ಇತ್ತೀಚೆಗೆ ಸೇರಿಸಿದ ಪುಟಗಳು

ಆದರೂ,..

ನಮ್ಮಿಬ್ಬರ ಹಾದಿ ಒಂದಲ್ಲ
ಮುಂದೆಂದೂ ಒಂದಾಗೋಲ್ಲ
ನನ್ನ ಬಾಳ ಪಯಣ ಅವನೊಂದಿಗಿಲ್ಲ
ಆದರೂ,
ಹೃದಯ ಕದ್ದಿಹನಲ್ಲ....

ಅವ ಹಾರುವ ಹಕ್ಕಿ
ನಾ ಈಜುವ ಮೀನು
ಅವ ಸಾಗುವ ಮೋಡ
ನಾ ಕದಲದ ಬೆಟ್ಟ
ಮಿಲನ ಸಾಧ್ಯವಿಲ್ಲ
ಆದರೂ,
ಮನಸು ಕೊಟ್ಟಿಹೆನಲ್ಲ......

ಭರವಸೆಯ ಹೊದಿಕೆ ಹೊದ್ದು
ಮಿಲನಕೆ ಕಾತುರದಿ ಕಾದು
ಕನಸ ಕಂಡಿಹೆನಲ್ಲ
ಆದರೂ,
ನನಗೆ ತಿಳಿದಿದೆಯಲ್ಲ..
ಅವ ನನ್ನವಲ್ಲ......

ಶಮಿತಾ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 4.8 (13 votes)
To prevent automated spam submissions leave this field empty.

೨೬, ನವೆಂಬರ್, ೨೦೧೮ ರ ಕಂತಿನ ಟೀ ಏನ್. ಸೀತಾರಾಂ ವಿರಚಿತ, "ಮಗಳು ಜಾನಕಿ ಧಾರಾವಾಹಿ"ಯ ವರದಿ :

 
ಕರ್ನಾಟಕದ ಮನೆಮನೆಯಲ್ಲಿ ಮನೆಯಮಾತಾಗಿರುವ  ಟೆಲಿವಿಷನ್ ನ ಕನ್ನಡ ಸೀರಿಯಲ್, "ಮಗಳು ಜಾನಕಿ"ಯ ೨೬, ನವೆಂಬರ್, ೨೦೧೮ ರ ಸೋಮವಾರದ ಎಪಿಸೋಡನ್ನು ನೋಡಲು ಕಾತುರರಾದ ನೂರಾರು, ಸಾವಿರಾರು ವೀಕ್ಷಕರಲ್ಲಿ ನಾನೂ ಒಬ್ಬ.
 
ಬಾರ್ಗಿಯವರ ಮನೆಯಲ್ಲಿ ರಾತ್ರಿ ಊಟದ ಡೈನಿಂಗ್ ಟೇಬಲ್ ಬಳಿ ಊಟಕ್ಕೆ ಎಲ್ಲರೂ ಕೂತಿದ್ದಾರೆ (ಜಾನಕಿ ಚಂಚಲ ರಷ್ಮಿಯರು) ಊಟ  ಮಾಡುವ ಸಮಯ. ಈಗಾಗಲೇ ಗಡಿಯಾರ ೯-೧೫ ತೋರಿಸ್ತಾ ಇದೆ. ಮಗಳು ಚಂಚಲೆ "ಪಪ್ಪಾ ಊಟಕ್ಕೆ ಬನ್ನಿ"  ಅಂತ ಮಹಡಿಯಮೇಲಿರುವ ತಂದೆ ಬಾರ್ಗಿಯವರನ್ನು ಕೂಗಿ ಕರೆಯುತ್ತಿದ್ದಾಳೆ.
 
ಮಹಡಿಯ ಮೇಲೆ :
 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 2.7 (3 votes)
To prevent automated spam submissions leave this field empty.

ಮರೆಯದಿರಿ ಕರುಳು ಬಳ್ಳಿ

ಅವ್ವ ನಿನ್ನ ಮರೆತುಬಿಟ್ಟೆ
ಪ್ರೀತಿನಂಬಿ ನಾನು ಕೆಟ್ಟೆ
ನಿನ್ನ ನೆನೆದು ಕಣ್ಣೀರಿಟ್ಟೆ
ತಿಳಿದಾಯಿತೇ ಈ ಪ್ರೀತಿ ಬಣ್ಣದ ಚಿಟ್ಟೆ......

ನೆಲಕ್ಕೆ ಹೆಜ್ಜೆ ತಾಕದಂತೆ
ಎತ್ತಿ ಹಾಡಿಸಿ ಮುದ್ದಿಸಿದ್ದೆ
ನೀಗಿಸಿದ್ದೇ ಅಪ್ಪನಿಲ್ಲದ ಕೊರತೆ
ಭೀತಿ ಓಡಿಸಿ ಜೊತೆಯಲ್ಲಿದ್ದೆ.....

ನಾನೇ ನಿನ್ನ ಜಗವೆಂದೇ
ಹುಟ್ಟುವ ಸೂರ್ಯ ನನ್ನ ಮೊಗವೆಂದೇ
ಮಗ ನಿನ್ನ ನೋಡೇ ಕಣ್ಣು ತೆರೆಯಬೇಕು
ನೀನು ದೂರವಾದಾಗ ಕಣ್ಣು ಮುಚ್ಚಬೇಕು......

ಬೆಳೆದು ನಿಂತ ಮೇಲೆ
ಬೀಸಿತ್ತು ಪ್ರೇಮದ ಅಲೆ
ಪ್ರೀತಿ ಒಂದಾಗಲು ಬಿಡಲ್ಲಾ ಯಾರು
ಬಿಟ್ಟುಬಿಡೋಣ ಅಂದುಕೊಂಡು ಊರು.....

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮನದನ್ನೆ

ಬರುತಿಹಳು ಎನ್ನ ಮನದನ್ನೆ
ತೋರುತಾ ಅವಳ ಗುಳಿಕೆನ್ನೆ||
 
ಮನದಾಸೆ ತಿಳಿದಿಹಳು
ತಿಳಿಯದ೦ತಯೇ ಇರುತಿಹಳು
ಪ್ರೀತಿಯ ನನ ನೋಟಕೆ
ಕೊಡುತಿರುವಳು ಉತ್ತರವ ಆಕೆ ||
 
ಮಾತನೇನು ಆಡಿಸಲೇ
ನೋಡುತಲೆ ಸಮಯ ಕಳೆಯಲೆ
ಸನಿಹ ಹೋಗಿ ಸ್ಪರ್ಷಿಸಲೇ
ಆಸೆಯನು ಬಚ್ಚಿಟ್ಟುಕೊಳ್ಳಲೇ ||
 
ಹೇ ಸಮಯವೇ ಏಕೆ ಓಡುವೆ
ಮನದನ್ನೆಗೆ ನಾ ಮಾತಾಡುವೆ 
ಅವಳ ಜೊತೆಯಲೇ ಜೀವನ ಕಳೆವೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 1 (1 vote)
To prevent automated spam submissions leave this field empty.

Pages