ಕುಂತಲ್ಲಿ ಕೂರಂಗಿಲ್ಲ, ನಿಂತಲ್ಲಿ ನಿಲ್ಲಂಗಿಲ್ಲ ಈ ಜಿಂಕೆ ಮರಿಗಳು

To prevent automated spam submissions leave this field empty.

ಈ ಚಿತ್ರದಲ್ಲಿರುವ ತ್ರಿವಳಿಗಳನ್ನು ನಾನು ಇತ್ತೀಚೆಗೆ ಮೈಸೂರಿಗೆ ಮದುವೆಯೊಂದಕ್ಕೆ ಹೋದಾಗ ಕಂಡೆ. ಈಗ ಸುಮಾರು ಒಂದೂವರೆ ವರ್ಷ ವಯಸ್ಸಿನ ಈ ಸುಂದರ ತ್ರಿವಳಿಗಳನ್ನು ಕಂಡಾಗ ಆದ ಆನಂದ ಅಷ್ಟಿಷ್ಟಲ್ಲ. ಅದನ್ನು ಸಂಪದದ ಓದುಗರೊಂದಿಗೆ ಹಂಚಿಕೊಳ್ಳುವವರೆಗೂ ನನ್ನ ಮನಸ್ಸಿಗೆ ಸಮಾಧಾನವಿರಲಿಲ್ಲ.

ಈ ಸುಂದರ ಮಕ್ಕಳ ಭವಿಷ್ಯವು ಅವರಂತೆಯೇ ಅತ್ಯಂತ ಸುಂದರವಾಗಿಯೂ ಫಲಪ್ರದವಾಗಿಯೂ ಇರಲೆಂದು ಆಶಿಸುವ

ಎ.ವಿ. ನಾಗರಾಜು

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ಲೆಲ್ಲಿ ನೋಡಿದ್ರೂ ಅವೇನೆ, ಸ್ಪೂರ್ತಿಯ ಚಿಲುಮೆಗಳು

ಸರಿ ತಾನೇ ?

ಮಕ್ಕಳೇ ಹಾಗೆ ; ಒಮ್ಮೊಮ್ಮೆ ನಮಗಿಂತ ಅವರಿಗೆ ಹೆಚ್ಚು ಗೊತ್ತೇನೋ ಅನ್ನೋ ಭ್ರಮೆ ನಿರ್ಮಾಣ ಮಾಡತ್ವೆ ನೋಡಿ ; ನಾನ್ ಹೇಳಿದ್ದು ದಿಟ ತಾನೇ ?

ಇದೇ ಅನುಭವ ನನಗೂಆಗ್ಯದೆ !

ತಮ್ಮ ಅನಿಸಿಕೆಗಳು ನೂರಕ್ಕೆ ನೂರರಷ್ಟು ಸರಿ.
ಮಕ್ಕಳ ಮುಗ್ದ ಮನೋಭಾವ, ನಿಷ್ಕಲ್ಮಶ ಪ್ರೀತಿ, ಸ್ನೇಹದ ನೋಟ ಇವು ಎಂತಹವರ ಮನಸ್ಸನ್ನಾದರೂ ಕ್ಷಣಾರ್ಧದಲ್ಲಿ ಸೆಳೆಯ ಬಲ್ಲವು. ಹಿಂದಿನ ಅರಿವಿಲ್ಲದ, ಮುಂದಿನ ಯೋಚನೆಯಿಲ್ಲದ ಆಗಿಂದಾಗಿನ ದುಃಖಾನಂದಾದಿಗಳನ್ನು ಆಗಿಂದಾಗ್ಯೆ ಅನುಭವಿಸಿಬಿಡುವ ಆ ಮಕ್ಕಳ ಮನೋಬಲವು ದೊಡ್ಡವರಿಗೆಲ್ಲಿ ಬರಬೇಕು. ಅವರಂತಹ ಮುಗ್ದ ಸ್ನಿಗ್ದ ಮನಸ್ಸಿನ ಮಾನವನಾಗಲು ಏಳೇಳು ಜನ್ಮದ ಪುಣ್ಯವಿರಬೇಕು.
ನಿಮ್ಮ ಅನಿಸಿಕೆಗಳಿಗೆ ಧನ್ಯವಾದಗಳು.
ಎ.ವಿ. ನಾಗರಾಜು