ಅಣಿಗೊಳಿಸು

5

 ಅಣಿಗೊಳಿಸು

 ಖಾಲಿ ಮನಸಿನ ಒಳ ಹೊಕ್ಕು 

 ಸುಂದರ ರೇಖೆಯ ಚಿತ್ರವ ಬಿಡಿಸಿ 

 ವಿಧ ವಿಧ ಬಗೆಯ ಬಣ್ಣವ ಮೂಡಿಸಿ

 ರಮ್ಯ ಪ್ರಕೃತಿಯ ಹಿನ್ನಲೆಯಿರಿಸಿ   

 ಅದ್ಭುತ ಘಟನೆಗಳ ಸರಣಿ ಪೋಣಿಸಿ   

 ವಿವಿಧ ಭಾವಗಳ ಭಾವನೆ ತೋರಿಸಿ 

 ಹೊಸ ಅನುಭವದ ರಸದೌತಣ ಬಡಿಸಿ 

 ಮನಕೆ ಆಹ್ಲಾದತೆಯ ಸಂತಸ ಕೊಡಿಸಿ      

 ನಿಧಾನವಾಗಿ ಸಿದ್ದ ಪಡಿಸುವೆ ನನ್ನನು

 ಹೊಸ ಕವನವ ಬರೆಯಲು ಅಣಿಗೊಳಿಸಿ

  - ತೇಜಸ್ವಿ.ಎ.ಸಿ   

 

ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಪ್ರತಿಕ್ರಿಯೆಗಳು

ತೇಜಸ್ವಿಯವರೆ, ಕವನದ ಸಿದ್ದತೆ / ಅಣಿಯಾಗುವುದೆ ಒಂದು ಕವನವಾಗಿ ಹೋಯ್ತು. ಇನ್ನು ಅಣಿಯಾದ ಮೇಲಿನ ಕವನ ಯಾವಾಗ? -:) ಸಿದ್ದತೆಯಂತು ಚೆನ್ನಾಗಿದೆ - ನಾಗೇಶ ಮೈಸೂರು, ಸಿಂಗಪುರದಿಂದ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಮೈಸೂರು ನಾಗೇಶ್ ರವರೇ, ಅಣಿಗೊಳಿಸದ ಮೇಲೆ ಕವನವಂತೂ ಬರೆಯಲೇ ಬೇಕಲ್ಲವೇ. ಅದೂ ಶೀಘ್ರದಲ್ಲೇ ಆಗಲಿದೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.