ನಶಿಸುತ್ತಿರುವ ಶಬ್ದ ಬಳಕೆ

To prevent automated spam submissions leave this field empty.

ನಮ್ಮ ಪೀಳಿಗೆಯಲ್ಲಿ ಯತೆಚ್ಚವಾಗಿ ಬಳಕೆಯಲ್ಲಿದ್ದ ಎಷ್ಟೊ ಶಬ್ದಗಳು ಇಂದು ತುಂಬಾ ವಿರಳವಾಗಿ ಬಳಕೆಯಲ್ಲಿವೆ ಅಥವಾ ಗ್ರಾಂಥಿಕ ರೂಪ ಪಡೆದಿವೆ, ಹಳ್ಳಿಯ ಜನಪದರೂ ಕೂಡ ದೂರದರ್ಶನದ ಪ್ರಭಾವದಿಂದ ಈ ಶಬ್ದಗಳನ್ನು ಗ್ರಾಂಥಿಕ ರೂಪದಲ್ಲಿ ಬಳಸುತ್ತಿದ್ದಾರೆ. ಮುಂದಿನ ಪೀಳಿಗೆ ಈ ಶಬ್ದ ಸಂಪತ್ತಿನಿಂದ ವಂಚಿತವಾಗುತ್ತೆನೊ ಎಂಬ ಆತಂಕ.

ನನ್ನ ನೆನಪಿನಿಂದ ಹೊರಬಿದ್ದ ಕೆಲ ಶಬ್ದಗಳನ್ನು ಪಟ್ಟಿ ಮಾಡಿದ್ದೇನೆ.
೧. ಚಕ್ಕಡಿ
೨. ಹಗೆ (ಧಾನ್ಯ ತುಂಬುವದು)
೩. ಅಗಸಿ ಬಾಗಲಾ
೪. ಬಂಕ/ಚಾವಡಿ
೫. ತತ್ರಾಣಿ
೬. ಹರನಾಳಗಿ
೭. ಜೂಲಾ (ಎತ್ತಿಗೆ ತೊಡಿಸೊ ಕಸೂತಿಮಾಡಿದ ಬಟ್ಟೆ)
೮. ಬೊಲ ಬಗರಿ
೯. ಶ್ಯಾವಗಿ ಮಣಿ

೧೦. ಬಾನಾ (ಜೋಳದ ಅನ್ನ/ಖಿಚಡಿ)
೧೧. ಅಂಬಲಿ
೧೨. ಸ್ವಾರಿ (ದನಗಳು ಮುಸುರೆ ನೀರು ಕುಡಿಯುವ ಗೋಡೆಯಲ್ಲಿನ ಮಣ್ಣಿನ ಪಾತ್ರೆ)
೧೩. ಮಲಾರ (ಬಳೆಗಳನ್ನು ಹಾಕುವ ಹಗ್ಗದ ಗಂಟು)
೧೪. ಮಣಕ (ಹದಿ ವಯಸ್ಸಿನ ದನ)
೧೫. ಪಟಪಟ್ಟಿ (ಈಗಿನ್ ಮೋಟರ್ ಸೈಕಲ್)
೧೬. ಕಡ್ಡಿ ಪೆನ್ನು (ಬಾಲ್ ಪೆನ್)
೧೭. ಮಸಿ ಕುಡಕಿ (Inkpot)
೧೮. ಅಲ್ಲಿಕೇರಿ/ ಚರಗಾ ಚಲ್ಲುದು
೧೯. ಮೂಕಿ (ಚಕ್ಕಡಿಯ stem)
೨೦. ಗಾಂದಿ ಕಟ್

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಎಲ್ಲಾ ಜೀವಂತ ಭಾಷೆಗಳಲ್ಲೂ ಇದು ಅನಿವಾರ್ಯ ಕ್ರಿಯೆ.

೧. ನಮ್ಮ ಜೀವನ ಶೈಲಿ ಆಧುನಿಕವಾದಂತೆ , ನಮ್ಮ ಉಪಯೋಗದಿಂದ ಕ್ರಮೇಣ ಮರೆಯಾಗುವ ವಸ್ತುಗಳಿಗೆ ಸಂಬಂಧಪಟ್ಟ ಶಬ್ದಗಳು ಬಳಕೆಯಿಂದ ದುರವಾಗುವುದು, ಸಹಜ. ಉದಾ: ಬೀಸೇ ಕಲ್ಲು, ಒರಳು, ಒನಕೆ, ಕುಟ್ಟಾಣಿ .

೨. ಹೊಸಮಾಧ್ಯಮಗಳ / ಶಿಕ್ಷಣದ ಪ್ರಭಾವದಿಂದಲೂ ಅದೇ ವಸ್ತುವನ್ನು ಹೊಸ ಹೆಸರಿನಿಂದ ಕರೆಯುವುದು. ಉದಾ: ಬೈಕಿಗೆ ಪಟಪಟ್ಟಿ ಎನ್ನದೆ ಬೈಕು ಎಂತಲೇ ಹೇಳುವುದು.

ಆದರೆ ಇದರೊಂದಿಗೆ ಹೊಸ ಹೊಸ ಶಬ್ದಗಳೂ ಭಾಷೆಗೆ ಸೇರಿತ್ತಿವೆಯಲ್ಲ . ಉದಾ; ಟಿವಿ, ರಿಮೋಟು, ಕಂಪ್ಯೂಟರು, ಮೊಬೈಲು, ಮೌಸು ಇತ್ಯಾದಿ.