ಎಲ್ಲ ಪುಟಗಳು

ಲೇಖಕರು: addoor
ವಿಧ: ಲೇಖನ
March 25, 2019 125
ಗುಡಿಯ ಪೂಜೆಯೊ, ಕಥೆಯೊ, ಸೊಗಸುನೋಟವೊ, ಹಾಡೊ ಬಡವರಿಂಗುಪಕೃತಿಯೊ, ಆವುದೋ ಮನದ ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ ಬಿಡುಗಡೆಯೊ ಜೀವಕ್ಕೆ - ಮಂಕುತಿಮ್ಮ ಗುಡಿಯಲ್ಲಿ ಮಾಡುವ ಪೂಜೆ, ಹರಿಕಥೆ ಅಥವಾ ಭಜನೆ, ಮನಕ್ಕೆ ಆಹ್ಲಾದ ನೀಡುವ ಸೊಗಸುನೋಟ, ಮನಮಿಡಿಯುವ ಸಂಗೀತ, ಬಡಜನರಿಗೆ ಸಹಾಯ ಮಾಡುವುದು – ಇಂತಹ ಯಾವುದೋ ಒಂದು ಚಟುವಟಿಕೆ ನಮ್ಮ ಮನಸ್ಸಿನ ಚಡಪಡಿಕೆಯನ್ನು ನಿಲ್ಲಿಸಿ, ನೆಮ್ಮದಿ ಒದಗಿಸಿದರೆ, ಅದರಿಂದ ನಮ್ಮ ಜೀವಕ್ಕೆ ಬಿಡುಗಡೆ ಎಂದು ಸರಳ ಸಂದೇಶವನ್ನು ಈ ಮುಕ್ತಕದಲ್ಲಿ ನೀಡಿದ್ದಾರೆ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 23, 2019 283
ಮೊದಲು 'ಸಾಥ್ ಸಾಥ್' ಹಿಂದಿ ಚಿತ್ರದಲ್ಲಿನ ಈ ಗಜಲ್ ಅನ್ನು https://youtu.be/-GRqHkV9Bls ಈ ಕೊಂಡಿಯಲ್ಲಿ ನೋಡಿಕೊಂಡು, ಕೇಳಿಕೊಂಡು ಬನ್ನಿ. ಇದನ್ನು ಹಾಡಿದ್ದು ಗಜಲ್ ಗಾಯಕ ಜಗಜಿತ್ ಸಿಂಗ್. ಇದರಲ್ಲಿ ನೀವು ಫರೂಕ್ ಶೇಕ್ ಮತ್ತು ದೀಪ್ತಿ ನವಲ್ ಅವರನ್ನು ನೋಡುವಿರಿ. ಈಗ ಈ ಹಾಡಿನ ಛಾಯಾನುವಾದವನ್ನು ನಾನು ಮಾಡಿರುವುದನ್ನು ನೋಡಿ . ಇದನ್ನು ಮೂಲ ಧಾಟಿಯಲ್ಲಿ ಹಾಡುವಂತೆ ಸಾಧ್ಯವಿದ್ದಷ್ಟು ಪ್ರಯತ್ನಿಸಿ ಮಾಡಿದ್ದೇನೆ. ನೀವೂ ಹಾಡಿಕೊಳ್ಳಲು ಪ್ರಯತ್ನಿಸಿ! ನಿನ್ನ ಕಂಡ ದಿನವೇ ನಾ...
5
ಲೇಖಕರು: makara
ವಿಧ: ಬ್ಲಾಗ್ ಬರಹ
March 18, 2019 1 ಪ್ರತಿಕ್ರಿಯೆಗಳು 755
         ಜಾತಿಭೂತವೆನ್ನುವುದು ಹಿಂದೂ ಸಮಾಜಕ್ಕೆ ಅಂಟಿದ ಶಾಪ.          ಇಂದಿನ ಹಿಂದೂ ಸಮಾಜದ ದುರಾಚಾರಗಳಿಗೆಲ್ಲಾ ಕಾರಣವಾಗಿರುವುದು ಅದರಲ್ಲಿ ಕಂಡುಬರುವ ನಿಕೃಷ್ಟವಾಗಿರುವ ಜಾತಿ ವ್ಯವಸ್ಥೆ.           ನನ್ನ ಜಾತಿ ದೊಡ್ಡದು, ನಿನ್ನ ಜಾತಿ ಚಿಕ್ಕದು ಎಂಬ ಅಹಂಕಾರವೇ ಜಿಗುಪ್ಸೆ ಹುಟ್ಟಿಸುವಂತಹುದು. ಸಂಕುಚಿತವಾದ ಜಾತಿಬುದ್ಧಿಯಿಂದ ವ್ಯವಹರಿಸುವುದು, ಕೆಳಜಾತಿಗಳವರನ್ನು ತುಳಿಯಬೇಕೆನ್ನುವ ಹುನ್ನಾರ ಮಾಡುವುದು, ಮೇಲ್ಜಾತಿಯವರೆಂಬ ಮದದಿಂದ ನಿಮ್ನ ಜಾತಿಗಳನ್ನು ಅಸ್ಪೃಶ್ಯರಾಗಿ ಕಂಡು...
5
ಲೇಖಕರು: addoor
ವಿಧ: ಲೇಖನ
March 16, 2019 546
ಮಲವಿರದ ಮೈಯಿರದು ಕೊಳೆಯಿರದ ಮನವಿರದು ಗಳಿಗೆ ಗಳಿಗೆಯ ಬೆವರೆ ಬಾಳಿಕೆಯ ಕುರುಹು ಕೊಳೆವುದಚ್ಚರಿಯಲ್ಲ, ಕೊಳೆಯದಿಹುದಚ್ಚರಿಯೊ ಜಳಕವಾಗಿಸು ಬಾಳ್ಗೆ – ಮರುಳ ಮುನಿಯ ಹೊಲಸಿಲ್ಲದ ಮೈಯಿಲ್ಲ. ಹಾಗೆಯೇ ಕೊಳೆಯಿಲ್ಲದ ಮನಸ್ಸಿಲ್ಲ. ಕ್ಷಣಕ್ಷಣವೂ ಮೈ ಬೆವರುತ್ತದೆ – ಅದುವೇ ನಾವು ಬದುಕಿದ್ದೇವೆ ಎಂಬುದರ ಗುರುತು (ಕುರುಹು). ಮನಸ್ಸಿಗೆ ಕೊಳೆಯಾಗುವುದು ಅಚ್ಚರಿಯಲ್ಲ; ಕೊಳೆಯಾಗದಿರುವುದೇ ಅಚ್ಚರಿ ಎನ್ನುತ್ತಾರೆ ಮಾನ್ಯ ಡಿವಿಜಿ. ಈ ಕೊಳೆ ಕಳೆಯುವ ಉಪಾಯವನ್ನೂ ಅವರು ಸೂಚಿಸುತ್ತಾರೆ: ಜಳಕವಾಗಿಸು...
5
ಲೇಖಕರು: gururajkodkani
ವಿಧ: ಲೇಖನ
March 15, 2019 512
ಬೆಳಗ್ಗೆದ್ದು ತರಾತುರಿಯಲ್ಲಿ ಆಫೀಸಿಗೆ ಹೊರಟು ನಿ೦ತರೆ ಏಕಾಏಕಿ ಅನಿರೀಕ್ಷಿತ ಅತಿಥಿಯೊಬ್ಬರ ಆಗಮನ.ಮನೆಯ ಆವರಣದಲ್ಲೆಲ್ಲೋ ಬೊಗಳುವಿಕೆ ಕೇಳುತ್ತಿದೆಯಲ್ಲ ಎನ್ನಿಸಿ ಬಾಗಿಲು ತೆರೆದರೆ ಪುಟ್ಟ ಪುಟಾಣಿ ನಾಯಿ ಮರಿಯೊ೦ದು ತನ್ನ ಪುಟ್ಟ ಸ್ವರದಲ್ಲಿ ಧ್ವನಿಯನ್ನು ತಾರಕಕ್ಕೇರಿಸಿತ್ತು.ನಮಗೋ ನಾಯಿ ಎ೦ದರೆ ಪ್ರಾಣ.ತಕ್ಷಣವೇ ಕೈಗೆತ್ತಿಕೊ೦ಡಳು ಮಡದಿ.ಅಷ್ಟು ಸಾಕೆನ್ನುವ೦ತೆ ಚ೦ಗನೇ ಮೈ ಮೇಲೆ ಎಗರಿದ ನಾಯಿಮರಿ ಸಿಕ್ಕ ಕಡೆಯೆಲ್ಲ ಲೊಚಲೊಚ ನೆಕ್ಕಲಾರ೦ಭಿಸಿತ್ತು.ಮನೆಯ ಪಡಸಾಲೆಗೆ ಬಿಟ್ಟರೆ ಕೊ೦ಚವೂ ಭಯವಿಲ್ಲದ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
March 12, 2019 705
ಮೊದಲಿಗೇನೇ ಈ ನವಿರಾದ ಒಲವ ಗೀತೆಯನ್ನು ಕೇಳಿಬಿಡಿ - ಈ ಮುಂದಿನ ಕೊಂಡಿಯಲ್ಲಿ. https://youtu.be/KqpIIaCJggY ಅದು ನಿಮ್ಮ ಮನಸ್ಸನ್ನು ತಟ್ಟುವುದು ಖಂಡಿತ. ನಿಮಗೆ ಹಿಂದಿ ಅಷ್ಟು ಚೆನ್ನಾಗಿ ಬಾರದಿದ್ದರೆ ಅದರ ಅರ್ಥ ತಿಳಿದುಕೊಳ್ಳಲು ಮುಂದಿನ ನನ್ನ ಅನುವಾದ ನಿಮಗೆ ಸಹಾಯ ಮಾಡುತ್ತದೆ. ನಿಮಗೆ ಹಾಡಿಕೊಳ್ಳಲು ಅನುಕೂಲವಾಗಲು ಅದರ ಸಾಹಿತ್ಯವನ್ನು ಕನ್ನಡ ಲಿಪಿಯಲ್ಲಿ ಮುಂದೆ ಕೊಟ್ಟಿದ್ದೇನೆ. ಇದು "ಅಖಿಯೋಂ ಕೆ ಝರೋಖೋಂ ಸೇ" ಎಂಬ ಚಿತ್ರದಲ್ಲಿ ಇದೆ. ಚಿತ್ರ ರಾಜಶ್ರೀ ಪ್ರೊಡಕ್ಷನ್ಸ್...
4.5
ಲೇಖಕರು: makara
ವಿಧ: ಬ್ಲಾಗ್ ಬರಹ
March 11, 2019 1 ಪ್ರತಿಕ್ರಿಯೆಗಳು 1,288
       Let your women keep silence in the churches: for it is not permitted unto them to speak; but they are commanded to be under obedience, as also saith the law..... and if they will leave anything let them ask their husbands at home; for it is a shame for women to speak in the church. (1Corinthians, 14/34,35)        ನಿಮ್ಮ ಸ್ತ್ರೀಯರು ಸಭೆಗಳಲ್ಲಿ ಮೌನವಾಗಿರಬೇಕು; ಮಾತನಾಡುವದಕ್ಕೆ ಅವರಿಗೆ ಅಪ್ಪಣೆಯಿಲ್ಲ;...
5
ಲೇಖಕರು: hpn
ವಿಧ: ಲೇಖನ
March 10, 2019 1,055
ಒಮ್ಮೆ ಮಂಗಳೂರಿನಲ್ಲೊಂದು ಕಾರ್ಯಕ್ರಮ ಆಯೋಜಿಸಬೇಕಾಗಿ ಬಂದಾಗ ಅಡ್ಡೂರು ಕೃಷ್ಣರಾಯರ ಪರಿಚಯವಾಯಿತು. ಜನಪ್ರಿಯ ಲೇಖಕರಾದ ಶ್ರೀಪಡ್ರೆಯವರು ನನಗೆ ಇವರ ಪರಿಚಯ ಮಾಡಿಕೊಟ್ಟಿದ್ದರು. ಸದಾ ಸರಳ ಉಡುಗೆಯಲ್ಲಿರುತ್ತಿದ್ದರು. ಹೆಗಲಿಗೆ ಬಟ್ಟೆಯ ಬ್ಯಾಗೊಂದನ್ನು ತಗಲು ಹಾಕಿಕೊಂಡು ಬರುತ್ತಿದ್ದರು.  ತಂತ್ರಜ್ಞಾನದ ಹೊಸತುಗಳು ಅವರಿಗೆ ಸುಲಭವಾಗಿ ಒಗ್ಗಿಕೊಳ್ಳುತ್ತಿರಲಿಲ್ಲ. ಪೆನ್ನು ಹಿಡಿದು ಚಿತ್ತಿಲ್ಲದೆಯೇ ಬರೆಯುವ ಶಿಸ್ತಿನ ಬರಹಗಾರರಾದ ಅವರಿಗೆ ತಂತ್ರಜ್ಞಾನ ಬಳಕೆ ಸಹಜವಾದ ಕಸಿವಿಸಿ ತರುತ್ತಿತ್ತು -...
4.833335

Pages