"ಸಂಪದ"ದ ಕೊನೆಯ ದಿನಗಳು

To prevent automated spam submissions leave this field empty.

ಸಂಪದ ಕನ್ನಡ ಸಮುದಾಯ
ಸದಸ್ಯರ ಗಮನಕ್ಕೆ:

ಭಾರತ ಸರ್ಕಾರ ಹೊರಡಿಸಿರುವ ವಿಶೇಷ ಆದೇಶವನ್ನು ಅನುಸರಿಸಿ ನಮ್ಮ ಸರ್ಕಾರ ಕನ್ನಡದ ಹಲವಾರು ವೆಬ್ ಸೈಟಗಳನ್ನು ಮುಚ್ಚುವಂತೆ ಆದೇಶ ಹೊರಡಿಸಿದೆ.
ಮೂಲ ಆದೇಶದಲ್ಲಿ "ಸಾಮಾಜಿಕ ಹಾಗು ರಾಜಕೀಯ ಅಭದ್ರತೆಗೆ ಈ ವೆಬ್‌ಸೈಟ್‌ಗಳು ಕಾರಣವಾಗಿರುವುದರಿಂದ ಈ ಕ್ರಮವನ್ನು ತ್ವರಿತವಾಗಿ ಕೈಗೊಳ್ಳಬೇಕಾಗಿದೆ" ಎಂಬ ಕಾರಣ ಕೊಡಲಾಗಿದೆ.

ಕರ್ನಾಟಕ ಸರ್ಕಾರದ ಈ ಆದೇಶವನ್ನು ತೀವ್ರವಾಗಿ ಪರಿಗಣಿಸಿ ಪಾಲಿಸದ ವೆಬ್‌ಸೈಟ್ ಮಾಲಿಕರನ್ನು ಬಂಧಿಸಲು ನಿರ್ಧರಿಸಿದೆ. ಈ ಸಲುವಾಗಿ 'ಸಂಪದ'ದ ನಿರ್ವಹಣೆ 'ಸಂಪದ'ದಲ್ಲಿ ನಡೆದಿರುವ ಹಲವಾರು ಮಾತು, ಚರ್ಚೆಗಳನ್ನು ಕೂಡಲೆ ಅಳಿಸಿ ಹಾಕುವುದರ ಜತೆಗೆ ಮೂರು ದಿನಗಳ ಒಳಗೆ ಇಡೀ ವೆಬ್ಸೈಟನ್ನು ಮುಚ್ಚುಹಾಕುತ್ತಿದ್ದೇವೆಂದು ಅಧಿಕೃತವಾಗಿ ಈ ಮೂಲಕ ತಿಳಿಸುತ್ತ ಖೇದ ವ್ಯಕ್ತಪಡಿಸುತ್ತಿದ್ದೇವೆ.

- 'ಸಂಪದ' ನಿರ್ವಹಣೆ

(ಈ ಸೂಚನೆ ರೆಡಿ ಮಾಡಿದ [:user/anivaasi|'ಅನಿವಾಸಿ'ಯವರಿಗೆ] 'ಸಂಪದ'ದ ಸಮಸ್ತ ಸದಸ್ಯರ ಪರವಾಗಿ ವಂದನೆಗಳು).

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಸಂಪದದ ಬಾಗಿಲು ಮೂರು ದಿನಗಳೊಳಗೆ ಮುಚ್ಚುತ್ತದೆಂಬುದನ್ನು ತಿಳಿದು ಅತ್ಯಂತ _______ ವಾಯಿತು. ಬುಧವಾರ ೨ನೇ ಏಪ್ರಿಲ್, ಏಕಾದಶಿ ಪ್ರಶಸ್ತವಾದ ದಿನ. ನಾಲ್ಕು ಜನ ಮುತ್ತೈದೆಯರನ್ನು ಕರೆದು ಅರಿಶಿನ ಕುಂಕುಮ ಕೊಟ್ಟು, ಊಟ ಹಾಕಿ, ಸೀರೆ ಕುಪ್ಪುಸದ ಕಣಗಳನ್ನು ಕೊಟ್ಟರೆ ಮುಂದಿನ ಏಪ್ರಿಲ್ ೧ರ ವರೆಗೆ ನಿರಾತಂಕವಾಗಿ ಸಂಪದದ ಲೇಖನ ಸಂಪತ್ತನ್ನು ಮುಂದುವರೆಸಿಕೊಂಡು ಹೋಗಬಹುದೆಂದು ಪೂಜಾರಪ್ಪನವರ ಅಂಬೋಣ. ನಿಮ್ಮ ಕೈಲಾಗದಿದ್ದರೆ, ಅದಕ್ಕೆ ಸಲ್ಲುವ ಹಣವನ್ನು ನನಗೆ ರವಾನಿಸಿದರೆ, ನಾನೇ ಮುಂದೆ ನಿಂತು ಆ ಕೆಲಸ ಮಾಡುತ್ತೇನೆ. ತಕ್ಷಣ ಎಂ.ಓ. ಮಾಡಿ.
ಎ.ವಿ. ನಾಗರಾಜು

ಗುಱುಱಾಜ

ಹಾ..ಹಾ....ಸಕತ್ತ್ ಆಗಿದೆ ನನಗ೦ತೂ ಓದಿದ ತಕ್ಷಣ ಸಿಟ್ಟಿನಿ೦ದ ರಕ್ತ ಕುದಿಯತೊಡಗಿತ್ತು.faithfreedom ನ೦ತಹ ಸೈಟುಗಳೇ ದೇಶದಲ್ಲಿ ಚಾಲ್ತಿಯಲ್ಲಿರುವಾಗ ಇದೇನಿದು ಎ೦ದೆಲ್ಲಾ ಅನಿಸತೊಡಗಿತ್ತು.

ಧನ್ಯವಾದಗಳು

ಹರಿಪ್ರಸಾದ್

ಏಪ್ರಿಲ್ ಒಂದರ ಹಾಸ್ಯದಲ್ಲೂ ಸಾವಿನ ಅಥವಾ ಈ ರೀತಿಯ ಸುದ್ದಿಗಳನ್ನು ಹಾಕುವುದು ನಮ್ಮ ಸಂಸ್ಕೃತಿಯಲ್ಲಿ ತಕ್ಕದ್ದಲ್ಲ ಅನ್ನುವುದನ್ನು ನೀವು ಮರೆತುಬಿಟ್ಟಿರಲ್ಲ!!?? :)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

ಐಡಿಯ ಸುದರ್ಶನರದ್ದು :-)

ಒಂದಷ್ಟು ತಮಾಷೆ, ಒಂದಷ್ಟು ರಿಯಾಲಿಟಿ ಚೆಕ್ - ನಾವು ಬರೆಯೋದನ್ನ ಎಷ್ಟು ಜನ ಸೀರಿಯಸ್ ಆಗಿ ತಗೋತಾರೆ ಅಂತ ಸೀರಿಯಸ್ ಆಗಿ ತಗೊಳ್ಳಲಾಗದ ದಿನ ಬರೆದು ಚೆಕ್ ಮಾಡಬಹುದಲ್ವೆ? ಇದನ್ನು ಬರೆದ ಒಂದು ಗಂಟೆಯಲ್ಲೇ ಬಂದ ಹತ್ತು ಪ್ರತಿಕ್ರಿಯೆಗಳು ಸಂಪದವನ್ನು ಪ್ರತಿನಿಧಿಸುತ್ತ ಪ್ರತಿಧ್ವನಿಸುತ್ತದಲ್ವೆ. ಅದು ಖುಷಿ. :-)

ಸೋಮಶೇಖರರೆ, ದಯವಿಟ್ಟು ಈ ತರಲೆ ಪೋಸ್ಟನ್ನು ಮನ್ನಿಸಿ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಓದಿದೊಡನೆ ಗೊತ್ತಾಯಿತು..ಅದರೂ ಸಂಪದದಲ್ಲಿ ಇದನ್ನು ನಿರೀಕ್ಷಿಸಿರಲಿಲ್ಲ..
ರಾಜ್ಯ ಚುನಾವಣಾ ದಿನಾಂಕ ಪ್ರಕಟಣೆ, ಕೇಂದ್ರ ಸರಕಾರಿ ನೌಕರರಿಗೆ ಆರನೇ ವೇತನ ಆಯೋಗ ಶಿಫಾರಸು ಮಾಡಿದ ವೇತನ ಇಂತಹ ಸುದ್ದಿಗಳನ್ನು ನಿರೀಕ್ಷಿಸಿದೆ...
ಕೆಲವರು ಮೋಸ ಹೋದದ್ದು ತಿಳಿದು ಖುಷಿಯಾಯಿತು..ಅದರಲ್ಲೂ ಮಹೇಶ ಬೇಸ್ತು ಬಿದ್ದದ್ದು ನಂಬೋಕಾಗದು :)
*ಅಶೋಕ್

ಅಶೋಕ್ ಕುಮಾರ್, ಸಂಪದವನ್ನು ನಿಮ್ಮ ನಿರೀಕ್ಷೆಗೆ ತಕ್ಕುದಾದಂತೆ ಮಾಡುವುದು ನಿಮ್ಮ ಕೈಲೇ ಇದೆ. ಅದಕ್ಕೆ ಬೇಕಾದ ತಾಂತ್ರಿಕ ಸೌಲಭ್ಯ ಒದಗಿಸಿಕೊಡುವ ಜವಾಬ್ದಾರಿ ನಮ್ಮದು. ಒಂದು ಮೇಯ್ಲ್ ಹಾಕಿ. :-)

ಮಹೇಶ ಮೋಸ ಹೋದಂತೆ ಕಾಣಲಿಲ್ಲ ನನಗೆ. ಅವ ಮತ್ತೊಂದು ಕಾಮೆಂಟ್ ಹಾಕಿದ ಕೂಡ್ಲೆ ತಿಳಿಯುತ್ತೆ. :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಹಂಸಾನಂದಿಯವರೇ,ನಿಜ. ತಮಾಷೆಗೂ ಕೆಟ್ಟದನ್ನು ಬಯಸುವುದು ನಮ್ಮ ಸಂಸ್ಕೃತಿಯಲ್ಲ.

ಕೆಲವು ವರ್ಷದ ಹಿಂದೆ ಏಪ್ರಿಲ್ ೧ನೆ ತಾರೀಖು , ಒಬ್ಬ ನಟಿಯ ತಾಯಿ ( ಕ್ಲೂ - ಈಕೆಯೂ ನಟಿ, ಪ್ರಶಸ್ತಿ ವಿಜೇತೆ ) ಪತ್ರಕರ್ತರನ್ನು ಫೂಲ್ ಮಾಡಲೆಂದು ತನ್ನ ಮಗಳು ಸತ್ತು ಹೋದಳು ಎಂದು ಸುದ್ದಿ ಹಬ್ಬಿಸಿದ್ದರು. ನಿಜ ತಿಳಿದ ಪತ್ರಕರ್ತರು ನಗುವ ಬದಲು ತಾಯಿ, ಮಗಳಿಗೆ ಬುದ್ಧಿ ಹೇಳಿ, ಬೈದು ಬರೆದಿದ್ದರು. :)

ಆದರೂ ಒಳ್ಳೆ ಪ್ರಯತ್ನವನ್ನೇ ಮಾಡಿದ್ದೀರಿ. ಶಹಬ್ಬಾಷ್! :)

ನಿಮ್ಗೇ ಬಿ.ಪಿ. ಹೆಚ್ಚು ಮಾಡಿದ ಈ ನಾಡಿಗ್ ಗೆ ಸ್ವಲ್ಪ ತಿಳವಳಿಕೆ ಕಡಿಮೆ :) ವಯಸ್ಸಾದವರೂ ಇರುತ್ತಾರೆ ಅನ್ನುವ ಪರಿವಿಲ್ಲದೇ ಈ ರೀತಿ ಮಾಡಿದ್ದಾನೆ.

ಎಪ್ಪಾ ಏನಿದು ಸುದ್ದಿ ಅಂತ ಒಂದ ಸಮ ಸಿಟ್ಟು ನೆತ್ತಿಗೇರಿತ್ತು. ಯಾಕಂದ್ರ ನನಗಿರುದು ಈಗ ಸಂಪದ ಮತ್ತು ದ್ಯಾಟ್ಸಕನ್ನಡ ಎರಡೇ ಆಸರೆ ಉಳದೆಲ್ಲ ವೆಬ್ಸೈಟ್ಗಗಳನ್ನು ಬಂದ ಮಾಡ್ಯಾರ,ಈಗ ಇದೂ ಹೋದರ ಏನಪಾ ಅಂತ ತಲೆಬಿಸಿ ಮಾಡಿಕೊಂಡ್ಯ; ಮುಂದ ನಾಕು ಕಮೆಂಟು ಓದಿದ ಮ್ಯಾಲ ಮನಸ್ಸು ತಿಳಿ ಆತು. ಒಳ್ಳೆ ಮೂಢನ್ನ ಮಾಡಿದ್ರಿ.

ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.

ಚಟುವಟಿಕೆಯ ಚಿಲುಮೆಯಂತೆ ಸಂಪದದಲ್ಲಿ ಬರೆಯುತ್ತಿರುವ ಹಿರಿಯರಿಗೆ ವಯಸ್ಸಾದವರು ಅಂತ ಹೇಳೋದು, ಅನ್ಕೊಳ್ಳೋದು ಕಷ್ಟ ಮಾರಾಯ!
ಹಿರಿಯರು ನಿಜ, "ವಯಸ್ಸಾದವರು" ಖಂಡಿತ ಅಲ್ಲ! :-)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಸುದ್ದಿ ಓದಿದಾಕ್ಷಣ ನೆತ್ತಿಯಮೇಲೆ ಮೊಳೆ ಗುದ್ದಿದಂತೆ (ಹಿಟ್ಟಿಂಗ್ ದ ನೈಲ್ ಆನ್ ದ ಹೆಡ್) ಪ್ರತಿಕ್ರಿಯಿಸಿದ, ನನ್ನ ಪ್ರತಿಕ್ರಿಯೆ ನೋಡಿ ನಿಮ್ಮ ಫೂಲಾಟವನ್ನು ಅರಿತು ಪ್ರತಿಕ್ರಿಯಿಸಿದ ಇನ್ನಿತರರ ಹಾಗು ನಿಮ್ಮ ಒಂದು ಥ್ಯಾಂಕ್ಸೂ ಇಲ್ಲವಾ? ಇರಲಿ ಬಿಡಿ, ಮುಂದಿನ ವರ್ಷ ನೋಡೋಣವಂತೆ

ಅಯ್ಯೋ! ನನ್ನ "ವಿಕಟಮತಿ"ಗೆ ನನಗೇ ಮುಜುಗರವಾಗುತ್ತಿದೆ. ಆದರೆ ಕೀಟಲೆ ಒಂದಿಷ್ಟಾದರೂ ಅಲುಗಾಡಿಸದಿದ್ದರೆ ಹೇಗೆ ಎಂದೂ ಅನಿಸುತ್ತಿದೆ. ಇದರಿಂದ ಯಾರಾದರೂ ತುಂಬಾ ಬೇಸರಮಾಡಿಕೊಂಡಿದ್ದರೆ ಮನ್ನಿಸುವಿರೆಂಬ ಆಶಯವೂ ಇದೆ.

ಇದರಿಂದ ಹರಿಗಂತೂ ತುಂಬಾ ಪೀಕಲಾಟ ಆಗಿರುವಂತಿದೆ... :)

ಅನಿವಾಸಿಯವರೆ,

ಮುಜುಗರ ಪಡ್ಬೇಡಿ - (ಟಿಪ್ಪಣಿಗಳನ್ನೂ) ಸ್ವಲ್ಪ ಹಗುರವಾಗಿ ತೊಗೊಳಿ :) :)

-ಹಂಸಾನಂದಿ
ನನ್ನ (mostly) ಇಂಗ್ಲಿಷ್ ಬ್ಲಾಗ್ - ಅಲ್ಲಿದೆ ನಮ್ಮ ಮನೆ:- http://neelanjana.wordpress.com/

ಏಪ್ರಿಲ್ ಫೂಲ್ ನ್ ಹೀಗೆ ಮಾಡೋದಾ???. ನಂಗೆ ಒಂದ್ಸಲ ಏನು ಅಂತ ಗೊತ್ತಾಗಲಿಲ್ಲ.
ಚೇತರಿಸಿ ಕೊಳ್ಳಕೆ ಸ್ವಲ್ಪ ವೇಳೆ ಬೇಕಾಯ್ತು.
ದಯವಿಟ್ಟು ಈ ತರಹದ ಸುದ್ದಿನ ಕನಸಿನಲ್ಲೂ ಎಣಿಸೋಲ್ಲ.

ವಂದನೆಗಳೊಂದಿಗೆ,
ಸುಧೀಂದ್ರ

ಕನ್ನಡಕ್ಕೆ ಸೇವೆಸಲ್ಲಿಸುತ್ತಿರುವ ಸಂಪದ ಮುಚ್ಚಿದರೆ, ಮಾತಾಡುವ ಕನ್ನಡ ಮನಸ್ಸುಗಳನ್ನು ಬಾಯಿಗಳನ್ನು ಮುಚ್ಚಿದಂತೆ. ಇದು ಎಷ್ಟರಮಟ್ಟಿಗೆ ಹಿತಕರ ?
ಇಂದೇನಾದರೂ ಗೂಗಲ್ ನಲ್ಲಿ ಒಮ್ಮೆ ಕ್ಲಿಕ್ಕಿಸಿದರೆ, ಹಿಂದಿ, ಬಂಗಾಳಿ, ತಮಿಳು, ತೆಲುಗು, ಮರಾಠಿ ಸೈಟ್ ಗಳು ನಮ್ಮಮೇಲೆ ದಾಳಿಮಾಡುತ್ತವೆ. ಆದರೆ ಇಂದಿಗೂ ಕನ್ನಡ ದ ಮಾಹಿತಿ ಸಂಗ್ರಹಕ್ಕೆ ನಾವು ಹರಸಾಹಸ ಮಾಡಬೇಕಾಗಿದೆ. ಬಹುಶಃ ನಮ್ಮ ಯುವಗೆಳೆಯ, ಹರಿಪ್ರಸಾದ್ ನಾಡಿಗ್ ರವರ, ಅವಿಶ್ರಾಂತ ದುಡಿಮೆಯಿಂದ ಮಾತ್ರ ಸಾಧ್ಯವಾಗಿದೆ. ಕನ್ನಡ ವಿಕಿಪೇಡಿಯದಲ್ಲೂ ನಾವು ೫೦೦೦ ಕ್ಕೂ ಹೆಚ್ಚು ಕನ್ನಡ ಲೇಖನಗಳನ್ನು ನೋಡಲು ಸಾಧ್ಯವಾಗಿದೆ. ಯೋಚಿಸಿ. ಖಂಡಿತಾ ಬಂದ್ ಮಾಡಬೇಡಿ. ಇದು ಅನ್ಯಾಯ ! ಕನ್ನಡ-ನುಡಿಗೆ ಮೋಸ !

ನಾನು ಇದನ್ನು ತೀವ್ರವಾಗಿ ಖಂಡಿಸುತ್ತೇನೆ.

ವೆಂಕಟೇಶ್,

ಹರಿಯವರೆ,

ಈಗ ನೆಮ್ಮದಿ ಆಯಿತು. ಎದೆ ಡವ-ಡವ ಹೊಡೆದುಕೊಳ್ಳುತ್ತಿತ್ತು. ಮಾರಾಯ್ರೆ. ಇಷ್ಟು ಕಷ್ಟ ಪಟ್ಟೀದಿರಿ. ಏನ್ ತಮಾಷೇನೆ ?

ನಿಜಕ್ಕೂ ಏಪ್ರಿಲ್ ಫೂಲಾಗಿದ್ದೆ. ಆದ್ರೆ. ಅದರಿಂದ ನಿಜವಾದ ಪ್ರೀತಿ ಇಮ್ಮಡಿಸಿದೆ. ಅಲ್ಲವೇ ?

MNS Rao
ನಾನು " "ಸಂಪದ"ದ ಕೊನೆಯ ದಿನಗಳು " ತಡವಾಗಿ ನೋಡಿದೆ. ಪ್ರತಿಕ್ರಿಯೆಗಳಿಂದ ಇದು ಏಪ್ರಿಲ್ ೧ ರ ಜೋಕ್ ಎಂದು ತಿಳಿದು ಸಮಾಧಾನದ ಉಸಿರು ಎಳೆದೆ.
ಒಂದು ಸಾರಿ ಯೋಚಿಸಿದರೆ ಸರಕಾರ ಹೀಗೆ ಮಾಡಲೂ ಸಾಧ್ಯ. ಆಗ ಇಂಥಹ ಸದುದ್ದೇಶದ ವೆಬ್-ಸೈಟ್‍ಗಳ ಗತಿ ಏನು!

ಹ ಹ ಹ ಎಲ್ಲರೂ ಏಪ್ರಿಲ್ ಫೂಲ್ ಆಗ್ಬಿಟ್ರು. ನಾನು ಬೆಳಗ್ಗೇನೆ ಲಾಗ್ ಆನ್ ಮಾಡಿದ್ದು, ಆಗ್ಲೆ ಸಂಪದ ಮುಚ್ಥಿದಾರ ಅಂತ ತುಂಬ ಬೇಜಾರ್ ಆಯಿತು. ಈಗ ನೆಮ್ಮದಿ. ಎಲ್ಲ್ರಿಗೂ ಮೂರ್ಖರ ದಿನಾಚರಣೆಯ ಶುಭಾಶಯಗಳು