ಇತ್ತೀಚೆಗೆ ಸೇರಿಸಿದ ಪುಟಗಳು

ಭಾಗ - ೧౨ ಭೀಷ್ಮ ಯುಧಿಷ್ಠಿರ ಸಂವಾದ: ಸಮುದ್ರಸರಿತ್ಸಂವಾದ ಅಥವಾ ಜೊಂಡು ಹುಲ್ಲಿನ ವೃತ್ತಾಂತವು!

          ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಪವಡಿಸಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠಿರನಿಗೆ ಸೂಚಿಸುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠಿರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

llಅರಿಯಲಾಗದೋll

ಅರಿಯಲಾಗದೋ ನಿನ್ನ ಹರಿಯೇ
ಅರಿಯಲಾಗದೋ...

ಬುದ್ಧಿಗೆ ಹಿಡಿದಿದೆ ತುಕ್ಕು
ಮನಸ್ಸಿಗೆ ಕವಿದಿದೆ ಮಂಕು
ದೇಹವಂತೂ ರೋಗಗಳ ಗುಂಪು

ಹೇಗೆ ಅರಿಯಲಿ ನಿನ್ನ ನಾನು
ಈ ವ್ಯರ್ಥ ಸಲಕರಣೆಯಿಂದಲೇನು ?

ಇಂದ್ರಿಯಗಳು ಓಡಿದೆ ಮಾಯೆಯ ಹಿಂದೆ
ಆಲೋಚನೆಗಳ ಆಟ ಮೋಹದ ಮುಂದೆ
ಚಿತ್ತ ಚಾಂಚಲ್ಯಕ್ಕೆ ಸಿಲುಕಿದೆಯಂತೆ

ಹೇಗೆ ಅರಿಯಲಿ ನಿನ್ನ ನಾನು
ಈ ವ್ಯರ್ಥ ಸಲಕರಣೆಯಿಂದಲೇನು ?

ಪುರಾಣವೂ ಬಲಹೀನವಾಗಿದೆ
ನಿನ್ನ ನೈಜ ರೂಪ ತೋರಲು
ಗೀತೋಪನಿಷತ್ತೂ ಸೋತಿದೆ
ನಿನ್ನ ಎಲ್ಲ ಗುಣ ಹೇಳಲು
ವೇದ ಶಾಸ್ತ್ರಗಳು ಸಾರಿ ಹೇಳಿದೆ
ನೀನು ಅರಿವಿಗೆ ಮೀರಿದವನೆಂದು
ಇನ್ಯಾವ ಉಪಕರಣವನ್ನು
ಉಳಿಸಿರುವೆ ನೀನು ನನಗಿಂದು ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಭಾವಾಂತರll

ಮರೆತ ಕವಿತೆ ಮನದಲ್ಲಿ
ಮಧುರ ರಾಗದಿ ಮುೂಡಿದೆ
ಮರೆಯಲಾಗದ ನಿನ್ನ ನೆನಪು
ಕನಸಾಗಿ ನನ್ನ ಕಾಡಿದೆ

ಮ‍ಧುರ ಮೈತ್ರಿಯು ಮುರಿದ ದಃಖ
ನನ್ನ ಜೀವವ ಹಿಂಡಿದೆ
ಬಲು ಸನಿಹದಲ್ಲೂ ಅಗಾಧ ದೂರವು
ಅಸಹಾಯಕ ಸ್ಥಿತಿಗೆ ಓಡ್ಡಿದೆ

ಕಣ್ಣ ನೀರು ಜಾರುವ ಮೊದಲು
ಸುತ್ತ ನೋಡಿ ಅಡಗಿದೆ
ಮುಗಿಲು ಮುಟ್ಟುವ ಆಕ್ರಂದನ
ಹೆದರಿ ಮೌನಕೆ ಶರಣಾಗಿದೆ

ಸುತ್ತ ಇರುವ ಸ್ನೇಹಿತರ ಮಧ್ಯವೂ
ಒಂಟಿತನವು ಕಾಡಿದೆ
ಎಲ್ಲ ತೊರೆದು ದೂರ ಹೋಗಲು
ಮಾತೃ ಋಣವು ತಡೆದಿದೆ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 3.7 (3 votes)
To prevent automated spam submissions leave this field empty.

llಬರೆಯುವೆ ಕವನವll

ಬರೆಯುವೆ ನಾನು ಕೆಲವು ಕವನವ
ಕೊಡಲು ಭಾವನೆಗಳಿಗೊಂದು ರೂಪವ

ಸಾಹಿತ್ಯ ಸಾಗರದಿ ಮುಳುಗಿ
ಆಳ ನೋಡಿದ ಕವಿ ನಾನಲ್ಲ
ಸುಮ್ಮನೆ ಕುಳಿತಾಗ ಮನದ ಮೂಲೆಯೊಳಗೆ
ಕವಿತೆಯೊಂದು ಆಟವಾಡುತ್ತಿದೆಯಲ್ಲ

ಕನ್ನಡ ತಾಯಿಯ ಸೇವೆಗೈಯುವುದಕ್ಕೆ
ಏನು ಮಾಡಲೆಂದು ಯೋಚಿಸಿದವ ನಾನಲ್ಲ
ಹಲವು ಭಾಷೆಗಳ ಸೈನ್ಯದ ವ್ಯೂಹಕ್ಕೆ
ಹೆದರದೆ ಕನ್ನಡ ಕಹಳೆ ಮೊಳಗುತ್ತಿದೆಯಲ್ಲ

ಹೊಗಳಿಕೆ ತೆಗಳಿಕೆ ಏನೇ ಬಂದರೂ
ಪದಗಳೊಂದಿಗಿನ ಸರಸಕ್ಕೆ ಕೊನೆಯಿಡುವವನಲ್ಲ
ಭಾವನೆ ಅಕ್ಷರಗಳ ಮಿಲನವೇ ಆದರೂ
ಪರಿಶುದ್ಧತೆಗೆಂದೂ ಇಲ್ಲಿ ಸಂಶಯವಿಲ್ಲ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಭಾಗ - ೧೧ ಭೀಷ್ಮ ಯುಧಿಷ್ಠಿರ ಸಂವಾದ: ಶೀಲವೆಂದರೇನು?

         ಭೀಷ್ಮನು ಯುದ್ಧದಲ್ಲಿ ಗಾಯಗೊಂಡು ಶರಶಯ್ಯೆಯಲ್ಲಿ ಮಲಗಿದ್ದಾಗ ಅವನಿಂದ ಧರ್ಮೋಪದೇಶವನ್ನು ಪಡೆಯಲು ಕೃಷ್ಣನು ಯುದಿಷ್ಠರನಿಗೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಭೀಷ್ಮನು ಯುಧಿಷ್ಠರನಿಗೆ ರಾಜನೀತಿಯನ್ನು ಬೋಧಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು. 
           ಯುದಿಷ್ಠಿರನು ಕೇಳಿದನು, "ಪಿತಾಮಹಾ! ಪ್ರಪಂಚದಲ್ಲಿ ಎಲ್ಲರೂ ಸೌಶೀಲ್ಯವಂತರಾದ ವ್ಯಕ್ತಿಗಳನ್ನು ಗೌರವಿಸುತ್ತಾರೆ, ಪ್ರಶಂಸಿಸುತ್ತಾರೆ. ಹಾಗಾದರೆ ಶೀಲವೆಂದರೆ ಏನು? ಶೀಲವನ್ನು ಸಂಪಾದಿಸಿಕೊಳ್ಳುವುದು ಹೇಗೆ? ದಯಮಾಡಿ ಹೇಳುವಂತವರಾಗಿ"

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಮೂಢ ಉವಾಚ - 400

     ಇದು 400ನೆಯ ಮೂಢ ಉವಾಚ! ಮೂಢ ಉವಾಚಗಳನ್ನು ಇದುವರೆಗೆ ಓದಿದವರಿಗೆ, ಮೆಚ್ಚಿದವರಿಗೆ, ಪ್ರತಿಕ್ರಿಯಿಸಿದವರಿಗೆ ಮೂಢನ ಕೃತಜ್ಞತೆಗಳು. ಇವೆಲ್ಲವೂ ಮೂಢನ ಸ್ವಗತಗಳು, ತನಗೆ ತಾನೇ ಹೇಳಿಕೊಂಡವುಗಳು. ಏಕೆಂದರೆ ಇನ್ನೊಬ್ಬರಿಗೆ ಹೇಳುವಷ್ಟು ಪ್ರೌಢನಿವನಲ್ಲ. ಎಲ್ಲವೂ ಸಮಾಜ ಅವನಿಗೆ ನೀಡಿದ ಅನುಭವಗಳು, ಜ್ಞಾನಿಗಳು ಹೇಳಿದ ಮಾತುಗಳು, ಜ್ಞಾನ ಭಂಡಾರದಿಂದ ಸಿಕ್ಕಿದವು, ತನ್ನ ಬುದ್ದಿಯ ಮಿತಿಗೆ ಒಳಪಟ್ಟು ತಿಳಿದದ್ದು ಎಂದು ಅಂದುಕೊಂಡದ್ದು. ಸ್ವಂತದ್ದು ಏನೂ ಇಲ್ಲ. ಅವನ್ನು ತನಗೆ ತಿಳಿದಂತೆ, ತಾನು ಅರ್ಥೈಸಿಕೊಂಡಂತೆ, ಇದು ಹೀಗೆ, ಅದು ಹಾಗೆ, ನೀನು ಹೀಗಿರು ಎಂದು ತನಗೆ ತಾನೇ ಗುನುಗಿಕೊಂಡದ್ದು!

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (3 votes)
To prevent automated spam submissions leave this field empty.

ಹಸಿರ ದಾರಿಯಲೀ..

ರಸ್ತೆಗಳೇ ಹೀಗೆ ಯಾರಿಗೂ
ಏನನ್ನೂ ಹೇಳುವುದಿಲ್ಲ.
ಅಳಿಸಿ ಹೋದ ಹೆಜ್ಜೆಯ
ಗುರುತು, ಗತಿಸಿದ ನೆನಪುಗಳ
ಲೆಕ್ಕ ವಿಟ್ಟುಕೊಳ್ಳುವುದಿಲ್ಲ..
ಗುರಿ ಕಾಣುವ ಸಾಮರ್ಥ್ಯ,
ಅಚಲ ವಿಶ್ವಾಸ ನಿನ್ನಲ್ಲಿದ್ದರೆ
ಕತ್ತಲಲ್ಲಿಯೂ ದಾರಿ ಕಾಣಬಲ್ಲೆ..

ಹೆಜ್ಜೆ ಗುರುತಿಲ್ಲದ ಹಾದಿಯಲ್ಲಿ
ಕನಸಿನ ದೀವಿಗೆ ಹೊತ್ತು
ಕವಲುಗಳಿಲ್ಲದ ಹಾದಿಯಲ್ಲಿ
ನಿನ್ನ ಮುಗಿಯದ ಪಯಣ.
ಮರುಗದಿರು ಸಾಗುವ ಹಾದಿ
ದುರ್ಗಮವೆಂದು, ಹಿಮ್ಮೆಟ್ಟದಿರು
ಸೂರ್ಯ ದಹಿಸಿದಾಗಲೇ
ತಣ್ಣನೆಯ ಚಂದ್ರಮನ ಅನುಭಾವ.
ಶ್ರಮದ ಫಲದ ಸಿಹಿಯ
ಸವಿಯು ಅಮೂಲ್ಯ ,ಅನನ್ಯ..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

Pages