ಇತ್ತೀಚೆಗೆ ಸೇರಿಸಿದ ಪುಟಗಳು

ಬೆಂದಕಾಳೂರು

ಅನಾಥರಿಗೆ ಆಸರೆ ನೀಡಿ 
ದುಡಿವ ಕೈಗೆ ಕೆಲಸ ಕೊಟ್ಟು 
ಹಸಿದ ಉದರಕ್ಕೆ ಕೂಳನಿಟ್ಟು
 
ದಣಿದ ಕಾಲಿಗೆ ಗುರಿ ತೋರಿ 
ಕುಂದಿದ ಕಂಗಳಿಗೆ ಕನಸ ತುಂಬಿ 
ಮೌನದ ಬಾಯಿಗೆ ಭಾಷೆ ಕಲಿಸಿ 
 
ಬೆಂದ ಮನಕೆ ಬಂಧವ ತೊಡಿಸಿ 
ಸ್ನೇಹದ ಸವಿಯನು ಉಣ ಬಡಿಸಿ 
ಪ್ರೀತಿ ಪ್ರೇಮದ ನಿಜಾರ್ಥವ ತಿಳಿಸಿ
 
ಬಡವ ಬಲ್ಲಿದರೆನ್ನದೆ 
ಅಕ್ಷರಸ್ಥ ಅನಕ್ಷರಸ್ಥರೆಂದು ತೆಗಳದೆ 
ಸರ್ವರನ್ನು ತನ್ನ ಮಡಿಲಿಗೆ ಸೆಳೆದು 
 
ಬದುಕಿನ ಪಾಠವನ್ನು ಕಲಿಯಿಸಿ 
ಬಾಳಿನ ಮರ್ಮವ ಬಿಡಿಸಿ 
ನರಕ ನಾಕದ ಕಲ್ಪನೆ ವಿವರಿಸಿ 
 
ತಿಳಿ ಹೇಳಿದ ಸುಂದರ ಭವ್ಯ ಊರು 
ಈ ನನ್ನ ಬೆಂದಕಾಳೂರು 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ಹೆಣ್ಣು ಬೊಂಬೆ

ಹೆಣ್ಣು ಅಂದು ಇಂದು ಒಂದೇ 
ಕೇವಲ ಭೋಗದ ಬೊಂಬೆ 
ಕಲಿತರೂ ಕಳೆಯದ ನಿಂದೇ 
ಈ ಪುರುಷ ಸಮಾಜದ ಮುಂದೆ 
ಶುರುವಾಯ್ತು ಶೋಷಣೆಯ ದಂದೆ 
ಶಿಶುವಾಗಿ ಜನ್ಮ ತಳೆದಂದೇ 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (1 vote)
To prevent automated spam submissions leave this field empty.

ಕಾಲನ ಗೂಡಿಗೆ

ಕಾಲನ ಕರೆಗೆ ಓಗೊಟ್ಟು 
ಇಹದ ಜಂಜಾಟವ ಒದ್ದು 
ಅಂಗಾತ ಮಲಗಿದ್ದ 
ಶವದ ಮುಂದೆ ಕೂತು 
 
ಚಿತ್ತ ಕಲಕಿ ಚೀರುತ್ತಿದ್ದೆ 
ನಾನು ಮಾತ್ರ 
ಈ ಧರೆಯ ಶಾಶ್ವತ 
ಅಮೃತ ಬಿಂದೂ ಎಂದು 
 
ದುಃಖದಿಂದ ಬಿಕ್ಕುತ್ತಿದ್ದೆ 
ಒಂದಲ್ಲ ಒಂದು ದಿನ 
ನಾನು ಕೂಡ ಅದೇ ಮನೆಯ 
ಬಂಧುವಾಗುವೆನೆಂಬುದ  ಮರೆತು.....  

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (2 votes)
To prevent automated spam submissions leave this field empty.

ಮುಚ್ಚಿದ ಬೊಗಸೆ

ಎರಡು 
’ಸಾವಿರದ’ 
ಹದಿ-ನೆಂಟೆ’
ಸುರಿದು ಸುಖ ದು:ಖ
ನಿರ್ಲಿಪ್ತ ಸರಿ-ದೆ .....
 
ಇದೀಗ
ಎರಡು  ಸಾವಿರದ
ಹತ್ತೊಂಭತ್ತು -
ತೆರೆ ಸರಿಸಿ  
ಮುಚ್ಚಿದ ಬೊಗಸೆ .....
 
ಬಾ ಹೊಸತೆ
ಕೊಡು 
ಭರವಸೆಯ ಬತ್ತಳಿಕೆ 
ನೀಡು 
ಆಸೆಗಳಿಗಾಸರೆ 
ಹೂಡು ಭಾಗ್ಯ
ಗುರಿಯಿಡು
ನೊಂದವರ
ಬದುಕ ಬಾಗಿಲಿಗೆ
ಈಡಾಡು ಬೆಳಕೆ .....
 
ಮುಗಿಬೀಳಲಿ
ಮಿಗಿಲಿಲ್ಲದ  ಹರ್ಷ
ಅದಕ್ಕಿರಲಿ ಗುರಿ 
ಮುಗಿಲೆ!
 
   - ಅನಂತ ರಮೇಶ್
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4 (1 vote)
To prevent automated spam submissions leave this field empty.

ತ‌ ‍‍‍--ತನ್ಮಯತೆ

ತಾನಾಗೇ ಬರುವುದು ತನ್ಮಯತೆ,
ತಳ್ಳಿದರೆ ತನುವಿನ ಚಂಚಲತೆ. 
ತನ್ನದಾಗಿಸಿಕೊಂಡಿದ್ದನ್ನೇ ಹೊತ್ತು ಹೋಗುವುದಿಲ್ಲವಂತೆ 
ತರವಲ್ಲ ಈ ಮದ್ಯೆ ಪರರ ಚಿಂತೆ 
 
ತಗಡಿನ ಗೊಂಬೆಯಾಗಿಬಿಡು ಜೀವನ ಸಂತೆ 
ತಕರಾರು ಬಿಡು ಅರಿವಾಗುವುದು ಜಗದ ಶೂನ್ಯತೆ 
 
ತನ್ತನವ‌ ಬಿಟ್ಟು ಕೊಡದಿರು 
ತನ್ತನದಿಂದ ಮೆರೆದಾಡದಿರು 
ತನ್ನವರಿಹರೆಂದು ಮರೆಯದಿರು 
ತಾಳ್ಮೆಯ ಬಲಿಕೊಡದಿರು  
                       ಬೋ .ಕು .ವಿ 
 
ಚಿತ್ರ ಕೃಪೆ : ಗೂಗಲ್ ನ ತೊಗಲು ಗೊಂಬೆಯಾಟದ ಚಿತ್ರಗಳು 

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಅರಿಯೆನು ಕೃಷ್ಣll

ಮನಸ್ಸಿನ ಮೂಲೆಯ ಮನೆಯಲ್ಲಿ ನಿನ್ನ
ಗುಡಿ ಕಟ್ಟಿಸಿರುವೆ ಕೃಷ್ಣ
ಆರದ ನಂದಾ ದೀಪವ ಬೆಳಗಿಸಿ
ಧ್ಯಾನಿಸುತ್ತಿರುವೆ ಕೃಷ್ಣ

ಮೂಲೆಯ ಮನೆ ಎಂದು
ಬೇಸರಗೊಳ್ಳದಿರು
ವಶಪಡಿಸಿಕೊಂಡಿದೆ ಸಂಸಾರವೂ
ಉಳಿದ ಜಾಗವನ್ನು

ಕ್ಷಣದ ಧ್ಯಾನವೆಂದು
ಕೋಪಿಸಿಗೊಳ್ಳದಿರು
ಕಸಿದುಕೊಂಡಿದೆ ಚಿಂತೆಯೂ
ಬಹು ಸಮಯವನ್ನು

ನೀ ಕೋಪಿಸಿಕೊಂಡರೆ
ನಾನೆಲ್ಲಿಗೆ ಹೋಗಲಿ
ನೀ ಬೇಸರಗೊಂಡರೆ
ನಿನ್ನ ಹೇಗೆ ಸಂತೈಸಲಿ

ಅಣುರೇಣು ತೃಣಗಳಲ್ಲಿ
ತುಂಬಿರುವ ನಿನ್ನ
ಅರಿತು ಅರಿಯೆನು ನಾನು
ನಂಬು ನನ್ನ

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages