ಎಲ್ಲ ಪುಟಗಳು

ಲೇಖಕರು: addoor
ವಿಧ: ಲೇಖನ
November 19, 2018 199
ನಾಳೆಯೊಂದಿಹುದು ನಿನ್ನೆಯವೊಲೆ ಬಾಳಿನಲಿ ಬೀಳಾಯ್ತು ನಿನ್ನೆಯದೆಂದಳುವುದೇಕೆ? ಮೇಲು ಮಾಡಲ್ಕಂದು ಸಮಯವದಕಾಣೆಯೇಂ ಪಾಳೊಂದುಮಿಲ್ಲವೆಲೊ – ಮರುಳ ಮುನಿಯ ನಿನ್ನೆ ಮುಗಿದಿದೆ. ಆದರೆ ನಾಳೆ ಕಾದಿದೆ ಎಂಬುದು ನೆನಪಿರಲಿ. ಬಾಳಿನಲ್ಲಿ ನಿನ್ನೆಯ ದಿನ ಹಾಳಾಗಿ ಹೋಯಿತು ಎಂದು ಅಳುವುದೇಕೆ? ಅದನು ಮೇಲು ಮಾಡಲಿಕ್ಕೆ, ಅಂದರೆ ಅದರಿಂದ ಒಳಿತು ಮಾಡಲಿಕ್ಕೆ, ಸೂಕ್ತ ಸಮಯಕ್ಕಾಗಿ ವಿಧಿ ಕಾಯುತ್ತಿದೆ ಎಂಬುದು ನಿನಗೆ ಕಾಣಿಸುತ್ತಿಲ್ಲವೇ? ಈ ಜಗತ್ತಿನಲ್ಲಿ ಹಾಳು ಎಂಬುದು ಯಾವುದೂ ಇಲ್ಲ ಎಂದು ಈ ಮುಕ್ತಕದಲ್ಲಿ...
3
ಲೇಖಕರು: makara
ವಿಧ: ಬ್ಲಾಗ್ ಬರಹ
November 19, 2018 2 ಪ್ರತಿಕ್ರಿಯೆಗಳು 373
       ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.        ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ಸ್ತ್ರೀಯರು ಸದಾಚಾರ ಸಂಪನ್ನರಾಗಿರಬೇಕೆಂದು ತಾವು ಈ ಹಿಂದೆ ತಿಳಿಸಿದ್ದೀರಿ. ಸಾಧ್ವೀಮಣಿಯರಾದ ಸ್ತ್ರೀಯರಿಂದಲೇ ಈ ಪ್ರಪಂಚವು ಈಗಿರುವಂತೆ ಇದೆ ಎಂದೂ ಸಹ ತಾವು ವಿವರಿಸಿದ್ದೀರಿ. ಸ್ತ್ರೀಯರು ದುಷ್ಟ ಸ್ವಭಾವವನ್ನು ಹೊಂದಿದವರಾಗಿದ್ದರೆ ಸಮಾಜದಲ್ಲಿ ಸಂಕರವು ಉಂಟಾಗುತ್ತದೆಂದು ಹೇಳಿದ್ದೀರಿ. ಅಷ್ಟಕ್ಕೂ ಸ್ತ್ರೀಯರಲ್ಲಿ ಸದಾಚಾರವೆಂದರೇನು?...
5
ಲೇಖಕರು: addoor
ವಿಧ: ಲೇಖನ
November 18, 2018 200
ಖಡ್ಗಮೃಗದ ಕೊಂಬುಗಳ್ಳರು ಅವನ್ನು ಕೊಲ್ಲುವುದು ಕೇವಲ ಕೊಂಬಿಗಾಗಿ. ಆದ್ದರಿಂದ, ಖಡ್ಗಮೃಗಗಳ ಕೊಂಬನ್ನೇ ಕತ್ತರಿಸಿದರೆ ಹ್ಯಾಗೆ? ಭಾರತದ ಒಂದು-ಕೊಂಬಿನ ಖಡ್ಗಮೃಗಗಳನ್ನು ಉಳಿಸಲಿಕ್ಕಾಗಿ ಹೀಗೊಂದು ಚರ್ಚೆ ಕೆಲವು ವರುಷಗಳಿಂದ ನಡೆಯುತ್ತಿದೆ. ಅಸ್ಸಾಂನಲ್ಲಿ ಖಡ್ಗಮೃಗಗಳನ್ನು ಹೊಂಚು ಹಾಕಿ ಕೊಲ್ಲುವ ದಂಧೆ ನಡೆಯುತ್ತಲೇ ಇದೆ. ಅವನ್ನು ಉಳಿಸಲಿಕ್ಕಾಗಿ ಕೈಗೊಂಡ ಕ್ರಮಗಳು ಹಲವು. ಆದರೆ, ಎಲ್ಲ ಕ್ರಮಗಳೂ ವೈಜ್ನಾನಿಕ ಅಧ್ಯಯನಗಳನ್ನು ಆಧರಿಸಿವೆ ಎನ್ನುವಂತಿಲ್ಲ. ಉದಾಹರಣೆಗೆ, ರಾಷ್ಟ್ರೀಯ ಉದ್ಯಾನಗಳ...
4.666665
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 18, 2018 318
ಮುಂಬೈಯಲ್ಲಿ ಬಹುಪಾಲು ಜನ ಓಡಾಡುವುದು ಲೋಕಲ್ ಟ್ರೈನ್ ಗಳ ಮೂಲಕವೇ. ಹಾಗಾಗಿ ಎಲ್ಲರೂ ಮುಂಜಾನೆ ಹೊತ್ತು ಸ್ಟೇಷನ್ ಗಳತ್ತ ಧಾವಿಸುತ್ತ ಇರುತ್ತಾರೆ . ನಿನ್ನೆಯೂ ಹಾಗೆಯೇ . ನಾನು ಎಲ್ಲರ ಹಾಗೆ ಅವಸರದಲ್ಲಿ ಅಂಧೇರಿ ಸ್ಟೇಷನ್ ಕಡೆ ಹೋಗುತ್ತಿದ್ದೆ. ಆ ಬೀದಿಯೋ ಬಲು ಇಕ್ಕಟ್ಟು . ಆ ಇಕ್ಕಟ್ಟಿನ ರಸ್ತೆಯಲ್ಲಿಯೇ ತಲೆ ಮೇಲೆ ಮೆಟ್ರೋ ಹಾದು ಹೋಗಿದೆ. ( ರಸ್ತೆಯನ್ನು ಅಗಲಗೊಳಿಸಲು ಅಲ್ಲಿನ ವ್ಯಾಪಾರಿಗಳು ವಿರೋಧಿಸಿದರು . ರಸ್ತೆಯನ್ನು ಅಗಲ ಮಾಡದೆಯೇ ಮೆಟ್ರೋ ರೈಲಿನ ನಿರ್ಮಾಣ ಆಯಿತು ) ಎರಡೂ...
4.833335
ಲೇಖಕರು: addoor
ವಿಧ: ಲೇಖನ
November 16, 2018 1 ಪ್ರತಿಕ್ರಿಯೆಗಳು 306
ಹಾಗೆಯೋ ಹೀಗೆಯೋ ಹೇಗೆ ಹೇಗೆಯೊ ಜನುಮ ಸಾಗಿ ಮುಗಿವುದು; ಮುಗಿದು ಮರೆವುದದೆ ಸುಕೃತ ಈಗಲೊ ಆಗಲೋ ಎಂದೊ ಮುಗಿವುಂಟೆಂಬ ಭಾಗ್ಯವನು ನೆನೆದು ನಲಿ - ಮಂಕುತಿಮ್ಮ ಮನುಷ್ಯರಾಗಿ ಹುಟ್ಟಿದ ನಮಗೆ ಸಾವು ನಿಶ್ಚಿತ. ನಿಜ ಹೇಳಬೇಕೆಂದರೆ, ನಮ್ಮ ಹುಟ್ಟಿನೊಂದಿಗೇ ಸಾವು ಬೆನ್ನಟ್ಟಿಕೊಂಡು ಬರುತ್ತದೆ. ಅಂತಿಮ ಕ್ಷಣದ ವರೆಗೆ ನಮ್ಮ ಬದುಕು ಹಾಗೆಯೋ ಹೀಗೆಯೋ ಅಂದರೆ ಯಾವುದೋ ಒಂದು ರೀತಿಯಲ್ಲಿ ಸಾಗುತ್ತದೆ. ಒಬ್ಬ ವ್ಯಕ್ತಿಯ ಆಯುಸ್ಸು ಮುಗಿದು, ಜೀವನ ಅಂತ್ಯವಾಗುತ್ತದೆ ಎಂಬುದೇ ಒಳ್ಳೆಯ ಸಂಗತಿ (ಸುಕೃತ)....
5
ಲೇಖಕರು: makara
ವಿಧ: ಬ್ಲಾಗ್ ಬರಹ
November 14, 2018 1 ಪ್ರತಿಕ್ರಿಯೆಗಳು 364
        ಇದು ಭೀಷ್ಮ ಯುಧಿಷ್ಠಿರ ಸಂವಾದ ಅರ್ಥಾತ್ ರಾಜನೀತಿ ಶಾಸ್ತ್ರದಿಂದ ಆಯ್ದ ಮತ್ತೊಂದು ನೀತಿ ಕಥೆ.             ಯುಧಿಷ್ಠಿರನು ಹೀಗೆ ಕೇಳಿದನು, "ಪಿತಾಮಹಾ! ನನಗೆ ಒಂದು ಸಂದೇಹ. ಮಹಾವೀರನಾದವನು ಧರ್ಮವನ್ನು ರಕ್ಷಿಸುವ ನಿಮಿತ್ತವಾಗಿ ಯುದ್ಧವನ್ನು ಮಾಡಲು ಹಿಂದೆ-ಮುಂದೆ ಆಲೋಚಿಸಬಾರದು. ತನ್ನ ಮುಂದೆ ಇರುವ ಲಕ್ಷ್ಯ ಸಾಧನೆಗಾಗಿ ಹೋರಾಡುತ್ತಿರುವಾಗ ಪ್ರಾಣ ಹೋದರೂ ಸಹ ಲೆಕ್ಕಿಸುವುದಿಲ್ಲ. ಪ್ರಾಣವನ್ನು ತೃಣಪ್ರಾಯವಾಗಿ ಕಂಡು ಅದನ್ನು ತ್ಯಜಿಸಲು ಸಿದ್ಧನಾಗಿರುವವನನ್ನೇ ವೀರನೆಂದು ಜನರು...
5
ಲೇಖಕರು: hpn
ವಿಧ: ರುಚಿ
November 13, 2018 630
ಅಕ್ಕಿ ಹಾಗು ಹೆಸರು ಬೇಳೆಯನ್ನು ತೊಳೆದು ನೆನೆಸಿಟ್ಟುಕೊಳ್ಳಬೇಕು. ಅರ್ಧ ಗಂಟೆಗಳ ಕಾಲ ನೆನೆಸಿಟ್ಟರಾಯಿತು.  ಕುಕ್ಕರಿನ ಬಾಣಲೆಯಲ್ಲಿ ತುಪ್ಪದಲ್ಲಿ ಜೀರಿಗೆ, ಹಸಿರು ಮೆಣಸಿನಕಾಯಿ, ಶುಂಠಿ ಹಾಕಿ ಹುರಿದಿಟ್ಟುಕೊಳ್ಳಬೇಕು.  ಅದಕ್ಕೆ ಅಕ್ಕಿ, ಹೆಸರು ಕಾಳು, ಅರಿಶಿನ, ಮೇಲೆ ತಯಾರಿಸಿದ ಮಸಾಲೆ, ಸ್ವಲ್ಪ ಹಿಂಗು, ಬೆಲ್ಲ, ಹಾಗೂ ಅಳತೆಗೆ ತಕ್ಕಂತೆ ಉಪ್ಪು ಹಾಕಿ, ಜೊತೆಗೆ ನಾಲ್ಕು ಕಪ್ಪು ನೀರು ಹಾಕಿ ಕುಕ್ಕರಿನಲ್ಲಿಟ್ಟು ನಾಲ್ಕೈದು ಬಾರಿ ಕೂಗು ಬರುವವರೆಗೆ ಬೇಯಿಸುವುದು. 
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
November 07, 2018 464
ಬೇಡಿದ್ದನ್ನ ಈಡೇರಿಸೊ ಬಾವಿಯಲ್ಲಿ ಗಂಡನು ಒಂದು ನಾಣ್ಯ ಹಾಕಿ ಏನನ್ನೋ ಮನಸಿನಲ್ಲಿ ಬೇಡಿಕೊಂಡ. ನಂತರ ಹೆಂಡತಿಯೂ ಅದರಲ್ಲಿ ನಾಣ್ಯ ಎಸೆಯಲು ಹೋಗಿ ಕಾಲು ಜಾರಿ ಬಿದ್ದು ಮುಳುಗಿ ಬಿಟ್ಟಳು. ಗಂಡ ಉದ್ಗರಿಸಿದ - ಅರೆ, ಇದೆಲ್ಲ ನಿಜಾನಾ ಹಾಗಾದರೆ ? ಕುರುಡು ನಂಬಿಕೆ ಅಂತ ತಿಳಿದಿದ್ದೆನಲ್ಲ?! ******** - ಆದಿ ಪುರುಷ ಆಡಂ ನನ್ನು ದೇವರು ಮೊದಲು ಸೃಷ್ಟಿಸಿದ್ದು ಏಕೆ ? - ಅವನಿಗೆ ಏನನ್ನಾದರೂ ಹೇಳುವ ಅವಕಾಶ ಕೊಡಲು! ****** ಸೈನ್ಯಾಧಿಕಾರಿ ಸೈನಿಕನಿಗೆ ಕೇಳಿದ- ಏನಯ್ಯ ನಿನ್ನ ಹತ್ತಿರ ನೂರು...
4.75

Pages