ರಾಷ್ಟ್ರೀಯ ಭಾಷೆ

To prevent automated spam submissions leave this field empty.

"ಮಕ್ಕಳೇ ನಮ್ಮ ರಾಷ್ಟ್ರೀಯ ಭಾಷೆ ಯಾವುದು..?" ಎ೦ದು ಕೇಳಿದರು ಶಿಕ್ಷಕಿ.

"ಹಿ೦ದಿ" ಎ೦ದ ಎಲ್ಲ ಹುಡುಗರೂ ಒಕ್ಕೂರಲಿನಿ೦ದ.ದುರದೃಷ್ಟವಶಾತ್ ನಾನೂ ಆ ಗು೦ಪಿನಲ್ಲಿದ್ದೆ.ಇದು ನಡೆದುದ್ದು ಸುಮಾರು ಹದಿನೈದು ವರ್ಷಗಳ ಹಿ೦ದೆ.

ಹೌದು, ಹಿ೦ದಿ ನಮ್ಮ ಅಧಿಕೃತವಾಗಿ ನಮ್ಮ ರಾಷ್ಟ್ರೀಯ ಭಾಷೆಯಲ್ಲದಿದ್ದರೂ ಇ೦ದಿಗೂ ಅನಧಿಕೃತವಾಗಿ ರಾಷ್ಟ್ರಭಾಷೆಯಾಗಿ ಶಾಲೆಗಳಲ್ಲಿ ಮೆರೆಯುತ್ತಿದೆ.ಕೆಲವು ಪ್ರಾರ್ಥಮಿಕ ತರಗತಿಗಳ ಪುಸ್ತಕಗಳ ಹಿ೦ದಿನ ಪುಟಗಳಲ್ಲಿ ಸಹಾ "ನಮ್ಮ ರಾಷ್ಟ್ರಭಾಷೆ ಹಿ೦ದಿ" ಎ೦ದು ಮುದ್ರಿಸಿರುವುದನ್ನು ನೋಡಬಹುದು.

ನಿಜ, ಭಾರತದ ಸ೦ವಿಧಾನ ರಚನೆಗೊ೦ಡಾಗ ಹಿ೦ದಿಯನ್ನು ಭಾರತದ ವ್ಯವಹಾರಿಕ ಭಾಷೆಯಾಗಿ ಘೋಷಿಸಿತ್ತಾದರೂ ಹಿ೦ದಿ ನಮ್ಮ ರಾಷ್ಟ್ರ ಭಾಷೆಯಾಗಿ ಎ೦ದೂ ಘೋಷಿಸಿರಲಿಲ್ಲ.ಅಲ್ಲದೇ ಆ ನ೦ತರ 14 ಭಾಷೆಗಳನ್ನು ,ಕೊನೆಯಲ್ಲಿ 22 ಭಾಷೆಗಳನ್ನು ರಾಷ್ಟ್ರದ ಅಧಿಕೃತ ವ್ಯಾವಹಾರಿಕ ಭಾಷೆಗಳನ್ನಾಗಿ ಗುರುತಿಸಲಾಯಿತು.ಹಾಗಾಗಿ ದೇಶ ಬಾಷೆಗಳಲ್ಲಿ ಹಿ೦ದಿಯ ಸ್ಥಾನ ಉಳಿದ ಭಾಷೆಗಳಿಗೆ ಸಮ.

ದುರದೃಷ್ಟವೆ೦ದರೇ, ಇ೦ದಿಗೂ ಪ್ರಾರ್ಥಮಿಕ ಶಾಲೆಗಳಲ್ಲಿ ನಮ್ಮ ರಾಷ್ಟ್ರ ಭಾಷೆ ಹಿ೦ದಿ ಎ೦ದೇ ಹೇಳಿ ಕೊಡಲಾಗುತ್ತಿದೆ. ಶಾಲೆಗಳ ಹೊರಗೋಡೆಗಳ ಕಪ್ಪು ಹಲಗೆಗಳ ಮೇಲೆ ರಾಷ್ಟ್ರ ಪಕ್ಷಿ, ರಾಷ್ಟ್ರ ಪ್ರಾಣಿಗಳ ಜೊತೆಗೆ ರಾಷ್ಟ್ರ ಭಾಷೆ ಹಿ೦ದೀ ಎ೦ದೇ ನಮೂದಿಸಲಾಗುತ್ತಿದೆ.ಮಕ್ಕಳಿಗೆ ಸರಿಯಾದ ಮಾರ್ಗದರ್ಶನ ನೀಡಬೇಕಾದ ಶಿಕ್ಷಕರೇ ಮಕ್ಕಳಿಗೆ ತಪ್ಪು ಮಾಹಿತಿ ನೀಡುತ್ತಿರುವುದು ದುರ೦ತ.ಇಷ್ಟಕ್ಕೂ ’ವಿವಿಧತೆಯಲ್ಲಿ ಏಕತೆ’ ಎನ್ನುವ ನಮಗೆ ಏಕ ರಾಷ್ಟ್ರಭಾಷಾ ಪದ್ದತಿ ಅವಶ್ಯಕತೆ ಇಲ್ಲ ಅಲ್ಲವೇ..?

(ಗಮನಿಸಿ: ಭಾರತೀಯ ಸ೦ವಿಧಾನದಲ್ಲಿ ಭಾಷೆಗಳಿಗೆ ಸ೦ಬ೦ಧ ಪಟ್ಟ ಆರ್ಟಿಕಲ್ --344 - 348)

ಗುರುರಾಜ ಕೊಡ್ಕಣಿ,ಯಲ್ಲಾಪುರ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಗುರುರಾಜ

ತಮ್ಮ ಮಾತು ನಿಜ ಮಹೇಶ. ಆದರೆ ಕೆಲವು ಉತ್ತರ ಭಾರತೀಯರು ಬೆ೦ಗಳೂರಿಗರಿಗೆ "ಹಿ೦ದಿ ಕಲಿಯಿರಿ ಅದು ನಮ್ಮ ರಾಷ್ಟ್ರ ಭಾಷೆ" ಎ೦ದಾಗ ಪಾಪ, ಆ ಬೆ೦ಗಳೂರಿಗರು ಸುಮ್ಮನಾದರು.ಅವರಿಗೆ ಕನ್ನಡದ ಮೇಲೆ ಅಭಿಮಾನವಿಲ್ಲವೆ೦ದಲ್ಲ,ಆದರೆ ಅವರೆಲ್ಲರೂ ಹಿ೦ದಿಯನ್ನು ರಾಷ್ಟ್ರ ಭಾಷೆಯಾಗಿ ಭಾವಿಸಿದ್ದಾರೆ.ಹಾಗಾಗಿ ಈ ಲೇಖನ ಬರೆಯಬೇಕೆನಿಸಿತು.

ಧನ್ಯವಾದಗಳು

ಯಾವುದೆ ದೇಶಕ್ಕೂ ಒಂದು ರಾಷ್ತ್ರಭಾಷೆ ಅಂತ ಇರಬೇಕಲ್ಲವಾ?

ಹಿಂದಿ ರಾಷ್ಟ್ರ ಭಾಷೆಯಾದರೆ ನಮಗಾಗುವ ನಷ್ಟವೇನು
ಇಲ್ಲದಿದ್ದರೆ ಆಗುವ ಲಾಭವೇನು.

ಕನ್ನಡದ ಸ್ಥಾನದಲ್ಲೇನು ಬದಲಾವಣೇಯಾಗುವುದಿಲ್ಲ ಅಲ್ಲವೇ?

ರೂಪ

ಗುರುರಾಜ

ಒ೦ದು ದೇಶಕ್ಕೆ ಒ೦ದೇ ಭಾಷೆ ರಾಷ್ಟ್ರ ಭಾಷೆಯಾಗಬೇಕೆ೦ದೇನೂ ಇಲ್ಲ.

ಹಿ೦ದಿ ರಾಷ್ಟ್ರ ಭಾಷೆ ಎ೦ಬ ತಿಳುವಳಿಕೆಯಿ೦ದ ಹಿ೦ದಿಗೆ ಲಾಭವಿಲ್ಲ ನಿಜ.ಆದರೆ ಕರ್ನಾಟಕದಲ್ಲಿನ ಅನೇಕ ಸಾಫ್ಟವೇರ ಕ೦ಪನಿಗಳಲ್ಲಿನ ಉತ್ತರ ಭಾರತೀಯರು ಕನ್ನಡ ಕಲಿಯದೇ (ಕನಿಷ್ಟ ಪ್ರಯತ್ನ ಕೂಡಾ ಮಾಡದೇ) ಹಿ೦ದಿ ರಾಷ್ಟ್ರ ಭಾಷೆ,ಅದನ್ನು ಕಲಿಯದೇ ಕನ್ನಡಿಗರು ರಾಷ್ಟ್ರಕ್ಕೆ ಅವಮಾನ ಮಾಡಿತ್ತಿದ್ದೀರಿ ಎನ್ನುವ ಧಾಟಿಯಲ್ಲಿ ಮಾತನಾಡುತ್ತಾರೆ.ಅದಕ್ಕಾಗಿಯೇ ಹಿ೦ದಿ ರಾಷ್ಟ್ರ ಭಾಷೆಯೆ೦ಬುದು ಎಲ್ಲರಿಗೂ ಗೊತ್ತಿರಲಿ ಅಷ್ಟೇ.

ಧನ್ಯವಾದಗಳು

ಗುರುರಾಜ

ಮೇಲಿನ ಸಾಲಿನಲ್ಲಿ "ಹಿ೦ದಿ ರಾಷ್ಟ್ರ ಭಾಷೆಯಲ್ಲವೆ೦ಬುದು ಎಲ್ಲರಿಗೂ ಗೊತ್ತಿರಲಿ" ಎ೦ದು ಓದಿಕೊಳ್ಳಿ

ಹಲವು ನುಡಿಗಳಿರುವ ನಮ್ಮ ದೇಸದಲ್ಲಿ ಒಂದು ದೇಶಕ್ಕೆ ಒಂದೇ ನುಡಿ ಎನ್ನುವುದು ಡೆಮಾಕ್ರಸಿಗೆ ವಿರುದ್ದವಾದ ನಿಲುವು.
ಹಾಗೇನಾದರೂ ಆದರೆ ಅವತ್ತು ಡೆಮಾಕ್ರಸಿ ಸತ್ತಹಾಗೆ
---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಥೂ.. ನಾನೂ ಬೆಂಗಳೂರಿಗೆ ಬರೋಕೆ ಮುಂಚೆ ಹಾಗೇ ಅನ್ಕೊಂಡಿದ್ದೆ ಹಿಂದಿ ರಾಷ್ಟ್ರಭಾಷೆ ಎಲ್ಲಾರೂ ಕಲಿಬೆಕು ಅಂತ. ಸಣ್ಣವ್ರಿದ್ದಾಗಿಂದ್ಲೂ ಅದನ್ನೆ ತಲೆಲ್ಲಿ ತುಂಬಿದ್ರು ನಮಗೆ ಶಾಲೆಲ್ಲಿ, ಎಲ್ಲಾ ಕಡೆ. ಇಂದಿಗೂ ಬಹುಪಾಲು ಮಂದಿಗೆ ಅದೇ ತಪ್ಪು ತಿಳುವಳಿಕೆ ಇದೆ.

ಗುರುರಾಜರೇ
ತುಂಬಾ ಧನ್ಯವಾದಗಳು.
ನಿಮ್ಮಿಂದ ಒಂದು ಹೊಸ ವಿಷಯ ತಿಳಿಯುವಂತಾಯಿತು. ತಪ್ಪು ಗ್ರಹಿಕೆ ದೂರವಾಯಿತು
ನಿಮ್ಮ ಲೇಖನ ಓದಿ ವಿಕಿಪೀಡಿಯದಲ್ಲಿ ಹುಡುಕಿದ ಮೇಲೆ ನನಗೆ ಈ ಇನ್ನಷ್ಟು ವಿಷಯಗಳು ಸಿಕ್ಕಿತು.
http://en.wikipedia.org/wiki/Official_languages_of_India

http://en.wikipedia.org/wiki/National_language#India
http://rajbhasha.nic.in/consteng.htm

ರೂಪ

ಹೌದು ನಾನು ಮೊದಲು ಹಿಂದಿ ರಾಷ್ಟ್ರ ಭಾಷೆ ಅಂದುಕೊಂಡಿದ್ದೆ. ಹಿಂದಿ ನಮಗೆ ಹೇರಿರುವ ಹೊರೆ ಎಂದು ಈಗ ಅರಿವಾಯಿತು.
ಹಾಗೆ ರಾಷ್ಟ್ರ ಭಾಷೆ ಮಾಡಹೊರಟಲ್ಲಿ ಕನ್ನಡವೇ ಯಾಕಾಗಬಾರದು?
ಕನ್ನಡದಲ್ಲಿ ಮನುಷ್ಯರನ್ನು ಕರೆದುಕೊಂಡು ಹೋಗಲು,ವಸ್ತುವನ್ನು ತಗೆದುಕೊಂಡು ಹೋಗಲು ಹೀಗೆ ಹೇಳುತ್ತಾರೆ.
ಅವನನ್ನು ಕರೆದುಕೊಂಡು ಹೋಗು, ಅದನ್ನು ತಗೊಂಡು ಹೋಗು ಅಂತ ಪದಗಳನ್ನು ಬಳಸಬಹುದು
ಆದರೆ ಹಿಂದಿಯಲ್ಲಿ ಹೀಗಿಲ್ಲ ಅದು ಮನುಷ್ಯರಾಗಲಿ ವಸ್ತುವಾಗಲಿ ಒಂದೇ ಮಾತು ಲೇಕೆ ಜಾವ್ ;-)
ಮತ್ತೆ ಕನ್ನಡ ೨೦೦ಬಿ.ಸಿ ಗಿಂತಲೂ ಹಳೆಯದು ಮತ್ತು ಸಮೃದ್ಧವಾಗಿದೆ.
ಅದಕ್ಕಿಂತ ಮೊದಲು ನಾವು ಪ್ರಾಥಮಿಕ ಶಾಲೆಯಲ್ಲಿ ಹಿಂದಿ ಕಲಿಕೆಯನ್ನು ನಿಲ್ಲಿಸಬೇಕು.
ನಿಮ್ಮ,
ಗಿರೀಶ ರಾಜನಾಳ
ನನಗಿರುವುದು ಒಂದೇ ಕನ್ನಡ.