೩ನೆಯ ಸಂಚಿಕೆ: ಜ್ಞಾನಪೀಠ ಪುರಸ್ಕೃತ ಸಾಹಿತಿ, ಯು ಆರ್ ಅನಂತಮೂರ್ತಿಯವರೊಂದಿಗೆ...

To prevent automated spam submissions leave this field empty.
ಸಂದರ್ಶನ ಇಲ್ಲೇ ಕೇಳಿ: 

ಬೆಳಗಾವಿ ಮತ್ತು ಗಡಿಯಲ್ಲಿರುವ ಕೆಲವು ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕು ಎಂಬ ನಿರ್ಣಯವೊಂದನ್ನು ಬೆಳಗಾವಿ ಮಹಾನಗರ ಪಾಲಿಕೆ ಅಂಗೀಕರಿಸಿತ್ತು. ಇದಕ್ಕೆ ಕರ್ನಾಟಕಾದ್ಯಂತ ಪ್ರತಿಭಟನೆ ವ್ಯಕ್ತವಾಗಿದೆ.(ಈಗ ಕರ್ನಾಟಕ ಸರಕಾರ ಬೆಳಗಾವಿ ಮಹಾನಗರ ಪಾಲಿಕೆಯನ್ನು ರದ್ದು ಮಾಡಿ ಆಡಳಿತಾಧಿಕಾರಿಯನ್ನು ನೇಮಿಸಿದೆ.) ಇತ್ತೀಚೆಗೆ ಬೆಳಗಾವಿ ನಗರ ಪಾಲಿಕೆಯ ಮೇಯರ್ ವಿಜಯ್ ಪಾಂಡುರಂಗ ಮೋರೆ ಬೆಂಗಳೂರಿಗೆ ಬಂದು ಶಾಸಕರ ಭವನದಲ್ಲಿ ಇಳಿದುಕೊಂಡಿದ್ದಾಗ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು 'ಮಿಂಚಿನ ದಾಳಿ' ನಡೆಸಿ ವಿಜಯ್ ಮೋರೆಯವರ ಮುಖಕ್ಕೆ ಮಸಿ ಬಳಿದು ಹಲ್ಲೆ ನಡೆಸಿ ತಮ್ಮ ಕನ್ನಡಾಭಿಮಾನವನ್ನು ತೋರಿಸಿದರು. ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರ ಹಿಂಸಾತ್ಮಕ ಪ್ರತಿಭಟನೆ ಈಗ ಬಿಸಿಯೇರಿದ ಚರ್ಚೆಗಳಿಗೆ ಕಾರಣವಾಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಚಂದ್ರಶೇಖರ ಪಾಟೀಲ್ ಈ ಮಸಿಬಳಿಯುವಿಕೆಯನ್ನು 'ಕ್ರಿಯೆಗೆ ತಕ್ಕ ಪ್ರತಿಕ್ರಿಯೆ'ಎಂದು ಸಮರ್ಥಿಸಿಕೊಂಡರು. ಇದೇ ವೇಳೆ ಜ್ಞಾನಪೀಠ ಪುರಸ್ಕೃತ ಯು.ಆರ್. ಅನಂತಮೂರ್ತಿ 'ಕನ್ನಾಡಭಿಮಾನ'ದ ಹಿಂಸಾತ್ಮಕ ಅಭಿವ್ಯಕ್ತಿಯನ್ನು ವಿರೋಧಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಚಂದ್ರಶೇಖರ ಪಾಟೀಲ್ 'ಮಸಿಬಳಿದದ್ದನ್ನು ವಿರೋಧಿಸುವವರು ಮಸಾಲೆ ದೋಸೆ ಸಾಹಿತಿಗಳು'ಎಂದು ಟೀಕಿಸಿದರು. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸಂಪದ ಬಳಗ ಯು.ಆರ್ .ಅನಂತಮೂರ್ತಿಯವರನ್ನು ಸಂದರ್ಶಿಸಿದೆ. ಹಿಂಸಾತ್ಮಕ ಕನ್ನಡಾಭಿಮಾನವನ್ನು ಗೋಕಾಕ್ ಚಳವಳಿಯ ಕಾಲದಿಂದಲೂ ವಿರೋಧಿಸುತ್ತಲೇ ಬಂದಿರುವ ಅನಂತಮೂರ್ತಿ ಈ ಸಂದರ್ಶನದಲ್ಲಿ ತಮ್ಮ ಬಗೆಗಿನ ಟೀಕೆಗಳಿಗೆ ಉತ್ತರಿಸಿದ್ದಾರೆ. ಜತೆಗೆ ಕನ್ನಡದ ಸಂದರ್ಭದಲ್ಲಿ ಭಾಷೆಯ ಅಭಿವೃದ್ಧಿ, ಭಾಷಾಭಿಮಾನ, ಭಾಷಾಂಧತೆಗಳ ಕುರಿತ ತಮ್ಮ ಚಿಂತನೆಗಳನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ.

>ಸಂದರ್ಶನದ ಆಡಿಯೋ ಕೇಳಲು ಇಲ್ಲಿ ಕ್ಲಿಕ್ ಮಾಡಿ. (28 MB)

ಈ ಸಂದರ್ಶನದ ಬಗ್ಗೆ ನಿಮ್ಮ ಅಭಿಪ್ರಾಯಗಳನ್ನೂ, ಅದರಲ್ಲಿ ಚರ್ಚಿಸಲಾಗಿರುವ ವಿಷಯಗಳ ಬಗ್ಗೆ ಅಭಿಪ್ರಾಯಗಳನ್ನೂ‌ ಸಂಪದದಲ್ಲಿ ಕಾಮೆಂಟ್ ಮೂಲಕ ತಿಳಿಸಿ. ಸಂದರ್ಶನದ ವೇಳೆ ತೆಗೆದ ಕೆಲವು ಫೋಟೋಗಳು:
u r ananthmurthy
ಯು ಆರ್ ಅನಂತಮೂರ್ತಿ ಅವರ ಆಫೀಸಿನಲ್ಲಿ.
ಆಂಜನೇಯ ಯು ಆರ್ ಅನಂತಮೂರ್ತಿಯವರ ರೀಡಿಂಗ್ ರೂಮ್ ಪಕ್ಕದಲ್ಲಿದ್ದ ಆಂಜನೇಯ.
u r ananthmurthy
 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನನ್ನ ಕಂಪ್ಯೂಟರ್ ಸೌಂಡ್ ಸಿಸ್ಟಂನಲ್ಲಿ ತೊಂದರೆ ಇದೆ. ಮೊದಲ ೫ ನಿಮಿಷಗಳ ಮಾತು ಕೇಳುತ್ತಿದ್ದ ಹಾಗೆಯೇ ಸ್ತಬ್ಧವಾಗಿದೆ. ಅದಕ್ಕೇ ಈ ಕಡತವನ್ನು ಪೂರ್ಣವಾಗಿ ಇಳಿಸಿಕೊಂಡಿರುವೆ. (೨೭ ಎಂ ಬಿ). ನಂತರ ಇದನ್ನು ಕೇಳಿ ಉತ್ತರಿಸುವೆ.

ಒಮ್ಮೆ ನಾನು (೧೯೭೫ರಲ್ಲಿ) ಅವರ ಮನೆಗೆ ಹೋಗಿದ್ದೆ. ಮುಂಬಾಗಿಲಿನಲ್ಲೇ ಕಾಣುವಂತೆ ಏಸು ಕ್ರಿಸ್ತ ಮತ್ತು ವೆಂಕಟೇಶ್ವರನ ಫೋಟೋ ಹಾಕಿದ್ದರು. ಈಗಲೂ ಅವು ಹಾಗೆಯೇ ಇವೆಯಾ?

ವಂದನೆಗಳೊಂದಿಗೆ
---
ತವಿಶ್ರೀನಿವಾಸ

ತೊಂದರೆ ಇಲ್ಲ. ನಿಧಾನವಾಗಿ ಕೇಳಿ :)

Podcasting ಎಲ್ಲ ಕನ್ನಡಿಗರ ಮನೆಗಳಲ್ಲೂ ಕ್ಲಿಕ್ ಆಗಲು ಸ್ವಲ್ಪ ಸಮಯ ಬೇಕೇಬೇಕು. ಏಕೆಂದರೆ ಎಲ್ಲರ ಮನೆಯಲ್ಲೂ ಇನ್ನೂ ಬ್ರಾಡ್ ಬ್ಯಾಂಡ್ ಇಲ್ಲ. ಕೆಲವರು ಆಫೀಸಿನಿಂದ ಕೇಳುತ್ತಾರೆ. ಹಲವರು ಅಮೇರಿಕದಲ್ಲಿದ್ದಾರೆ (ಅಲ್ಲಿ ಇಂಟರ್ನೆಟ್ ಆರಾಮಾಗಿ ಸಿಗತ್ತೆ).

[quote=tvsrinivas41]ಒಮ್ಮೆ ನಾನು (೧೯೭೫ರಲ್ಲಿ) ಅವರ ಮನೆಗೆ ಹೋಗಿದ್ದೆ. ಮುಂಬಾಗಿಲಿನಲ್ಲೇ ಕಾಣುವಂತೆ ಏಸು ಕ್ರಿಸ್ತ ಮತ್ತು ವೆಂಕಟೇಶ್ವರನ ಫೋಟೋ ಹಾಕಿದ್ದರು. ಈಗಲೂ ಅವು ಹಾಗೆಯೇ ಇವೆಯಾ?
[/quote]

ಮನೆ ಒಳಗೆ ಹೋಗಲಿಲ್ಲ. ಸೀದ ಅವರ ಆಫೀಸಿಗೆ ನುಗ್ಗಿದ್ದು. ಹಿಂದೆ ಗಾರ್ಡನ್ನಿನಲ್ಲಿದ್ರು, ಅನಂತಮೂರ್ತಿಯವರು.

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಅನಂತಮೂರ್ತಿಯವರು ಭಾರತೀಯರ hardware vs software abilities ಬಗ್ಗೆ ಮಾತಾಡಿದ್ರು. ಅವರ ಮಾತಿನ ಅರ್ಥವನ್ನು services ಮತ್ತು manufacturing sectorಗಳಿಗೆ generalize ಮಾಡಬಹುದು ಅನ್ನಿಸುತ್ತದೆ. ಏಕೆಂದ್ರೆ, ಅವರು ಪ್ರಸ್ತಾಪಿಸುವ ಹಾರ್ಡ್ವೇರ್ advantage ಈ manufacturing sectorಗೆ ಅನ್ವಯಿಸುತ್ತದೆ.

--

ಇರುವುದೆಲ್ಲವ ಬಿಟ್ಟು, ಇರದುದದೆಡೆಗೆ ತುಡಿವುದೇ ಜೀವನ

ನಿಜ. ;)

ನಾರಾಯಣಮೂರ್ತಿಯವರು ಅವರಿಗೆ ಹೇಳಿದಂತೆ ನಮ್ಮಲ್ಲಿ ಹಾರ್ಡ್ ವೇರ್ ಮುಂದುವರಿಯಲು ಬೇಕಾದ infrastructure ಇಲ್ಲ... ಅದರಿಂದಾಗಿ ಹಣಹೂಡಿಕೆಯೂ ಇಲ್ಲ. ಅನಂತಮೂರ್ತಿಯವರ ವಾದ ಬರಿ ಮ್ಯಾನ್ಯುಫ್ಯಾಕ್ಚರಿಂಗ್ ಸೆಕ್ಟರಿಗೆ ಮಾತ್ರ ಓಕೆ ಕಂಪ್ಯೂಟರ್ ಸಂಬಂಧಿತ ಹಾರ್ಡ್ ವೇರ್ - ಚಿಪ್, ಪ್ರೋಸೆಸರುಗಳಿಗೆ ಪ್ರಚಂಡ ತಲೆ ಬೇಕು :)

--
[:http://hpnadig.net/blog|Check my Blog]
[:http://kn.wikipedia.org|Kannada wikipedia]

"ಹೊಸ ಚಿಗುರು, ಹಳೆ ಬೇರು"

ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ. ಪ್ರಸಕ್ತ ಕಂಪ್ಯೂಟರ್ ಅವಶ್ಯಕತೆಗಳ ಬಗ್ಗೆ ಅನಂತಮೂರ್ತಿಗಳು ತಿಳಿದುಕೊಂಡಿರುವುದು ನೋಡಿದರೆ ಆಶ್ಚರ್ಯವಾಗುತ್ತದೆ. ಒಳ್ಳೆಯ ಪ್ರಶ್ನೆಗಳನ್ನು ಅವರ ಮುಂದೊಡ್ಡಿ ಸೂಕ್ತ ಉತ್ತರ ಒದಗಿಸಿದ್ದೀರ. ಅನಂತಮೂರ್ತಿಗಳು ಕಂಪ್ಯೂಟರ್ ಉಪಯೋಗಿಸುತ್ತಿದ್ದಾರಾ?

ಸಾಹಿತ್ಯದ ಬಗ್ಗೆ ಇನ್ನೂ ಸ್ವಲ್ಪ ವಿಷಯಗಳನ್ನು ಕೇಳಬಹುದಿತ್ತೇನೋ? ಆದರೂ ಇಷ್ಟು ಕಡಿಮೆ ಸಮಯದಲ್ಲಿ ಮೂರು ಸಂದರ್ಶನಗಳನ್ನು ಚೊಕ್ಕವಾಗಿ ಧ್ವನಿಮುದ್ರಿಸಿ ನಮಗೆ ಇತ್ತಿರುವ ನಾಡಿಗರಿಗೆ ಮತ್ತು ಇಸ್ಮಾಯಿಲರಿಗೆ ವಂದನೆಗಳು. ಅಲ್ಲ! ನಿಮಗೆ ದಣಿವು ಅನ್ನುವುದು ಇಲ್ಲವೇ?

ಕನ್ನಡಿಗರಿಗೆ ಇಷ್ಟು ಸುಲಭವಾಗಿ ಅಂತರ್ಜಾಲದಲ್ಲಿ ಸಂದರ್ಶನಗಳು ಲಭ್ಯವಾಗುತ್ತಿರುವುದು ಸಾಹಿತ್ಯ ವರ್ಧನೆಯ ಸೂಚಕ.

ವಂದನೆಗಳೊಂದಿಗೆ
---
ತವಿಶ್ರೀನಿವಾಸ

ನಾಗರಾಜ್. ಜಿ
ಸಂದರ್ಶನ ಚೆನ್ನಾಗಿ ಮೂಡಿ ಬಂದಿದೆ.
ನನ್ನ ಒಂದು ಮನವಿಯನ್ನು ತಮ್ಮಲ್ಲಿ ಏನೆಂದರೆ ಈ ಅಡಿಯೋವನ್ನು ರೇಡಿಯೋದಲ್ಲಿ ಪ್ರಸಾರ ಮಾಡಲು ಅನುಮತಿ ಇದೆಯಾ? ಇದ್ದರೆ ನಾನು ಸ್ವಲ್ಪ ಸರಿಪಡಿಸಿ ಪ್ರಸಾರ ಮಾಡಬಲ್ಲೆ. ಜೊತೆಗೆ ಎಲ್ಲಾ ಆಡಿಯೋ ಸಹ ಪ್ರಸಾರ ಮಾಡುವೆ. ಏನಂತಿರಿ.

ಸ೦ದರ್ಶನ ಬಹಳ ವಿಚಾರಗಳಲ್ಲಿ ಬೆಳಕು ಚೆಲ್ಲುತ್ತದೆ, ಅವರ ಬಹುತೇಕ ವೈಚಾರಿಕ ನಿಲುವುಗಳನ್ನು ಎಲ್ಲರೂ ಒಪ್ಪಬಹುದು. ಭಾಷೆ ಅಭಿವ್ಯಕ್ತಿಗಾಗಿ ಮತ್ತು ಸ೦ವಾಹನ ಸಾಧನವಾಗಿ ವ್ಯಕ್ತಿತ್ತ್ವ ನಿರ್ಮಾಣ, ಬುದ್ಧಿ-ಭಾವಗಳ ಬೆಳವಣೆಗೆ, ಪ್ರಕೃತಿಯ ಅರಿವು-ಆಸ್ವಾದನೆಗೆ ಅಗತ್ಯ, ಹಾಗಾಗಿ ಅದನ್ನು ಬಲವ೦ತವಾಗಿ ಉಳಿಸುವ ಅಥವಾ ಕೊಲ್ಲುವ ಸಾಧ್ಯತೆ ಅಸ೦ಭವ. ಭಾಷೆಯ ಅಗತ್ಯವೇ ಅದನ್ನ ಬದುಕಿಸಬಲ್ಲದೆ ಹೊರತು ಮತ್ತ್ಯಾವ ಅಸಹಜ ಪ್ರಯತ್ನಗಳು ಬರಿ ತೋರಿಕೆಯ ಕುಚೇಷ್ಟೆ. ಹಾಗಾಗಿ ನಮ್ಮ ಮು೦ದಿನ ಪೀಳಿಗೆ ಅದನ್ನ ಬದುಕಿನ ಅಗತ್ಯಗಳಲ್ಲಿನ ಬಾಗವಗಿಸುವುದೇ ಉತ್ತಮ ಕಾರ್ಯ ಎನ್ನುವ ಅಭಿಪ್ರಾಯ.

ಸ೦ದರ್ಶನ ಬಹಳ ವಿಚಾರಗಳಲ್ಲಿ ಬೆಳಕು ಚೆಲ್ಲುತ್ತದೆ, ಅವರ ಬಹುತೇಕ ವೈಚಾರಿಕ ನಿಲುವುಗಳನ್ನು ಎಲ್ಲರೂ ಒಪ್ಪಬಹುದು. ಭಾಷೆ ಅಭಿವ್ಯಕ್ತಿಗಾಗಿ ಮತ್ತು ಸ೦ವಾಹನ ಸಾಧನವಾಗಿ ವ್ಯಕ್ತಿತ್ತ್ವ ನಿರ್ಮಾಣ, ಬುದ್ಧಿ-ಭಾವಗಳ ಬೆಳವಣೆಗೆ, ಪ್ರಕೃತಿಯ ಅರಿವು-ಆಸ್ವಾದನೆಗೆ ಅಗತ್ಯ, ಹಾಗಾಗಿ ಅದನ್ನು ಬಲವ೦ತವಾಗಿ ಉಳಿಸುವ ಅಥವಾ ಕೊಲ್ಲುವ ಸಾಧ್ಯತೆ ಅಸ೦ಭವ. ಭಾಷೆಯ ಅಗತ್ಯವೇ ಅದನ್ನ ಬದುಕಿಸಬಲ್ಲದೆ ಹೊರತು ಮತ್ತ್ಯಾವ ಅಸಹಜ ಪ್ರಯತ್ನಗಳು ಬರಿ ತೋರಿಕೆಯ ಕುಚೇಷ್ಟೆ. ಹಾಗಾಗಿ ನಮ್ಮ ಮು೦ದಿನ ಪೀಳಿಗೆ ಅದನ್ನ ಬದುಕಿನ ಅಗತ್ಯಗಳಲ್ಲಿನ ಬಾಗವಗಿಸುವುದೇ ಉತ್ತಮ ಕಾರ್ಯ ಎನ್ನುವ ಅಭಿಪ್ರಾಯ.