ಮಕ್ಕಳಿಗೂ ಮೊಬೈಲ್ ಫೋನು ಮಾರಾಟ ಮಾಡುವ ಜಾಹೀರಾತುಗಳು!

To prevent automated spam submissions leave this field empty.

ಅಪ್ಪ ದೂರದಲ್ಲೆಲ್ಲೋ ಬಹುಮಹಡಿ ಕಟ್ಟಡದ ಮೇಲ್ವಿಚಾರಣೆ ಮಾಡುತ್ತಿದ್ದಾನೆ, ಗಗನಚುಂಬಿಗಳನ್ನು
ಎಬ್ಬಿಸುವ ಗುಂಗಿನಲ್ಲಿರುವಾತನಿಗೆ ಮನೆಗೆ ಹೋಗಲು ಪುರೊಸೊತ್ತಾಗಲೀ, ಮಗಳೊಂದಿಗೆ ಮಾತನಾಡುವ  ವ್ಯವಧಾನವಾಗಲೀ ಆತನಿಗೆ ಇದ್ದಂತಿಲ್ಲ. ಅಪ್ಪನನ್ನು ಕಾದು ಸುಸ್ತಾದ ಮಗಳಿಗೆ ಮೊಬೈಲ್ ಫೋನೇ ಗತಿ.
ಅಪ್ಪನಾದರೋ ತಾನಿದ್ದಲ್ಲಿಂದಲೇ ಆಗಸವನ್ನು ನೋಡಿ ಆ ಕಡೆ ಫೋನನ್ನಾಲಿಸುತ್ತಿರುವ ಮಗಳಿಗೆ
ನಕ್ಷತ್ರಪುಂಜಗಳ ಬಗ್ಗೆ ಹೇಳುತ್ತಾನೆ. ಮಗಳಿಗೆಷ್ಟು ಖುಷಿಯಾಯಿತೋ, ಬಿಟ್ಟಿತೋ ಗೊತ್ತಿಲ್ಲ. ನೆಟ್
ವರ್ಕ್ ಗಟ್ಟಿ, ಮನೆಗೆ ಬರಲು ಪುರುಸೊತ್ತಿಲ್ಲದ ಅಪ್ಪನಲ್ಲಿ ಮಾತನಾಡಬೇಕಾದರೆ ಕಂದಮ್ಮನಿಗೆ
ಮೊಬೈಲೊಂದೇ ಗತಿ ಎನ್ನುವುದಂತೂ ಸ್ಪಷ್ಟವಾಗುತ್ತದೆ.

ದೂರದರ್ಶನದ ಹಲವು ವಾಹಿನಿಗಳಲ್ಲಿ ಈಗ ಕೆಲ ದಿನಗಲಳಿಂದ ಪದೇ ಪದೇ ತೋರಿಸಲಾಗುತ್ತಿರುವ ಜಾಹೀರಾತು ಇದು. ತಮ್ಮ
ವ್ಯವಹಾರದ ವ್ಯಾಪ್ತಿಯನ್ನು ಹೆಚ್ಚಿಸಲು, ಮೊಬೈಲ್ ಬಳಕೆದಾರರ ಸಂಖ್ಯೆಯನ್ನು ಇನ್ನಷ್ಟು
ಮಿಲಿಯಗಳಿಗೆ ಹೆಚ್ಚಿಸಲು ಮೂರು-ನಾಲ್ಕು ವರ್ಷ ವಯಸ್ಸಿನ ಕಂದಮ್ಮಗಳಿಗೂ ಮೊಬೈಲ್ ಫೋನುಗಳನ್ನು
ಮಾರಾಟ ಮಾಡಲು ಖಾಸಗಿ ದೂರವಾಣಿ ಕಂಪೆನಿಗಳು ಹೇಸುವುದಿಲ್ಲ. ಈ ಖಾಸಗಿ ಕಂಪೆನಿಗಳ ಸೇವೆ ಮಾಡುತ್ತಾ
ಪುರುಸೊತ್ತೇ ದೊರೆಯದಿರುವ ಅಪ್ಪ-ಅಮ್ಮಗಳಿಗೆ ತಮ್ಮ ಕಂದಮ್ಮಗಳೊಡನೆ ಮಾತಾಡಲು ಅಷ್ಟಾದರೂ
ನೆರವಾಗಬೇಡವೇ?

ಮೊಬೈಲ್ ಫೋನ್ ಬಳಕೆಯು ಶತ ಪ್ರತಿಶತ ಸುರಕ್ಷಿತವಲ್ಲವೆಂದು ಹಲವು ಅಧ್ಯಯನಗಳು ಈಗಾಗಲೇ ಎಚ್ಚರಿಸಿವೆ.
ಹತ್ತು ವರ್ಷಗಳಿಗೂ ಅಧಿಕ ಕಾಲ ಮೊಬೈಲ್ ಫೋನ್ ಬಳಸುವುದರಿಂದ ಮೆದುಳಿನ ಮೇಲೆ ಪರಿಣಾಮಗಳುಂಟಾಗಬಹುದೆಂದೂ,
ಮೆದುಳಿನಲ್ಲಿ ಗೆಡ್ಡೆಗಳು ಬೆಳೆಯಲು ಕಾರಣವಾಗಬಹುದೆಂದೂ ಈ ವರದಿಗಳು ಎಚ್ಚರಿಸಿವೆ. ಮಕ್ಕಳ ಮೆದುಳು
ಮತ್ತು ತಲೆಬುರುಡೆಗಳು ಸೂಕ್ಷ್ಮವಾಗಿರುವುದರಿಂದ ಮಕ್ಕಳಲ್ಲಿ ಮೊಬೈಲ್ ಬಳಕೆಯ ದುಷ್ಪರಿಣಾಮಗಳು ಹೆಚ್ಚಿರುತ್ತವೆ.
ತೀರಾ ಎಳವೆಯಲ್ಲಿಯೇ ಮೊಬೈಲ್ ಬಳಕೆಯನ್ನಾರಂಭಿಸುವುದರಿಂದ ಜೀವಿತಕಾಲದಲ್ಲಿ ಮೊಬೈಲ್ ಬಳಕೆಯ ಅವಧಿಯೂ
ಹೆಚ್ಚುತ್ತದೆ, ಅದರಿಂದಾಗುವ ಅಪಾಯವೂ ಹೆಚ್ಚುತ್ತದೆ. ಆದ್ದರಿಂದಲೇ ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು
ಉತ್ತೇಜಿಸುವುದು ಸಾಧುವಲ್ಲ ಎಂದು ತಜ್ಞರು ಎಚ್ಚರಿಸುತ್ತಾರೆ.

ಈ ವರದಿಗಳನ್ನು ನೋಡಿ:

1. Independent Expert Group on Mobile Phones: Report of the
Group (The Stewart Report) - Mobile Phones and Health Available at http://www.iegmp.org.uk/report/text.htm
2. Cherry N. Cell phone radiation poses a serious biological and health risk
Available at
http://www.buergerwelle.de/pdf/cell_phone_radiation_poses_a_serious_biological_and_health_risk.pdf
3. Maisch D. Children and Cell Phones: Is there a health risk? The case for
extra precautions. Available at http://www.emrnetwork.org/schools/maisch_3_03.pdf
4. Weinbergera
Z, Richter ED. Cellular telephones and effects on the brain: The head as an
antenna and brain tissue as a radio receiver. Medical Hypotheses.
2002;59(6):703-705 Abstract
5. Cell phones may present health risks for kids: Scientists say parents
should think twice before buying them Available at http://www.msnbc.msn.com/id/7251038/

ಮಕ್ಕಳಲ್ಲಿ ಮೊಬೈಲ್ ಬಳಕೆಯನ್ನು ಪ್ರಚೋದಿಸುವ ಜಾಹೀರಾತುಗಳಿಗೆ ಕಡಿವಾಣ ಹಾಕಬೇಕೆಂದು ಬಹು ಹಿಂದೆಯೇ
ತಜ್ಞರು ಎಚ್ಚರಿಸಿದ್ದರು:

Kids mobile phone ads 'irresponsible' Available at http://news.bbc.co.uk/1/hi/in_depth/sci_tech/2001/glasgow_2001/1525676.stm

ನಮ್ಮ ದೇಶದಲ್ಲಿ ಇದೀಗ ಆರಂಭವಾಗಿರುವ ಈ ಹೊಸ ವ್ಯಾಪಾರವನ್ನು ನಾವೆಲ್ಲರೂ ವಿರೋಧಿಸಬೇಕಿದೆ. ಕೇಂದ್ರದ
ಆರೋಗ್ಯ ಸಚಿವರಿಗೆ [
hfm@alpha.nic.in] ಈ ಬಗ್ಗೆ
ವಿ-ಪತ್ರವನ್ನು
ಬರೆಯಬಹುದು. ನಾನೀಗಾಗಲೇ ಬರೆದಿದ್ದೇನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಡಾ.ಕಕ್ಕಿಲ್ಲಾಯರೆ,
ನನಗೂ ಜಾಹೀರಾತು ನೋಡಿ ಬೇಸರವಾಯಿತು.
ಮೊಬೈಲ್ ಕಂಪನಿಗೆ,ಸರಕಾರಕ್ಕೆ ಹಣ ಬಂದರೆ ಸಾಕು.
ತಾಸುಗಟ್ಟಲೆ ಹಗಲಲ್ಲಿ ಮಾತನಾಡಿ,
ತಲೆ ಪಕ್ಕದಲ್ಲಿ ಮೊಬೈಲ್ ಇಟ್ಟುಕೊಂಡು ಮಲಗುವ ಮಕ್ಕಳಿಗೆ ಅದರ ತೊಂದರೆ ಗೊತ್ತಿಲ್ಲ.
ಅದನ್ನು ಕೊಡಿಸಿ,ಜಾಗ್ರತೆ ಹೇಳದ ಅಪ್ಪ-ಅಮ್ಮನ ತಲೆ ಸರಿ ಮಾಡಬೇಕು.
ಗಣೇಶ.