Error message

User warning: The following module is missing from the file system: flowplayer. In order to fix this, put the module back in its original location. For more information, see the documentation page. in _drupal_trigger_error_with_delayed_logging() (line 1128 of /home/sshadmin/projects/drupal7/htdocs/includes/bootstrap.inc).

೪ನೆಯ ಸಂಚಿಕೆ: ಭಾಷಾ ತಜ್ಞ ಲಿಂಗದೇವರು ಹಳೆಮನೆಯವರೊಂದಿಗೆ

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಸಂಪದದ ಗೆಳೆಯರಿಗಾಗಿ ಈ ಬಾರಿ ಲಿಂಗದೇವರು ಹಳೆಮನೆಯವರ ಸಂದರ್ಶನ.
ಶ್ರೀ ಹಳೆಮನೆಯವರು ೧೯೭೩ರಿಂದ ಮೈಸೂರಿನ ಕೇಂದ್ರೀಯ ಭಾಷಾ ಸಂಸ್ಥೆ, ಸೆಂಟ್ರಲ್ ಇನ್ಸ್‌ಟಿಟ್ಯೂಟ್ ಆಫ್ ಇಂಡಿಯನ್ ಲಾಂಗ್ವೇಜಸ್ ನಲ್ಲಿ
ಸೇವೆ ಸಲ್ಲಿಸುತ್ತಿದ್ದಾರೆ. ಕನ್ನಡದ ಪ್ರಮುಖ ನಾಟಕಕಾರ, ಸಾಂಸ್ಕೃತಿ ಚಿಂತಕ, ಅಂಕಣಕಾರ, ಭಾಷಾ ತಜ್ಞ ಹಳೆಮನೆಯವರು ಈ ಸಂದರ್ಶನದಲ್ಲಿ
೧.ಕನ್ನಡ ಶಾಸ್ತ್ರೀಯ ಭಾಷೆ
೨. ಕನ್ನಡದ ರಂಗಭೂಮಿ
೩. ಅನ್ಯಭಾಷಿಕರಿಗಾಗಿ ಕನ್ನಡ ಕಲಿಸುವ ಕೆಲಸ
೪. ಜಾಗತೀಕರಣ
ಈ ಸಂಗತಿಗಳ ಬಗ್ಗೆ ನಮ್ಮೊಡನೆ ಸಂವಾದ ನಡೆಸಿದ್ದಾರೆ.
ಶ್ರೀ ಹಳೆಮನೆಯವರು ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ, ಹಾಮಾನಾ ಪ್ರಶಸ್ತಿ ಮತ್ತು ಕೆವಿ ಸುಬ್ಬಣ್ಣ ಪ್ರಶಸ್ತಿಗಳಿಂದ ಪುರಸ್ಕೃತರಾಗಿದ್ದಾರೆ. ಭಾಷಾ ತಜ್ಞರಾಗಿ
ಜರ್ಮನಿಯ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮಾತುಗಳು ಚರ್ಚೆ, ಸಂವಾದಗಳಿಗೆ ಅರ್ಹವಾಗಿವೆ.

 /> ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (25 MB)

ಚಿತ್ರ: ಗೋವಿಂದ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತುಂಬಾ ಚೆನ್ನಾಗಿ ಬಂದಿದೆ ಸ್ವಾಮಿ. ಕ್ಲಾಸಿಕಲ್ ಭಾಷೆಯ ಬಗೆಗೆ 1000 ವರ್ಷ ಪ್ರಾಚೀನ ಎಂಬುದನ್ನು 1500 ವರ್ಷಕ್ಕೆ ಬದಲಾಯಿಸಿದ್ದು ಏನು ತೋರಿಸುತ್ತದೆ?
ರಾಷ್ಟ್ರೀಯ ರಂಗಭೂಮಿ ಎಂಬುದೊಂದಿಲ್ಲ, ಇರುವುದೆಲ್ಲಾ ಪ್ರಾದೇಶಿಕ ರಂಗಭೂಮಿಗಳೇ ಎಂದು ಬಿ ವಿ ಕಾರಂತರು ವಾದಿಸಿದ್ದರು. ಈ ಬಗೆಗೆ ಹಳೆಮನೆಯವರನ್ನೂ ಒಳಗೊಂಡು ಹಲವರು `ಬೆಂಗಳೂರಿನಲ್ಲಿ ರಾಷ್ಟ್ರೀಯ ನಾಟಕ ಶಾಲೆ`ಸ್ಥಾಪಿಸುವ ಬಗೆಗೆ ಒತ್ತಾಯಿಸಿದ್ದಾರೆ. (ಪ್ರಜಾವಾಣಿ ತಾ ಜನವರಿ 15,2006).

ಇಂತಹ ಉತ್ತಮ ಸಂದರ್ಶನ ಒಂದನ್ನು ನೀಡಿದಕ್ಕೆ ಸಂಪದ ಬಳಗಕ್ಕೆ ಧನ್ಯವಾದಗಳು.
ಈ ಬಗೆಗೆ ಒತ್ತಾಯ ಎಲ್ಲರದೂ ಆಗಬೇಕಿದೆ.

ಲಿಂಗದೇವರು ಹಳೆಮನೆಯವರ ಬಗ್ಗೆ ನಾನು ಕೇಳಿರಲಿಲ್ಲ. ಅವರೊಂದಿಗಿನ ಸಂದರ್ಶನ ಕೇಳಿದೆ. ಅವರ ಮಾತುಗಳು ಸಮರ್ಪಕವಾಗಿದೆ. ಕನ್ನಡ ಭಾಷೆಯ ಬಗ್ಗೆ, ಕಲೆಯ ಬಗ್ಗೆ ತಿಳಿಯದ ಎಷ್ಟೋ ಮಾಹಿತಿಗಳನ್ನು ತಿಳಿಸಿದ್ದಾರೆ. ಕನ್ನಡ ಕಲಿಕೆಯಲ್ಲಿ ಒಳ್ಳೆಯ ಕೆಲಸವನ್ನು ಮಾಡುತ್ತಿದ್ದಾರೆ. ಇವರ ಕಾರ್ಯಗಳಿಗೆ ಯಾವ ಪ್ರಶಸ್ತಿಯನ್ನಿತ್ತರೂ ಕಡಿಮೆಯೇ! ಇಂತಹ ಇನ್ನೂ ಸಹಸ್ರಾರು ಕನ್ನಡಿಗರ ಅವಶ್ಯಕತೆ ಇದೆ.

ಸಂದರ್ಶಕರು ಯಾರು - ಇಸ್ಮಾಯಿಲ್ ಅವರಾ? ಅಥವಾ ಓ ಎಲ್ ಎನ್ ಅವರಾ?

ಒಳ್ಳೆಯ ಸಂದರ್ಶನ - ಇದರ ಹಿಂದೆ ಕೈ ಆಡಿಸಿರುವ ಎಲ್ಲರಿಗೂ ಅಭಿನಂದನೆಗಳು

ವಂದನೆಗಳೊಂದಿಗೆ
---
ತವಿಶ್ರೀನಿವಾಸ
[:http://asraya.net]