ಎಲ್ಲ ಪುಟಗಳು

ಲೇಖಕರು: kavinagaraj
ವಿಧ: ಲೇಖನ
May 23, 2018 47
ಯತ್ರ ಬ್ರಹ್ಮ ಚ ಕ್ಷತ್ರಂ ಚ ಸಮ್ಯಂಚೌ ಚರತಃ ಸಹ | ತಲ್ಲೋಕಂ ಪುಣ್ಯಂ ಪ್ರಜ್ಞೇಷಂ ಯತ್ರ ದೇವಾಃ ಸಹಾಗ್ನಿನಾ || (ಯಜು.೨೦.೨೫.)      'ಎಲ್ಲಿ ಬ್ರಾಹ್ಮಿಶಕ್ತಿ ಮತ್ತು ಕ್ಷಾತ್ರಶಕ್ತಿಯು ಒಂದಕ್ಕೊಂದು ಆಶ್ರಯ ನೀಡುತ್ತಾ ಒಟ್ಟಿಗೆ ಪ್ರವೃತ್ತವಾಗುತ್ತವೋ, ಎಲ್ಲಿ ಉದಾರಾಶಯರೂ, ಸತ್ಯಮಯರೂ, ಪವಿತ್ರಚಾರಿತ್ರರೂ ಆದ ವಿದ್ವಜ್ಜನರು, ರಾಷ್ಟ್ರನಾಯಕನೊಂದಿಗೆ ಸಹಕರಿಸಿ ನಡೆಯುತ್ತಾರೋ, ಆ ಲೋಕವನ್ನೇ ಪುಣ್ಯಶಾಲಿ ಎಂದು ತಿಳಿಯುತ್ತೇನೆ' ಎಂಬುದು ಈ ಮಂತ್ರದ ಅರ್ಥ. ಇಲ್ಲಿ ಬ್ರಾಹ್ಮಿಶಕ್ತಿ ಮತ್ತು...
0
ಲೇಖಕರು: shreekant.mishrikoti
ವಿಧ: ಬ್ಲಾಗ್ ಬರಹ
May 22, 2018 179
ಒಬ್ಬ‌ ರಾಜ‌ , ಅವನಿಗೆ ಇಬ್ಬರು ಮಕ್ಕಳು . ಅವರಲ್ಲಿ ಅವನಿಗೆ ತುಂಬ‌ ಪ್ರೀತಿ . ಅವರ‌ ತಾಯಿ , ಅಂದರೆ ಹಿರಿಯ‌ ರಾಣಿ ಸತ್ತು ಹೋದಳು . ಆಮೇಲೆ ಆ ರಾಜ‌ ಇನ್ನೊಂದು ಮದುವೆ ಆದ‌ . ಅವಳಿಗೂ ಒಬ್ಬ‌ ಮಗ‌ ಹುಟ್ಟಿದ‌ . ರಾಜನಿಗೆ ಸಂತೋಷ‌ ಆಗಿ ಆ ಕಿರಿಯ‌ ರಾಣಿಗೆ ಏನು ಬೇಕೋ ಕೇಳಿಕೋ ಅಂದ‌ . ಅವಳು ಈಗ‌ ಬೇಡ‌ ಸಮಯ‌ ಬಂದಾಗ‌ ಕೇಳುವೆ ಎಂದು ಹೇಳಿ ಇಟ್ಟಳು. ಮುಂದೆ ಆ ಮಕ್ಕಳೆಲ್ಲ‌ ಬೆಳೆದು ದೊಡ್ಡವರಾದಾಗ‌ ಆ ತನ್ನ‌ ಮಗನನ್ನೇ ರಾಜನನ್ನಾಗಿ ಮಾಡುವಂತೆ ಹಟ‌ ಹಿಡಿದಳು . ( ಈ ಕತೆ ರಾಮಾಯಣದ್ದು, ನಮಗೆಲ್ಲ...
4
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
May 20, 2018 175
ಅಂದ ಚಂದದ ಬಂಡಿ ನವರಸದ ಬಂಡಿ ಮೈಮರೆಸಿ ಕಣ್ತಣಿಸಿ ಚಿಮ್ಮಿ ಹಾರುವ ಬಂಡಿ | ಬಂಡಿ ತಾ ಓಡುವುದು ತನ್ನಿಚ್ಛೆಯಿಂದಲ್ಲ ಬಂಡಿಯೋಡುವುದು ನಿನಗಾಗಿ ಮೂಢ || 
5
ಲೇಖಕರು: addoor
ವಿಧ: ಲೇಖನ
May 20, 2018 1 ಪ್ರತಿಕ್ರಿಯೆಗಳು 73
ಎಲ್ಲರೊಳು ತಾನು ತನ್ನೊಳಗೆಲ್ಲರಿರುವವೋ ಲೆಲ್ಲಿಲ್ಲಿಯುಂ ನೋಡಿ ನಡೆದು ನಗುತಳುತ ಬೆಲ್ಲ ಲೋಕಕ್ಕಾಗಿ ತನಗೆ ತಾಂ ಕಲ್ಲಾಗ ಬಲ್ಲವನೆ ಮುಕ್ತನಲ - ಮಂಕುತಿಮ್ಮ ಎಲ್ಲದರಿಂದ ಎಲ್ಲರಿಂದ ಮುಕ್ತನಾಗಬಲ್ಲವನು ಯಾರು ಎಂಬ ಪ್ರಶ್ನೆಗೆ ಈ ಮುಕ್ತಕದಲ್ಲಿ ಉತ್ತರ ನೀಡಿದ್ದಾರೆ ಮಾನ್ಯ ಡಿ.ವಿ.ಗುಂಡಪ್ಪನವರು. ಅಂತಹ ವ್ಯಕ್ತಿಯ ಮೂರು ಗುಣಗಳನ್ನು ಅವರು ವಿವರಿಸಿದ್ದಾರೆ. ಮೊದಲಾಗಿ ಆ ವ್ಯಕ್ತಿಗೆ ಎಲ್ಲರಲ್ಲಿಯೂ ತಾನು ಮತ್ತು ತನ್ನಲ್ಲಿ ಎಲ್ಲರೂ ಇದ್ದಾರೆ ಎಂಬ ರೀತಿಯಲ್ಲಿ ಬದುಕಲು ಸಾಧ್ಯವಾಗಬೇಕು....
4.666665
ಲೇಖಕರು: kavinagaraj
ವಿಧ: ಲೇಖನ
May 18, 2018 91
ಸಿಕ್ಕಾಗ ಸಮಯವನು ತಕ್ಕಾಗಿ ಬಳಸಿದೊಡೆ ಸಿಕ್ಕದುದು ಸಿಕ್ಕುವುದು ದಕ್ಕದುದು ದಕ್ಕುವುದು | ಕಳೆಯಿತೆಂದರೆ ಒಮ್ಮೆ ಸಿಕ್ಕದದು ಜಾಣ ಕಾಲದ ಮಹತಿಯಿದು ಕಾಣು ಮೂಢ ||      'ನಿನ್ನೆ ಕಾರ್ಯಕ್ರಮ ಎಷ್ಟು ಚೆನ್ನಾಗಿತ್ತು ಗೊತ್ತಾ? ನೀನು ಯಾಕೋ ಬರಲಿಲ್ಲ?' ಎಂಬ ಪ್ರಶ್ನೆಗೆ ಅವನು ಉತ್ತರಿಸಿದ್ದ, 'ಏನ್ ಮಾಡಲೋ? ನನಗಂತೂ ಒಂದ್ ನಿಮಿಷಾನೂ ಪುರುಸೊತ್ತೇ ಇರಲ್ಲ.' ಆದರೆ ನಿಜವಾದ ಸಂಗತಿಯೆಂದರೆ ಕಾರ್ಯಕ್ರಮ ನಡೆದ ಸಮಯದಲ್ಲಿ ಆತ ತನ್ನ ಗೆಳೆಯನೊಂದಿಗೆ ಬಾರಿನಲ್ಲಿ ಕುಡಿಯುತ್ತಾ ಕುಳಿತಿದ್ದ. ಹಾಗಾಗಿ...
4.6
ಲೇಖಕರು: addoor
ವಿಧ: ಲೇಖನ
May 18, 2018 74
ಹೂಗಳು ಬಾಡುವುದನ್ನು ನಿಧಾನಗೊಳಿಸುವ ವಿಧಾನ ಶೋಧಿಸಿರುವುದಾಗಿ ಜಪಾನಿನ ವಿಜ್ನಾನಿಗಳು ಘೋಷಿಸಿದ್ದಾರೆ. ಇದರಿಂದಾಗಿ, ಹೂಗಳು ದೀರ್ಘ ಸಮಯ ತಾಜಾ ಆಗಿರಲು ಸಾಧ್ಯ. ಇದನ್ನು ಶೋಧಿಸಿದವರು ಟೋಕಿಯೋದ ಪೂರ್ವದ ಸುಕುಬಾದಲ್ಲಿರುವ ರಾಷ್ಟ್ರೀಯ ಕೃಷಿ ಮತ್ತು ಆಹಾರ ಸಂಶೋಧನಾ ಸಂಸ್ಥೆಯ ಸಂಶೋಧಕರು. “ಮಾರ್ನಿಗ್ ಗ್ಲೋರಿ”  ಹೂವಿನ ಒಂದು ಜಪಾನಿ ತಳಿಯ ಅಲ್ಪಕಾಲದ ಅರಳುವಿಕೆಗೆ ಕಾರಣವಾದ ಜೀನನ್ನು ಪತ್ತೆ ಮಾಡಿರುವುದಾಗಿ ಅವರು ತಿಳಿಸಿದ್ದಾರೆ. ಮುಂಜಾನೆ ಅರಳಿ ಸಂಜೆ ಬಾಡಿ ಹೋಗುವ ಈ ಜನಪ್ರಿಯ ಹೂಗಳ ಹೆಸರು...
5
ಲೇಖಕರು: kavinagaraj
ವಿಧ: ಬ್ಲಾಗ್ ಬರಹ
May 16, 2018 509
ಕುಜನ ಮರ್ದನಕಾಗಿ ಸುಜನ ರಕ್ಷಣೆಗಾಗಿ ದೇವ ಬಂದಾನೆಂದು ಕಾತರಿಸಿ ಕಾಯುವರು | ಎಂದೆಂದು ಇರುವವನು ಹೊಸದಾಗಿ ಬರುವನೆ ಅವನೆ ನಿನ್ನೊಳಗಿಹನು ಕಾಣು ಮೂಢ || 
5
ಲೇಖಕರು: kavinagaraj
ವಿಧ: ಲೇಖನ
May 16, 2018 108
    ರಾಕ್ಷಸ ಎಂದಾಕ್ಷಣ ನಮ್ಮ ಕಣ್ಣ ಮುಂದೆ ಬರುವ ಚಿತ್ರವೆಂದರೆ ದೈತ್ಯಾಕಾರದ ದೇಹ, ಭೀಭತ್ಸ ರೂಪ, ಡೊಳ್ಳು ಹೊಟ್ಟೆ, ಹೊರಚಾಚಿರುವ ಕೋರೆ ಹಲ್ಲುಗಳು, ತಲೆಯ ಮೇಲೆ ಕೊಂಬುಗಳು, ಕೈಯಲ್ಲಿ ಅಪಾಯಕಾರಿ ಆಯುಧಗಳು, ಬೇಕಾದ ರೂಪ ಧರಿಸುವ ಶಕ್ತಿ ಇರುವನು, ರಕ್ತಪಿಪಾಸು ಎಂಬಂತೆ. ಪುರಾಣಗಳಲ್ಲಿ, ಜಾನಪದ ಕಥೆಗಳಲ್ಲಿ ಬರುವ ರಾಕ್ಷಸರ ಚಿತ್ರಣವೂ ಹೀಗೆಯೇ ಇರುತ್ತದೆ. ಅವರು ಹೇಗಾದರೂ ಇರಲಿ, ರಾಕ್ಷಸರು ಎಂದಾಕ್ಷಣ ಅವರು ಕೆಟ್ಟವರು ಎಂಬ ಭಾವವಂತೂ ಮೂಡಿಬಿಡುತ್ತದೆ. ರಾಕ್ಷಸರು ನಿಜವಾಗಿ ಹೀಗಿರುತ್ತಾರೆಯೇ...
4.666665

Pages