ಎಲ್ಲ ಪುಟಗಳು

ಲೇಖಕರು: kavinagaraj
ವಿಧ: ಲೇಖನ
September 24, 2018 130
     ಸಧೃಢ ಮತ್ತು ಸ್ವಸ್ಥ ಭಾರತ ನಿರ್ಮಾಣಕ್ಕೆ ನಮ್ಮ ಅಳಿಲು ಸೇವೆಯೂ ಸಲ್ಲಲಿ ಎಂಬ ಉದ್ದೇಶದಿಂದ ಈ ವಿಶ್ವಸ್ತ ಸಂಸ್ಥೆಯ ರಚನೆಯಾಗಿದೆ. ಸಾರ್ವಜನಿಕ ಹಿತಾಸಕ್ತಿಯೇ ಪ್ರಧಾನವಾದ ಈ ಲಾಭರಹಿತ ಸಂಸ್ಥೆ ದಿನಾಂಕ   ೫-೦೯-೨೦೧೮ರಂದು ಅಧಿಕೃತವಾಗಿ ನೋಂದಾವಣೆಯಾಗಿದ್ದು, ಅಂದು ಶಿಕ್ಷಕರ ದಿನಾಚರಣೆಯ ದಿನವಾಗಿ ಗುರುಗಳನ್ನು ಸ್ಮರಿಸಿಕೊಳ್ಳುವ ದಿನವಾಗಿರುವುದೂ ವಿಶೇಷ. ಹಾಸನದಲ್ಲಿ ಪ್ರಧಾನ ಕಛೇರಿ ಹೊಂದಿರುವ ಈ ಸಂಸ್ಥೆ, ಬೆಂಗಳೂರು ಮತ್ತು ಶಿವಮೊಗ್ಗಗಳಲ್ಲಿ ತನ್ನ ಶಾಖಾ ಕಛೇರಿಗಳನ್ನು ತೆರೆದಿದೆ. ಧ್ಯೇಯ...
5
ಲೇಖಕರು: vishu7334
ವಿಧ: ಬ್ಲಾಗ್ ಬರಹ
September 24, 2018 102
IMDb:  https://www.imdb.com/title/tt0780536/                 ಕ್ರೈಸ್ತ ಧರ್ಮದಲ್ಲಿ ಮನುಷ್ಯ ಸತ್ತ ನಂತರ ಸ್ವರ್ಗ ಅಥವಾ ನರಕ ಪ್ರಾಪ್ತಿಗೂ ಮುನ್ನ ಪರ್ಗಟೊರಿ(Purgatory) ಎಂಬಲ್ಲಿಗೆ ಹೋಗುತ್ತಾನೆ. ಅದು ಆ ಮನುಷ್ಯನ ಆತ್ಮ ಅಲ್ಲಿಂದ ಮುಂದೆ ಹೋಗುವ ಮುನ್ನ ಶುದ್ಧಿಯಾಗಲು ಮತ್ತು ಎಲ್ಲಿಗೆ ಎಂದು ನಿರ್ಧಾರವಾಗುವ ಸ್ಥಳ. ಇಂತಹ ಒಂದು ಸ್ಥಳ ತಲುಪಿದ ಆತ್ಮ, ಆ ಸಂದರ್ಭದಲ್ಲಿ ತಾನು ಕಳೆದ ಜೀವನದ ಎಲ್ಲ ಸತ್ಕಾರ್ಯ, ಕುಕರ್ಮಗಳನ್ನು ಲೆಕ್ಕ ಹಾಕಿ ಏನು ದಕ್ಕುವುದೋ ಎಂದು ಭಯದಿಂದ...
5
ಲೇಖಕರು: makara
ವಿಧ: ಬ್ಲಾಗ್ ಬರಹ
September 24, 2018 2 ಪ್ರತಿಕ್ರಿಯೆಗಳು 195
         ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ಅವನಿಗೆ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.           ಯುಧಿಷ್ಠಿರನು ಕೇಳಿದನು, "ಪಿತಾಮಹಾ! ರಾಜನು ಸಮರ್ಥನಾದವನು, ರಾಜ್ಯದಲ್ಲಿ ಅವನಿಗೆ ಎದುರಾಳಿಗಳಿಲ್ಲ, ಶತ್ರುಗಳೂ  ಇಲ್ಲ, ಅವನು ಹೇಳಿದ್ದೇ ಶಿಲಾಶಾಸನ, ಆದರೂ ಸಹ ಅವನ ಆಡಳಿತವು ಸುಗಮವಾಗಿ ಸಾಗಬೇಕೆಂದರೆ ಪ್ರಭುತ್ವಕ್ಕೆ ಆದಾಯವಿರಬೇಕಲ್ಲವೆ? ಕೋಶಾಗಾರದಲ್ಲಿ...
5
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
September 24, 2018 129
ಉನ್ನತಿಗೆ ಕಾರಕವು ಸಕಲರಿಗೆ ಹಿತಕರವು ಸತ್ಕರ್ಮಯಜ್ಞವದು ಸುಸ್ನೇಹದಾಯಿನಿಯು | ಸತ್ಕರ್ಮ ರಕ್ಷಿಪನ ಸತ್ಕರ್ಮ ಕಾಯುವುದು ಕುಟಿಲತನವನು ಕುಟ್ಟಿ ಕೆಡವುವುದೊ ಮೂಢ || 
5
ಲೇಖಕರು: addoor
ವಿಧ: ಲೇಖನ
September 24, 2018 95
ಧಾರುಣಿಯ ನಡಿಗೆಯಲಿ ಮೇರುವಿನ ಗುರಿಯಿರಲಿ ಮೇರುವನು ಮರೆತಂದೆ ನಾರಕಕೆ ದಾರಿ ದೂರವಾದೊಡದೇನು? ಕಾಲು ಕುಂಟಿರಲೇನು? ಊರ ನೆನಪೇ ಬಲವೋ - ಮಂಕುತಿಮ್ಮ ಈ ಭೂಮಿಯಲ್ಲಿ ನಮ್ಮ ಬದುಕಿನುದ್ದಕ್ಕೂ ಅತ್ಯುನ್ನತ ಗುರಿ (ಮೇರು) ತಲಪುವ ಹೆಬ್ಬಯಕೆ ನಮಗಿರಬೇಕು. ಅಂತಹ ಗುರಿಯನ್ನು ಮರೆತು ಬಿಟ್ಟಾಗ, ಅದುವೇ ನರಕಕ್ಕೆ ದಾರಿಯಾದೀತು. ಸಣ್ಣತನ, ನೀಚತನ, ದುಷ್ಟತನಗಳು ನಮ್ಮನ್ನು ಮತ್ತೆಮತ್ತೆ ನರಕದಂತಹ ಬದುಕಿಗೆ ಎಳೆಯುತ್ತವೆ. ನಮ್ಮ ಗುರಿ ಬಹಳ ದೂರವಿದ್ದೀತು ಅಥವಾ ನಡಿಗೆಯಲ್ಲಿ ಕಾಲು ಕುಂಟಿದಂತೆ...
5
ಲೇಖಕರು: kavinagaraj
ವಿಧ: ಲೇಖನ
September 21, 2018 139
     ನಾವು ಮುಂದೆ ಬರಬೇಕೆಂದರೆ ಇನ್ನೊಬ್ಬರನ್ನು ದ್ವೇಷಿಸುವುದರಿಂದ, ಇನ್ನೊಬ್ಬರನ್ನು ತುಳಿಯುವುದರಿಂದ, ಇನ್ನೊಬ್ಬರ ಪ್ರಗತಿಗೆ ಅಡ್ಡಿಯಾಗುವುದರಿಂದ ಮುಂದೆ ಬರಬಹುದು ಎಂಬ ಭ್ರಮೆಯಿಂದ ಮೊದಲು ಹೊರಬರಬೇಕು. ನೆರೆಯವರನ್ನು ಪ್ರೀತಿಸು ಎಂಬ ಏಸುವಿನ ವಾಣಿ ಇಲ್ಲಿ ಪ್ರಸ್ತುತ. ನಮ್ಮ ನೆರೆಯವರು ನಮ್ಮ ಬಗ್ಗೆ ಅಸಹಿಷ್ಣುವಾಗಿದ್ದರೆ ನಮ್ಮ ಬದುಕು ನೆಮ್ಮದಿಯಿಂದ ಇರಲು ಸಾಧ್ಯವಿಲ್ಲ. ನೆರೆಯವನನ್ನು ಹತ್ತಿಕ್ಕಿ ಮೆರೆಯುತ್ತೇವೆ ಎಂಬುದೂ ನೆಮ್ಮದಿ ಕೊಡುವುದಿಲ್ಲ. ಬದಲಾಗಿ ಪ್ರತಿಕ್ಷಣವೂ ಅವನೇನು...
5
ಲೇಖಕರು: makara
ವಿಧ: ಬ್ಲಾಗ್ ಬರಹ
September 20, 2018 1 ಪ್ರತಿಕ್ರಿಯೆಗಳು 167
       ಯುಧಿಷ್ಠಿರನ ಬಿನ್ನಹದಂತೆ ಶರಶಯ್ಯೆಯಲ್ಲಿ ಮಲಗಿದ್ದ ಪಿತಾಮಹನಾದ ಭೀಷ್ಮನು ಅವನಿಗೆ ರಾಜ ಧರ್ಮವನ್ನು ವಿವಿಧ ಕಥೆ, ದೃಷ್ಟಾಂತ, ಉಪಾಖ್ಯಾನಗಳ ಮೂಲಕ ವಿವರಿಸುತ್ತಾನೆ. ಅದರಿಂದ ಆಯ್ದ ಮತ್ತೊಂದು ನೀತಿ ಕಥೆ ಇದು.       ಯುಧಿಷ್ಠಿರನು ಕೇಳಿದನು, "ಪಿತಾಮಹಾ, ಮನುಷ್ಯರಲ್ಲಿ ಕೆಲವರು ಮೇಲ್ನೋಟಕ್ಕೆ ಸುಕೋಮಲರಂತೆ ಕಾಣಿಸುತ್ತಾರೆ ಮತ್ತು ಶಾಂತರಾಗಿ ವ್ಯವಹರಿಸುತ್ತಾರೆ ಆದರೆ ಅವರ ಮನಸ್ಸು ಬಹಳ ಕಠಿಣವಾಗಿರುತ್ತದೆ. ಇನ್ನೂ ಕೆಲವರು ನೋಡಲು ಬಹಳ ಕಠಿಣರಾಗಿರುತ್ತಾರೆ ಮತ್ತು ಅವರ ಮಾತುಗಳೂ ಸಹ...
5
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
September 19, 2018 135
ಬ್ರಹ್ಮಚರ್ಯದಲಿರಲಿ ಗಾರ್ಹಸ್ಥ್ಯದಲ್ಲಿರಲಿ ವನಪ್ರಸ್ಥಿಯೇ ಇರಲಿ ಋಣರಹಿತನಾಗಿರಲಿ | ಸಂನ್ಯಾಸಿಯೇ ಇರಲಿ ಎಂತೇ ಇರುತಿರಲಿ ಸಾಲವನು ತೀರಿಸದೆ ಸಾಯದಿರು ಮೂಢ || 
4.88889

Pages