ಇತ್ತೀಚೆಗೆ ಸೇರಿಸಿದ ಪುಟಗಳು

ಹೆಮ್ಮೆಯ ವಿಜ್ನಾನ ಪರಂಪರೆ

ಪುಸ್ತಕದ ಲೇಖಕ/ಕವಿಯ ಹೆಸರು : 
ವಿದ್ವಾಂಸರು
ಪ್ರಕಾಶಕರು: 
ಸಂಸ್ಕೃತ ಭಾರತಿ, ಗಿರಿನಗರ, ಬೆಂಗಳೂರು
ಪುಸ್ತಕದ ಬೆಲೆ: 
ರೂ.೧೦೦/-

ನಮ್ಮ ಪೂರ್ವಿಕರ ಜ್ನಾನ ಅಗಾಧ. ಆದರೆ ಇಂದಿಗೂ ಹಲವಾರು ಹೊಸ ಸಂಗತಿಗಳ ಶೋಧಕರು ವಿದೇಶೀಯರೆಂದು ನಮ್ಮಲ್ಲಿ ಹಲವರು ಭಾವಿಸುತ್ತಾರೆ. ಉದಾಹರಣೆಗಳು: ಸೂರ್ಯನೇ ಶಕ್ತಿಯ ಮೂಲ, ಆಕಾಶಕಾಯಗಳೆಲ್ಲದರ ಮಾರ್ಗವೂ ದೀರ್ಘವೃತ್ತಾಕಾರಕ, ಗುರುತ್ವಾಕರ್ಷಣ ನಿಯಮ, ಬೆಳಕಿನ ವೇಗ, ಪೈಥಾಗೋರಸ್ ಸಿದ್ಧಾಂತ ಇತ್ಯಾದಿ.

ಮೇಘಮಾಲೆ

ಮೌನಭಾರದಿ ಮೋರೆ ಕಪ್ಪಿಟ್ಟು ಕಂಗೆಟ್ಟು
ತಾಳಲಾರದೆ ಅಲೆಯುತಿದ್ದ ಮೇಘ
ಮುಕ್ತಿ ಪಡೆಯಲಿಕ್ಕೇ ಎಂದೇ ಠಳಾಯಿಸುತ್ತಿದ್ದ
ಗಗನದ ನಿಶಾಕುಸುಮಗಳನು ತರಿದು ಬರಿದು ಮಾಡಲೆಂಬಂತೆ ಶೃಂಗಕರಗಳನು
ತಾಯ ಕರೆದು ಚಾಚುವ ಹಸುಳೆಯಂತೆ
ವಿಸ್ತರಿಸೆ ಮೇಘನ ಮೌನಭಾರ ಒಡಯಿತಲ್ಲಿ
ಮುತ್ತಹನಿಯ ರೂಪ ಪಡೆಯಿತಲ್ಲಿ
ಅವನ ಎದೆಯ ಒಲವ ಮಾತು
ಧರಣಿ ತನುವ ಕಣಕಣಗಳ ವ್ಯಾಪಿಸಿ ನುಡಿಸಿತು
ರಿಂಗಣಿಸಿತು ನವರಾಗ ನಾಟ್ಯರಂಗ ಪಲ್ಲವಿಸಿತು
ಎದೆಯ ಒಲವ ರಾಗ ಎದೆಯ ನುಡಿಸಿರಲು
ಒಡಲೊಳೆಲ್ಲ ಪ್ರೇಮ ರಸಗಂಗೆಯಾಗಿ ಪ್ರವಹಿಸಿರಲು
ಕಳುಹಿಸಿದಳು ತನ್ನೊಲವ ಸಂದೇಶವನು
ತನ್ನ ಅಂಗರಂಗದೊಳು ಹೆಪ್ಪುಗಟ್ಟಿದ
ಹಸಿರ ಉಲಿಯೊಳು ಕುಸುಮ ಸೌರಭದೊಳು

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಆಂತರ್ಯದ ಸಂದೇಶll

ದಿನಗಳೊಂದೊಂದು ಕಳೆದು
ವರುಷಗಳೇ ಉರುಳುತ್ತಿವೆ,
ಅರಿವಿನ ಬೆಳಕು ಇನ್ನೂ ಕಣ್ಣಿಗೆ ಕಾಣಿಸದೆ!

ಬಯಕೆಗಳೊಂದೊಂದು ಕೂಡಿ
ಹತಾಶೆಯಲ್ಲಿ ಹಲುಬುತ್ತಿವೆ,
ಯಾವೊಂದು ಆಸೆಗಳು ಇನ್ನೂ ಈಡೇರದೆ!

ಗುರಿಯೊಂದು ತಿಳಿವಳಿಕೆಗಿನ್ನೂ ಬಾರದೆ
ಎಲ್ಲಿ ಅಡಗಿರುವುದು?
ನಾನೇ ಹುಡುಕಲು ಬೇಕೆಂದು ಕಾಯುತ್ತಿರುವುದೆ?

ಬರೀ ಕೆಲಸ ನಿದ್ದೆ ಊಟ ಜಂಜಾಟ
ಜೀವನವ ತುಂಬಿರುವುದು,
ಬಿಡುವಿಲ್ಲದಿರುವಾಗ ಗುರಿಯನ್ಹೇಗೆ ಅರಸುವುದು?

ಹೊರಗಿನ ಕಿರುಚಾಟ ಅರಚಾಟಗಳ ನಡುವೆ
ಕೇಳಿಸದೇ ಇರುವುದು,
ಮನಸ್ಸಿನಾಳದ ಅತಿ ಮಧುರ ನಾದವು!

ಕಿವಿಗಣ್ಣುಗಳಿಗೆ ಕೆಲಗಾಲ ನೀಡದಿರೆ ಆಹಾರ
ಅರಿವಿಗೆ ಬರುವುದು,
ಆಂತರ್ಯದ ಅನುಮಾನಕ್ಕೆಡೆಯಿರದ ಸಂದೇಶದ ಸಾರವು!

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಮಿಥ್ಯ ಉಡುಗೆll

ಆಸೆಗಳ ಆಲೋಚನೆ,
ಅನುಮತಿಯ ಕೇಳದಂತೆ ಮೂಡುವುದು
ತೆರೆದ ಕಣ್ಣಂಚಲಿ,
ಕಂಬನಿಯಾಗಿ ಹಾಗೆ ಮರೆಯಾಗುವುದು

ನೆರಳು ಕೂಡ, ಒಂದೇ ಸಮನೆ
ಬಿಡದೆ ಕಾಡುವುದು ಕರುಣೆ ಇರದೆ!
ಕನಸು ಕೂಡ, ಇರದು ಸುಮ್ಮನೆ
ನಿದಿರೆಯಲ್ಲೂ ಕೊಡುವುದು ನೋವ ಬಿಡದೆ!

ಹೇಳಲು ಆಗದು,
ಈ ಭಾವಗಳನ್ನು ಬರಿಯ ಮಾತಿನಲ್ಲಿ
ತಿಳಿಯಲು ಆಗದೆ,
ನನ್ನ ನಾನೇ ಹುಡುಕುತ್ತಿರುವೆನಿಲ್ಲಿ

ಅಳಿದುಳಿದ ನಂಬಿಕೆಗಳ ಹಿಡಿದು
ಈಜುತ್ತಿರುವೆ ನಾನು ದಡದ ಕಡೆಗೆ!
ಮನಸ್ಸಿನಾಳದ ಕೊಳವ ಕಡೆದು
ಕಳಚಬೇಕಿದೆ ಅಂತರಾತ್ಮನ ಮಿಥ್ಯ ಉಡುಗೆ!!

-ಕೆಕೆ (ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಚೆಲುವ ನಾಡು

ಏನು ಚಂದ ನೋಡು ನಮ್ಮ ಕನ್ನಡನಾಡು
ಭೂಮಿತಾಯಿ ಹಸಿರನುಟ್ಟು ಮೆರೆಯುವಳ್ ನೋಡು|

ಇಲ್ಲಿದೆ ಶ್ರೀಗಂಧದ ಹರಿದ್ವರ್ಣದ ಕಾಡು
ಮನತಣಿಸುವ ಜಲಪಾತಗಳ ಸುಂದರ ಬೀಡು|
ಶಿಲ್ಪಕಲೆಯ ತವರೂರಿದು ಬೇಲೂರು ಹಳೇಬೀಡು
ಸಹ್ಯಾದ್ರಿಯ ಶಿಖರಗಳಲಿ ಮಿಂದೇಳುವ ಮಲೆನಾಡು||

ಗತವೈಭವ ಸಾರುತಿಹುದು ಹಂಪೆಯಾ ಪ್ರತಿ ಶಿಲೆಯು
ಚಾಲುಕ್ಯರ ಹೆಮ್ಮೆಹೊತ್ತು ಬಾದಾಮಿಯ ಪ್ರತಿಗುಹೆಯು|
ಕದಂಬರಾ ಹೆಸರು ಮೆರೆಸಿ ನಮ್ಮ ಈ ಬನವಾಸಿಯು
ತಂದಿಹುದು ಕರುನಾಡಿಗೆ ವಿಶ್ವದಲ್ಲೇ ಕೀರ್ತಿಯು||

ಸಂಸ್ಕೃತಿಗಳ ತವರೂರು ನಮ್ಮ ಈ ಮೈಸೂರು
ಸ್ವಾತಂತ್ರ್ಯದ ಹೋರಾಟದ ಕಿಚ್ಚಚ್ಚಿದ ಕಿತ್ತೂರು|
ಕೊಡಚಾದ್ರಿಯ ತುದಿಯಲ್ಲಿ ಮೂಕಾಂಬಿಕೆ ಕೊಲ್ಲೂರು
ಸಾರುತಿಹುದು ಎಲ್ಲದರಲೂ ಮೇಲು ನಮ್ಮೂರು||

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages