ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ

To prevent automated spam submissions leave this field empty.

ಬೆಂಗಳೂರಿನ ಕನ್ನಡಿಗರಿಗಾಗಿ- ರಘೋತ್ತಮ್ ಕೊಪ್ಪರ
ರೈಲ್ವೆ ಇಲಾಖೆಯಲ್ಲಿ ಕನ್ನಡಿಗರಿಗೆ ಸರಿಯಾದ ಸ್ಥಾನಮಾನ ಸಿಕ್ಕಿಲ್ಲ. ಇದರ ಬಗ್ಗೆ ಪತ್ರಿಕೆಯಲ್ಲಿ ಸುದ್ದಿಗಳು ಬರುತ್ತಲೇ ಇವೆ. ಅದಿರಲಿ ಇದೇ ವಿಷಯ ಬೆಂಗಳೂರಿನಲ್ಲಿ ಅತಿರೇಕವಾಗಿ ಬೆಳೆದಿದೆ. ಇದರ ಬಗ್ಗೆ ನನ್ನ ಸ್ನೇಹಿತನೊಬ್ಬ ಮೇಲ್ ಕಳಿಸಿದ, ಅದನ್ನು ಹಾಗೆ ಕನ್ನಡೀಕರಿಸಿದ್ದೇನೆ. ಸ್ವಲ್ಪ ಓದಿ.......
ಇದು ನಮ್ಮ ಕರುನಾಡು........
ಆದರೂ ಇಲ್ಲಿ ಕನ್ನಡಿಗರು ಉದ್ಯೋಗಕ್ಕಾಗಿ ಪರದಾಡುತ್ತಿದ್ದಾರೆ, ಬೇರೆ ರಾಜ್ಯದವರಿಗೆ ಇಲ್ಲಿ ಸುಲಭವಾಗಿ ಉದ್ಯೋಗ ದೊರಕುತ್ತಿವೆ.
ಕನ್ನಡಿಗರಿಗೆ ಬೆಂಗಳೂರಿನಲ್ಲಿ ಪ್ಲಾಟ್ ಕೊಳ್ಳುವುದು ಕಷ್ಟ. ಅನ್ಯ ಭಾಷಿಗರಿಗೆ ಅದು ಸುಲಭ, ಕಾರಣ ಆರಂಕಿ ಸಂಬಳ.
ಕನ್ನಡಿಗರಿಗೆ ತಮ್ಮ ಮಕ್ಕಳನ್ನು ಒಳ್ಳೆಯ ಶಾಲೆ ಕಳಿಸಲು ಅರ್ಥಿಕವಾಗಿ ಸ್ವಲ್ಪ ತೊಂದರೆಯಾಗುತ್ತದೆ.

ಅದಿರಲಿ, ಹೊರ ರಾಜ್ಯದವರು ತಮ್ಮ ಸಂಸ್ಥೆಯಲ್ಲಿರುವ ಎಕ್ಸಿಕ್ಯೂಟಿವ್ ಹುದ್ದೆಯಿಂದ ಕೆಳಮಟ್ಟದ ಹುದ್ದೆಯವರೆಗೂ ತಮ್ಮ ಜನರನ್ನೇ ತುಂಬಿಕೊಳ್ಳುತ್ತಾರೆ. ಆಫೀಸ್ ನಲ್ಲಿಯೂ ಅವರೆಲ್ಲ ತಮ್ಮ ತಮ್ಮ ಭಾಷೆಗಳಲ್ಲಿಯೇ ಮಾತನಾಡುತ್ತಾರೆ. ಈ ಹೊರರಾಜ್ಯದವರು ಇಲ್ಲೇ ಬಂದು ಮನೆ ಕಟ್ಟಿ ಸೆಟ್ಲ್ ಆದರೂ ತಮ್ಮ ಮಕ್ಕಳನ್ನು ಸಿ.ಬಿ.ಎಸ್.ಸಿ ಅಥವಾ ಐ.ಸಿ.ಎಸ್.ಸಿ. ಸಿಲೇಬಸ್ ಇರುವ ಶಾಲೆಗಳಿಗೆ ಕಳಿಸುತ್ತಾರೆ. ಅಲ್ಲಿ ಕನ್ನಡವೇ ವಿರಳ. ನೋಡಿ ಇದು ಬೆಂಗಳೂರಿನ ಕಥೆಯೋ ಅಥವಾ ವ್ಯಥೆಯೋ.
ತಪ್ಪು ನಮ್ಮದೇ ?

ಹೊರ ರಾಜ್ಯದವರ್ ಜತೆಗೆ ಮಾತನಾಡುವಾಗ ನಾವು ಹಿಂದಿ ಅಥವಾ ಇಂಗ್ಲೀಷ್ ಭಾಷೆಯನ್ನು ಮಾತನಾಡುತ್ತೇವೆ. ಹೆಚ್ಚು ಸಂಸ್ಥೆಗಳಲ್ಲಿ ಕನ್ನಡದವರು ಬಾಸ್ ಪೊಸಿಷನ್ ನಲ್ಲಿದ್ದರೂ ಹೊರ ರಾಜ್ಯದವರನ್ನೇ ಆರಿಸುತ್ತಾರೆ. ಗ್ಲೋಬಲೈಸೇಷನ್ ಹೆಸರಿನಲ್ಲಿ ಎಲ್ಲರನ್ನೂ ಸ್ವಾಗತಿಸಿ, ನಮ್ಮ ಜನಕ್ಕೆ ಕೆಲಸ ಸಿಗದ ಹಾಗೆ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ನಿಮಗೆಲ್ಲ ನನ್ನದೊಂದು ವಿನಂತಿ. ನಿಮ್ಮ ಸಂಸ್ಥೆಯಲ್ಲಿ ಯಾವುದಾದರೂ ಹುದ್ದೆ ಖಾಲಿಯಿದ್ದರೆ ಕನ್ನಡಿಗರಿಗೇ ಆದ್ಯತೆ ಕೊಡಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಳೆದ 4-5 ದಿನಗಳಿಂದ ಸಿಟಿಬ್ಯಾಂಕ್‍ನವರ ಜೊತೆ ಒದ್ದಾಡುತ್ತಿದ್ದೇನೆ..ಕಸ್ಟಮರ್ ಕೇರ್‍ಗೆ ಮಾತನಾಡೋಕೆ ಹಿಂದಿ ಮತ್ತು ಇಂಗ್ಳೀಶ್‍ಗಳ ನಡುವೆ ಆಯ್ಕೆ ಮಾಡಬೇಕು.ಇಂಗ್ಲೀಶ್ ಆಯ್ಕೆ ಮಾಡಿಕೊಂಡು,ಕನ್ನಡದಲ್ಲಿ ಮಾತನಾಡಿದೆ.ಒಬ್ಬನಿಗೆ ನಾನು ಮಾತನಾಡುವ ನುಡಿ ತೆಲುಗಾಗಿ ಕಾಣಿಸಿತು.ಮತ್ತೆ ಕೆಲವರಿಗೆ ತಮಿಳು,ತೆಲುಗು, ಹಿಂದಿ ಗೊತ್ತಿದೆ. ಕನ್ನಡ ಗೊತ್ತಿಲ್ಲ.ಕನ್ನಡದಲ್ಲೇ ನಾನು ಮಾತನಾಡುವುದು, ಇದರ ಬಗ್ಗೆ ದೂರು ಎಲ್ಲಿ ಸಲ್ಲಿಸುವುದೆಂದು ಅವರಲ್ಲೇ ಕೇಳಿದೆ.ಉತ್ತರವಿಲ್ಲ.ನನ್ನ ಫೋನ್ ನಂಬರನ್ನು ತೆಗೆದುಕೊಂಡರು.ಆದರೆ ಕನ್ನಡದವರಿಂದ ಫೋನ್ ಬರಲಿಲ್ಲ.ಸುಮಾರು 6 ಸರ್ತಿ ಫೋನ್ ಮಾಡಿದ್ದೇನೆ.ಕನ್ನಡ ಗೊತ್ತಿರುವವರು ಇಲ್ಲಿಯವರೆಗೆ ಸಿಕ್ಕಿಲ್ಲ.ನೋಡೋಣ, ಸಿಗಬಹುದು.

ನಮ್ಮಲ್ಲಿ ತುಂಬ ಜನ ಸಿಟಿಬ್ಯಾಂಕ್‍ನವರ್ ಜೊತೆ ಮಾತನಾಡಿರುತ್ತಾರೆ.ಯಾರು ಇದನ್ನು ಗಮನಿಸಿಲ್ವಾ?