ಎಲ್ಲ ಪುಟಗಳು

ಲೇಖಕರು: olnswamy
ವಿಧ: ಪುಟ
August 13, 2005 2,900
ಝೆನ್ ಸಂನ್ಯಾಸಿನಿ ಎಶುನ್ ಅರುವತ್ತು ವರ್ಷ ದಾಟಿದ್ದಳು. ಈ ಲೋಕವನ್ನು ಬಿಡುವ ಕಾಲ ಬಂದಿತ್ತು. ಶಿಷ್ಯರನ್ನೆಲ್ಲ ಕರೆದು ಅಂಗಳದಲ್ಲಿ ಸೌದೆಗಳನ್ನು ಜೋಡಿಸುವಂತೆ ಹೇಳಿದಳು. ಸೌದೆಗಳ ನಡುವೆ ಸ್ಥಿರವಾಗಿ ಕುಳಿತು ಕಟ್ಟಿಗೆ ರಾಶಿಗೆ ಬೆಂಕಿ ಇಕ್ಕುವಂತೆ ಹೇಳಿದಳು. ಬೆಂಕಿ ಉರಿಯಿತು. "ಬೆಂಕಿ ಸುಡುತ್ತಿಲ್ಲವೇ?" ಎಂದು ಸಂನ್ಯಾಸಿಯೊಬ್ಬ ಕೂಗಿ ಕೇಳಿದ. "ನಿನ್ನಂಥ ಮೂರ್ಖನಿಗೆ ಮಾತ್ರ ಇಂಥ ಪ್ರಶ್ನೆ ಹೊಳೆಯುತ್ತದೆ" ಎಂದಳು ಎಶುನ್. ಜ್ವಾಲೆ ಎದ್ದಿತು. ಎಶುನ್ ತೀರಿಹೋದಳು.
0
ಲೇಖಕರು: hpn
ವಿಧ: ಬ್ಲಾಗ್ ಬರಹ
August 13, 2005 2 ಪ್ರತಿಕ್ರಿಯೆಗಳು 3,325
ಸ್ವಾತಂತ್ರ್ಯ ದಿನಾಚರಣೆ ಹತ್ತಿರ ಬಂದಂತೆ ಬೆಂಗಳೂರಿನಲ್ಲಿ ಪ್ಲಾಸ್ಟಿಕ್ ಬಾವುಟಗಳು ಎಲ್ಲೆಲ್ಲೂ ಕಾಣಿಸಿಕೊಳ್ಳುತ್ತವೆ. ಟ್ರಾಫಿಕ್ ಸಿಗ್ನಲ್ ಗಳ ಬಳಿ ದಿನಪತ್ರಿಕೆಗಳನ್ನೋ ಮತ್ತೇನನ್ನೋ ಮಾರುವ ಹುಡುಗರ ಕೈಯಲ್ಲಿ ಪ್ಲಾಸ್ಟಿಕ್ ಬಾವುಟಗಳು ಮಾರಾಟಕ್ಕೆಂದು ರಾರಾಜಿಸುತ್ತವೆ. ಕೆಲೆವೆಡೆ ಪೆಟ್ರೋಲ್ ಬಂಕುಗಳ ಬಳಿಯೂ ಹಿಡಿದು ನಿಂತಿರುತ್ತಾರೆ. ಚಿಣ್ಣರಿಗೆ ಇದು ಬೇಕೇ ಬೇಕು! ಭಾರತೀಯರಲ್ಲಿ ದೇಶಪ್ರೇಮ ಆಗಸ್ಟ್ ೧೫ ಕ್ಕೆ ಅತಿ ಹೆಚ್ಚಿನ ತೀವ್ರತೆ ತಾಳುತ್ತದಷ್ಟೆ. ದೇಶಪ್ರೇಮವೆಂದುಕೊಂಡು '...
0
ಲೇಖಕರು: olnswamy
ವಿಧ: ಪುಟ
August 12, 2005 1 ಪ್ರತಿಕ್ರಿಯೆಗಳು 3,635
ಅಮೆರಿಕಾಕ್ಕೆ ಹೋದ ಮೊಟ್ಟಮೊದಲ ಝೆನ್ ಗುರು ಸೋಯೆನ್ ಶಾಕು "ನನ್ನ ಹೃದಯ ಬೆಂಕಿಯಂತೆ ಉರಿಯುತ್ತಿದೆ, ನನ್ನ ಕಣ್ಣು ಮಾತ್ರ ಬೂದಿಯ ಹಾಗೆ ತಣ್ಣಗಿದೆ" ಎಂದ. ಅವನು ಕೆಲವು ನಿಯಮಗಳನ್ನಿಟ್ಟುಕೊಂಡು ಹಾಗೆಯೇ ಬದುಕಿದ್ದ. ಆ ನಿಯಮಗಳು ಇವು: ಬೆಳಗ್ಗೆ ಎದ್ದು ಬಟ್ಟೆ ಹಾಕಿಕೊಂಡು ಸಿದ್ಧವಾಗುವ ಮೊದಲು ಧೂಪವನ್ನು ಹಾಕಿ ಧ್ಯಾನಮಾಡು. ನಿಗದಿಯಾದ ಸಮಯದಲ್ಲಿ ಮಲಗು. ನಿಗದಿಯಾದ ಹೊತ್ತಿನಲ್ಲಿ ಊಟಮಾಡು. ಹೊಟ್ಟೆ ತುಂಬಿ ತೃಪ್ತಿಯಾಗುವಷ್ಟು ತಿನ್ನಬೇಡ. ಯಾರಾದರೂ ಅತಿಥಿ ಬಂದರೆ ನೀನೊಬ್ಬನೇ ಇರುವಾಗ ಯಾವ...
3
ಲೇಖಕರು: ismail
ವಿಧ: ಬ್ಲಾಗ್ ಬರಹ
August 12, 2005 10 ಪ್ರತಿಕ್ರಿಯೆಗಳು 5,671
ಇಂಗ್ಲಿಷ್ ಭಾಷೆಯನ್ನು ಯಾವ ತರಗತಿಯಿಂದ ಕಲಿಸಬೇಕು ಎಂಬ ಚರ್ಚೆಗೆ ದಿನದಿಂದ ದಿನಕ್ಕೆ ಕಾವೇರುತ್ತಲೇ ಇದೆ. ಭಾಷಾ ಬೋಧನೆಯ ಸಾಧ್ಯತೆ ಮತ್ತು ಮಿತಿಗಳನ್ನು ಅರಿತವರಿಗಿಂತ ಹೆಚ್ಚಾಗಿ ಇಡೀ ವಿಷಯವನ್ನು ಭಾವನಾತ್ಮಕವಾಗಿ ಗ್ರಹಿಸಿದವರು ಮಾತ್ರ ಈ ವಿಷಯದ ಚರ್ಚೆಯ ಮುಂಚೂಣಿಯಲ್ಲಿದ್ದಾರೆ. ಪರಿಣಾಮವಾಗಿ ಯಾವುದು ಚರ್ಚೆಯಾಗಬೇಕಿತ್ತೋ ಅದು ಚರ್ಚೆಯಾಗದೆ ಕನ್ನಡದ ಬಳಕೆ ಎಂಬುದು ವರ್ಗ, ವರ್ಣ, ಜಾತಿ ಮುಂತಾದುವುಗಳ ಚರ್ಚೆಯಾಗಿ ಬದಲಾಗುತ್ತಿದೆ. ಭಾಷೆಯೊಂದರ ಕಲಿಕೆಯ ಹಿಂದೆ ಈ ಎಲ್ಲಾ ಸಾಮಾಜಿಕ ಅಸಮಾನತೆಗಳು...
3.5
ಲೇಖಕರು: Rohit
ವಿಧ: ಚರ್ಚೆಯ ವಿಷಯ
August 12, 2005 3,224
ಹರಿಪ್ರಸಾದ್ ರವರು ಸೂಚಿಸಿದಂತೆ, ವೆಂಡೋಸ್ ೯೮ರಲ್ಲಿ ನಾನು ಯುನಿಕೋಡ್ ಸೌಲಭ್ಯವನ್ನು ಇನ್ಸ್ಟಾಲ್ ಮಾಡಿಕೊಂಡಿದ್ದರ ಬಗ್ಗೆ ಬರೆಯುತ್ತಿದ್ದೇನೆ. ೧.ಮೊದಲಿಗೆ ನನ್ನ ಪಿಸಿಯಲ್ಲಿದ್ದ ಇಂಟರ್ನೆಟ್ ಎಕ್ಸ್ಪ್ಲೋರರನ್ನು IE 6 ಗೆ ಅಪ್ಡೇಟ್ ಮಾಡಿಕೊಂಡೆ. ೨.ನಂತರ ಕಂಟ್ರೋಲ್ ಪ್ಯಾನಲ್ ನ ಆಡ್-ರಿಮೂವ್ ಪ್ರೋಗ್ರಾಂಸ್ ಮೂಲಕ ಅರೇಬಿಕ್ ಸಪೋರ್ಟ್ ಆಡ್ ಮಾಡಿಕೊಂಡೆ. (ಇಂಟರ್ನೆಟ್ ಎಕ್ಸ್ಪ್ಲೋರರ್ ನ ಅರೇಬಿಕ್ ಸಪೋರ್ಟ್ ಆಡ್ ಮಾಡಬೇಕು) ೩. [:http://www.alphaworks.ibm.com/tech/indicime]...
0
ಲೇಖಕರು: R M Rao
ವಿಧ: ಪುಟ
August 12, 2005 2 ಪ್ರತಿಕ್ರಿಯೆಗಳು 7,149
ಯೋಗವೆಂದರೆ ಆಸನಗಳಲ್ಲ. ಆಸನಗಳು ಪತಂಜಲಿಯ ೮ ಅಂಗಗಳುಳ್ಳ ಅಷ್ಟಾಂಗಯೋಗದ ಒಂದು ಭಾಗ ಮಾತ್ರ. ಆದರೆ ರೂಢಿಯಲ್ಲಿ ಯೋಗ ಎಂದರೆ ಆಸನಗಳು ಎಂಬ ತಪ್ಪು ಅಭಿಪ್ರಾಯ ಮೂಡಿದೆ. ಸರಿಯಾಗಿ ಹೇಳಬೇಕೆಂದರೆ ಅದು ಯೋಗಾಸನ ಮಾತ್ರ. ಮನಸ್ಸಿನ ನಿಯಂತ್ರಣ ಹಾಗೂ ವೃತ್ತಿಗಳು ಮನಸ್ಸಿನಲ್ಲಿ ಏಳುವುದನ್ನು ಕಮ್ಮಿಮಾಡಿ ಕೊನೆಗೆ ಅದರ ನಿರೊಧವೇ ಪತಂಜಲಿಯ ಯೋಗ. ಪತಂಜಲಿಯ ಯೋಗ ಸೂತ್ರಗಳಲ್ಲಿ ನಾಲ್ಕು ಪಾದಗಳಿವೆ. ೧ ಸಮಾಧಿ ಪಾದ -೫೧ ಸೂತ್ರಗಳು ೨ ಸಾಧನ ಪಾದ-೫೫ ಸೂತ್ರಗಳು ೩ ವೀಭೂತಿ ಪಾದ-೫೫ ಸೂತ್ರಗಳು ೪ ಕೈವಲ್ಯ...
3
ಲೇಖಕರು: tvsrinivas41
ವಿಧ: ಪುಟ
August 12, 2005 2,472
ನಾನೊಂದು ಸೊಲ್ಲಾಪುರದ ಕಾಗೆ ಹೊರಟಿಹೆನು ಮಗಳ ಬೆಂಗಳೂರಿಗೆ ನನಗೆ ಬೇಕಿಲ್ಲ ಟ್ರೈನಿಗೆ ತಿಕೀಟು ಎಲ್ಲರೂ ಹೊಡೆಯುವರು ನನಗೆ ಸಲಾಮು ಇವರಂತೆ ಎನಗಿಲ್ಲ ನೀರಿನ ಸಮಸ್ಯೆ ಹೂಜಿಯ ತಳದಿಹ ಕೊಂಚ ನೀರನೂ ಕುಡಿಯಬಲ್ಲೆ ಕೆರೆ ಕಟ್ಟೆಗಳು ತುಂಬಿದರೂ ಕುಡಿಯದವರು ಇಲ್ಲದಾಗ ಕೊಡರೆಂದು ಹಾಹಾಕರಿಸುವರು ಎನಗಿಲ್ಲ ಇವರಂತೆ ಗಡಿಯ ಸಮಸ್ಯೆ ನನ್ನೂರಿಹದು ಮರಾಠಿಗರ ಕೈಯಲ್ಲಿ ನಮ್ಮೋರಿಹರು ಜಗದೊಳಗೆ ಅಲ್ಲಿ ಇಲ್ಲಿ ನಮಗೆಲ್ಲರೂ ಒಂದೇ ನಾವೆಲ್ಲರೂ ಒಂದೇ ನಮಗಿಲ್ಲ ಭಾಷೆಯ ಮೇಲಿನ ಜಗಳ ಎಲ್ಲ...
3
ಲೇಖಕರು: anilkumar
ವಿಧ: ಬ್ಲಾಗ್ ಬರಹ
August 11, 2005 4 ಪ್ರತಿಕ್ರಿಯೆಗಳು 5,107
a review of Joseph Beuys' show at Tate Modern, London called “Actions, Vitrines, Environments” AT: TATE Modern Gallery, London Between: 4th February -- 2nd May 2005 Introduction: I am an art critic from Bangalore writing about art in Kannada for two decades. I had to wait precisely for 'two decades' to get a scholarship based on my writings in Kannada! So, I was in London for about 7...
0

Pages