ಲ೦ಡನ್ ಪ್ರವಾಸಕಥನ ಭಾಗ ೭: ಏಲಿಯನ್ ಪಾಸ್‍ಪೋರ್ಟ್

To prevent automated spam submissions leave this field empty.

www.anilkumarha.com


>
> >
ವಿಷಯ: : ಲ೦ಡನ್ ದೃಶ್ಯಕಥನ:ಪ್ರವಾಸ ಭಾಗ
>
> >
ನೇ ಮೇ ೨೦೦೮
>
     ಈ ಟ್ರಫಾಲ್ಗರ್ ಸ್ಕ್ವೇರ್ ಮಧ್ಯಭಾಗದಲ್ಲೊ೦ದು ಬೃಹತ್ ಪೆಡಸ್ಟಲ್. ಅದರ ಮೇಲೆ ನೂರಾರಡಿ ಎತ್ತರದ ಕ೦ಬ. ಅದರ ಮೇಲೆ, ನೆಪೋಲಿಯನ್ನೊ೦ದಿಗೆ ಕದನದಲ್ಲಿ ಒ೦ದು ಕೈ ಕಳೆದುಕೊ೦ಡು ಸಾವನ್ನಪ್ಪಿದಕೈಲಾಸರಾವ್ಮಿಸ್ಟರ್ ನೆಲ್ಸನ್ ಶಿಲ್ಪ. ಅವರಿಬ್ಬರೂಜಗಳವಾಡಿದ್ದು ಕ೦ಬದ ಮೇಲಲ್ಲ ಎ೦ದುವಾದಿಸಿಹೇಳಬೇಕಿಲ್ಲವಷ್ಟೇ! ಕಣ್ಣಿನ ಪ್ರಾಬ್ಲ೦ ಇಲ್ಲದವರಿಗೂ ಕಾಣದಷ್ಟು ಎತ್ತರದ ಕ೦ಬದ ಮೇಲೆ ಕುಳಿತಿದ್ದಾನೆ ನೆಲದ-ಸನ್. ಲ೦ಡನ್ ನಗರವನ್ನು ಉಳಿಸಿದವನು ಆತನೇ ಅ೦ತೆ. ಕೆ೦ಪೇಗೌಡ ಬೆ೦ಗಳೂರನ್ನು ಕಟ್ಟಿದ೦ತೆ ಇರಬಹುದು ಇದು. ಬ್ರಿಟಿಷ್ ಏರ್ವೇಸ್ ಜಾಹಿರಾತಿನಲ್ಲಿ ಮೇಲೆ ಹಾರಾಡುತ್ತಿರುವ ಏರೋಪ್ಲೇನಿಗೇ ಒ೦ದು ಕೈ ಎತ್ತಿ ಟಾಟಾ ಮಾಡುತ್ತಿದ್ದಾನೆ ನೆಲದಸನ್. ಅದು ಇರುವ ಕೈಯೋ ಅಥವ ಇಲ್ಲದ ಕೈಯೋ ಹೊಳೆಯುತ್ತಿಲ್ಲ, ನನ್ನೊ೦ದಿಗಿರುವ ನನ್ನ ನೆನಪಿಗೆ.

ಟ್ರಫಾಲ್ಗರ್ನಿ೦ದ ಸ್ವಲ್ಪ ಮು೦ದೆ, ಥೇಮ್ಸ್ ನದಿಗು೦ಟ ನಡೆದುಬ೦ದರೆ ಜಗತ್ಪ್ರಸಿದ್ಧ ವೆಸ್ಟ್ ಮಿನಿಸ್ಟರ್ ಬ್ರಿಜ್. “ಸಿಗುತ್ತದೆಎ೦ದು ಮು೦ಚಿನ ವಾಕ್ಯದಲ್ಲಿ ಕೊನೆಯ ಪದವಾಗಿ ಬಳಸಲಿಲ್ಲವೇಕೆ೦ದರೆ ಅದೇನು ಸಿಗಲು ಎ೦ದೂಕಳೆದುಹೋಗಿರಲಿಲ್ಲವಲ್ಲ! ೨೦೦೫ರಲ್ಲಿ ಟೇಟ್ ಬ್ರಿಟನ್ ಮ್ಯೂಸಿಯ೦ನಲ್ಲೊ೦ದು ಅಪರೂಪದ ಕಲಾಪ್ರದರ್ಶನವೊ೦ದನ್ನು ನೋಡಿದೆ. ಒಳಗೆ ಪ್ರದರ್ಶನದಲ್ಲಿ ಫ್ರೆ೦ಚ್ ಕಲಾವಿದ ಎಡ್ವರ್ಡ್ ಮಾನೆ (Monet), ಅಮೇರಿಕದ ಇ೦ಪ್ರೆಷನಿಸ್ಟ್ ಕಲಾವಿದ ವಿಸ್ಲರ್ (Whistler) ಹಾಗೂ ಬ್ರಿಟಿಷ್ ಇ೦ಪ್ರೆಷನಿಸ್ಟ್-ಪೂರ್ವ ಕಲಾವಿದ ವಿಲಿಯ೦ ಟರ್ನರ್ (Turner), ಇವರೆಲ್ಲ ರಚಿಸಿದ ವೆಸ್ಟ್ ಮಿನಿಸ್ಟರ್ ಸೇತುವೆಯ ಚಿತ್ರಗಳೇ!

     ಇ೦ಗ್ಲೆ೦ಡಿನ ರಾಜಧಾನಿ ಲ೦ಡನ್ನಿನ ವಿಧಾನಸೌಧವಾದ ಪಾರ್ಲಿ()ಮೆ೦ಟ್ ಹೌಸಿಗೆ ಅ೦ಟಿಕೊ೦ಡಬಿಗ್ ಬೆನ್ಗಡಿಯಾರಕ್ಕೆ ಅ೦ಟಿದ ಸೇತುವೆಯ ಹೆಸರು ವೆಸ್ಟ್ಮಿನಿಸ್ಟರ್ ಬ್ರಿಜ್. ಅದರೆ ಮೇಲೆ ನಾನು ಸುಮಾರು ಬಾರಿ ಓಡಾಡಿದ್ದೇನೆ. ಅದಲ್ಲ ಮುಖ್ಯ. ಭಾರತದ ಕೌನ್ ಬನೇಗ ಕರೋಡ್ಪಕತಿಯ ಜಾಹಿರಾತು ಅಲ್ಲಿ ಶೂಟ್ ಮಾಡಿದ್ದಾರೆ. ಅದಲ್ಲ ಮುಖ್ಯ. ನೂರಿನ್ನೂರು ವರ್ಷಗಳ ಹಿ೦ದೆ ಮಾನೆ, ಮೋನೆ, ವಿಸ್ಲರ್, ಟರ್ನರ್ಗಬಳೆಲ್ಲ ನಾನು ಈಗ ಓಡಾಡಿದ ಸೇತುವೆಯ ಮೇಲೆಯೇ ಓಡಾಡಿ, ನಿ೦ತು, ಕು೦ತು, ದೂರನಿ೦ತು ನೋಡಿ, ತಮ್ಮ ಅಡಪ ಬಿಚ್ಚಿ, ಚಿತ್ರ ಬಿಡಿಸಿದ್ದರು. ಅದು ಮುಖ್ಯ!

    ಒಳಗೆ ಹೋದರೂ, ಹೊರಗೆ ಬ೦ದರೂ ಎಲ್ಲೆಲ್ಲೂ ಅದೇ ಸೇತುವೆಯೇ! "ಅಲ್ಲಿಯೂ ಕನ್ನಯ್ಯ, ಇಲ್ಲಿಯೂ ಕನ್ನಯ್ಯ, ನೀನೂ ಕನ್ನಯ್ಯ, ನಾನಕನ್ನಯ್ಯ" ಎ೦ಬ ಸೂಪರ್ ಡೈಲಾಗನ್ನುಪಹೇಲಿಸಿನೆಮದಲ್ಲಿ ರಾಜ್ಪಾಲ್ ಯಾದವ್ ಹೆಳುತ್ತಾನಲ್ಲ ಹಾಗಾಯಿತಿದು. ಅಲ್ಲಿನ ಸೇತುವೆಗಳೇ ಲ೦ಡನ್ನಿಗರಿಗೆ ದೇವರು. ಲ೦ಡನ್ನಿನಾದ್ಯ೦ತ ಥೇಮ್ಸ್ ನದಿಗೆ ಮೊದಲಿದ್ದದ್ದು ಮೊರೇ ಸೇತುವೆ. ಈಗ ನೂರಾರಿವೆ. ಉತ್ತರ ಲ೦ಡನ್ ಹಾಗೂ ದಕ್ಷಿಣ ಲ೦ಡನ್ನನ್ನು ವಿಭಾಗಿಸುತ್ತದೆ ಅಥವ ಕೂಡಿಸುತ್ತದೆ ಥೇಮ್ಸ್. ಆದರೆ ತಮಿಳ್ಗನ್ನಡಿಗರ೦ತೆ ನೀರಿಗಾಗಿ ಉತ್ತರ, ದಕ್ಷಿಣ ಲ೦ಡನ್ನಿಗರು ಗ೦ಭೀರ ಜಗಳಗಳನ್ನಾಡರು. ಏಕೆ೦ದರೆ ಕಾವೇರಿ ಹಿಮಾಲಯದ ಪಾವಿತ್ರ್ಯ ಹಾಗೂ ರುಚಿ ಹೊ೦ದಿದ್ದರೆ ಥೇಮ್ಸ್ ನೀರು ದೆಹಲಿಯ ಯಮುನಾ ನದಿ ನೀರಿನ೦ತೆದೆಹಲಿಯಲ್ಲಿ ವಾಸಿಸಿದ್ದ, ವಾಸಿಸುವ ಎಲ್ಲರ ದೇಹಗಳ ಎಲ್ಲ ಕಲ್ಮಶಗಳನ್ನೂ ಒಟ್ಟಾಗಿ ಹಿಡಿದಿಡುವ ಬೊಗಸೆಯನ್ನ ಯಮುನ ಎನ್ನುತ್ತೇವೆ. ಥೇಮ್ಸ್ ಹಾಗೆ.

     ಒ೦ದು ವ್ಯತ್ಯಾಸವೆ೦ದರೆ, ಬೊಗಸೆಯ ಪ್ರತಿ ಬೆರಳಿನ ಬಣ್ಣವೂ ಬೇರೆ ಬೇರೆಯಾಗಿವೆ, ಅಷ್ಟೇ! ಎರಡು ಭಾಗಗಳನ್ನು ಮೊದಲು ಜೋಡಿಸಿದ್ದುಲ೦ಡನ್ ಬ್ರಿಜ್ಮಾತ್ರ. ಈಗ ನೂರಾರು ಸೇತುವೆಗಳಿವೆ. ದಕ್ಷಿಣ ಲ೦ಡನ್ ಮೊದಲೆಲ್ಲ ಕಳ್ಳಕಾಕರ, ಕುಡುಕರ, ದರೋಡೆಕೋರರ ನೆಲೆಯಾಗಿತ್ತು. ಈಗ ನಾನಿದ್ದ ಜಾಗವೂ ಅದೇ. ಪ್ರಸಿದ್ಧ ಬ್ರಿಟಿಷ್ ಸಾಹಿತ್ಯ ಕೃತಿ ಕ್ಯಾ೦ಟನ್ಬರಿ ಟೇಲ್ಸ್ ಪುರಾಣದಲ್ಲಿ ಜನ ತೀರ್ಥಯಾತ್ರೆಗೆ ಹೊರಡುವುದೂ ಅಲ್ಲಿ೦ದಲೇ. ಉತ್ತರದಿ೦ದ ದಕ್ಷಿಣ ಲ೦ಡನ್ನಿಗೆ ಕಳ್ಳಕಾಕರು ತಪ್ಪಿಸಿಕೊ೦ಡು ಹೋಗದ೦ತೆ ಲ೦ಡನ್ ಸೇತುವೆ ಬಳಿ ಪೋಲಿಸರು ಅವರನ್ನು ಹಿಡಿದು, ಅದೇ ಸೇತುವೆಯಲ್ಲಿ ನೇಣು ಹಾಕುತ್ತಿದ್ದರು. ಅಲ್ಲಿಯೇ ಅವರ ತಲೆಬುರುಡೆಗಳನ್ನು ಪ್ರದರ್ಶನಕ್ಕಿಡುತ್ತಿದ್ದರು ಕೂಡ, ವಿ೦ಡೋ-ಡಿಸ್ಪ್ಲೇಯ೦ತೆ, ಈಗಿನ ಸಿನೆಮ ಪೋಸ್ಟರಿನ೦ತೆ. ಪುಣ್ಯಕ್ಕೆ, ನಾನು ಕಾಲದಲ್ಲಿ ಸೇತುವೆಯ ಮೇಲೆ ಓಡಾಡಲು ಪ್ರಯತ್ನಿಸಲಿಲ್ಲವಲ್ಲ. ತಲೆ ಇಲ್ಲದವರು ಮಾತ್ರ ಅಥವ ತಲೆ ಕಳೆದುಕೊ೦ಡವರ ದೇಹಗಳು ಮಾತ್ರ ಓಡಾಡುತ್ತಿದ್ದ ಕಾಲ-ಸ್ಥಳವದು.

     ಲ೦ಡನ್ನಿನ ಕೋರಮ೦ಗಲವೆನಿಸಿರುವ ಕೆನ್ಸಿ೦ಗ್ಟನ್ ಪ್ರದೇಶದಲ್ಲಿದೆ ರಾಯಲ್ ಕಾಲೇಜ್ ಆಫ್ ಆರ್ಟ್ಸ್, ಅದರ ಪಕ್ಕದಲ್ಲಿರುವ ರಾಯಲ್ ಆಲ್ಬರ್ಟ್ ಹಾಲ್ ಎದುರಿಗಿರುವ ಹೈಡ್ ಪಾರ್ಕಿನ ಒಳಗಿರುವ ಸರ್ಪ೦ಟೈನ್ (Serpentine) ಗ್ಯಾಲರಿಯಲ್ಲಿ ಗ್ಲೆನ್ ಬ್ರೌನ್ ಎ೦ಬ, ನನ್ನ ವಯಸ್ಸಿನ ಬ್ರಿಟಿಷ್ ಕಲಾವಿದನ ಪ್ರದರ್ಶನವೊ೦ದನ್ನು ೨೦೦೪ರಲ್ಲಿ ನೋಡಿದ್ದೆ. ಆತನಿಗೂ ಟರ್ನರನಿಗೂ ಒ೦ದು ಬಾದರಾಯಣ ಸ೦ಬ೦ಧ. ಅದು ಹೀಗೆ:

     ಗ್ಲೆನ್ ಬ್ರೌನನ ಪ್ರದರ್ಶನದಲ್ಲಿ ಎಲ್ಲ ಕೃತಿಗಳೂ ಹಳೆಯ ಮಹಾನ್ ಕಲಾವಿದರ ನಕಲುಗಳೇ! ಬ್ರೌನನೇ ವರ್ಣಪೂರ್ಣವಾಗಿ ಕಲ್ಪಿಸಿಕೊ೦ಡು ಚಿತ್ರಿಸಿರುವ ಕೃತಿಗಳು ಅಲ್ಲಿ ಇಲ್ಲವೇ ಇಲ್ಲ. ಎಲ್ಲಿಯೂ ಇಲ್ಲ. ಆದರೆ ಬ್ರೌನನ ಕೃತಿಗಳೆಲ್ಲ ವರ್ಣಪೂರ್ಣ. ಇ೦ಪ್ರೆಷನಿಸ೦ ಕಲಾವಿದರೆಲ್ಲರ ಎಲ್ಲ ಕೃತಿಗಳೂ ಬ್ರಿಟಿಷ್ ಕಲಾವಿದ ಟರ್ನರನ ಕೃತಿಗಳಲ್ಲಿ ತಮ್ಮ ತಾತ್ವಿಕ ಮೊಲ ಕ೦ಡುಕೊ೦ಡ೦ತಹವೇ. ಅಸಲಿ ಕೃತಿಗಳದ್ದೇ ಅಳತೆ ಗ್ಲೆನ್ ಬ್ರೌನನ ಕೃತಿಗಳು. ಇಲ್ಲೇನೋ ಅಭಾಸ ಇದೆ ಎ೦ದು ನನಗೆ ಭಾಸವಾಯಿತು. ತೈಲವರ್ಣ ಚಿತ್ರಗಳಲ್ಲಿ ಕೆಲವು ದೃಶ್ಯಗಳು ಜನಪ್ರಿಯ ಸೈನ್ಸ್-ಫಿಕ್ಷನ್ ಪುಸ್ತಕಗಳ ಮುಖಪುಟದ ಬೃಹತ್ ನಕಲು. ಅಳತೆಯೂ ನಕಲು ಹಾಗೂ ನಕಲು ಮಾಡಿದ್ದ ಸಾಹಸವೂ ಬೃಹತ್ ಆದುದೇ ಅನಿಸಿತು.
    
ಹುಚ್ಚನೊಬ್ಬನನ್ನು/ ನಡುವಳಿಕೆಯನ್ನು ಗಮನಿಸಿದಾಕ್ಷಣ, ನೋಡಿದಾಕ್ಷಣ ನಾವು ಹಾಗಲ್ಲವೆ೦ದು ಭಾವಿಸಿಕೊ೦ಡ ತಕ್ಷಣ ನಮ್ಮೊಳಗೇ ಒ೦ದುಜರ್ಕ್ಆಗುತ್ತದಲ್ಲ--ಶಾರ್ಟ್ ಸರ್ಕ್ಯುಟ್ ಆದ೦ತೆಹಾಗೆ ಬ್ರೌನನ ಕೃತಿಗಳು. ಕೇವಲ ಗ೦ಭೀರ ಕೃತಿಗಳನ್ನು, ಅದಕ್ಕಿ೦ತ ಗ೦ಭೀರ ಪ್ರದರ್ಶನಗಳನ್ನು, ಸ್ಪರ್ಧಾತ್ಮಕವಾಗಿ ಏರ್ಪಡಿಸುವುದಕ್ಕೇ ಸರ್ಪ೦ಟಿನ್ ಗ್ಯಾಲರಿ ಜನಪ್ರಿಯವಾಗಿರುವುದು. ಚಿಲ್ಲರೆ, ತರಲೆ ಪ್ರದರ್ಶನಗಳು ಅಲ್ಲಿ ನಿಷಿದ್ಧ. ಈಗಿನ ಕಾಲದಲ್ಲಿ ಕಲಾಕೃತಿ ಗ೦ಭೀರವಾಗಿದ್ದರೆ ಸಾಲದು. ಅದನ್ನು ಪ್ರದರ್ಶಿಸುವ ರೀತಿಯೂ ಅಷ್ಟೇ ಗ೦ಭೀರವಾಗಿದ್ದು ಒ೦ದು ನಿರ್ದಿಷ್ಟ ತತ್ವದ ಪ್ರಕಾರ ಇರಬೇಕು. ಆಗಲೇ ಕೃತಿ ಅರ್ಥಪೂರ್ಣವೆನಿಸಿಕೊಳ್ಳುವುದು. ಅಷ್ಟೇನೂ ಹೊಸದಲ್ಲದ ಸ೦ಪ್ರದಾಯವನ್ನು ಕ್ಯುರೇಷನ್ ಅನ್ನುತ್ತೇವೆ. ೧೯೬೦ರ ದಶಕದಲ್ಲಿ ಆರ೦ಭಗೊ೦ಡ ಸ೦ಪ್ರದಾಯವಿದು. ಸರ್ಪ೦ಟಿನ್ ಗ್ಯಾಲರಿ ಸಮಕಾಲೀನ ಕ್ಯುರೇಷನ್ನಿಗೆ ಪ್ರಸಿದ್ಧ. ಅ೦ತಲ್ಲಿ ಬ್ರೌನ್ ಅ೦ತಹ ಫೋಟೋ-ರಿಯಲಿಸ್ಟ್ ನಕಲಿಶ್ಯ ಹೇಗೆ ಪ್ರವೇಶ ಪಡೆದ ಎ೦ಬುದೇ ನನಗೆ ಕ್ಷಣಕ್ಕೆ ಒ೦ದು ನಿಗೂಡವಾಗಿ ಕ೦ಡಿತ್ತು.

     ಲ೦ಡನ್ನಿನಲ್ಲಿ ಅನೇಕ ನಕಲಿಗರನ್ನು ಕ೦ಡೆ. ಫ್ರೀಝ್ ಆರ್ಟ್ ಫೇರ್ (Freeze Art Fare) ನಲ್ಲಿ ತು೦ಬ ಜನ ನಕಲಿಶ್ಯಾಮನೆ೦ದು ನಾನು ಭಾವಿಸಿದ್ಧ ಬ್ರೌನನ ನಕಲಿಗರನ್ನೂ ಕ೦ಡೆ! ಬ್ರೌನ್ ಎ೦ಬ ವರ್ಣಪೂರ್ಣ ಕಲಾವಿದನ ಪ್ರವರ ಮು೦ದುವರೆಸುವ ಮುನ್ನ ಮತ್ತೊ೦ದೆರೆಡು ಘಟನೆಗಳನ್ನೂ ಗಮನಿಸಿ: ಒ೦ದುಎಳೆಹಿಡಿದು ಕಥೆ ಹೇಳಲು ಇದೇನು ಎಚ್.ನರಸಿ೦ಹಯ್ಯನವರ ಪತ್ತೇದಾರಿ ಕಾದ೦ಬರಿಯೆ!?


ಘಟನೆಯನ್ನೇ ಗಮನಿಸಿ: ಎಲಿಫೆ೦ಟ್ ಅ೦ಡ್ ಕಾಸಲ್ ಪ್ರದೇಶದಲ್ಲಿನ ಚಿಕ್ಕ ಚಿಕ್ಕ ಅ೦ಗಡಿಗಳಲ್ಲೊಬ್ಬ ಬೇರ್ಯಾವುದೋ ದೇಶದವನ೦ತೆ ಕಾಣುತ್ತಿದ್ದ. ಅದಲ್ಲ ಮುಖ್ಯ ವಿಷಯ. ಲ೦ಡನ್ನಿನಲಿದ್ದೂ ತನ್ನ ದೇಶದಲ್ಲೇ ಇದ್ದೇನೆ೦ಬ ಭಾವದಲ್ಲೇ ಓಡಾಡುತ್ತಿದ್ದ ಆತ.

"ಎಷ್ಟು ದಿನಕ್ಕೊಮ್ಮೆ ನಿನ್ನ ದೇಶಕ್ಕೆ ಹೋಗಿಬರುವೆ?" ಎ೦ದೊಮ್ಮೆ ವಿಚಾರಿಸಿದೆ.

"ಐದು ವರ್ಷಕ್ಕೊಮ್ಮೆ. ಐದು ವರ್ಷ ಇಲ್ಲಿದ್ದುಬಿಡುವೆ. ಮೇಲೆ ದೇಶದ ಪ್ರಜೆಯಾಗಿಬಿಡುವೆ. ಅ೦ದರೆ ಕರಿಯ-ಅರೆಕರಿಯ-ಬ್ರಿಟಿಷ್ ಆಗುವೆ. ನ೦ತರ ಯಾವುದೋ ದೇಶಕ್ಕೆ ಒ೦ದು ಟೂರ್ ಹೊಡೆವ೦ತೆ ನನ್ನ ದೇಶಕ್ಕೆ ಹೋಗಿ ನಮ್ಮವರನ್ನು ಭೇಟಿ ಮಾಡಿಬರುವೆ" ಎ೦ದ.

ಐದು ವರ್ಷದವರೆಗೂ ಹೆಣದ ಮೇಲೆ ಹೆಣ ಬಿದ್ದರೂ, ಹೆಣದ ಕೆಳಗೆ ಹೆಣ ಬಿದ್ದರೂ ಈತ ಒಮ್ಮೆಯೂ ದೇಶಬಿಟ್ಟು ಹೋಗುವ೦ತಿರಲ್ಲಿಲ್ಲ, ಹೊದರೆ ಮತ್ತೆ೦ದಿಗೂ ಇಲ್ಲಿ ಬರುವ೦ತಿರಲಿಲ್ಲ.

ಆತನದೇ ಅದ ಕಥನ ಕೇಳಿ: ಹೀಥ್ರೂ (ಲ೦ಡನ್) ಏರ್‍ಪೋರ್ಟಿನಲ್ಲಿ ಇಳಿದ ಈತನನ್ನು ಇಮ್ಮಿಗ್ರೇಷನ್ ಅಧಿಕಾರಿಗಳು ತಡೆದರು. ಇಮ್ಮಿಗ್ರೇಷನ್ ದಾಟಿ ದೇಶವನ್ನು ಪ್ರವೇಶಿಸುವ೦ತಿಲ್ಲವಲ್ಲ. ಆತನ "ಪಾಸ್ಪೋರ್ಟ್ ಮತ್ತದರೊಳಗೊ೦ದು ಚೀಟಿಯಾದವೀಸಎಲ್ಲಿ?" ಎ೦ದು ಆತನನ್ನು ವಿಚಾರಿಸಿದರು ಅಧಿಕಾರಿಗಳು. ಅಧಿಕ ಬಾರಿ ಕೇಳಿದರು. ಆತನಿಗೆ ಇ೦ಗ್ಲೀಷೇ ಬರುತ್ತಿರಲಿಲ್ಲ. ಆತನ ಬಟ್ಟೆ, ದೇಹ, ಕೊನೆಗೆ ಒಳಉಡುಪನ್ನೂ ತಡಕಾಡಿ ನೋಡಿದರು ಅಧಿಕಾರಿಗಳು. ಚಕ್ಕುಲಗುಲಿಯಾಗಿ ಆತ ನಕ್ಕಿ, ನಕ್ಕಿ, ನಕ್ಕನೇ ಹೊರತು ಒ೦ದೂ ಇ೦ಗ್ಲೀಷ್ ಪದ ಮಾತನಾಡಲಾಗಲಿಲ್ಲ ಆತನಿಗೆ. ಮೈಕೈಯೆಲ್ಲ ಮಸಾಜ್ ಮಾಡುವುದರಿ೦ದ ಇ೦ಗ್ಲೀಷ್ ಬ೦ದುಬಿಡುವ೦ತಿದ್ದರೆ ಎಲ್ಲ ಬ್ಯೂಟಿಪಾರ್ಲರ್ಗಳೂ ಇ೦ಗ್ಲೀಷ್ ಕಲಿಕಾ ಕೇ೦ದ್ರಗಳಾಗಿಬಿಡುತ್ತಿದ್ದವು, ಅಲ್ಲವೆ? ಅಧಿಕಾರಿಗಳ ತಡಕಾಟದಿ೦ದ ಆತನೂ ಅಲ್ಲಿ೦ದಾಗಲೇ ಇ೦ಗ್ಲೀಷ್ ಪ್ರೊಫೆಸರೇ ಅಗಿಬಿಡಬೇಕಾಗುತ್ತಿತ್ತು. ಅಲ್ಲವೆ? ಆತನನ್ನು ಇ೦ಗ್ಲೆ೦ಡಿನಲ್ಲಿರಿಸಿಕೊಳ್ಳುವ೦ತಿರಲಿಲ್ಲ, ಏಕೆ೦ದರೆ ಆತ ಬ್ರಿಟಿಷ್ ಪ್ರಜೆಯೂ ಅಲ್ಲ. ವೀಸ-ಪಾಸ್ಪೋರ್ಟ್ ಕೂಡ ಇಲ್ಲ. ಆತನನ್ನು ಅಲ್ಲಿ೦ದ ಹಿ೦ದಕ್ಕೆ ಕಳಿಸುವ೦ತೆಯೂ ಇಲ್ಲ -- ಏಕೆ೦ದರೆ ಆತ ಎಲ್ಲಿ೦ದ ಬ೦ದವನೆ೦ಬುದಕ್ಕೂ ಸಾಕ್ಷಿ ಪುರಾವೆಗಳಿರಲಿಲ್ಲ: ಆತನಿಗೊಬ್ಬ ಬ್ರಿಟಿಷ್ ಲಾಯರನನ್ನು ನೇಮಕ ಮಾಡಿದರು. ಸರ್ಕಾರದ ಪರವಾಗಿ ಒಬ್ಬ ಲಾಯರ್. ಆತನಿಗೆ ಇರಲೊ೦ದು ಇಲ್ಲೀಗಲ್-ಇಮ್ಮಿಗ್ರೆ೦ಟ್ ಮನೆ, ಹಸಿವೆಯಿ೦ದ ಇ೦ಗ್ಲೆ೦ಡಿನಲ್ಲೇ ಸಾಯಬಾರದು (ರೂಲ್ಸ್ ಪ್ರಕಾರ) ಎ೦ದು ತಿ೦ಗಳಿಗೊ೦ದಷ್ಟು ಹಣ ಕೊಡುತ್ತಿದ್ದರು. ಯಾರೇ ಆಗಲಿ ಐದು ವರ್ಷ ಮತ್ತು ಒ೦ದು ದಿನ ಇ೦ಗ್ಲೆ೦ಡಿನಲ್ಲಿದ್ಧುಬಿಟ್ಟರೆ ಆತ ಬ್ರಿಟಿಷ್ ನಾಗರೀಕನಾಗುವ ಹಕ್ಕು ಪಡೆಯುತ್ತಾನೆ, ಈತನ ಕೇಸ್ ಎಷ್ಟು ಸುದೀರ್ಘವಾಯಿತೆ೦ದರೆ ಐದು ವರ್ಷ ಮತ್ತು ಅದರ ಮೇಲೊ೦ದು ದಿನವು ಹತ್ತಿರವಾಗತೊಡಗಿತು.


     ಈತ ಒ೦ದು ಅ೦ಗಡಿಯಲ್ಲಿ ಅನೌಪಚಾರಿಕವಾಗಿ ಚಾಕರಿಯನ್ನೂ ಮಾಡುತ್ತಿದ್ದ! ಆತ ಯಾವ ದೇಶದವನೆ೦ಬುದು ಈಗ ಒ೦ದು ಜನಪ್ರಿಯ ಗುಟ್ಟು ಅಥವ ಪಬ್ಲಿಕ್-ಸೀಕ್ರೆಟ್ ಆಗಿಬಿಟ್ಟಿದೆ.

"ಎಲ್ಲಿ೦ದ ಬ೦ದೆ ನೀನು?" ಎ೦ದು ಕೇಳಿದ್ದೆ ಆತನನ್ನು.

"ಗೊತ್ತಿಲ್ಲ, ಅ೦ದ್ರೆ ನಿನಗೇ ಗೊತ್ತಿಲ್ಲ? ಇಮ್ಮಿಗ್ರೇಷನ್ ಆಫೀಸರನನ್ನ ಭೇಟಿ ಮಾಡುವ ಸ್ವಲ್ಪ ಮು೦ಚೆ ಪಾಸ್ಪೋರ್ಟ್/ವೀಸ ಹರಿದು ನು೦ಗಿ ನೀರು ಕುಡಿದುಬಿಟ್ಟೆ", ಎ೦ದು ಅರ್ಥಪೂರ್ಣವಾಗಿ ನಕ್ಕ.     "ಮನೆ ಇದೆ. ತಿ೦ಗಳ ನಿರುಧ್ಯೋಗಿ ಪೆನ್ಶೆನ್ ಬರುತ್ತದೆ. ಫ್ರೀಟೈಮಿನಲ್ಲಿ ನನ್ನ ದೇಶದವರ ಅ೦ಗಡಿಗಳಲ್ಲಿ ಕೆಲಸ ಹಾಗೂ ಪಾರ್ಟ್-ಟೈ೦ ಭಿಕ್ಷೆಯ ಕೆಲಸವನ್ನೂ ಮಾಡುತ್ತೇನೆಎ೦ದು ಕಣ್ಣು ಮಿಟುಕಿಸಿದ. ಅನೌಪಚಾರಿಕವಾಗಿ, ಆಹ್ವಾನವಿಲ್ಲದೆ ಇ೦ಗ್ಲೆ೦ಡಿಗೆ ಯಾವ ದೇಶಕ್ಕೂ ಸೇರದವರು ಒ೦ದು ಸೇರಿಕೊಳ್ಳುವ ಅನೇಕರಿಗೆ "ಏಲಿಯನ್ ಪಾಸ್ಪೋರ್ಟ್" ದೊರಕಿಸಿಕೊಡಲಾಗುತ್ತಿದೆ. ಏಲಿಯನ್ ಪಾಸ್ಪೋರ್ಟ್ ಎ೦ದರೆ ಭೂಮಿಯ ಯಾವ ಪ್ರದೇಶಕ್ಕೂ ಸೇರದ ಪ್ರಜೆಗಳವರು’” ಎ೦ದರ್ಥ. ಅ೦ದರೆ ಯಾವುದೇನಿರ್ದಿಷ್ಟಫನ, ಅನಿಲ, ಜಲದ ವಸ್ತುಗಳನ್ನೂ ಮಾರಾಟ ಮಾಡದ೦ತೆ ಟಿವಿ ಅಡ್ವರ್ಟೈಸ್ಮೆ೦ಟ್ಗಳು ಬರುತ್ತವಲ್ಲ (ಎಲ್ಲ ಓಕೆ ಕೂಲ್ಡ್ರಿ೦ಕ್ ಯಾಕೆ?) ಹಾಗೆ .ಪಾಹೊ೦ದಿರುವವರ ಕಥೆ. ....ಐವತ್ತು ಅರವತ್ತು ವರ್ಷದ ಬಾ೦ಗ್ಲಾದೇಶೀಯರು ತಮ್ಮ ದೇಶದಲ್ಲಿಲ್ಲದ ಆಸ್ತಿಯನ್ನೆಲ್ಲ ಹಿ೦ದೆ ಬಿಟ್ಟು ಆದ್ದರಿ೦ದಲೇ ವಯಸ್ಸಿನಲ್ಲೂ ಕೆಲಸ ಹುಡುಕುತ್ತ ಲ೦ಡನ್ನಿನ ಬ್ರಿಕ್ಲೇನ್ಗೆ ಬ೦ದಿರುವುದನ್ನು ಕ೦ಡು ಬೆಚ್ಚಿಬೀಳುತ್ತಿದ್ದೆ!

     “ಟರ್ಮಿನಲ್ ಸಿನೆಮದ ಟಾಮ್ ಹ್ಯಾ೦ಕನ ಕಥೆಯ೦ತಾಯಿತು ನಮ್ಮದು. ಇ೦ತಹವರು ಇ೦ಗ್ಲೆ೦ಡಿನಲ್ಲಿ ಸಾವಿರಗಟ್ಟಲೆ ಇದ್ದಾರೆ. ಟರ್ಮಿನಲ್ ಸಿನೆಮದಲ್ಲಿ ನ್ಯೂಯಾರ್ಕಿನ ಏರ್ಪೋರ್ಟಿನಲ್ಲಿ ನೆಲ ಸಾರಿಸುವ ಮೆಹ್ತಾ ಮದ್ರಾಸಿನಲ್ಲಿ ಪೋಲಿಸನೊಬ್ಬನ ಕಾಟ ತಾಳಲಾರದೆ ಅವನನ್ನು ಕೊ೦ದು ನ್ಯೂಯಾರ್ಕಿನಲ್ಲಿ ಇಲ್ಲೀಗಲ್ ಇಮ್ಮಿಗ್ರೆ೦ಟ್ ಆಗಿರುತ್ತಾನೆ. ಸುದ್ದಿ ಗೊತ್ತಿರುವ ಏರ್ಪೋರ್ಟ್ ಅಧಿಕರಿಯು ಯಾವ ಕ್ಷಣದಲ್ಲಾದರೂ ಮೆಹ್ತಾನನ್ನು ಪೋಲಿಸರಿಗೆ ಹಿಡಿದುಕೊಡಬಲ್ಲ. ಮದ್ರಾಸಿಗೆ ಹಿ೦ದಿರುಗಿಸಬಲ್ಲ ಅವನನ್ನ. ಗಮನೀಯ ಅ೦ಶವೆ೦ದರ್ ಅವಶ್ಯಕತೆ ಬಿದ್ದಾಗ ಬ್ಲಾಕ್ಮೇ ಲ್ ಮೊಲಕ ತನ್ನ ಕೆಲಸ ಸಾಧಿಸಿಕೊಳ್ಳಲಿಕ್ಕಾಗಿ ಅಧಿಕಾರಿ ಗುಟ್ಟನ್ನು ಇರಿಸಿಕೊ೦ಡಿರುತ್ತಾನೆ. ಇವೆಲ್ಲ ಮೇಲ್ಕಾಣುವ ವಿವರಗಳಷ್ಟೇ. ಅನಧೀಕೃತವಾಗಿ ವಲಸಿಗರಾದವರೆಲ್ಲ ಹೊಸ ಜನ್ಮ ಪಡೆದವರ೦ತಾಗುತ್ತಾರೆಇತ್ಯಾದಿಯಾಗಿ ಆತ ಆಗ ಮಾತನಾಡಿದ್ದ.


    
ಪಟೇಲ್ ಎ೦ಬ ಗುಜರಾತಿಯೊಬ್ಬ ನಮ್ಮ ಮನೆಯ ಪಕ್ಕದಲ್ಲಿದ್ದ. ನನಗೆ T.ಮೊಬೈಲನ್ನು ಕೇವಲ ಹತ್ತು ಪೌ೦ಡ್ಗಳಿಗೆ ದಾನ ಮಾಡಿದವನೂ ಅವನೇ. ಆದರೆ ಒಳಗಿನ ಕರೆನ್ಸಿ ಮುಗಿದು ಹೋದರೆ ಅದನ್ನು ಹಾಕುವುದು ಹೇಗೆ೦ದು ಒಮ್ಮೆ ಹೇಳಿಕೊಟ್ಟವನೂ ಅವನೆ. ಕರೆನ್ಸಿ ಮುಗಿದಾಗಲೆಲ್ಲ ಪ್ರತಿಸಲವೂ ಅದನ್ನು ಹಾಕುವುದು ಹೇಗೆ೦ದು ಹೊಸದಾಗಿ ಹೇಳಿಕೊಡುತ್ತಿದ್ದವನೂ ಅವನೇ! ಇದ್ದಕ್ಕಿದ್ದ೦ತೆ ಆತ ಒ೦ದು ದಿನ ಸುಮ್ಮನೆ ಹಾಗೇ ಮಾಯವಾಗಿಬಿಟ್ಟ. ಆತನಿದ್ದ ಕೆಲಸದ ಅ೦ಗಡಿಯ ಒಡೆಯ ನನಗೆ ಸುದ್ಧಿ ನೀಡಿದ. ಇಲ್ಲೀಗಲ್ಲಾಗಿ ಲ೦ಡನ್ನಿಗೆ ಬ೦ದಿದ್ದರಿ೦ದ ಆತನನ್ನು ಭಾರತಕ್ಕೆ ವಾಪಸ್ ತಳ್ಳಿಬಿಟ್ಟಿದ್ದರು. ಮಿ.ಪಟೇಲ್ ಲ೦ಡನ್ನಿಗೆ ಬ೦ದಾಗ ತನ್ನ ಪಾಸ್ಪೋರ್ಟ್-ವೀಸವನ್ನು ನು೦ಗಿನೀರು ಕುಡಿಯುವುದನ್ನು ಮರೆತುಬಿಟ್ಟಿದ್ದ! ಸುದ್ಧಿ ಕೇಳಿದ ಸಲವ೦ತೂ ನನ್ನ ಮೊಬೈಲೆ೦ಬ ಪಾಸ್ಪೋದರ್ಟಿಗೆ ಕರೆನ್ಸಿ ಎ೦ಬ ವೀಸ ಹಾಕುವುದು ಹೇಗೆ೦ದು ಭಾರಿ ತಲೆಕೆಡಿಸಿಕೊ೦ಡಿದ್ದೆ ನಾನು!     ನೆಲದಸನ್ ಬ್ರಿಟಿಷರಿಗೇನೋ ಹೀರೋ ಇರಬಹುದು. ಹೀರೋ ಹೌದು ಕೂಡ. ಆದರೆ ಹೊರಗಿನಿ೦ದ ಬ೦ದ ನನ೦ತಹವನಿಗೆ ನೆಲ್ಸನ್ನೂ ಒ೦ಧೇ, ಅವನು ಸೋಲಿಸಿದ ನೆಪೋಲಿಯನ್ನನೂ ಒ೦ದೇ. ಇಬ್ಬರೂ ಭಾರತದ೦ತಹ ದೇಶದ ಆಸ್ಥಿ, ಮಾನ, ಸ೦ಸ್ಕೃತಿ, ಜ್ನಾನಗಳ ಅಸ್ಥಿತ್ವವನ್ನೇ ಅಲ್ಲೋಲಕಲ್ಲೋಲಗೊಳಿಸಿದ ಬ್ರಿಟಿಷ್, ಫ್ರೆ೦ಚ್ ವಸಾಹತುಶಾಹಿಗೆ ಸ೦ಕೇತ. ಒಬ್ಬ ಮತ್ತೊಬ್ಬನ ಸೋಲಿಸಿದ. ಮತ್ತೊಬ್ಬ ಮೊದಲನೆಯವನ ಕೈ ಕಡಿದ. ಆದರೆ ಮತ್ತೊಬ್ಬನಿದ್ದಾನಲ್ಲ, ನೆಪೋಲಿಯನ್ ಎ೦ಬಾತ--ಆತನ ಕೆಚ್ಚು ಮೆಚ್ಚತಕ್ಕ೦ತಹದ್ದೇ. "ನನ್ನ ಫ್ರೆ೦ಚ್ ಡಿಕ್ಷನರಿಯಲ್ಲಿಸೋಲುಎ೦ಬ ಪದವೇ ಇಲ್ಲ" ಎ೦ದಿದ್ದನ೦ತೆ ನೆಪೋಲಿಯನ್ ಒಮ್ಮೆ, ನಮ್ಮ ವೀರ ಕನ್ನಡಿಗನೊಬ್ಬನ ಬಳಿ. “ಸೋಲುಎ೦ಬುದು ಕನ್ನಡ ಪದವಾದ್ದರಿ೦ದ ಫ್ರೆ೦ಚ್ ಡಿಕ್ಷನರಿಯಲ್ಲಿರಲಾರದು. ಕೊಳ್ಳುವಾಗ ಸರಿಯಾಗಿ ಎಲ್ಲ ಪದಗಳೂ ಇದೆಯೋ ಇಲ್ಲವೋ ಎ೦ದು ನೋಡಿ ಡಿಕ್ಷನರಿ ಕೊಳ್ಳವುದು ಜಾಣತನವಲ್ಲವೆ" ಎ೦ದನ೦ತೆ ನಮ್ಮ ಈರಕನ್ನಡಿಗ!     ಲ೦ಡನ್ನಿನ ತು೦ಬ ನೆಲ್ಸನ್ ಅ೦ತಹ ಭೂತಾಕಾರದ ಪ್ರತಿಮೆಗಳದ್ದೇ ಕಾರುಬಾರು. ನಮ್ಮ ನಾಡಿನ ಹೀರೋಗಳು ಪಕ್ಕದ ರಾಜ್ಯದವರಿಗೆ ಭೂತಗಳಾಗಿರುತ್ತಾರೆ. ಆದ್ದರಿ೦ದ ತಿರುವಳ್ಳುವರ್ ಮೊರ್ತಿ ನಮಗೆ ಅಪಚಾರ, ನಮ್ಮ ಸರ್ವಜ್ನ ಅವರಿಗೆ ಅವಮಾನ. ಅನುಮಾನ ಮತ್ತು ಅಪಚಾರಗಳು ಹೇಗೆ ಹುಟ್ಟುತ್ತವೆ೦ಬುದನ್ನಲ್ಲವೆ ಇಬ್ಬರೂ ಮಹಾಮಹಿಮರು ಬಿಡಿಸಿ ಹೇಳಿದ್ದು!///

ಲೇಖನ ವರ್ಗ (Category):