ಅಂತರ್ಜಾಲ ಸಮಾಜ ನಾನು

3.333335

ಸಂಪದದಲ್ಲಿ ವಾದ ವಿಮರ್ಶೆ ಚರ್ಚೆಗಳಿಗೆ ಎಂದು ಬರವಿಲ್ಲ. ಚರ್ಚೆಗಳು ಕೆಲವೊಮ್ಮೆ ತೀರ ವೈಯುಕ್ತಿಕ ಮಟ್ಟದಲ್ಲಿಯು ನಡೆದು ಇಬ್ಬರ ನಡುವ ವಾಕ್ಯಗಳ ಘರ್ಷಣೆ ಆಗಿರುವುದು ಉಂಟು. ನ೦ತರ ಹಾಗೆ ತಣ್ಣಗು ಆಗಿರುತ್ತದೆ. ಅಷ್ಟು ಘರ್ಷಣೆ ನಡೆಯುವಾಗಲು ಅವರ ನಡುವೆ ಯಾವುದೋ ಒಂದು ವಿಷಯವಿರುತ್ತಿತ್ತು.  ಮತ್ತು ತೀರ ಕೆಳಮಟ್ಟದ ಮಾತುಗಳನ್ನು ಬಳಸಿ ಜಗಳ ಆಗಿರುವುದು ಕಡಿಮೆ. 

ಅಂತರ್ಜಾಲ ಎಂಬುವುದು ಅಧುನಿಕ ವಿಜ್ಞಾನ ಮನುಜನಿಗೆ ನೀಡಿರುವ ವರ. ತನ್ನಲ್ಲಿಯ ವಿಷಯಗಳನ್ನು ಇತರರಿಗೆ ಹಂಚುತ್ತ, ಇತರರಲ್ಲಿ ಇರಬಹುದಾದ ಜ್ಞಾನವನ್ನು ನಾವು ಪಡೆಯುತ್ತ ಒಬ್ಬರೊಬ್ಬರಿಗೆ ಕೊಡುವ ತೆಗೆದುಕೊಳ್ಳುವ ಕ್ರಿಯೆಯಿಂದ ಇಬ್ಬರು ಬೆಳೆಯುತ್ತ ಹೋಗಬಹುದಾದ ಸೌಲಭ್ಯ.  ಅದಕ್ಕೆ ಪೂರಕವಾಗಿ ಇರುವುದು ಪ್ರತಿಕ್ರಿಯೆಗಳು ಮತ್ತು ಅದಕ್ಕೆ ಮತ್ತೆ ಪ್ರತಿಕ್ರಿಯೆ. ಆದರೆ ಇಂತ ಸೌಲಭ್ಯಗಳನ್ನು ಬಳಸಿಕೊಳ್ಳುವದರ ಬದಲಿಗೆ , ತಮ್ಮ ಲೇಖನಗಳನ್ನು ಸದಾ ಬೇರೆಯವರ ನಂಬಿಕೆಗಳನ್ನು ಜರಿಯುತ್ತ, ನಿಂದಿಸುತ್ತ, ನೆಲದ ಸಂಸ್ಕೃತಿಯನ್ನು ಹೀಯಾಳಿಸುತ್ತ ಸತತವಾಗಿ ಬರೆಯುತ್ತಿದ್ದರೆ, ಉಳಿದ ಸದಸ್ಯರಿಗೆ ಸದಾ ಕಿರಿಕಿರಿಯಾಗುತ್ತದೆ, ಹಾಗಿದ್ದರು ಸಂಪದದ ಓದುಗರು ಸಹೃದಯಿಗಳು, ತಮಗೆ ನೋವಾದರು , ನಿರ್ಲಕ್ಷಿಸಿ ಸುಮ್ಮನಾಗುವವರೆ ಜಾಸ್ತಿ.  
 
ಆದರೆ ಈ ಮೌನವನ್ನು ಅರ್ಥಮಾಡಿಕೊಳ್ಳದೆ  ಬೇರೆಯವರ ಹುಟ್ಟನ್ನೆ ಪ್ರಶ್ನಿಸುವ ಮಟ್ಟದ ವಾಕ್ಯಗಳನ್ನು ಬರೆಯುತ್ತ ಇದ್ದರು ಸಹ ಸುಮ್ಮನಿರಲು ಏಕೊ ನನಗೆ ಇಷ್ಟವಾಗುತ್ತಿಲ್ಲ. ದೇವರನ್ನು ನಾನು ನಂಬುವೆನೊ ಇಲ್ಲವೊ ನನಗೆ ಗೊತ್ತಿಲ್ಲ. ನಮ್ಮ ಸ೦ಸ್ಕೃತಿಯ ಆಳವೆಷ್ಟು ನನಗೂ ಗೊತ್ತಿಲ್ಲ. ದೇವರು ಇದ್ದಾನೆಯೊ ಇಲ್ಲವೊ ನನಗೆ ತಿಳಿಯದು. ಎಲ್ಲವನ್ನು ಒಪ್ಪುತ್ತೇನೆ.  ಆದರೆ ಯಾರೆ ಆಗಲಿ ದೇವರನ್ನು ಅದರಲ್ಲೂ ಕೃಷ್ಣನನ್ನು ನಂಬಿದರೆ ಅಂತವರ ಹುಟ್ಟೆ ಪ್ರಶ್ನಾರ್ಹ ಎನ್ನುವ ರೀತಿಯ ಲೇಖನಗಳನ್ನು ಬರೆಯುವುದು ಸರಿಯೆ?
 
ನಮ್ಮ ಸಮಾಜದಲ್ಲಿ ಎಲ್ಲವು ಸರಿಯಿಲ್ಲ, ಯಾವುದು ಸರಿಯಿಲ್ಲ, ಅದಕ್ಕೆ ಕಾರಣರಾದವರು ಎಷ್ಟೊ ಜನ ಇದ್ದಾರೆ, ನೋವು ಸಹಿಸಿ ಕಣ್ಣೀರ ಸುರಿಸುವವರು , ಇದ್ದಾರೆ, ಶೋಷಣೆಗೆ ಹಲವು ಮುಖಗಳಿವೆ, ಶೋಷಣೆ ಸಹಿಸಿ ಸಿಡಿಯುವವರು ಇದ್ದಾರೆ, ಅದಕ್ಕೆ ಯಾರೊ ಒಬ್ಬ ವ್ಯಕ್ತಿಗಳು ಕಾರಣರಾಗಿರುವದಿಲ್ಲ.  ಈ ಶೋಷಣೆ ಶೋಷಿತ ಎನ್ನುವ ಪದಗಳ ವ್ಯಾಪ್ತಿಗಳೆಲ್ಲ ಪದಗಳಿಗೆ ಸಿಕ್ಕುವದಲ್ಲಿ ಅದನ್ನು ಅನುಭವಿಸಿದವರಿಗಷ್ಟೆ ತಿಳಿಯುವುದು ,  ಎಲ್ಲವು ನಿಜ. ಆದರೆ ಅದನ್ನು ತಿದ್ದಬೇಕಾದವರು ಯಾರು. ಒಬ್ಬ ವ್ಯಕ್ತಿಯಿಂದ ಆಗುವ ಕೆಲಸಗಳಲ್ಲ, ಸಮಾಜವನ್ನು ತಿದ್ದಿ ಹೊಸದಿಕ್ಕಿಗೆ ಕರೆದೊಯ್ಯಬೇಕಾದ ಕೆಲಸ ಈಗಿನ ಯುವಕರಿಂದ ಆಗಬೇಕಾಗಿದೆ.
 
ಅವರಿಗೆ ಸಿಕ್ಕಿರುವ ಆಯುಧ ಈ ಅಂತರ್ಜಾಲ ಎಂಬ ಮಾದ್ಯಮ, ಇದರ ಮೂಲಕ ಸಮಾಜವನ್ನು ತಿದ್ದುವ , ಹೊಸದಾಗಿ ಕಟ್ಟುವ ಕೆಲಸ ಆಗಬೇಕಾಗಿದೆ .
 
ಆದರೆ ಆಗುತ್ತಿರುವದಾದರು ಏನು, ಸದಾ ಮತ್ತೊಬ್ಬರನ್ನು ನಿಂದಿಸುತ್ತ, ದ್ವೇಷದ ಉಸಿರನ್ನು ಬಿಡುತ್ತಲಿದ್ದರೆ, ತಿದ್ದುವ ಕ್ರಿಯೆ ಸಾದ್ಯವೆ ? 
 
ನಾನು ಎರಡು ವರ್ಷದ ಕೆಳಗೆ ಯಾವುದೊ ಕನಸು ಹೊತ್ತು ಬಂದೆ, ಈ ಅಂತರ್ಜಾಲ ಎಂಬ ಮಾಯಾ ಮೃಗ ನನ್ನನ್ನು ಯಾವುದೊ ಕನಸಿನ ಲೋಕಕ್ಕೆ ಕರೆದೊಯ್ಯುತ್ತೆ ಎಂದು. ಆದರೆ ಇದು ನಮ್ಮ ಸಮಾಜದ ಕನ್ನಡಿಯಷ್ಟೆ ,, ಇಲ್ಲಿರುವ  ವಿಕೃತ, ಸುಕೃತ, ಶಾಂತ, ಮೌನ, ದ್ವೇಷ, ಪ್ರೇಮ, ಪ್ರೀತಿಯ ಹಲವು ನಗ್ನ ಮುಖಗಳು ಏಕೊ ಅನಿಸುತ್ತಿದೆ,  ಈ ಅಂತರ್ಜಾಲದ ಸಂಬಂಧ ಮುಂದುವರಿಸಬೇಕೆ ಎಂದು.
 
ಇಲ್ಲಿ ನಾನು ಏನು ಸಾಧಿಸುತ್ತಿದ್ದೇನೆ ನನಗೆ ತಿಳಿಯುತ್ತಿಲ್ಲ
ಬ್ಲಾಗ್ ವರ್ಗಗಳು: 
‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.3 (3 votes)
To prevent automated spam submissions leave this field empty.

ಪ್ರತಿಕ್ರಿಯೆಗಳು

ಮೇಲೆ ಸೇರಿಸಲು ಆಗಲಿಲ್ಲ , ಮುಂಚೆಯೆ ಸೇವ್ ಒತ್ತಿಬಿಟ್ಟೆ
ಚಿತ್ರದ ಮೂಲ : http://www.google.co.in/imgres?hl=en&tbo=d&biw=1024&bih=653&tbm=isch&tbn...

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

"ಪಾರ್ಥಸಾರಥಿ"ಯವರೆ,
ಇಂತಹ ಸಮಯದಲ್ಲಿ ನಮಗೆಲ್ಲಾ ಗೀತೆಯನ್ನು ಬೋಧಿಸಬೇಕಾದ ತಾವೇ ಬಿಲ್ಲು ಬಾಣ ಎಸೆದು ">>>ಏಕೊ ಅನಿಸುತ್ತಿದೆ, ಈ ಅಂತರ್ಜಾಲದ ಸಂಭಂದ ಮುಂದುವರಿಸಬೇಕೆ ಎಂದು" ಅನ್ನುತ್ತಿದ್ದೀರಲ್ಲಾ. ನಮ್ಮದೇ ತಪ್ಪು ಇದೆ. ನಾವು ನಿಮ್ಮನ್ನು "ಪಾರ್ಥಸಾರಥಿ" ಅನ್ನದೇ ಯಾವಾಗಲೂ "ಪಾರ್ಥ" ಅಂದು ಕರೆದು ಕರೆದು "ಅರ್ಜುನ"ನ ಹಾಗೆ ರಣರಂಗ ಬಿಡುವ ಆಲೋಚನೆ ಮಾಡುತ್ತಿದ್ದೀರಿ.:) ದೇವರನ್ನು ಜರಿಯುವ ಕೆಲಸ ಇಂದು ನೆನ್ನೆಯದಲ್ಲ ಎಂಬುದು ನಿಮಗೂ ಗೊತ್ತಿದೆ. ..........."ಆರು ಬದುಕಿದರಯ್ಯಾ...ಹರಿ ನಿನ್ನ ನಂಬಿ, ತೋರು ಈ ಧರೆಯೊಳಗೆ ಒಬ್ಬರನು ಕಾಣೆ ಕೃಷ್ಣ...."ಎಂದೆಲ್ಲಾ ನಿಂದಾ ಸ್ತುತಿಗಳೂ ಇವೆಯಲ್ಲಾ. "ಬೈಯದವಗಿಂತಲೂ ಬೈಯುವನೇ ಮೇಲು/ ....ಆರೇನು ಬೈದರು ಯಾರು ನಿಂದಿಸಿದರು/ ಚಾರು ಸುಂದರ ರೂಪ ದರುಶನವಿತ್ತೆ...."; ನಮ್ಮ ಈ ಜನದ ಬೈಗಳು ಅತಿಯಾಯಿತು; ಒಬ್ಬರ ತಪ್ಪಿಗಾಗಿ ಅಂತರ್ಜಾಲದ ಮೇಲೇಕೆ ಕೋಪ. ಚಿಂತಿಸುವ ಬದಲು ಒಂದೆರಡು ಕತೆ ಬರೆದು ಹಾಕಿ...ಪೋಗಾದಿರೆಲೋ ಪಾರ್ಥಾ....ಅಂತರ್ಜಾಲಾದಿಂದಾಚೆ........:)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗಣೇಶರೆ ನಮಸ್ಕಾರ‌ ಮತ್ತೊಮೆ ಸ್ವಷ್ಟಪಡಿಸಬೇಕಾಗಿದೆ ನನ್ನ ಅಸಮಾದಾನ‌ ಇರುವುದು ದೈವ‌ ನಿ0ದನೆ ಬಗೆಗೆ ಅಲ್ಲ ಅಥವ‌ ದೈವ‌ ನಿರಾಕರಣೆ ಬಗ್ಗೆಯು ಅಲ್ಲ . ದೇವರನ್ನು ಇಲ್ಲ ಅನ್ನುವ‌ ವಾದ‌ ದೇವರ‌ ಕಲ್ಪನೆಯ‌ ಜೊತೆಜೊತೆಗೆ ಬ0ದಿರುವುದು. ರಾಮ‌ ಹಾಗು ಕ್ರಿಷ್ಣರು ಮನವರಾಗಿ ಹುಟ್ಟಿದವರು ಅವರನ್ನು ಯಾವದ‌ ದೇವರೆ0ದು ಕರೆದರೊ ಗೊತ್ತಿಲ್ಲ. ಅದೆಲ್ಲ ಬೇರೆಯದೆ ವಿಷಯವಾಯಿತು. ವಿಷಯ‌ ತಿಳಿಸುವದಕ್ಕೆ , ಅಭಿಪ್ರಾಯ‌ ವ್ಯಕ್ತಪಡಿಸಲು ಎಲ್ಲರು ಸ್ವಾತ0ತ್ರ್ಯರು . ಇದು ಭಾರತ‌ ! , ಅದರೆ ನನ್ನ ವಿರೋದ‌ ಇರುವದೆಲ್ಲ ಉಪಯೋಗಿಸುವ‌ ಬಾಷೆಯ‌ ಬಗೆಗೆ. ಅಷ್ತೆ ಕ್ರಿಷ್ಣನನ್ನು ದೇವರೆ0ದು ಒಪ್ಪುವವರ‌ ತಾಯಿ ಅಜ್ಜಿಯ‌ ಬಗೆಗೆ ಮಾತನಾಡುವ‌ ಬಾಷೆಯ‌ ಬಗೆಗೆ ಬೇಸರ‌ ಅಷ್ಟೆ! ಹೋಗಲಿ ಬಿಡಿ
ನಾನು ಬಿಲ್ಲು ಎಸೆದರೇನು , ಗದೆ ಹಿಡಿದು ನೀವು ನನಿ0ತಿದ್ದೀರಲ್ಲ ಸಾಕು

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಗುರುಗಳೇ ನಮ್ಮ ನಮ್ಮ
ನಂಬಿಕೆ- ಅನಿಸಿಕೆ-ಅಭಿಪ್ರಾಯ ಆದಸ್ತು ವಯುಕ್ತಿಕವಾಗಿದ್ದರೆನೆ ಚೆನ್ನ...
ನಮ್ಮ ಅಭಿಪ್ರಾಯ ಅನಿಸಿಕೆ-ಧೋರಣೆಗಳನ್ನು ಬೇರೆಯವರ ಮೇಲೆ ಹೇರುವುದು ಸರಿಯಲ್ಲ...
ಯಾವುದೇ ಆಗಲಿ ಅದು ಅವರವರ ಭಾವಕ್ಕೆ ಆಗಿರಬೇಕು ಆಷ್ಟೇ....
ಹೋಗಲಿ ಬಿಡಿ ಆ
ವಾದ ವಿವಾದ ಅತ್ಲಾಗಿರ್ಲಿ....
ನೀವ್ ಮಾತ್ರ ಸಂಪದ ಬಿಡದಿರಿ...
ಶುಭವಾಗಲಿ...

\|/

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಆತ್ಮೀಯ ಪಾರ್ಥರೇ, ಯಾರನ್ನೂ ಯಾರೂ ಬದಲಿಸಲು ಆಗದು. ನಿಂದಾಸ್ತುತಿಗಳು ಸಹಜ. ಬರೆಯುವುದರಿಂದ ನಮ್ಮನ್ನು ನಾವು ತೆರೆದಿಡುವೆವು, ಅಷ್ಟೆ. ಒಪ್ಪುವವರು ಒಪ್ಪುತ್ತಾರೆ. ವಿರುದ್ಧ ಮನೋಭಾವದವರು ತೆಗಳುತ್ತಾರೆ. ಇದರಲ್ಲಿ ಮಥನ ಕಾರ್ಯ ಮಹತ್ವದ್ದು. ನಮ್ಮನ್ನು ಮಾತ್ರ ನಾವು ಬದಲಾಯಿಸಿಕೊಳ್ಳಬಲ್ಲೆವು. ಇಷ್ಟಾದರೆ ಸಾಕಲ್ಲವೇ? ಬರೆಯಿರಿ, ನಿಮ್ಮ ಬರಹವನ್ನು ಆಸ್ವಾದಿಸುವವರಲ್ಲಿ ನಾನೂ ಒಬ್ಬನಿದ್ದೇನೆ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಪಾರ್ಥಸಾರಥಿ: "ತೀರ ಕೆಳಮಟ್ಟದ ಮಾತುಗಳನ್ನು ಬಳಸಿ ಜಗಳ ಆಗಿರುವುದು ಕಡಿಮೆ."

ಕೆಳಮಟ್ಟದ ಮಾತುಗಳನ್ನು ಬಳಸಿ ಉಚ್ಚಾಟಿಸಿಕೊಂಡಿರುವ ಬಹಳಷ್ಟು ಉದಾಹರಣೆಗಳು ಸಂಪದಚರಿತ್ರೆಯಲ್ಲಿವೆ.

ಎಷ್ಟರಮಟ್ಟಿಗೆ ಎಂದರೆ ಪುರಾಣಪ್ರಿಯ ಹಿರಿಯರೊಬ್ಬರು ಸ್ವಘಟ್ಟಿದೈವಕ್ಕೆ ಜನುಮ ನೀಡಿದ ಅತಿ ಕಿರಿಯ ಸಂಪದಿಗ ವಿದ್ಯಾರ್ಥಿಯೊಬ್ಬರಿಗೆ ಹೊಡೆಯುವ ಮಾತನ್ನು ಕೂಡ ಸಂಪದದಲ್ಲಿ ಬರೆದಿದ್ದರು.

ವೈಯಕ್ತಿಕ ಮಟ್ಟದ ದೂಷಣೆ ಹೇಗಿರಬಹುದು ಎಂಬುದಕ್ಕೆ ಈ ದಿನದ ಒಂದು ಸಣ್ಣ ಉದಾಹರಣೆ ನಿಮ್ಮ ಮನರಂಜನೆಗಾಗಿ ಇಲ್ಲಿ ಹಾಕಿದ್ದೇನೆ:-

<<<< "ಗಣೇಶರೇ, ನಿಮ್ಮ‌ ನಡವಳಿಕೆಯ‌ ಮೇಲೆ ನಿಮ್ಮನ್ನು ಅಣ್ಣಾ ಎಮ್ದು ಕರೆಯಬೇಕಿರುತ್ತದೆ. ನಿಮ್ಮಗೆ ಆ ಅರ್ಹತೆಯಿಲ್ಲದ‌ ಮೇಲೆ ಹೇಗೆ ಕರೆಯಲಿ ಮೊದಲು ಆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಉದಾಹರಣೆಗೆ ಕವಿ ನಾಗರಾಜ‌ ರವರನ್ನು ಗೌರವಿಸುತ್ತೇವೆ ಕಾರಣ‌ ಅವರ‌ ಮಾತಿನಲ್ಲಿ ತೂಕವಿರುತ್ತದೆ ನಿಮ್ಮಲ್ಲಿ ಏಂದೂ ಆ ತೂಕವನ್ನು ಕಾಣಲೇ ಇಲ್ಲ‌ ಹೇಗೆ ನಿಮ್ಮನ್ನು ಆಣ್ಣಾ ಅನ್ನಲಿ." >>>>

ತಮ್ಮ ಸಂಪದದಲ್ಲಿ ಪ್ರಸಿದ್ದವಾದ ತೂಕವನ್ನು ನಿಜಕ್ಕೂ ಇದೆ ಎಂದು ತೋರಿಸಲಾದರೂ ಗಣೇಶರು ಪ್ರತ್ಯಕ್ಷರಾಗಬೇಕಾಗಿದೆ. :-) :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@ ಪಾರ್ಥಸಾರಥಿ: "ತೀರ ಕೆಳಮಟ್ಟದ ಮಾತುಗಳನ್ನು ಬಳಸಿ ಜಗಳ ಆಗಿರುವುದು ಕಡಿಮೆ."

ಕೆಳಮಟ್ಟದ ಮಾತುಗಳನ್ನು ಬಳಸಿ ಉಚ್ಚಾಟಿಸಿಕೊಂಡಿರುವ ಬಹಳಷ್ಟು ಉದಾಹರಣೆಗಳು ಸಂಪದಚರಿತ್ರೆಯಲ್ಲಿವೆ.

ಎಷ್ಟರಮಟ್ಟಿಗೆ ಎಂದರೆ ಪುರಾಣಪ್ರಿಯ ಹಿರಿಯರೊಬ್ಬರು ಸ್ವಘಟ್ಟಿದೈವಕ್ಕೆ ಜನುಮ ನೀಡಿದ ಅತಿ ಕಿರಿಯ ಸಂಪದಿಗ ವಿದ್ಯಾರ್ಥಿಯೊಬ್ಬರಿಗೆ ಹೊಡೆಯುವ ಮಾತನ್ನು ಕೂಡ ಸಂಪದದಲ್ಲಿ ಬರೆದಿದ್ದರು.

ವೈಯಕ್ತಿಕ ಮಟ್ಟದ ದೂಷಣೆ ಹೇಗಿರಬಹುದು ಎಂಬುದಕ್ಕೆ ಈ ದಿನದ ಒಂದು ಸಣ್ಣ ಉದಾಹರಣೆ ನಿಮ್ಮ ಮನರಂಜನೆಗಾಗಿ ಇಲ್ಲಿ ಹಾಕಿದ್ದೇನೆ:-
"ಗಣೇಶರೇ, ನಿಮ್ಮ‌ ನಡವಳಿಕೆಯ‌ ಮೇಲೆ ನಿಮ್ಮನ್ನು ಅಣ್ಣಾ ಎಮ್ದು ಕರೆಯಬೇಕಿರುತ್ತದೆ. ನಿಮ್ಮಗೆ ಆ ಅರ್ಹತೆಯಿಲ್ಲದ‌ ಮೇಲೆ ಹೇಗೆ ಕರೆಯಲಿ ಮೊದಲು ಆ ಗೌರವಕ್ಕೆ ತಕ್ಕಂತೆ ನಡೆದುಕೊಳ್ಳಬೇಕು ಉದಾಹರಣೆಗೆ ಕವಿ ನಾಗರಾಜ‌ ರವರನ್ನು ಗೌರವಿಸುತ್ತೇವೆ ಕಾರಣ‌ ಅವರ‌ ಮಾತಿನಲ್ಲಿ ತೂಕವಿರುತ್ತದೆ ನಿಮ್ಮಲ್ಲಿ ಏಂದೂ ಆ ತೂಕವನ್ನು ಕಾಣಲೇ ಇಲ್ಲ‌ ಹೇಗೆ ನಿಮ್ಮನ್ನು ಆಣ್ಣಾ ಅನ್ನಲಿ."

ತಮ್ಮ ಸಂಪದದಲ್ಲಿ ಪ್ರಸಿದ್ದವಾದ ತೂಕವನ್ನು ನಿಜಕ್ಕೂ ಇದೆ ಎಂದು ತೋರಿಸಲಾದರೂ ಗಣೇಶರು ಪ್ರತ್ಯಕ್ಷರಾಗಬೇಕಾಗಿದೆ. :-) :-)

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಶ್ರೀಕರ್ ಅವರೆ,
ತಮ್ಮ ಪ್ರೀತಿಗೆ ಧನ್ಯವಾದಗಳು. ನಾವೆಲ್ಲರೂ ಭಜಿಸಿದ "ಸ್ವಘಟ್ಟಿ" ದೇವರನ್ನು ನಮ್ಮ ಗುಣಶೇಕರ ಮೂರ್ತಿಯವರು ಒಪ್ಪಬಹುದು ಕಾಣುತ್ತದೆ. :)
-ಗಣೇಶ.

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

@shreekar , ನಿಮ್ಮ ಮಾತು ನಿಜ‌ , ಹಿ0ದೊಮ್ಮೆ ಅ0ತರ್ಜಾಲದಲ್ಲಿ ಒ0ದು ಬರಹ‌ ನೊಡಿದೆ, ಅದರಲ್ಲಿ ಸಬ್ ಟೈಟಲ್ 'ಸ0ಪದದಲ್ಲಿ ಬ್ಯಾನ್ ಮಾಡಿದ್ದು' ಎ0ದು ಇತ್ತು!! , ಬ್ಯಾನ್ ಮಾಡಿದರು ಅದನ್ನು ಪ್ರಚಾರಕ್ಕಾಗಿ ಬಳಸುತ್ತಾರೆ ! ಇರಲಿ ಬಿಡಿ ಲೋಕೊ ವಿಚಿತ್ರರುಚಿ !
ಎಲ್ಲಡೆಯು ನಾವು ನಮಗೆ ಬೇಕಾದನ್ನೆ ನಿರೀಕ್ಷಿಸುವ0ತಿಲ್ಲ , ಆದರೆ ನಮಗೆ ಬೇಕಾದುದ್ದನ್ನು ಮಾತ್ರ ಓದುವ‌ ಸ್ವಾತ0ತ್ರ್ಯವಿದೆ ಹಾಗೆ ಬೇಡದ‌ ಬರಹಗಳನ್ನು ನಿರ್ಲಕ್ಷಿಸುವ‌ ಆಯ್ಕೆಯ0ತು ಇದ್ದೆ ಇದೆ

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.

ಹೂಂ ನಿಮ್ಮ ಬ್ರಾಹ್ಮಣ ದ್ವೇಶ ಅರ್ಥವಾಗುತ್ತೆ ಬಿಡಿ. ಕೃಷ್ಣನ ಎಲ್ಲ ಲೀಲೆಗಳನ್ನು ಕಣ್ಣಿಂದ ಕಂಡವರಂತೆ ಬರೆದಿದ್ದರಲ್ಲಿ ಅದ್ಯಾವ ಸತ್ಯವಡಗಿದೆಯೋ?

ನಿಮಗೆ ಈ ಪ್ರತಿಕ್ರಿಯೆ ಇಷ್ಟವಾಯಿತೇ? ತಿಳಿಸಿ: 
To prevent automated spam submissions leave this field empty.