ಎಲ್ಲ ಪುಟಗಳು

ಲೇಖಕರು: Pavani Kademane
ವಿಧ: ಬ್ಲಾಗ್ ಬರಹ
June 26, 2019 266
       ಅನಾಮಿಕ ಬೆರಳ ಉಂಗುರದ ಹೊಳಪು ಕುಂದಿದೆ...ಎರಡು ತಿಂಗಳ ಹಿಂದೆಯೇ ನಿಶ್ಚಿತವಾದರೂ, ಅರ್ಥವಾಗುತ್ತಿಲ್ಲ ನೀನೇಕೆ ಜೊತೆಗಿಲ್ಲವೆಂದು. ವಿರಹದ ವೇದನೆಯೆಂದರೆ ಏನೆಂದು ತಿಳಿಸುವ ಪರಿಯೇ...? ನಿನ್ನ ಕಾಣದೆ, ನೋಡದೆ, ಸುಳಿವೇ ಇಲ್ಲದೆ ನನ್ನಿನಿಯನೇ ನನಗಿಲ್ಲವೆಂಬ ದುಃಖ ಬೇರೂರಿದೆ. ಬಿರುಗಾಳಿಯಂತಹ ಈ ಆವೇಗ ನನ್ನಿಂದ ತಡೆಯಲಸಾಧ್ಯವಾಗಿದೆ. ನೀನು ಸಿಗದೇ ಇದ್ದಿದ್ದರೆ ನನಗಾವ ಚಿಂತೆಯೂ ಕಾಡುತ್ತಿರಲಿಲ್ಲ. ಈಗ ಸಿಕ್ಕಿದರೂ ಸಿಗದಂತೆ ಮರೆಯಾದರೆ, ಕಣ್ಣಿದ್ದೂ ಕಾಣದಂತಲ್ಲವೆ...? ಯಾರ ಬಳಿ ಹೇಳಿ...
5
ಲೇಖಕರು: BALU matcheri
ವಿಧ: ಲೇಖನ
June 22, 2019 181
ಹಾಗೇ ಸುಮ್ಮನೆ ಮಾನವೀಯತೆಯ ಸಾಕಾರ ಮೂರ್ತಿ ಯತಿರಾಜಮಠದ ಜೀಯರ್ ಸ್ವಾಮಿಗಳು(ಪೂರ್ವಾಶ್ರಮ-ತಿರು ಸ್ವಾಮಿಗಳು) ನಾಡಿನ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಕಾರ್ಯವನ್ನು ಸದ್ದಿಲ್ಲದೆ ಮಾಡುತ್ತಿದ್ದಾರೆ. ಜೀಯರ್ ಸ್ವಾಮಿಗಳು ಪೂರ್ವಾಶ್ರಮದಲ್ಲಿಯೂ ಇದ್ದುದು ಸನ್ಯಾಸ ಜೀವನದಲ್ಲಿಯೇ. ಅವರಲ್ಲಿ ಎಲ್ಲದರ ಬಗ್ಗೆಯೂ ಆಸಕ್ತಿ ಜೊತೆಗೆ ನಿರ್ಲಿಪ್ತತೆ ಇತ್ತು. ಎಲ್ಲವೂ ಭಗವಂತನ ಅಣತಿ, ಶ್ರೀ ರಾಮಾನುಜರ ಕೃಪೆ ಎಂದೆ ತಿಳಿದು ಬದುಕುತಿದ್ದ ಆಧ್ಯಾತ್ಮ ಜೀವಿಯವರು. ಬಹುಶ: ಅವರಲ್ಲಿದ್ದ ಮಾನವೀಯತೆಯ ಗುಣಗಳನ್ನು...
0
ಲೇಖಕರು: addoor
ವಿಧ: ಲೇಖನ
June 22, 2019 197
ನಿನಗೊದಗಿದ ಪ್ರಶ್ನೆಗಳ ನೀನೆ ಹರಿಸಿಕೊಳೊ ಎನಿತು ದಿನವವರಿವರನವಲಂಬಿಸಿರುವೆ? ಹೆಣ ಹೊರೆಯವರವರಿಗವರವರೆ ಹೊರುವನಿತು ನಿನಗೆ ನೀನೇ ಗತಿಯೋ – ಮರುಳ ಮುನಿಯ ಪ್ರತಿಯೊಬ್ಬರಿಗೂ ಬದುಕಿನಲ್ಲಿ ಸಾಲುಸಾಲು ಪ್ರಶ್ನೆಗಳು. ಬಹುಪಾಲು ಜನರು, ಒಮ್ಮೆ ಒಬ್ಬರ ಬಳಿ, ಇನ್ನೊಮ್ಮೆ ಇನ್ನೊಬ್ಬರ ಬಳಿ ಹೋಗಿ, ತಮ್ಮ ಪ್ರಶ್ನೆಗಳಿಗೆ ಉತ್ತರ ಬಯಸುತ್ತಾರೆ; ಉತ್ತರಕ್ಕಾಗಿ ಪೀಡಿಸುತ್ತಾರೆ. ಕೊನೆಗೆ ಉತ್ತರ ಸಿಗದೆ ಅಥವಾ ಸಿಕ್ಕ ಉತ್ತರದಿಂದ ಸಮಾಧಾನವಾಗದೆ ಮತ್ತೊಬ್ಬರ ಬಳಿ ಹೋಗಿ ತಮ್ಮ ಪ್ರಶ್ನೆಯ ಉತ್ತರದ ಹುಡುಕಾಟ...
5
ಲೇಖಕರು: kvcn
ವಿಧ: ಲೇಖನ
June 22, 2019 202
ಈಗಾಗಲೇ ಹೇಳಿದಂತೆ ನಮ್ಮ ಮನೆಯೊಂದನ್ನು ಬಿಟ್ಟರೆ ಉಳಿದೆಲ್ಲ ಮನೆಗಳು ಕ್ರಿಶ್ಚಿಯನ್ ಸಮುದಾಯದವರದು. ನನ್ನ ಅಮ್ಮನಿಗೆ ತುಂಬಾ ಚೆನ್ನಾಗಿ ಅವರ ಕೊಂಕಣಿ ಭಾಷೆ ಬರುತ್ತಿತ್ತು. ಆದ್ದರಿಂದ ಅವರ ಸ್ನೇಹಕ್ಕೆ ಭಾಷೆಯೂ ಕಾರಣವೇ? ಹೌದಲ್ಲ ಭಾಷೆ ಕಲಿತಷ್ಟು ಒಳ್ಳೆಯದೇ. ಈ ಎಲ್ಲಾ ಮನೆಯವರದ್ದು ಮುಖ್ಯವಾಗಿ ತೋಟಗಾರಿಕೆ. ಅದರಲ್ಲೂ ಮಲ್ಲಿಗೆ ಕೃಷಿ. ಜೊತೆಗೆ ಅಬ್ಬಲಿಗೆ (ಕನಕಾಂಬರ). ನಡುನಡುವೆ ಔಷಧೀಯ ಗಿಡಗಳಾದ ಲೋಳೆಸರ (ಅಲೊವಿರಾ) ಅರಶಿನ, ಮಜ್ಜಿಗೆ ಸೊಪ್ಪು, ತುಳಸಿ, ಸಂಬಾರಪತ್ರೆ ಇತ್ಯಾದಿ. ನಮ್ಮ...
5
ಲೇಖಕರು: ಮೋಹನ್ ಕುಮಾರ್
ವಿಧ: ಲೇಖನ
June 20, 2019 208
ಮುಂಜಾನೆಯ ಸೂರ್ಯ ಹಸಿರು ಬೆಟ್ಟಗಳ ಹಿಂದೆ ಅರೆ ಮೇಲೆ ಬಂದಿದ್ದ. ಅವನ ತಾಜಾ ಕಿರಣಗಳು "ಮಲಯಸಾಗರ" ನಗರದ ತುಂಬೆಲ್ಲ ಹಳದಿ ರಂಗು ಚೆಲ್ಲಿದ್ದವು. ಕಡಲು ಅಂಚಿನಲ್ಲಿ ಆಕಾಶವನ್ನು ಕಲೆತಂತೆ, ಮಲಯಸಾಗರದ ಹಸಿರು ಬೆಟ್ಟ ಗುಡ್ಡಗಳು ಕೊನೆಯೇ ಇಲ್ಲದ ಹಾಗೆ ಹರಡಿ, ಕೊನೆಯಲ್ಲಿ ಆಕಾಶವನ್ನು ಮುಟ್ಟಿದ್ದವು. ಈ ಸುಂದರ ದೃಶ್ಯ ವನದೇವಿ ಹಸಿರು ಸೀರೆಯನ್ನೇ ಧರಿಸಿದ್ದಾಳೆ ಎನ್ನುವಂತೆ ಕಾಣುತ್ತಿತ್ತು.ಹಕ್ಕಿಗಳೆಲ್ಲ ಜೊತೆಗೂಡಿ ಮುಂಜಾನೆಯ ಆಹಾರ ಬಯಸಿ ರವಿ ಉದಯಿಸಿದ್ದ ಕಡೆಗೆ ಹಾರಿ ಹೋರಟಿದ್ದವು, ನಗರದ ಮನೆಗಳ...
0
ಲೇಖಕರು: rasikathe
ವಿಧ: ಲೇಖನ
June 20, 2019 230
ಮೀಸಲ್ಸ್!!   ಡಾ. ಮೀನಾ ಸುಬ್ಬರಾವ್ ಕ್ಯಾಲಿಫೋರ್ನಿಯ   ಸಿ. ಡಿ. ಸಿ ಅವರು ಈ ವರುಷದ(೨೦೧೯ ರ) ಮೀಸಲ್ಸ್ ರೋಗದ ಸಂಖ್ಯೆ ಅಮೇರಿಕದಲ್ಲಿ ೧೦೦೧ (ಒಂದು ಸಾವಿರಕ್ಕೂ) ಮೀರಿದೆ ಎಂದು ಖಚಿತ ಪಡಿಸಿದ್ದಾರೆ. ಇದು ಪರೀಕ್ಷಿಸಿ ಖಚಿತ ಪಡಿಸಿರುವ ಸಂಖ್ಯೆಯಾಗಿದೆ. ೧೯೯೨ ರಲ್ಲಿ ೨೧೨೬ ಮೀಸಲ್ಸ್ ಕೇಸಸ್ ಕಂಡು ಬಂದಿತ್ತು. ಅದನ್ನ ಬಿಟ್ಟರೆ, ಈ ವರುಷದ ಕೇಸಸ್ ಎರಡನೆಯ ಸ್ಥಾನದಲ್ಲಿದೆ (ಹೆಚ್ಚು ಕೇಸಸ್). ಇದಕ್ಕೆ ಕಾರಣಗಳು ಹಲವಾರು ಇದ್ದರೂ, ಮುಖ್ಯವಾಗಿ ಮೀಸಲ್ಸ್ ಲಸಿಕೆಯನ್ನು(ವ್ಯಾಕ್ಸಿನ್) ಮಕ್ಕಳಿಗೆ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
June 16, 2019 3 ಪ್ರತಿಕ್ರಿಯೆಗಳು 1,035
ಈ ಚಿತ್ರದ 'ಬರೆದೆ ನೀನು ನಿನ್ನ ಹೆಸರ ನನ್ನ ಬಾಳ ಪುಟದಲ್ಲಿ ' ಹಾಡು ಎರಡು ಆವೃತ್ತಿಗಳಲ್ಲಿದ್ದು ನೀವು ಕೇಳಿರಬಹುದು. ಶೋಕದ ಹಾಡನ್ನು P. B. ಶ್ರೀನಿವಾಸ್ ಅವರು ಹಾಡಿದ್ದು ಸಂಗೀತ ಶ್ರೀಮಂತವಾಗಿದೆ. ಕತೆಯು ಸಾಮಾಜಿಕವಾಗಿದ್ದರೂ ಒಂದಷ್ಟು ಸಸ್ಪೆನ್ಸ್ , ಕ್ರೈಂ ಇದೆ. ಒಂದು ಅದ್ಭುತ ದೃಶ್ಯ ಕೂಡ ಇದೆ. ಕತೆ ಹೀಗಿದೆ, ನಾಯಕನ ಹೆಸರು ರಾಮ. ಇವನದು ಶ್ರೀಮಂತ ಮನೆತನ. , ತಂದೆಗೆ ತನ್ನ ಮನೆತನದ ಬಗೆಗೆ ತುಂಬಾ ಅಭಿಮಾನ. ಮನೆಯಲ್ಲಿ ಈ ರಾಮನ ಸಮವಯಸ್ಕ ಒಬ್ಬ ಇದ್ದಾನೆ. ತಂದೆಗೆ ಅವನೂ ಮಗನ ಸಮಾನ...
4.333335
ಲೇಖಕರು: addoor
ವಿಧ: ಲೇಖನ
June 16, 2019 197
ಒಮ್ಮೆ ಹೂದೋಟದಲಿ, ಒಮ್ಮೆ ಕೆಳೆಕೂಟದಲಿ ಒಮ್ಮೆ ಸಂಗೀತದಲಿ, ಒಮ್ಮೆ ಶಾಸ್ತ್ರದಲಿ ಒಮ್ಮೆ ಸಂಸಾರದಲಿ, ಮತ್ತೊಮ್ಮೆ ಮೌನದಲಿ ಬ್ರಹ್ಮಾನುಭವಿಯಾಗೊ - ಮಂಕುತಿಮ್ಮ ಬ್ರಹ್ಮಾನುಭವಿಯಾಗುವ ದಾರಿಯನ್ನು ಅತ್ಯಂತ ಸರಳವಾಗಿ ನಮಗೆ ಈ ಮುಕ್ತಕದಲ್ಲಿ ತೋರಿಸುತ್ತಾರೆ ಮಾನ್ಯ ಡಿ.ವಿ. ಗುಂಡಪ್ಪನವರು. ಒಮ್ಮೆ ಹೂದೋಟದಲ್ಲಿ, ಒಮ್ಮೆ ಗೆಳೆಯರ ಕೂಟದಲ್ಲಿ, ಒಮ್ಮೆ ಸಂಗೀತದ ಸ್ವಾದದಲ್ಲಿ, ಇನ್ನೊಮ್ಮೆ ಶಾಸ್ತ್ರಗಳ ಅಧ್ಯಯನದಲ್ಲಿ, ಮತ್ತೊಮ್ಮೆ ಸಂಸಾರದ ಅನುಭವಗಳಲ್ಲಿ, ಮಗದೊಮ್ಮೆ ಮೌನದ ಆಳದಲ್ಲಿ ಆ ಪರಬ್ರಹ್ಮನ...
5

Pages