ಅನಾಮಿಕ ರವರ ಬ್ಲಾಗ್

ಬರೆದು ತಿಳಿಸುತಿಹೆ ನಾನು

ಬರೆಯಲೆತ್ನಿಸುತಿಹೆನೊಂದು ಪತ್ರ

ಒಂದೊಂದೇ ಪದಗಳ ಪೋಣಿಸಿ

ಪದ ಸಾಲುಗಳ ಎಣಿಸಿ

ನೀನದರ ಬೆಲೆ ಮಾತ್ರ ಕಟ್ಟದಿರು...

 

ಎಷ್ಟೋ ವಿಷಯಗಳ ನಾನು

ನುಡಿದು ವಿವರಿಸಲಾರೆ. ಅದಕೆ,

ಪದಪುಂಜಗಳ ಜೊತೆಗಾಟ 

ಮಧ್ಯದಲಿ ವಿಷಯ ಪ್ರಸ್ತಾಪ...

 

 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಏಳು ಎದ್ದೇಳು ಯಾತ್ರಿಕನೆ

ಬೆಳಗೆದ್ದು ಮುಖತೊಳೆದು
ಸೂರ್ಯನಿಗೆ ಸಮಸ್ಕಾರವೀಯ್ದು
ಸುಪ್ರಭಾತವ ಕೇಳಿ
ಹೊರಡು ನೀ ಮುಂದಕ್ಕೆ
ನಿನ್ನ ಜೀವನ ಯಾತ್ರೆಯಲಿ

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ಯಾರೋ ಅವಳು

ಯಾರೋ ಬಂದು ಮನಸ್ಸನ್ನು ಕದಡಿದಂತಿದೆ

ಇದುವರೆಗೂ ಇಲ್ಲದ್ದಿದ್ದ ಕನಸುಗಳು ಮೈದಳೆಯುತ್ತಿವೆ

ಎಲ್ಲೋ ಮನ ಹಾಳಾಗ ಬೇಡವೆನುತಿದೆ

ಮಾಯೆಯ ನೆರಳಲ್ಲಿ ಮನೆಮಾಡಲೇ  ನಾನು?

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 

ನಗರದ ಮಳೆಗಾಲದ ಒಂದು ಸಂಜೆ

ರಸ್ತೆ:-
ನದನದಿಗಳ, ಹಳ್ಳಕೊಳ್ಳಗಳ
ಝುಳು ಝುಳು ಝರಿಗಳ
ನಡುವೆ ಅಲ್ಲೊಂದಿಲ್ಲೊಂದು
ದೊಡ್ಡ ಪ್ರಪಾತಗಳು

ಅಪಘಾತ:-
ತುಸು ಜೋರು ನೆಡೆದರೂ
ಕೊಂಚ ಅಕ್ಕ ಪಕ್ಕ ಜರುಗಿದರೂ
ಮೈ ಸೋಕಿದರೂ ಜೊಕೆ
ಜಗಳವಾದೀತು...

ಸಂಚಾರೀ ದೀಪಗಳು:-
ಕೆಂಪು ಕಿತ್ತಳೆ ಹಸಿರು ಬಣ್ಣಗಳ
ಸೌಂದರ್ಯ ಸ್ವರ್ಧೆಯಲ್ಲಿ ನಿಂತೆಯೋ ಜೋಕೆ...

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.
ಬ್ಲಾಗ್ ವರ್ಗಗಳು: 
Subscribe to RSS - ಅನಾಮಿಕ ರವರ ಬ್ಲಾಗ್