ಇತ್ತೀಚೆಗೆ ಸೇರಿಸಿದ ಪುಟಗಳು

ಬಂಡಾಯ

ಪುಸ್ತಕದ ಲೇಖಕ/ಕವಿಯ ಹೆಸರು : 
ವ್ಯಾಸರಾಯ ಬಲ್ಲಾಳ
ಪ್ರಕಾಶಕರು: 
ಗೀತಾ ಬುಕ್ ಹೌಸ್, ಮೈಸೂರು
ಪುಸ್ತಕದ ಬೆಲೆ: 
00

ವ್ಯಾಸರಾಯ ಬಲ್ಲಾಳರ ’ಬಂಡಾಯ’-ವರ್ಗಸಂಘರ್ಷಕ್ಕೊಂದು ವ್ಯಾಖ್ಯೆ
ಕಾದಂಬರಿಯ ಹಿನ್ನೆಲೆ:
ಕಾರ್ಮಿಕ ಚಳವಳಿ ಮತ್ತು ಮಾಲಿಕ-ಉದ್ಯೋಗಿಗಳ ಸಂಘರ್ಷವನ್ನೇ ವಸ್ತುವಾಗಿರಿಸಿ ರಚಿಸಲ್ಪಟ್ಟ ಸಾಹಿತ್ಯ ಕೃತಿಗಳು ಕನ್ನಡ ಅಥವಾ ಯಾವುದೇ ಭಾಷೆಯಲ್ಲಿ ವಿರಳ. ಇದಕ್ಕೆ ಕಾರ್ಮಿಕ ಸಂಘಗಳ ಬಗ್ಗೆ ಸಮಾಜದಲ್ಲಿ ಬೇರೂರಿರುವ ಪೂರ್ವಗ್ರಹ, ಅವುಗಳ ಕುರಿತಾದ ಅಸ್ಪಷ್ಟ ತಿಳಿವಳಿಕೆ ಮತ್ತು ಓದುಗರಲ್ಲಿ ಈ ವಿಷಯದ ಬಗ್ಗೆ ಆಸಕ್ತಿ ಇರಬಹುದೇ ಎಂಬ ಸಂಶಯ ಮುಖ್ಯ ಕಾರಣಗಳಿರಬಹುದೆಂದು ನನ್ನ ಅನಿಸಿಕೆ. ಈ ಹಿನ್ನೆಲೆಯಲ್ಲಿ ವ್ಯಾಸರಾಯ ಬಲ್ಲಾಳರ ’ಬಂಡಾಯ’ ಕಾದಂಬರಿ ಕಾರ್ಮಿಕ ಸಂಘಗಳ ಉದ್ದೇಶ, ಅವುಗಳ ಕಾರ್ಯವೈಖರಿ, ನಾಯಕರ ಧೋರಣೆಗಳು ಮತ್ತು ಉದ್ಯೋಗಪತಿಗಳ ಗುರಿಗಳು ಮುಂತಾದ ವಿಷಯಗಳ ಬಗ್ಗೆ ಮುಕ್ತ ವಿಶ್ಲೇಷಣೆ ನಡೆಸುವ ಒಂದು ಅನನ್ಯವಾದ ಕೃತಿ.

ಮೂಢ ಉವಾಚ - 385

ಚಿಂತೆ ಕಂತೆಗಳ ಒತ್ತಟ್ಟಿಗಿಟ್ಟು
ಮಾವಿನೆಲೆ ತೋರಣವ ಬಾಗಿಲಿಗೆ ಕಟ್ಟು |
ಬೇವು-ಬೆಲ್ಲಗಳೆ ಜೀವನದ ಚೌಕಟ್ಟು
ಬಂದುದನೆ ಕಂಡುಂಡು ತಾಳುತಿರು ಮೂಢ ||

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಜಾಣೆ

ಜಾಣೆ..!!
ಇದು ನನ್ನ ಕನಸಿನ ಕೂಸು ಜಾಣೆಯೆಂಬ ಕವನ ಸಂಕಲನದ ಮೂಲಕ ಸಾಹಿತ್ಯಲೋಕಕ್ಕೆ ಕಾಲಿಡಲು ನಾನು ಈಗಷ್ಟೇ ತಯಾರಾಗಿ ನಿಂತಿರುವೆ ನಿಮ್ಮೆಲ್ಲರ ಮುಂದೆ.
ಸರಿಯಾಗಿ ಒಂದು ವರ್ಷ ಸಾಹಿತ್ಯಲೋಕದಲ್ಲಿ ಏನಾದರೂ ಸಾಧನೆ ಮಾಡಲೆ ಬೇಕೆಂಬ ಕನಸು ಕಂಡಿದ್ದೆ. ಅದು ನನಸಾಗಿದೆ ಎಂದು ನಾ ಹೇಳುವುದಿಲ್ಲ ಇದು ನನ್ನ ಪ್ರಥಮ ಹೆಜ್ಜೆ ಅದೆಷ್ಟೋ ಕನಸುಗಳು ನನ್ನ ಜೊತೆಯಾಗಿವೆ. ಅವುಗಳಿಗೆ ಜೀವ ತುಂಬಿ ನಿಮ್ಮ ಮುಂದಿಡುವ ಹೆಬ್ಬಯಕೆ ನನ್ನದು..

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಮೂಢ ಉವಾಚ - 384

ದಿವ್ಯದೇಹದ ಒಡೆಯ ಬಯಸಿರಲು ಮುಕ್ತಿಯನು
ಯಾತ್ರೆಯದು ಸಾಗುವುದು ಧರ್ಮದಾ ಮಾರ್ಗದಲಿ |
ಹುಟ್ಟು ಸಾವಿನ ಚಕ್ರ ಉರುಳುವುದು ಅನವರತ
ಹಿತವಾದ ದಾರಿಯನು ಆರಿಸಿಕೊ ಮೂಢ || 

‍ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
Average: 5 (2 votes)
To prevent automated spam submissions leave this field empty.

llಅರಿವಾಗದ ಪ್ರೇಮll

ನೀ ನನ್ನ ಪ್ರೀತ್ಸೋದಿಲ್ಲ
ನಾ ಪ್ರೀತ್ಸೋದ್ ನಿಲ್ಸೋದಿಲ್ಲ
ಈ ಸೂತ್ರವ ರಚಿಸಿ ಅವನು
ನೋಡುತ್ತ ನಗುತಲಿರುವನು
ಅವನು ನಗುತಲಿರುವನು

ಮನ ಈಗ ನೊಂದಿದೆ ನೋಡು
ಕಣ್ಣೀರು ಜಾರಿದೆ ನೋಡು
ನನ್ನ ಮನಸಿನ ಭಾವನೆ ನಿನಗೆ
ತಿಳಿಯದೆ ಹೋಯಿತು
ಕಣ್ಣಂಚಿನ ಸನ್ನೆ ನಿನಗೆ
ಕಾಣದೆ ಹೋಯಿತು

ಪ್ರೀತ್ಸೋದು ತಪ್ಪೇನಿಲ್ಲ
ಅಂತಾರೆ ತಿಳ್ದೋರೆಲ್ಲ
ಈ ಪ್ರೀತಿಯ ಹುಟ್ಟಿಗೆ ಕಾರಣ
ತಿಳಿಯದೇ ಹೋಯಿತು
ತಿಳಿಯದೆ ಮನವಿಂದೂ
ಮರುಗುತ್ತ ಕೂಂತಿತು

ನನ್ನ ಪ್ರೀತಿಲಿ ಸುಳ್ಳೇ ಇಲ್ಲ
ಪ್ರೀತಿನೇ ಮುಳ್ಳಾಯ್ತುಲ್ಲ
ದಿನ ದಿನವೂ ಚುಚ್ಚುತ್ತಲಿಹುದು
ನನ್ನ ಹೃದಯಕ್ಕೆ
ಹರಿದೋಗಿದೆ ಪ್ರೇಮ ಪರದೆ
ಮುಳ್ಳಿನ ಇರಿತಕ್ಕೆ

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಜನನ ಮರಣll

ಜನನ ಮರಣಗಳ ನಡುವೆ
ಸಾಗುತ್ತಿದೆ ನನ್ನೀ ಬದುಕು
ಅಡಗಿ ಕುಂತರೂ ಬಿಡದೆ
ಕಾಡಿದೆ ಯಮನ ಕುಹಕು

ಪ್ರೇಮದ ಬಯಕೆಯು ನನ್ನ
ಮಾಡಿತು ಅಂದು ಮರುಳು
ಸಾಗುವ ದಾರಿಗೆ ಯಾಕೋ
ಕವಿದಿದೆ ಇಂದು ಇರುಳು

ಇಡಾ ಪಿಂಗಳಗಳಲ್ಲಿ ಸಾಗುತ್ತಾ
ಒದ್ದಾಡಿದೆ ಉಸಿರು
ಅರಿವಾಗುವುದು ಎಂದೋ ಇದಕ್ಕೆ
ಸುಷುಮ್ನದ ಹೆಸರು

ಹುಟ್ಟಿನ ಜೊತೆಗೆ ಹುಟ್ಟಿದೆ
ಸಾವಿನ ಚಿಂತೆ
ಸಾವಿನಲ್ಲೂ ಬಿಡದೆ ಬರುವುದು
ಕರ್ಮದ ಕಂತೆ

ಅರಿವಿನ ಬೆಂಕಿ ಬೆಳಗಲಿ ಈಗ
ಸುಷುಮ್ನದ ದಾರಿ ತೆರೆಯಲಿ ಬೇಗ
ಜನನ ಮರಣಗಳು ಬಲು ವೇಗ
ಇಡಬೇಕು ಪೂರ್ಣ ವಿರಾಮ ಆದಷ್ಟು ಬೇಗ

- ಕೆಕೆ ( ಕೀರ್ತನ್ ಕೆ )

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

llಏನೂ ಬೇಡll

ಏನು ಬೇಕು ಏನು ಬೇಡ
ತಿಳಿಯುತ್ತಿಲ್ಲ ಗರುಡಾರೂಢ

ಹುಟ್ಟನೆಂದು ನೀಡಬೇಡ
ಪ್ರಾಣಹರಣ ಮಾಡಲೇಬೇಡ
ಕಷ್ಟ ಕಾರ್ಪಣ್ಯವು ಬೇಡ
ಸುಖದ ಸುಪ್ಪತ್ತಿಗೆಯೂ ಬೇಡ

ಸವಿಯಾದ ಊಟವು ಬೇಡ
ಹಸಿವಿನ ಯಾತನೆ ಬೇಡ
ಬಯಸಿದ್ದೆಲ್ಲ ಸಿಗುವುದು ಬೇಡ
ಸಿಕ್ಕದೆ ಕೊರಗುವುದೂ ಬೇಡ

ದುರ್ಜನರ ಸಂಗವು ಬೇಡ
ಸಜ್ಜನರ ಸಂಗಕ್ಕೆ ಭಂಗ ಬೇಡ
ಬೇರೆ ಯಾರ ಋುಣವು ಬೇಡ
ಉಳಿದ ಋುಣ ಶೇಷವೂ ಬೇಡ

ಹಲವು ದೇವರ ಆರಾಧನೆ ಬೇಡ
ನಿನ್ನ ವಿರೋಧವೂ ಬೇಡ
ಕೃಷ್ಣ ಎನ್ನದ ನಾಲಿಗೆ ಬೇಡ
ನಿನ್ನ ಒಲಿಸದ ಕೀರ್ತನೆಯೂ ಬೇಡ

-ಕೆಕೆ(ಕೀರ್ತನ್ ಕೆ)

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

ಎಂದೂ ಮುಗಿಯದ ಕವನ

ಒಲವಿನ ಹಂದರದಿ ಹೃದಯದ ಮಂದಿರದಿ
ಸವಿಯಾದ ಕವನ.
ನಗುವಿನ ಕಂಪಲಿ ಸ್ನೇಹದ ತಂಪಲಿ
ಸಿಹಿಯಾದ ಕವನ
ಮಾಸದ ನೆನಪಲಿ ಮಾತಿನ ಅಲೆಯಲಿ
ತಿಳಿಯಾದ ಕವನ
ಮುಂಜಾನೆ ಮಂಜಲಿ ಮುಸ್ಸಂಜೆ ಗಾಳಿಯಲಿ
ಬೆರೆತಂತ ಕವನ
ಮನಸಿನ ಭಾವಕೆ ಮಿಡಿದಿಹ ಹೃದಯಕೆ
ಹಿತವಾದ ಕವನ
ಮಾಮರ ಚಿಗುರಿಗೆ ಕೋಗಿಲೆ ಕಂಠಕೆ
ಇಂಪಾದ ಕವನ
ಆ ಭೂಮಿ ಈ ಭಾನು
ಒಲವಿನ ಭವನ
ಎಂದೂ ಮುಗಿಯದ ಕವನ
....✍✍Nagaraj Naik

ನಿಮಗೆ ಈ ಬರಹ ಇಷ್ಟವಾಯಿತೇ? ತಿಳಿಸಿ: 
No votes yet
To prevent automated spam submissions leave this field empty.

Pages