ಇತ್ತೀಚೆಗೆ ಸೇರಿಸಿದ ಪುಟಗಳು

ವರ್ತುಲ

ಹೊರಟ ದಾರಿಯ ಮರೆತು
ಗೊಂದಲದ ಅಲೆದಾಟದಲ್ಲಿ...
ಮತ್ತೊಮ್ಮೆ ಬಂದುನಿಂತೆನು
ನಾನು ಅದೇ ತಿರುವಿನಲ್ಲಿ...

ಕಾಣದ ಕೈಯೊಂದು, ನನ್ನ
ದೂಡಿದೆ ಮತ್ತದೇ ದಾರಿಗೆ...
ತಿರುಗಿ ತಿರುವಿಗೇ ಮುಟ್ಟಿ
ಸೇರಲಾರದಾದೆ ನನ್ನೂರಿಗೆ...

ಎಷ್ಟುಬಾರೀ ನಡೆದರೇನಂತೆ
ದಾರಿಯೇನೂ ಬದಲಾಗಲಿಲ್ಲ...
ಆದರೆ ನಾನೇ ಅರಿಯದಂತೆ
ನಾ ಬದಲಾಗಿಹೋಗಿರುವೆನಲ್ಲ...

ಆಗೊಮ್ಮೆ ಭಾಸವಾಯಿತು,ನಾನು
ಪರಿತಪಿಸುತಿರುವೆ ವರ್ತುಲದಲ್ಲಿ...
ವಿಷವರ್ತುಲವೋ?ಅಮೃತದ್ದೋ?
ಇದಕೇನೂ ಇಲ್ಲ ಉತ್ತರವಿಲ್ಲಿ...

ನಡೆದು ನಿತ್ರಾಣವಾದರೇನು
ಕಾಲೇಕೋ ನಿಲ್ಲದಾಗಿತ್ತು...
ಕಲ್ಪನೆಯ ನನ್ನೂರಿನೆಡೆಗೆ
ಚಲಿಸಲು ಅಣಿಯಾಗಿತ್ತು...

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.7 (12 votes)
To prevent automated spam submissions leave this field empty.

ಕಾನ್ಮನೆಯ ಕತೆಗಳು: ಒಂದು ಕೋಲಿನ ನಿಸರ್ಗ ಭಾಷೆ

ಪುಸ್ತಕದ ಲೇಖಕ/ಕವಿಯ ಹೆಸರು : 
ಶಿವಾನಂದ ಕಳವೆ
ಪ್ರಕಾಶಕರು: 
ಎಂ. ಬೈರೇಗೌಡ, ಪ್ರಗತಿ ಗ್ರಾಫಿಕ್ಸ್
ಪುಸ್ತಕದ ಬೆಲೆ: 
ರೂ. 150

“..ಅರಣ್ಯ ಸಂರಕ್ಷಣೆಯ ಕೆಲಸಗಳು ನಡೆಯುತ್ತಿವೆ.  ಸರಣಿ ವಿಚಾರ ಸಂಕಿರಣ, ಆಂದೋಲನ, ಹೋರಾಟಗಳು ಸಾಗಿದೆ.

ಹಾಗಲಕಾಯಿ ಗೊಜ್ಜು .

ವಿಧಾನ ತಿಳಿಸುವ ಮುಂಚೆ :
ಹಾಗಲಕಾಯಿ ಎಂದಾಕ್ಷಣ ಕೆಲವರು ಮುಖ ಮುದುರಿಕೊಳ್ಳುತ್ತದೆ , ಎಷ್ಟು ಬೆಲ್ಲ ಹಾಕಿ ಮಾಡಿದರೂ ಕೆಲವರಿಗೆ ಇಷ್ಟವಾಗುವುದಿಲ್ಲ , ಆದರೆ ಈ ರೀತಿ ಮಾಡಿದ ಗೊಜ್ಜು ಎಲ್ಲರು ಇಷ್ಟ ಪಡುತ್ತಾರೆ . ನನಗೆ ಬಂದ ಅನುಭವದಲ್ಲಿ ಹಾಗಲಕಾಯಿ ತಿನ್ನಲ್ಲ ಅನ್ನುವವರು ಇಷ್ಟಪಟ್ಟು ತಿಂದಿದ್ದಾರೆ . ತಪ್ಪದೇ ಪ್ರಯತ್ನ ಮಾಡಿ ಹಾಗೂ ಹಾಗಲಕಾಯಿಂದಿರುವ ಪ್ರಯೋಜನವನ್ನ ಪಡೆದುಕೊಳ್ಳಿ . 
 
ಸೂಚನೆ: ಮೇಲೆ ತಿಳಿಸಿರುವ ಅಳತೆಯಂತೆಯೇ ಮಾಡುವ ಅವಶ್ಯಕತೆ ಇರುವುದಿಲ್ಲ , ನಿಮ್ಮ ರುಚಿಗೆ ತಕ್ಕಷ್ಟು ಕಾರ ಮತ್ತು ಹುಳಿ ಬಳಸಿಕೊಳ್ಳಿ . 
 
ಮಾಡುವ ವಿಧಾನ :

ಬೇಕಿರುವ ಸಾಮಗ್ರಿ: 

ಬಿಳಿ ಹಾಗಲಕಾಯಿ -೩
ಕೆಂಪು ಮೆಣಸಿನಕಾಯಿ ಪುಡಿ [ಕಾರದ ಪುಡಿ] - ೨ ಚಮಚ
ದನಿಯ / ಸಾಂಬಾರು ಪುಡಿ - ೧. ೫ ಚಮಚ
ಅರಿಶಿಣ ಪುಡಿ - ೦.೫ ಚಮಚ
ಉಣಸೆ ಹಣ್ಣು / ನಿಂಬೆ ಹಣ್ಣು
ಉಪ್ಪು
ಬೆಲ್ಲ [ನಿಮ್ಮ ಅಭಿರುಚಿ]

ಒಗ್ಗರಣೆಗೆ - ೩ ಚಮಚ ಎಣ್ಣೆ , ಸಾಸಿವೆ, ಜೀರಿಗೆ , ಕರಿಬೇವು , ಇಂಗು

llರಕ್ಷಣೆll

ನಿನ್ನ ಮಡಿಲಲ್ಲಿ ಸಿಗುವ ರಕ್ಷಣೆಯು
ಬೇರೆ ಎಲ್ಲೂ ನನಗೆ ಸಿಗದು
ಆ ಮಡಿಲ ತೊರೆದ ಮರುಕ್ಷಣವು
ಭಯದಲ್ಲೇ ಮನಸ್ಸು ಇರುವುದು

ಹೊಟ್ಟೆಯ ಪಾಡಿಗೆ ಊರು ಬಿಟ್ಟೆನಲ್ಲ
ಭಾಷೆ ಬಾರದಿರುವ ಜಾಗ ಸೇರಿದೆನಲ್ಲ
ಸುತ್ತಮುತ್ತ ತನ್ನವರೆಂಬುವರ್ಯಾರಿಲ್ಲ
ಮಾತು ಆಡಲಾಗದೇ ಮೂಕನಾದೆನಲ್ಲ

ಕಾಲದ ಚಕ್ರವು ತಿರುಗುತ್ತಿರುವ ಈ ರೀತಿ
ಮಾಯೆಯ ಮೋಡಿಗೆ ಬಲಿಯಾಗುವ ಭೀತಿ

ಸಣ್ಣ ಪುಟ್ಟದಾದ ಹಲವು ಕನಸು ಕಂಡೆನಲ್ಲ
ಸಮಯದ ಸವೆತಕ್ಕೆ ಎಲ್ಲ ಕರಗಿ ಹೋಯಿತಲ್ಲ
ಬೇರೆ ಯಾವ ಆಸೆ ನನ್ನಲ್ಲಿ ಈಗ ಉಳಿದಿಲ್ಲ
ಮತ್ತೆ ನಿನ್ನ ಮಡಿಲು ನಾ ಸೇರಬಯಸುವೆನಲ್ಲ

ದಿನಗಳೇ ಉರುಳಿದರೂ ಕುಂದಿಲ್ಲ ನಿನ್ನ ಪ್ರೀತಿ
ಆ ಪ್ರೀತಿ ವಾತ್ಸಲ್ಯವೊಂದೇ ಕಳೆಯುವುದು ಎಲ್ಲ ಭೀತಿ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಪ್ರೀತಿಯ ಬೇಡಲೇನುll

ನಿಲ್ಲದ ತುಂತುರು ನೀನು
ಮಳೆಯಲ್ಲಿ ನಾ ನೆನೆಯಲೇನು ?
ಕಾಣುವ ದೇವತೆ ನೀನು
ನಾ ನಿನ್ನ ಧ್ಯಾನಿಸಲೇನು ?

ಬಲು ಮೋಹಕ ರೂಪಸಿ ನೀನು
ನಿನ್ನ ನಾ ಮೋಹಿಸಲೇನು ?
ಅತಿ ಕೋಪಿಸಿಕೊಳ್ಳುವೆ ನೀನು
ನಾ ನಿನ್ನ ಮುದ್ದಿಸಲೇನು ?

ಧರೆಗಿಳಿದ ರತಿ ದೇವಿಯೇ ನೀನು
ನಾ ನಿನ್ನ ಮನ್ಮಥನಾಗಲೇನು ?
ಬತ್ತದ ಮಕರಂದದ ಹೂವು ನೀನು
ದುಂಬಿಯಾಗಿ ಹೀರಲು ಬರಲೇನು ?

ಜಿಂಕೆಯ ಕಣ್ಣೋಳು ನೀನು
ನಿನ್ನ ನಾ ಹಿಂಬಾಲಿಸಲೇನು ?
ಕೋಗಿಲೆಯ ದನಿಯೋಳು ನೀನು
ಮಾತಿನ ಮಾಧುರ್ಯಕ್ಕೆ ತನ್ಮಯನಾಗಲೇನು ?

ಕುಣಿಯುವ ನವಿಲು ನೀನು
ನಟರಾಜ ನಾನಾಗಲೇನು ?
ಮರುಭೂಮಿಯ ಮರೀಚಿಕೆ ನೀನು
ನಿನಗಾಗಿ ನಾ ಅಲೆಯಲೇನು ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಕಲಹll

ಕಣ್ಣ ಅಂಚಲ್ಲಿ ನಿಂತ ಕಂಬನಿ
ಕೇಳುತ್ತಿದೆ ಜಾರಿ ಬಿಡಲೇ ?
ಇಲ್ಲ ಒಳಗೆ ಇಂಗಿ ಬಿಡಲೇ ?

ತುಟಿ ಅಂಚಿಗೆ ಬಂದ ಪದವ
ಜೋರಾಗಿ ಹೇಳಿ ಬಿಡಲೇ ?
ಇಲ್ಲ ತುಟಿಗಚ್ಚಿ ಸುಮ್ಮನಿರಲೇ ?

ಜಾರುವ ಕಣ್ಣ ಹನಿಯ ಒರೆಸಲು
ಕೈಗಳಿಗೂ ಯಾಕೋ ಬೇಸರ
ಆಡುವ ಮಾತು ಕೇಳಿಸಿಕೊಳ್ಳಲು
ಕಿವಿಗಳಿಗೂ ಬಂದಿದೆ ಬರ

ಮನದ ಪುಸ್ತಕದಿ ಮೂಡಿದ ವಾಕ್ಯಗಳ
ತಿಳಿಯಲು ಗಾಢವಾಗಿ ಯೋಚಿಸಲೇ ?
ಇಲ್ಲ ಅರಿಯಲಾಗದೆಂದು ಬಿಟ್ಟು ಬಿಡಲೇ ?

ಸಮಚಿತ್ತಕ್ಕೆ ಕತ್ತಿ ಮಸೆಯುತ್ತಿರುವ ಭಾವನೆಗಳ
ವಿರುದ್ಧವೀಗ ಏಕಾಂಗಿಯಾಗಿ ಹೋರಾಡಲೇ ?
ಇಲ್ಲ ಭಯದಿ ಮೊದಲೇ ಶರಣಾಗಲೇ ?

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.5 (2 votes)
To prevent automated spam submissions leave this field empty.

Pages