ಇತ್ತೀಚೆಗೆ ಸೇರಿಸಿದ ಪುಟಗಳು

'ಸಂಪದ' wish list

ಸಂಪದ 'ವಿಷ್ ಲಿಸ್ಟ್'ಗೆ ಸ್ವಾಗತ. ಮಾನ್ಯ [:http://sampada.net/node/59|ಓ ಎಲ್ ಎನ್ ಸ್ವಾಮಿಯವರ ಸಲಹೆಯಂತೆ] ಈ ವಿಶ್ ಲಿಸ್ಟ್ ಪ್ರಾರಂಭಿಸಲಾಗಿದೆ. ಸಂಪದದಲ್ಲಿ ಭವಿಷ್ಯದಲ್ಲಿ ನೀವೇನು ಕಾಣಲು ಬಯಸುವಿರೆಂಬುದನ್ನು ಇಲ್ಲಿ ಸೇರಿಸಿ. ಸಂಪದದಲ್ಲೀಗಾಗಲೇ ಇರುವ ಫೀಚರ್‌ಗಳನ್ನು ಇಂಪ್ರೂವ್ ಮಾಡುವ ಬಗ್ಗೆಯಾಗಲೀ ಅಥವಾ ಹೊಸ ವಿಭಾಗಗಳನ್ನು ತೆರೆಯುವ ಬಗ್ಗೆಯಾಗಲೀ ನಿಮ್ಮಲ್ಲಿ ಸಲಹೆಗಳಿದ್ದರೆ ಇಲ್ಲಿ ಕಾಮೆಂಟ್ ಮೂಲಕ ಸೇರಿಸಿ.

ಝೆನ್ ೨: ಶೌನ್ ಮತ್ತು ಅವನ ತಾಯಿ

field_vote: 
Average: 5 (1 vote)
To prevent automated spam submissions leave this field empty.
ಶೌನ್ ಸೊತೊ ಝೆನ್ ಪಂಥದ ಒಬ್ಬ ಗುರು. ಅವನಿನ್ನೂ ವಿದ್ಯಾರ್ಥಿಯಾಗಿದ್ದಾಗಲೇ ಅವನ ತಂದೆ ತೀರಿಹೋದ. ವಯಸ್ಸಾದ ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಶೌನ್‌ನ ಪಾಲಿಗೆ ಬಂತು. ಶೌನ್ ಧ್ಯಾನಕ್ಕೆ ಹೋದಾಗಲೆಲ್ಲ ತಾಯಿಯನ್ನೂ ಜೊತೆಗೆ ಕರೆದುಕೊಂಡು ಹೋಗುತ್ತಿದ್ದ. ಅವನ ಅಲೆದಾಟದಲ್ಲಿ ಯಾವ ಮಠದಲ್ಲೂ ತಂಗಲು ಆಗುತ್ತಿರಲಿಲ್ಲ. ಹೆಂಗಸರನ್ನು ಮಠದೊಳಗೆ ಸೇರಿಸಿಕೊಳ್ಳುತ್ತಿರಲಿಲ್ಲ. ಅದಕ್ಕೇ ಒಂದು ಪುಟ್ಟ ಮನೆಯನ್ನು ಕಟ್ಟಿ ತಾಯಿಯೊಡನೆ ಇರತೊಡಗಿದ ಶೌನ್. ಬುದ್ಧನ ಸೂತ್ರಗಳನ್ನು ಬರೆದು, ಭಕ್ತರಿಗೆ ಕೊಟ್ಟು, ಅವರಿಂದ ಪಡೆದ ದುಡ್ಡಿನಲ್ಲಿ ಜೀವನ ಸಾಗಿಸುತ್ತಿದ್ದ.
ಲೇಖನ ವರ್ಗ (Category): 

ದ ರೋಡ್ ನಾಟ್ ಟೇಕನ್ - ಅನುವಾದ

field_vote: 
No votes yet
To prevent automated spam submissions leave this field empty.
ಹಳದಿ ಕಾಡಿನಲೊಂದು ಕವಲೊಡೆದ ಹಾದಿ, ಹೋಗಲಾಗದು ಎರಡರಲೂ ಒಂದೇ ಬಾರಿ ಏನು ಮಾಡಲಿ ಒಂಟಿ ಪಯಣಿಗ ನಿಂತು ನೋಡಿದೆ ಕಣ್ಣು ಹೋಗುವರೆಗೆ ದಾರಿಯೊಂದು ಸುತ್ತಿಸುಳಿದು ಮರೆಯಾಗುವರೆಗೆ ಮತ್ತೊಂದರೆಡೆ ಕಣ್ಣು ಹಾಯಿಸಿದರೆ ಅದೂ ಹಾಗೆ ಹುಲ್ಲು ಬೆಳೆದ ಹಾದಿ; ಹೊಸತಂತೆ ಕಾಣುತಿದೆ. ಮತ್ತೊಂದರದಕಿಂತ ಸ್ವಲ್ಪ ಒಳಿತಿರಬಹುದು ಬಳಸಿದಾ ಜನಸಂಖ್ಯೆ ಕಡಿಮೆಯಿರಬಹುದು ಕಣ್ಣೋಟಕೆರಡೂ ಕಾಣುವುದೂ ಒಂದೇ ಬಗೆ
ಲೇಖನ ವರ್ಗ (Category): 

ವಚನ ಚಿಂತನ: ೯: ಸುಮ್ಮಸುಮ್ಮನೆ ದುಃಖ!

field_vote: 
Average: 1 (1 vote)
To prevent automated spam submissions leave this field empty.
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು ಆರಕ್ಕೆಯ ಬಡತನಕ್ಕೆ ಆರಕ್ಕೆ ಮರುಗುವರು ಇದಾರಕ್ಕೆ ಆರಕ್ಕೆ ಇದೇನಕ್ಕೆ ಏನಕ್ಕೆ ಮಾಯದ ಬೇಳುವೆ ಹುರುಳಿಲ್ಲ ಕೊಂದು ಕೂಗಿತ್ತು ನೋಡಾ ಗುಹೇಶ್ವರ ಯಾರಿಗೋ ಸಂಪತ್ತು ಬಂದರೆ ಯಾರೋ ಯಾತಕ್ಕೋ ಚಿಂತಿಸುತ್ತಾರೆ, ಯಾರಿಗೋ ಬಡತನ ಬಂದರೆ ಯಾಕೋ ಸುಮ್ಮನೆ ಮರುಗುತ್ತಾರೆ. ಇದು ಯಾಕೆ, ಇದು ಏಕೆ, ಇದೇ ಮಾಯೆ. ಎಲ್ಲರನ್ನೂ ಕಾಡಿಸುವ ಮಾಯೆ.
ಲೇಖನ ವರ್ಗ (Category): 

ಕರ್ಮಯೋಗಿ

field_vote: 
No votes yet
To prevent automated spam submissions leave this field empty.

ಭಾಗ - ೧

ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ ತಿನ್ನಲು ಏನೇನೂ ಇಲ್ಲ.

ಲೇಖನ ವರ್ಗ (Category): 

ಸಂಪದದಲ್ಲೀಗ ೧೦೦ಕ್ಕೂ ಹೆಚ್ಚು ಸದಸ್ಯರು!

ಸಂಪದದಲ್ಲೀಗ ನೂರಕ್ಕೂ ಹೆಚ್ಚು ಸದಸ್ಯರು. :) ಪ್ರಾರಂಭವಾಗಿ ಒಂದು ವಾರದಲ್ಲೇ ಇಷ್ಟು ಪ್ರೋತ್ಸಾಹ ದೊರೆತದ್ದು ಸಂಪದದಲ್ಲಿ ಬರೆಯುತ್ತಿರುವ ಸದಸ್ಯರಿಗೆ, ಇದರ ನಿರ್ವಾಹಕರಿಗೆ ಸಂತಸದ, ಸ್ಪೂರ್ತಿದಾಯಕ ವಿಷಯವೇ ಹೌದು. ಬರುವ ದಿನಗಳಲ್ಲಿ ಇನ್ನಷ್ಟು ಉತ್ಸಾಹವುಳ್ಳ ಸದಸ್ಯರು ಇದರಲ್ಲಿ ತಮ್ಮನ್ನು ತೊಡಗಿಸಿಕೊಂಡು 'ಸಂಪದ'ವನ್ನು ಅದರ ಗುರಿಯೆಡೆ ಸಾಗಿಸುವಲ್ಲಿ ಭಾಗಿಯಾಗುವರೆಂದು ಆಶಿಸೋಣ.

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ!

ಇದು ವಿಜ್ಞಾನ ಸ್ವಾಮಿ ! ವಿಗ್ನಾನವಲ್ಲ! ದಯವಿಟ್ಟು ಇದನ್ನು vijnaana saahitya ಎಂದು ಸರಿಯಾಗುವ ಹಾಗೆ ಬರೆಯಿರಿ. ಅಥವಾ ಬರಹದ ಲಿಪಿಪ್ರಕಾರವನ್ನು ಉಪಯೋಗಿಸಿ vij~JAna sAhitya ಎಂದಾದರೂ ಬರೆದರೆ ಒಳ್ಳೆಯದು.

ದಿನಕ್ಕೆ ನೂರು ಪದ ಬರೆಯಿರಿ!

ಸಂಪದದ ಓದುಗ ಮಿತ್ರರಲ್ಲಿ ವಿನಂತಿ. ನಿಮ್ಮಲ್ಲಿ ಅನೇಕರು ಬೇರೆ ಬೇರೆ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರು.

ವಚನ ಚಿಂತನ: ೮: ಆಸೆ-ರೋಷ, ಮಗು-ತಾಯಿ

field_vote: 
Average: 4 (1 vote)
To prevent automated spam submissions leave this field empty.
ಆಸೆಯೆಂಬ ಕೂಸನೆತ್ತಲು ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ ಇಂತೆರಡಿಲ್ಲದೆ ಕೂಸನೆತ್ತಬಲ್ಲಡೆ ಆತನೆ ಲಿಂಗೈಕ್ಯನು ಗೊಹೇಶ್ವರ ಮನಸ್ಸಿನಲ್ಲಿ ಹುಟ್ಟುವ ಆಸೆ ಮತ್ತು ರೋಷಗಳಿಗೆ ಇರುವುದು ತಾಯಿ ಮಕ್ಕಳ ಸಂಬಂಧ. ಒಂದನ್ನು ಬಿಟ್ಟು ಒಂದಿರಲಾರವು. ಇವೆರಡೂ ಗುಣಗಳು ಇಲ್ಲವಾದಾಗ ಮನುಷ್ಯ ದೇವರಲ್ಲಿ ಒಂದಾಗಿರುತ್ತಾನೆ. ನಮ್ಮ ದಿನ ನಿತ್ಯದ ಬದುಕಿನಲ್ಲಿ ಮನಸ್ಸಿನ ಕಾರ್ಪಣ್ಯಗಳಿಗೆ ಕಾರಣವನ್ನು ಹುಡುಕುತ್ತ ಹೊದದರೆ ಅವಕ್ಕೆಲ್ಲ ಮೂಲವಾಗಿ ಆಸೆ ಅಥವ ರೋಷಗಳೆಂಬ ಭಾವ ಇರುವುದು ತಿಳಿಯುತ್ತದೆ. ಆಸೆ ಮತ್ತು ರೋಷಗಳೆರಡೂ ನಮ್ಮ ಅಹಂಕಾರವನ್ನು ಗಟ್ಟಿಗೊಳಿಸುವ ಗುಣಗಳು.
ಲೇಖನ ವರ್ಗ (Category): 

Pages