ಎಲ್ಲ ಪುಟಗಳು

ಲೇಖಕರು: kvcn
ವಿಧ: ಲೇಖನ
August 10, 2019 87
ರಸ್ತೆಯ ಎರಡೂ ಬದಿಗಳಲ್ಲಿದ್ದ ಕಾಪಿಕಾಡಿನ ಕಾಲನಿಯಲ್ಲಿ ಸಾಕಷ್ಟು ಮನೆಗಳಿದ್ದು ಸಾಕಷ್ಟು ಜನಸಂಖ್ಯೆಯೂ ಇತ್ತು. ಅವರ ಆರಾಧ್ಯ ದೈವದ   ದೈವಸ್ಥಾನವೂ ಇದ್ದು,  ಗುಡ್ಡೆಯ ದಾರಿಯಲ್ಲಿ ಚಾಮುಂಡೇಶ್ವರಿ ದೇವಸ್ಥಾನವಿತ್ತೆಂದು ಕೇಳಿದ್ದೇನೆ. ದೈವಸ್ಥಾನದ ಕೋಲ, ಚಾಮುಂಡೇಶ್ವರಿಯ ವಾರ್ಷಿಕ ಪೂಜಾ ಸಮಯದಲ್ಲಿ ನಮ್ಮ ಮನೆಯಿಂದ ವಂತಿಗೆ ಕೊಂಡುಹೋಗಲು ಮಧ್ಯ ವಯಸ್ಸಿನ ಹಿರಿಯರೊಬ್ಬರು  ಮನೆಗೆ ಬರುತ್ತಿದ್ದರು. ಅವರ ಹೆಸರು ಕಾಂತರ ಎಂದು ನೆನಪು. ಅಪ್ಪ ಅವರಿಗೆ ವಂತಿಗೆ ನೀಡುವುದರ ಜತೆಗೆ ಮನೆಗೆ ಬಂದವರಿಗೆ ಚಹಾ...
5
ಲೇಖಕರು: ಮೌನಸಾಹಿತಿ
ವಿಧ: ಬ್ಲಾಗ್ ಬರಹ
August 10, 2019 4 ಪ್ರತಿಕ್ರಿಯೆಗಳು 248
ಅವರವರ ಕರ್ಮದಂತೆ ಅವರವರ ಜೀವನಕ್ರಮ ಎಂಬುದು ನಿಜವೇ ಆದರೂ ಕೆಲವೊಮ್ಮೆ ಕೆಲವರ ಸ್ಥಿತಿ ನೋಡುವಾಗ ಅಯ್ಯೋ ಈ ತರಹದ್ದೂ ಒಂದು ಬದುಕು ಇರುತ್ತದಾ ಎಂದು ಖೇದವಾದರೆ, ಇನ್ನೂ ಕೆಲವರ ಬದುಕು ಕಂಡಾಗ ಹೀಗೂ ಬದುಕುತ್ತಾರ ಎಂದು ಅಸಹ್ಯ ಪಡುವುದು ಕೂಡಾ ಇದೆ. ಒಂದು ರೀತಿಯಲ್ಲಿ ನಾವೆಲ್ಲರೂ ಒಂದಲ್ಲ ಒಂದು ರೀತಿಯಲ್ಲಿ ಭಿಕ್ಷುಕರೇ ಸರಿ, ಆದರೂ ಭಿಕ್ಷುಕರನ್ನು ಕಂಡಾಗ ಅಸಹ್ಯ ಪಟ್ಟುಕೊಳ್ಳುವುದನ್ನು ಮಾತ್ರ ಬಿಡುವುದಿಲ್ಲ. ಇದು ಸುಮಾರು 4 ವರ್ಷಗಳ ಹಿಂದಿನ ಕಥೆ. ಕೆಲಸ ನಿಮಿತ್ತ ದಾವಣಗೆರೆ ಹೋಗಿದ್ದೆ ಉಡುಪಿಗೆ...
5
ಲೇಖಕರು: gururajkodkani
ವಿಧ: ಲೇಖನ
August 09, 2019 78
’ನನಗೆ ಅವನನ್ನು ಕಂಡರೆ ಬೇಸರವಾಗುತ್ತದೆ.ಅವನ ಆಟದ ರೀತಿ ತೀರ ಕಳಪೆ ಮಟ್ಟದ್ದು.ಅವನ ಫೋರ್ ಹ್ಯಾಂಡ್ ತೀರ ದುರ್ಬಲ.ಬ್ಯಾಕ್ ಹ್ಯಾಂಡ್ ಬಗೆಗಂತೂ ಹೇಳುವುದೇ ಬೇಡ.ಸರ್ವಿಸ್‌ನಲ್ಲಿ ವೇಗವಿದೆಯಾದರೂ ದಿಕ್ಕುದೆಸೆಯಿಲ್ಲದಂತೆ ಸರ್ವ್ ಮಾಡುವ ಅವನ ರೀತಿ ದೇವರಿಗೆ ಪ್ರೀತಿ.ಪರಿಸ್ಥಿತಿ ಹೀಗಿರುವಾಗ ಅವನು ಅಂತರಾಷ್ಟ್ರೀಯ ಕ್ರೀಡಾಪಟುವಾಗುವ ಕನಸನ್ನು ಕೈ ಬಿಡುವುದೊಳಿತು.’   ಹೀಗೆ ತನ್ನ ಸಮಕಾಲೀನ ಕ್ರೀಡಾಪಟುವಿನ ಬಗ್ಗೆ ಕಟುವಾದ ವಿಮರ್ಶೆಯ ಮಾತುಗಳನ್ನಾಡಿದವನ ಹೆಸರು ಆಂಡ್ರೆ ಅಗಾಸ್ಸಿ.ಟೆನ್ನಿಸ್ ಲೋಕದ...
3
ಲೇಖಕರು: addoor
ವಿಧ: ಲೇಖನ
August 09, 2019 48
ಇತಿಹಾಸಕ್ಕೆ ಸೇರಿದ ೨೦೧೮ನೇ ಇಸವಿಯತ್ತ ಒಮ್ಮೆ ತಿರುಗಿ ನೋಡಿದಾಗ ಎದ್ದು ಕಾಣಿಸುವುದು ರೈತರ ಪ್ರತಿಭಟನೆ. ಫೆಬ್ರವರಿ ೨೦೧೮ರಲ್ಲಿ ಶುರುವಾದ ಈ ಪ್ರತಿಭಟನೆ ವರುಷದುದ್ದಕ್ಕೂ ಮುಂದುವರಿಯಿತು. ಈರುಳ್ಳಿ, ಟೊಮೆಟೋ ಇತ್ಯಾದಿ ತರಕಾರಿಗಳನ್ನು ಟ್ರಾಕ್ಟರಿನಲ್ಲಿ ತಂದ ರೈತರು ಅವನ್ನು ರಸ್ತೆಗೆ ಚೆಲ್ಲಿದ್ದು; ಕ್ಯಾನುಗಟ್ಟಲೆ ಹಾಲನ್ನು ರಸ್ತೆಗೆ ಸುರಿದದ್ದು – ಇಂತಹ ಪ್ರತಿಭಟನೆಗಳು ಪತ್ರಿಕೆಗಳಲ್ಲಿ ಮತ್ತೆಮತ್ತೆ ವರದಿಯಾದವು. ಮಾರ್ಚ್ ೨೦೧೮ರಲ್ಲಿ ನಾಸಿಕದಿಂದ ಹೊರಟು, ಏಳು ದಿನಗಳಲ್ಲಿ ೧೮೦ ಕಿಮೀ...
5
ಲೇಖಕರು: SHABEER AHMED2
ವಿಧ: ಲೇಖನ
August 08, 2019 90
ಟಿಪ್ಪು ಜಯಂತಿಯ ವಿಷಯದಲ್ಲಿ ಇವತ್ತು ರಾಜ್ಯಾದ್ಯಂತ ವ್ಯಾಪಕವಾಗಿ ಚರ್ಚೆಗಳು ನಡೆಯುತ್ತಿವೆ. ಟಿಪ್ಪುವಿನ ಪರಾಕ್ರಮ ಗಳು ಕೇವಲ 'ಟಿಪ್ಪು ಜಯಂತಿ'ಗಷ್ಟೇ ಸೀಮಿತವೇ ? ಎಂಬುವುದರ ಬಗ್ಗೆ ಪರಾಮರ್ಶೆ ನಡೆಸುವ ಅಗತ್ಯವಿದೆ. ದೇಶಕ್ಕಾಗಿ ಸರ್ವಸ್ವವನ್ನೂ ತ್ಯಾಗ ‌ಮಾಡಿದ ಒಬ್ಬ ರಾಜನ ಆಚರಣೆ ಯನ್ನು ‌ಮಾಡುವುದರಲ್ಲಿ‌ ತಪ್ಪೇನಿದೆ ? ಎಂಬ ನಿಲುವು ನನ್ನದು. ಅದಕ್ಕಾಗಿ ಒಂದು ಲೇಖನವನ್ನು ಬರೆಯುವ ಇಚ್ಚೆಯಿದೆ. ನಾನು ಇಚ್ಚಿಸುವ 'ಶಹೀದೇ ಟಿಪ್ಪು'ವಿನ ಜೀವನ ಎಲ್ಲಾ ಗಳಿಗೆಗಳಿಗೂ ನನಗೆ ಪ್ರೇರಣೆಯಾಗಬೇಕು....
1
ಲೇಖಕರು: addoor
ವಿಧ: ಲೇಖನ
August 05, 2019 102
ಅದೊಂದು ಕಾಲವಿತ್ತು. ಜಗತ್ತಿನಲ್ಲಿ ಬೇರೆಲ್ಲಿಯೂ ಸುರಿಯದಷ್ಟು ಮಳೆ ಮೇಘಾಲಯದ ಚಿರಾಪುಂಜಿಯಲ್ಲಿ ಸುರಿಯುತ್ತಿತ್ತು. ಅದಕ್ಕೇ ಚಿರಾಪುಂಜಿಯ ಹೆಸರು ಗಿನ್ನೆಸ್ ರೆಕಾರ್ಡ್ ಪುಸ್ತಕದಲ್ಲಿ ದಾಖಲಾಗಿದೆ: ಒಂದು ಕ್ಯಾಲೆಂಡರ್ ವರುಷದಲ್ಲಿ ಜಗತ್ತಿನಲ್ಲಿ ಅತ್ಯಂತ ಜಾಸ್ತಿ ಮಳೆ ಬಿದ್ದ ಸ್ಥಳ - ಚಿರಾಪುಂಜಿ. ಆಗಸ್ಟ್ ೧೮೮೦ರಿಂದ ಜುಲೈ ೧೮೮೧ರ ವರೆಗೆ ಬಿದ್ದ ಮಳೆ ೨೨,೯೮೭ ಮಿಮೀ. ಗಿನ್ನೆಸ್ ಪುಸ್ತಕದಲ್ಲಿ ಇನ್ನೊಂದು ದಾಖಲೆಯೂ ಚಿರಾಪುಂಜಿಯ ಹೆಸರಿನಲ್ಲಿದೆ: ಒಂದೇ ದಿನದಲ್ಲಿ ಅತ್ಯಧಿಕ ಮಳೆ ಬಿದ್ದ ಸ್ಥಳ ಅದು...
5
ಲೇಖಕರು: kvcn
ವಿಧ: ಲೇಖನ
August 04, 2019 1 ಪ್ರತಿಕ್ರಿಯೆಗಳು 163
ನನ್ನ ಊರಿನ ಗಣ್ಯರಲ್ಲಿ ಒಬ್ಬರು ಸೈಕಲ್ ಶಾಪ್ ಇಟ್ಟುಕೊಂಡಿದ್ದ ಕೃಷ್ಣಪ್ಪನವರು. ಇವರು ನನ್ನ ಅಪ್ಪನಿಗಿಂತ ಹಿರಿಯರು, ನನ್ನ ಅಜ್ಜನ ಕಿರಿಯ ಸ್ನೇಹಿತರು. ಅವರ ಮಡದಿ ಲೀಲಕ್ಕ. ಇವರು ಮದುವೆ ಯಾದ ಹೊಸತರಲ್ಲಿ ನನ್ನ ಅಜ್ಜ ಇವರನ್ನು ಮನೆಗೆ ಊಟಕ್ಕೆ ಕರೆದಿದ್ದರಂತೆ. ಆಗಿನ್ನೂ ನನ್ನ ಅಪ್ಪನಿಗೆ ಮದುವೆ ಯಾಗಿರಲಿಲ್ಲ. ಆ ಕಾರಣದಿಂದಲೇ ಕೃಷ್ಣಪ್ಪಣ್ಣ ಮತ್ತು ಲೀಲಕ್ಕ ನನ್ನ ಅಮ್ಮನನ್ನು ಪ್ರೀತಿಯಿಂದ ಏಕವಚನದಲ್ಲೇ ಹೆಸರು ಹಿಡಿದು ಕರೆಯುತ್ತಿದ್ದರು. ಅಪ್ಪ ಅಮ್ಮ ಬಿಜೈಯಲ್ಲಿ ಸಂಸಾರ ಶುರು ಮಾಡಿದಾಗ...
5
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
August 03, 2019 209
ಸತ್ತೋರ ಮಕ್ಕಳು ಇದ್ದೋರ ಕಾಲ್ದಸೀಲಿ ಮೊದಲಿದ್ದವಳೇ ವಾಸಿ ಎಬ್ಬಿಸಿದರೆ ಉಣ್ಣೋಳು ಕದ್ದ ರೊಟ್ಟಿ ಬೇರೆ ದೇವರ ಪ್ರಸಾದ ಬೇರೆ. ಖೀರು ಕುಡಿದವ ಓಡಿಹೋದ, ನೀರು ಕುಡಿದವ ಸಿಕ್ಕಿಬಿದ್ದ. ಮಾನಿಷ್ಟರು ಮಾನಕ್ಕೆ ಅಂಜಿದರೆ ಮಾನಗೇಡಿ ತನಗೇ ಅಂಜಿದರು ಅಂದನಂತೆ ಆಟ ಕೆಟ್ಟರೆ ದೀವಟಿಗೆಯವನ ಸುತ್ತ ಲೇ ಅನ್ನಲು ಅವಳೇ ಇಲ್ಲ ಮಗನ ಹೆಸರು ಮುದ್ದುರ೦ಗ ಸಾವಿರ ಉಳಿ ಪೆಟ್ಟು,ಒಂದು ಚಿತ್ತಾರ ಮಂದ್ಯಾಗ ಮಚ್ಚೀಲೆ ಹೊಡೆದು ಸಂದ್ಯಾಗ ಕಾಲು ಹಿಡಿದರು ಪಾಂಡವರು ಪಗಡೆಯಾಡಿ ಕೆಟ್ಟರು ; ಹೆಣ್ಣುಮಕ್ಕಳು ಕವಡೆಯಾಡಿ...
4.5

Pages