Sampada Blogs

ಬಸವಣ್ಣನವರ ಜಾತಿ ಸರ್ಟಿಫಿಕೇಟು!

"ನಮಸ್ಕಾರ, ತಹಸೀಲ್ದಾರ್ ಸಾಹೇಬರಿಗೆ."
"ಓಹೋಹೋ, ರಾಯರು! ಬನ್ನಿ ಸಾರ್. ದೇವರ ದರ್ಶನ ಆದಂತಾಯಿತು. ಕೂತ್ಕೊಳಿ ಸಾರ್" ಎನ್ನುತ್ತಾ ತಹಸೀಲ್ದಾರರು ಶಿಷ್ಯನಿಗೆ ಕಾಫಿ ತರಲು ಹೇಳಿದರು.
"ಹೇಳಿ ಸಾರ್, ಏನು ಬರೋಣವಾಯಿತು?"
"ಒಂದು ಜಾತಿ ಸರ್ಟಿಫಿಕೇಟ್ ಬೇಕಿತ್ತು. ಕೌಂಟರಿನಲ್ಲಿ ಅರ್ಜಿ ಕೊಟ್ಟೆ. ತೆಗೆದುಕೊಳ್ಳಲಿಲ್ಲ. ತಹಸೀಲ್ದಾರರಿಗೇ ಕೊಡಿ ಅಂದರು. ಅದಕ್ಕೇ ನಿಮಗೇ ಕೊಡುತ್ತಿದ್ದೇನೆ. ತೆಗೆದುಕೊಳ್ಳಿ".
ಅರ್ಜಿ ನೋಡಿ ಬೆಚ್ಚಿಬಿದ್ದ ತಹಸೀಲ್ದಾರರು,
"ಏನ್ಸಾರ್ ಇದು? ಬಸವಣ್ಣನವರ ಜಾತಿ ಸರ್ಟಿಫಿಕೇಟಾ? ಯು ಮೀನ್ ಜಗಜ್ಯೋತಿ ಬಸವೇಶ್ವರ?"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.6 (5 votes)
To prevent automated spam submissions leave this field empty.

ವಸಂತನ ಹಕ್ಕಿಗಳು

1. ರೂಪಕಗಳು
 
ಶಿಶಿರದಲ್ಲಿ ಅವಿತ 
ಕೊರಳ ಬಿಸಿಯಾರದ ಮಾತು
ಹೊಸ್ತಿಲೇರಿದ ಹೊಸ ಋತು 
ಒಡೆವ ಸಂತಸದ ಚಿಗುರು
ಚಿಲಿಪಿಲಿ ಕುಕು ಕಲರವ ಕೇಕೆಗಳು
ವಸಂತನಿಗಂಟಿದ ರೂಪಕಗಳು
 
 
2. ಕಾಲರ್ ಟ್ಯೂನ್
 
ವಸಂತನಿಗೆ ವೈವಿಧ್ಯದ
ಕಾಲರ್ ಟ್ಯೂನ್
ಹರಿಬಿಡುವ
ಬಣ್ಣ ಬಣ್ಣದ 
ವಿಧವಿಧ ಹಕ್ಕಿಗಳು
 
 
3. ಸಾಣೆ
 
ರಾತ್ರಿ ಅಚಾನಕ ಮಳೆ ಸುರಿದು 
ಹೊಳೆವ ಬೆಳಗು 
ವಸಂತನ ಸೊಂಪಿಗೆ
ಹಕ್ಕಿ ಹೊರಳಿಸಿ ಕೊರಳು
ಹಿಡಿದಿದೆ ಸಾಣೆ ಇಂಪಿಗೂ!
 
ಇನಿಯಳ ಸೆಳೆವ 
ಹಕ್ಕಿಯ ಕಲೆ ಎಂಥ ಸೊಬಗು !! 
 
 
4. ಯಾವ ಘರಾನ
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

1949ರ ಚಂದಮಾಮಾಗಳಿಂದ

ಜಮದಗ್ನಿಯ ಹೆಂಡತಿ ರೇಣುಕೆಗೆ ಬಿಸಿಲಿನಿ೦ದ ಬಳಲಿಕೆ ಆದ ಕಾರಣ " ಜಮದಗ್ನಿ ಸೂರ್ಯನ ಮೇಲೆ ಸಿಟ್ಟಿಗೆದ್ದಾಗ ಅವನು ಛತ್ರಿ ಮತ್ತು ಮೆಟ್ಟುಗಳನ್ನು ತಯಾರಿ ಮಾಡಿ ಕೊಟ್ಟನು ಅಂದಿನಿಂದ ಮಾನವರೆಲ್ಲ ಅವನ್ನು ಬಳಸುತ್ತಿದ್ದಾರೆ
 
ಬಾಲ ನಾಗಮ್ಮ ಹಾನುಗಲ್ಲು ರಾಜ್ಯದಲ್ಲಿ ಇದ್ದಳು
 
ಶೆಟ್ಟಿ ಇವತ್ತೇನೋ ಸಾಲ ಕೊಡುತ್ತಾನೆ. ಆದರೆ ವಾಯಿದೆ ತೀರಿದ ಮೇಲೆ ಆಡಬಾರದ ಮಾತು ಆಡುವನು , ಜಗಳಕ್ಕೆ ಎಳೆಯುವನು.
- - ಕೋರ್ಟಿನ ಬದಲಾಗಿ ?
 
ಕಾಲಿಲ್ಲದ ಕುದುರೆ ಹತ್ತಿ ಹೋದ
ಅಂದರೆ - - ಚಪ್ಪಲಿ ಹಾಕಿಕೊಂಡು ಹೋದ
 
ಅಕಬರನು ಉಪಕಾರವನ್ನು ಮರೆಯುವ ಪ್ರಾಣಿ ಮತ್ತು ಉಪಕಾರವನ್ನು ಮರೆಯದ ಪ್ರಾಣಿಗಳನ್ನು ತರಲು ಹೇಳಿದಾಗ ಬೀರಬಲ್ಲನು ಅಳಿಯ ಮತ್ತು ನಾಯಿಯೊ Oದಿಗೆ ಬಂದನು
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (4 votes)
To prevent automated spam submissions leave this field empty.
ಸರಣಿ: 

ಬೆಂಬಿಡೆನೆ ಕವಿತಾ...

ಏನು ಏನಿದು ಸೆಳೆತ
ಎತ್ತಕಡೆಗೀ ಎಳೆತ
ಕಾವ್ಯವೇ ನನ್ನ ಮೊರೆತ ?!
ಸೊಂಪಿನಲೆ ಹರಿವ ಸುಧೆ
ಸೆಳೆವ ಸೆಲೆ ಸಂಪದೆ
ಮೃದುಲವುಲಿತ ಮಿತ
ಸ್ಮಿತೆ ಅಕ್ಷರೆ ಅಯಸ್ಕಾಂತೆ್
ಇದೊ ಇಲ್ಲಿ ಇನಿತೆ ಸನಿಹದಲ್ಲಿ!
ಸಣ್ಣ ತೊರೆಯಂತೆ
ಕಣ್ಬೆಳಕಿನಂತೆ
ಎದೆಗೆ ಹಚ್ಚಿ ಹಣತೆ
ತೋರಿ ತೋರದೆಲೆ
ಮನಸಿನೊಳಬಿದ್ದ ಸೋನೆ
ಹದ ಮಿದುವಲ್ಲಿ
ಚಿಗುರಲಿರುವ ಲಲನೆ
ಬಳುಕಿನ ನುಡಿಗಳಲಿ
ನವಿರ ಬಕುಳ ಸ್ಪರ್ಷ
ಪದ ಪದಗಳ ಲಾಲಿತ್ಯ
ಉದ್ವೇಗರಹಿತ ಬಡಿತ
ಸೂಕ್ಷ್ಮ ಸುಳಿವ ಪರಿಚಿತೆಯ
ಹಿಂಬಾಲಿಸುವ ತವಕ ಸತತ!
ತಿರುಗೆನ್ನ ನೋಡಿ
ಮುಗುಳನ್ನು ತೂರಿ
ಮನಸೆಲ್ಲ ಮೊಗೆದು

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ನಾನು ನೋಡಿದ ಚಿತ್ರ- ದಿ ಜೆನರಲ್(1926)

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (3 votes)
To prevent automated spam submissions leave this field empty.

Pages

Subscribe to RSS - blogs