ಎಲ್ಲ ಪುಟಗಳು

ಲೇಖಕರು: mana
ವಿಧ: ಪುಟ
August 09, 2005 2,775
ಕರ್ಮಯೋಗಿ - ಭಾಗ ೧ (ತವಿಶ್ರೀ) ಭಾಗ ೨ (ಮನ)ಮಾರುತಿ ಹುಟ್ಟಿದಾಗಿನಿಂದ ಅವನ ಮನೆಯಲ್ಲಿ ದರಿದ್ರ ಕಾಲೊಕ್ಕರಿಸಿತ್ತು. ಮಗು ಹುಟ್ಟಿದಾಗ ಜಾತಕ ಬರೆದವರು ಹೇಳಿದ್ದೇನೆಂದರೆ ಈ ಮಗು ಮನೆಯಲ್ಲಿರುವವರೆಗೂ ಮನೆಯಲ್ಲಿ ಕಷ್ಟಕಾಲ, ಇವನು ಮನೆಯಿಂದಾಚೆಗೆ ಹೋದಾಗಲೇ ಮನೆಯಲ್ಲಿ ಏಳಿಗೆ. ಹಾಗೆಂದು ಮಗುವನ್ನು ಮನೆಯಿಂದಾಚೆಗೆ ತಳ್ಳೋಕ್ಕಾಗತ್ಯೇ? ಅಲ್ಲಿಯವರೆವಿಗೆ ಅವನಪ್ಪ ಅಮ್ಮ ಐಷಾರಾಮಿ ಜೀವನ ನಡೆಸಿ ಇದ್ದದ್ದೆಲ್ಲವನ್ನೂ ಕಳೆದುಕೊಂಡಿದ್ದರು. ಈ ನಾಲ್ಕನೆಯ ಮಗು ಹುಟ್ಟಿದಾಗ ಅಪ್ಪನಿಗೆ ಕೆಲಸವಿಲ್ಲ. ಮನೆಯಲ್ಲಿ...
3
ಲೇಖಕರು: tvsrinivas41
ವಿಧ: ಪುಟ
August 09, 2005 2,694
ಇವರ ಹತ್ತಿರದ ಸಂಬಂಧಿ ಒಬ್ಬರು ದೂರದ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಗಣಿತ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದರು. ಹತ್ತಿರದ ಸಂಬಂಧಿಯಾಗಿದ್ದರು ದೂರದೂರಿನಲ್ಲಿದ್ದೋ ಏನೋ ಇವರುಗಳಿಗೆ ಬಹಳ ದೂರವಾಗಿದ್ದರು. ಪತ್ರಿಕೆಯಲ್ಲಿ ಹುಡುಗನ ಸಾಧನೆ ನೋಡಿ ವಿಶ್ವನಾಥರಾಯರಿಗೆ ಪತ್ರ ಬರೆದಿದ್ದರು, ಹುಡುಗ ಬುದ್ಧಿವಂತ, ನಿನ್ನಲ್ಲಿ ಹೆಚ್ಚಿನ ಓದಿಗೆ ಸೌಲಭ್ಯವಿಲ್ಲ, ನನ್ನ ಹತ್ತಿರವಿದ್ದರೆ ಏಳಿಗೆ ಹೊಂದುವನು. ಇದನ್ನು ಕಂಡು ವಿಶ್ವನಾಥರಾಯರಿಗೆ ಹಳೆಯ ವಿಷಯಗಳೆಲ್ಲಾ ಜ್ಞಾಪಕ ಬಂದು ಕೋಪ ಬಂದಿತು....
5
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 09, 2005 2 ಪ್ರತಿಕ್ರಿಯೆಗಳು 2,243
ಊರು ಅಂದ ಮೇಲೆ ಹೊಲಗೇರಿ ಇರಲೇಬೇಕು ಅನ್ನುವುದು ನಾಣ್ನುಡಿ (ನಾಡು ನುಡಿ). ಆದರೆ ಈಗ ಎಲ್ಲೆಲ್ಲಿಯೂ ಬೀದಿ ಬದಿಯಲ್ಲಿ ವಾಸ ಮಾಡುವವರು ಜಾಸ್ತಿ ಆಗ್ತಿದ್ದಾರೆ. ಎಷ್ಟೇ ಕ್ಷಾಮ, ಪ್ರಳಯ ಮತ್ತಿತರೇ ನೈಸರ್ಗಿಕ ಪ್ರಕೋಪಗಳು ಆಗುತ್ತಿದ್ದರೂ ಇವರುಗಳ ಸಾವು ಜಾಸ್ತಿ ಆಗುತ್ತಿದ್ದರೂ ಮತ್ತೆ ಮತ್ತೆ ಇವರ ಸಂಖ್ಯೆ ಹೆಚ್ಚಾಗುತ್ತಿದೆ. ಇವರು ಜೀವನಕ್ಕೆ ಎಷ್ಟೇ ಕಷ್ಟಪಟ್ಟರೂ ಜೀವನ ನಡೆಸುವುದು ದುಸ್ತರವಾಗುತ್ತಿದೆ. ಹಾಗೇ ಆಚೀಚೆಯ ಆಕರ್ಷಣೆಯೂ ಇವರುಗಳನ್ನು ಸೆಳೆಯುತ್ತಿದೆ. ಇದರಿಂದಾಗಿ ಕಳ್ಳತನಗಳು,...
0
ಲೇಖಕರು: muralihr
ವಿಧ: ಪುಟ
August 09, 2005 1,296
ನರೇ೦ದ್ರ ಕಡಲ್ ಕಡಲ್ ಅವನ ಹೃದಯ. ಮುಗಿಲ್ ಮುಗಿಲ್ ಅವನ ಚಿತ್ತ. ಸಿಡಿಲ್ ಸಿಡಿಲ್ ಅವನ ವಾಕ್ಯ. ಮುಗುಳ್ ಮುಗುಳ್ ಅವನ ಮುಖವು. ಮಿಗಿಲ್ ಮಿಗಿಲ್ ಅವನ ತತ್ತ್ವ. ಭುಗಿಲ್ ಭುಗಿಲ್ ಅವನ ಹೆಜ್ಜೆ. ಹದುಳು ಹದುಳು ಅವನ ದಾಸ್ಯ. - ಮುರಳಿ
0
ಲೇಖಕರು: ನಿರ್ವಹಣೆ
ವಿಧ: ಚರ್ಚೆಯ ವಿಷಯ
August 09, 2005 1 ಪ್ರತಿಕ್ರಿಯೆಗಳು 8,515
ಕಂಗ್ಲಿಷ್ ನಲ್ಲಿ ಬರೆದ ಲೇಖನಗಳು, ಕಾಮೆಂಟ್ ಗಳು ಯಾವುದೇ ಮುನ್ಸೂಚನೆಯಿಲ್ಲದೆ ಅಳಿಸಿಹಾಕಲಾಗುತ್ತದೆ. ಸಂಪದದಲ್ಲಿ ಯುನಿಕೋಡ್ ಉಪಯೋಗಿಸಲು ಉತ್ತೇಜನ ನೀಡಲು ಈ ಕ್ರಮ. ವಿ.ಸೂ: ಸಾಧ್ಯವಾದಷ್ಟೂ ಯುನಿಕೋಡ್ ಉಪಯೋಗಿಸಿ. ವಿಧಿಯಿಲ್ಲದ ಪಕ್ಷದಲ್ಲಿ ಮಾತ್ರ ಕಂಗ್ಲಿಷ್ ಉಪಯೋಗಿಸಿ. ***** ಕನ್ನಡದಲ್ಲಿಲ್ಲದ ಬ್ಲಾಗ್ ಲೇಖನಗಳಿಗೂ ನಿರ್ವಾಹಕರುಗಳಿಂದ ಕತ್ತರಿ ಬೀಳುವ ಸಾಧ್ಯತೆ ಇರುತ್ತದೆ ಎಂಬುದನ್ನೂ ನೆನಪಿಡಿ. ಧನ್ಯವಾದಗಳು
0
ಲೇಖಕರು: ಶ್ಯಾಮ ಕಶ್ಯಪ
ವಿಧ: ಬ್ಲಾಗ್ ಬರಹ
August 09, 2005 5 ಪ್ರತಿಕ್ರಿಯೆಗಳು 3,782
ಕೆಲವೊಮ್ಮೆ ಸಂಗೀತದಲ್ಲಿ ರಚನೆಯಾಗುವ ಹೊಸ ಕೃತಿಗಳು‌ ಹೊಸದೊಂದು ಸಂಗೀತದ ಶೈಲಿಯನ್ನೇ ಹುಟ್ಟು ಹಾಕುತ್ತವೆ ಅಥವ ಇರುವಂತಹ ವಿಧಾನಕ್ಕೇ ಹೊಸ ಅರ್ಥವನ್ನು ಕೊಡುತ್ತವೆ. ಅಂತಹ ರಚನಾಕಾರರು ಈ ಮೇಲಿನ ಮೂವರು. ಅಷ್ಟನ್ನು ಬಿಟ್ಟರೆ ಮತ್ಯಾವ ಸ್ವಾಮ್ಯವೂ ಇಲ್ಲ ಇವರ ನಡುವೆ. ಅನಂತಸ್ವಾಮಿ ಕನ್ನಡ ಭಾವಗೀತೆಗಳ ಜಗತ್ತಿನಲ್ಲಿ ಸುಪ್ರಸಿದ್ಧರು, ಡಾಕ್ಟರ್ ಡ್ರೇ ಪಾಶ್ಚಿಮಾತ್ಯರಲ್ಲಿ ಅತ್ಯಂತ ಕುಪ್ರಸಿದ್ಧವಾದ gangsta rap ಎಂಬ ಹೊಸ ಶೈಲಿಯನ್ನು ಹುಟ್ಟುಹಾಕಿ ಬ್ಲಾಕ್ ಜನರಿಗೆ ಹೊಸ ದಾರಿ ಹಿಡಸಿದ ಗುರು....
0
ಲೇಖಕರು: tvsrinivas41
ವಿಧ: ಪುಟ
August 09, 2005 1 ಪ್ರತಿಕ್ರಿಯೆಗಳು 2,011
ಕಳ್ಳರಿದ್ದಾರೆ ಎಚ್ಚರಿಕೆ ನಮ್ಮೂರಿನಲಿಹನು ಪುಕ್ಕಟೆ ಕ್ಷೌರಿಕ ಕತ್ತರಿ ಆಡಿಸುವುದೇ ಅವನ ಕಾಯಕ ತಲೆಗೆ ನೀರೂ ಹಾಕದೇ ನುಣ್ಣಗೆ ಬೋಳಿಸುವ ಕೂದಲನ್ನಲ್ಲ, ನಮ್ಮ ನಿಮ್ಮ ಜೇಬನ್ನು ಇನ್ನೊಬ್ಬ ನಡೆಸಿಹನು ಸೇವೆಯ ಕಂಪನಿ ದಾನ ಮಾಡಿರೆಂದು ಕೈ ಜೋಡಿಸಿಹ ಎಲ್ಲರಲಿ ಇವನ ಮುದ್ದು ಮುಖಕೆ ಮರುಳಾಗದವರೇ ಇಲ್ಲ ಸ್ವಲ್ಪ ದಿನಗಳಲೇ ಹಣ ಕಳಕೊಂಡರವರೆಲ್ಲ ಮತ್ತೊಬ್ಬ ತೋರಿಸುತಿಹನು ಎತ್ತರದ ಮಹಲನು ನಿಮಗೆಲ್ಲರಿಗೂ ಕೊಡಿಸುವೆನು ಅದರಲೊಂದನು ಆಸೆಯ ಬೆನ್ನ ಹಿಂದೆ ಬಿದ್ದವರಿವರೆಲ್ಲ ಗಾಳಿ ಬಂದು...
0
ಲೇಖಕರು: tvsrinivas41
ವಿಧ: ಬ್ಲಾಗ್ ಬರಹ
August 08, 2005 22 ಪ್ರತಿಕ್ರಿಯೆಗಳು 10,122
ನನ್ನ ಬ್ಲಾಗ್ ನಲ್ಲಿ ಇಂದು ಏನು ಬರೆಯುವುದು ಎಂದು ಯೋಚಿಸುತ್ತಿದ್ದೆ. ಆಗ ನನ್ನ ಸ್ನೇಹಿತರೊಬ್ಬರು ಇಂದು ಬೃಂದಾವನಕ್ಕೆ (ಇದು ಇಲ್ಲಿಯ ಒಂದು ಹೊಟೆಲ್ ) ಹೋಗಿ ಬರುವ ಅಂದರು. ಆಗ ಯೋಚಿಸಿದೆ - ಈ ಬೃಂದಾವನ ಅಂದರೆ ಏನು? ಇದು ಕಾಬಾ, ದರ್ಗಾ, ಸಮಾಧಿ, ಗದ್ದುಗೆಗಳಂತೆಯೇ, ಅಲ್ಲವೇ. ಇದರ ಬಗ್ಗೆ ನನ್ನ ಅನಿಸಿಕೆ ಹೀಗಿದೆ. ನೋಡಿ, ಓದಿ, ತಪ್ಪುಗಳನ್ನು ತಿಳಿಸಿ, ನಾನೂ ತಿಳಿಯುವುದು ಬಹಳಷ್ಟಿದೆ. ಬೃಂದಾವನ ಮತ್ತು ಮಠ ಕಟ್ಟುವ ಜಾಗ ವಾಸ್ತುವಿನ ಪ್ರಕಾರ ಉತ್ತಮ ಜಾಗ. ಸ್ವಾಮಿಗಳು ದೇವರ...
0

Pages