ಎಲ್ಲ ಪುಟಗಳು

ಲೇಖಕರು: Nagaraj S Rudraswamy
ವಿಧ: ಬ್ಲಾಗ್ ಬರಹ
February 11, 2019 417
ಮೊನ್ನೆ ನಮ್ಮ ಮನೆಯಲ್ಲಿ ಸೆಕ್ಷನ್ 144 ಜಾರಿ ಮಾಡ ಬೇಕಾದ ಸಂದರ್ಭ ಬಂದಿತ್ತು. ಅಂದರೆ ದೊಡ್ಡ ಕಲಹ ಜಗಳದ ವಾತಾವರಣ ನಿರ್ಮಾಣವಾಗಿತ್ತು. ಕಾರಣ ಇಷ್ಟೆ, ನಮ್ಮ ಅಣ್ಣ ಮತ್ತು ಮಕ್ಕಳು ಕುಟುಂಬ ಸಮೇತರಾಗಿ ನಮ್ಮ ಮನೆಗೆ ಬಂದಿದ್ದರು. ಸಾಯಂಕಾಲ ದೇವಸ್ಥಾನಕ್ಕೆ ಹೋಗುವುದಿತ್ತು. ಖಾಲಿ ಕೂಡುವುದೇಕೆ, ಮಾರ್ಕೆಟ್ಟಿಗೆ ಹೋಗಿ ಬರೋಣವೆಂದು ಮಕ್ಕಳನ್ನು ಮನೆಯಲ್ಲಿ ಬಿಟ್ಟು ನಾನು ನಮ್ಮಣ್ಣ ಹೋದೆವು. ತಿರುಗಿ ಬಂದು ಮನೆಯ ಬಾಗಿಲು ತೆಗೆದು ನೋಡಿದರೆ ಮನೆಯಲ್ಲಿ ಚೆಲ್ಲಾಪಿಲ್ಲಿಯಾಗಿ ಬಿದ್ದ ಬಟ್ಟೆಗಳು,ನೀರಿನ...
5
ಲೇಖಕರು: addoor
ವಿಧ: ಲೇಖನ
February 10, 2019 326
ಕಾಲ ಬೇರಾಯ್ತೆಂದು ಗೋಳಾಡುವುದದೇಕೆ? ಲೀಲೆ ಜಗವೆನ್ನಲದು ಪರಿಪರಿ ಪರೀಕ್ಷೆ ತಾಳೆಲ್ಲವನು ನಿನ್ನ ಸಂಯಮದ ಸತ್ತ್ವದಿಂ ಬಾಳುವುದೆ ಗೆಲವೆಲವೊ – ಮರುಳ ಮುನಿಯ ಕಾಲ ಬದಲಾಗಿದೆಯೆಂದು ಗೋಳಾಡುವುದೇಕೆ? ಎಂಬ ಸರಳ ಪ್ರಶ್ನೆಯ ಮೂಲಕ ಈ ಮುಕ್ತಕದಲ್ಲಿ ಮಾನ್ಯ ಡಿ.ವಿ.ಜಿ. ಅವರು ನೀಡುವ ಸಂದೇಶ: ಈ ಜಗತ್ತು ಪರಮಾತ್ಮನ ಲೀಲೆ ಎನ್ನುವುದಾದರೆ, ಇಲ್ಲಿ ಪರಿ ಪರಿ ಪರೀಕ್ಷೆಗಳು ಇದ್ದೇ ಇರುತ್ತವೆ. ಅವೆಲ್ಲವನ್ನೂ ನಮ್ಮ ಸಂಯಮದ ಸತ್ತ್ವದಿಂದ ತಾಳಿಕೊಂಡು ಬಾಳುವುದೇ ಗೆಲವು. ಕಳೆದ ೨೧ ವರುಷಗಳಲ್ಲಿ ನಮ್ಮ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 10, 2019 512
ಇದು ದಿಲ್ ನೆ ಫಿರ ಯಾದ ಕಿಯಾ ಎಂಬ ಚಿತ್ರದ ಟೈಟಲ್ ಹಾಡು. ಇದು ತ್ರಿಕೋನಪ್ರೇಮದ ಹಾಡು. ಇದನ್ನು ಮುಂದಿನ ಕೊಂಡಿಯಲ್ಲಿ ಕೇಳಿ ಮತ್ತು ನೋಡಿhttps://youtu.be/2YohEL8ZkFg ಮೂಲದ ಧಾಟಿಯಲ್ಲಿ ಈ ಹಾಡನ್ನು ಅನುವಾದ ಮಾಡಬೇಕೆಂದು ನನ್ನ ಆಸೆ . ಪಲ್ಲವಿ ಸಿದ್ಧ ಇದೆ - ನಿನ ನೆನಪಾಗುತಿರೆ ಬೀಸಿತು ಹಿಮ ಗಾಳಿ, ಶಿಥಿಲ ಸಾಮ್ರಾಜ್ಯದ ಮೇಲೆ ನೋವಿನ ಮರು ದಾಳಿ ನೀವೇನಾದರೂ ಕೈ ಹಚ್ಚುವಿರಾ ನೋಡಿ ! ಹಾಡಿನ ಅರ್ಥ- ಹೃದಯ ಮತ್ತೆ ನೆನಪಿಸಿತು ಹಿಮದ ಗಾಳಿ ಬೀಸಿತು ಪ್ರೇಮದ ನೋವು ಮತ್ತೆ...
5
ಲೇಖಕರು: Harish Athreya
ವಿಧ: ಬ್ಲಾಗ್ ಬರಹ
February 09, 2019 1 ಪ್ರತಿಕ್ರಿಯೆಗಳು 784
ಕೂಪ ಅಧ್ಯಾಯ ೧ ೩ ಸ್ಕೂಲಿಗೆ ರಜ ಹಾಕಿ ಹದಿನೈದು ದಿನ ಆಯ್ತು. ತಾತ ಜೊತೇಲಿದಾರೆ. ಅದ್ಯಾಕೋ ತಾತ ಇಷ್ಟವಾಗ್ತಾರೆ. ಮನೆಯಲ್ಲಿರುವಾಗ ಒಂದು ಹಳೇ ಬನೀನು, ಪಂಚೆ ಇಷ್ಟೇ ತಾತನ ಡ್ರೆಸ್. ಮನೆಯೊಳಗೆ ಬಂದ ತಕ್ಷಣ ಹಾಲು ಕಾಸಿದ ವಾಸನೆ, ಬೇಳೆ ಬೇಯಿಸಿದ ವಾಸನೆ ಬಡಿಯುತ್ತೆ. ಇದು ಮನೆ ಅನ್ನಿಸುತ್ತೆ. ಮೊದಲೆಲ್ಲಾ ಸ್ವಿಗ್ಗಿಯಿಂದನೋ ಫ಼ುಡ್ ಪಾಂಡದಿಂದಲೋ ಬರೋದು. ಯಾರೋ ತರೋನು ಅದು ಕವರ್ ಗಳಲ್ಲಿ ಬರೋದು. ಮನೆಯಲ್ಲಿ ಬೇಯಿಸಿದ್ರೆ ಬರೋ ವಾಸನೆಗೆ ಮನೆ ಅಂತಾರೆ. ಎಲ್ಲೋ ಬೇಯಿಸಿ ತಂದದ್ದನ್ನ ತಿಂದ್ರೆ ಲಾಡ್ಜ್...
5
ಲೇಖಕರು: ಅಪ್ರಮೇಯ
ವಿಧ: ಲೇಖನ
February 09, 2019 422
ದೇವರ ಮೂರ್ತಿಗಳ ಮೂಲ ಆಶಯ ''ಮೌನದ'' ಅನುಸಂಧಾನ. ಮೌನಕ್ಕೆ ಇನ್ನೊಂದು ಹೆಸರೇ ಮೂರ್ತಿ. ದೇವರ ಮೂರ್ತಿಯ ಮುಂದೆ ಕುಳಿತು ಏನನ್ನೂ ಬೇಡಿಕೊಳ್ಳಬೇಕಾಗಿಲ್ಲ ಸುಮ್ಮನೆ ಕುಳಿತುಕೊಂಡರೆ ಸಾಕು. ಹೀಗೆ ಮೂರ್ತಿಯೊಂದಿಗಿನ ಮೌನದ ಅನುಸಂಧಾನದಿಂದ ಚಿತ್ತವು ಶುದ್ಧಿಯಾಗಿ ತಾನಾಗೇ ಧ್ಯಾನಾವಸ್ಥೆಗೆ ಕರೆದೊಯ್ಯುತ್ತದೆ ಇದನ್ನು ಎಂದಾದರೂ ಗಮನಿಸಿದ್ದಿರಾ ? ಬಹುಶಃ ಇಲ್ಲ... ವಿವಿಧ ಬೇಡಿಕೆಗಳನ್ನು ದೇವರಮುಂದಿಡುವುದರಲ್ಲೇ ಮಗ್ನರಾಗಿರುತ್ತೀರಿ ಒಂದನ್ನಂತೂ ಎಲ್ಲರೂ ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲೇಬೇಕು...
3.5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 08, 2019 453
ನಿನ್ನ ಹೊರತು ಜಗತ್ತಿನೊಂದಿಗೆ ನನ್ನದೇನೂ ತಕರಾರಿಲ್ಲ, ನಿನ್ನ ಹೊರತು ಜಗತ್ತು ಜಗತ್ತೇ ಅಲ್ಲ! ನಿನ್ನ ಹೆಜ್ಜೆಗಳನ್ನು ಚುಂಬಿಸುತ್ತ ಬದುಕಿನ ಮಜಲುಗಳು ಸಾಗಲಿ ದೂರಕೆ, ಬಲು ದೂರಕೆ. ಮತ್ತೆ ನೀನು ಜತೆ ಇದ್ದರೆ ಮಜಲುಗಳಿಗೇನು ಬರವಿಲ್ಲ!   ಬಯಕೆ ಆಗುವುದು , ನಿನ್ನ ಮಡಿಲಲ್ಲಿ ತಲೆ ಇರಿಸಿ ಅಳಬೇಕೆoದು, ನಿನ್ನ ಕಣ್ಣು ಕೂಡ ಹನಿಗೂಡಿರುವುದನ್ನು ನಾನು ಕಾಣುವೆ!   ನೀನು ಹೇಳಿದರೆ ರಾತ್ರಿ ಇವತ್ತು ಮುಳುಗನು ಚಂದಿರ! ರಾತ್ರಿಯ ತಡೆದು ನಿಲ್ಲಿಸು ರಾತ್ರಿಯ ಮಾತು ಬಿಡು , ಬದುಕಾದರು...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
February 07, 2019 497
ಇದು ಹಿಂದಿಯ ಸಂಗಮ್ ಎಂಬ ಮಲ್ಟಿ ಸ್ಟಾರರ್ ಚಿತ್ರದ ಹಾಡು. ಈ  ಯಶಸ್ವಿ ಚಿತ್ರದ ಬಗ್ಗೆ ಮಾಹಿತಿಯನ್ನು ನೀವು ಗೂಗಲ್ ನಿಂದ ಲೋ ಅಥವಾ ಹಿರಿಯರಿಂದಲೋ ಪಡೆಯಬಹುದು. (ಧಾರವಾಡದಲ್ಲಿ ಈ ಸಿನಿಮಾ ಬಿಡುಗಡೆಯಾದಾಗ ನೂಕುನುಗ್ಗಲು, ಲಾಠಿಚಾರ್ಜ್ ಆಗಿತ್ತಂತೆ!) ಇದನ್ನು ಹಾಡಿದ್ದು ಮುಕೇಶ್. ಈ ಹಾಡನ್ನು ಈ ಕೆಳಗಿನ ಕೊಂಡಿಯಲ್ಲಿ ನೋಡಬಹುದು ಮತ್ತು ಕೇಳಬಹುದು.https://youtu.be/f6SUVCh8AD0 ಈ ಕೆಳಗೆ ಅದರ ಅರ್ಥವನ್ನುಕನ್ನಡದಲ್ಲಿ ಮತ್ತು  ಅದರ ಸಾಹಿತ್ಯವನ್ನು  ಕನ್ನಡ ಲಿಪಿಯಲ್ಲಿ   ಕೊಟ್ಟಿದ್ದೇನೆ...
5
ಲೇಖಕರು: addoor
ವಿಧ: ಲೇಖನ
February 07, 2019 344
ಮುಂಬೈಯ “ಕ್ಯಾಂಡಿ ಆಂಡ್ ಗ್ರೀನ್” ರೆಸ್ಟೊರೆಂಟಿನ ವಿಶೇಷತೆ ಅರಳು ಹೂಗಳು ತುಂಬಿದ ಆಹಾರ. ಅದರ ಮಾಲಕಿ ೨೫ ವರುಷ ವಯಸ್ಸಿನ ಶ್ರದ್ಧಾ ಬನ್ಸಾಲ್. ಆಕೆಗೆ ಯಾವತ್ತೂ ಒಂದೇ ಯೋಚನೆ. ತಾನು ತಯಾರಿಸುವ ಸಲಾಡುಗಳು, ಕೇಕುಗಳು ಹಾಗೂ ಪಾನೀಯಗಳಲ್ಲಿ ಬೇರೆಬೇರೆ ಹೂಗಳನ್ನು ಸೇರಿಸುವುದು ಹೇಗೆ? ಆಹಾರವಾಗಿ ಆಕೆಯ ಅಚ್ಚುಮೆಚ್ಚಿನ ಹೂಗಳು ನೀಲಿ ಶಂಖಪುಷ್ಪ (ಅಪರಾಜಿತ) ಮತ್ತು ಹೊಳಪು ಕಿತ್ತಳೆ ಬಣ್ಣದ ನಾಸ್ಟರ್-ಶಮ್. ಪೋಷಕಾಂಶಗಳು ತುಂಬಿರುವ ಈ ಹೂಗಳ ಬಣ್ಣಗಳಿಂದಾಗಿ ಪ್ಲೇಟಿನಲ್ಲಿರುವ ಆಹಾರಕ್ಕೆ ಒಂದು ಝಲಕ್....
4.4

Pages