ್ಪನಾಗುತ್ತಾನೆ ಮೊಮ್ಮಗ ಮಗನಾಗುತ್ತಾನೆ. ತಂದೆ ಮಗನ ಈ ಸಂಭಂಧ ಕಾಲಚಕ್ರದಲ್ಲಿ ಮರುಕಳಿಸುತ್ತ ಹೋಗುವ ಒಂದು ಅವ್ಯಾಹತ ಕ್ರಿಯೆ. ಮಗ ತಂದೆಯ ಸ್ಥಾನದಲ್ಲಿ ನಿಂತು ಒಂದು ಕ್ಷಣ ನೋಡಿದರೆ ಅರ್ಥಮಾಡಿಕೊಂಡರೆ ಬದುಕು ಸುಂದರ ಸಾರ್ಥಕ ಇಲ್ಲದಿದ್ದರೆ ಅದೇ ನೋವು ಅದೇ ಯಾತನೆ. ಬಹಳ ಸರಳ ಮತ್ತು ಸಮರ್ಥ ಕವನ ನೀಡಿದ್ದೀರಿ ಪಾರ್ಥಸಾರಥಿಗಳೆ ವಂದನೆಗಳು.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಪಾಟಿಲರೆ ನಿಮ್ಮ ಅಭಿಪ್ರಾಯ ಅನುಭವದ , ಲೋಕ ಕಂಡವರ ಮಾತು. ಜೀವನಕ್ಕೆ ಕನ್ನಡಿ. ಪಾರ್ಥಸಾರಥಿ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ಈ ಬರಹವನ್ ನಾ ಬೆಳಗ್ಗೆಯೇ ನೋಡಿದ್ದೇ, ಮತ್ತು ನಿಮ್ಮ ಏಕೆ? ಎಂಬ ಬರಹವನ್ನೂ, (ಆದರೆ ಗಣೇಶ್ ಅವ್ರ ಬರಹ ಈಗಷ್ಟೆ ಗಮನಿಸಿದೆ) ನಾ ಪ್ರತಿಕ್ರಿಯಿಸುವುದೊರೋಳಗಾಗಿ ಸಂಪದ ............... ಹೀಗಾಗಿ ಈಗ ರೂಮಲ್ಲಿ ಕುಳಿತು ಪ್ರತಿಕ್ರಿಯಿಸ್ತಿರ್ವೆ... ನಿಮ್ಮ ಈ ಕವನ ಒಬ್ಬ ತಂದೆ ಮಗನ ಕುರಿತಾಗಿ . ಒಂಥರಾ ಸರಪಳಿಯ ಕ್ರಿಯೆ(ಪ್ರಶ್ನಾ ಕ್ರಿಯೆ) ಶುರು ಮಾಡುತ್ತಿದೆ.. >>> ಪ್ರತಿ ಸಾಲಿನ ಕೊನೆ ನನ್ನ ಗಮನ ಸೆಳೆಯಿತು.. ಇದರ ಭಾವರ್ಥವನ್ನ ಹಿರಿಯರಾದ 'ಪಾಟೀಲರು' ಬಹಳ ಸೊಗಸಾಗಿ ಹೇಳಿದ್ದಾರೆ.. ಅದೊಮ್ಮೆ 'ಅವಳಿಗೆ ೧೮ ವರ್ಷ' ಅಂತ ಬರದ ನೀವು ಈಗ ತಂದೆ ಮಗನ ಬಾಂಧವ್ಯ -ಬಗ್ಗೆ ಒಳ್ಳೆ ಚೆನ್ನಾಗಿ ಬರ್ದಿದೀರ... ನನಗೆ ಹಿಡಿಸಿತು. ಕಳೆದವಾರದ ಕೊನೆಯಲ್ಲಿ ಬರೆದೆ, 'ಪ್ರಥಮವಾಗಿ' ಸಂಪದದಲ್ಲಿ ಪ್ರಕಟಿಸುವ  ವ್ರತಕ್ಕೆ 'ಭಂಗಬರಬಾರದೆಂದು' ಹಾಗೆ ಇಟ್ಟು , ಈಗ ಹಾಕುತ್ತಿರುವೆ :)) :())))))))))))
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪಾರ್ಥಸಾರಥಿಯವರೇ ಪ್ರಸ್ತುತ ಕಾಲಘಟ್ಟಕ್ಕೆ ಸರಿ ಹೊ೦ದುವ ಕವನ.
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಜಯಂತ್
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಸೂಪರ್ರಾಗಿದೆ ಪಾರ್ಥವ್ರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಚಿಕ್ಕುವ್ರೆ .. ಇವತ್ತು ಏನು ಮಾಡಿದ್ರಿ...??
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಪ್ರಸ್ತುತ ಕಾಲಘಟ್ಟಕ್ಕೆ ಹಿಡಿದ ಕನ್ನಡಿ.. ನಿರೂಪಣೆ ಇಷ್ಟವಾಯಿತು ಕವಿಗಳೆ...
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ವಂದನೆಗಳು ಪ್ರಸನ್ನರವರೆ
ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.