ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ

To prevent automated spam submissions leave this field empty.

ಲಾಟರಿಯ ಗುಟ್ಟು ಜಾಲಾಡಿದಾಗ-ರಘೋತ್ತಮ್ ಕೊಪ್ಪರ
ಮೊದಲು ನನ್ನ ಬರಹಕ್ಕೆ ಉತ್ತರಿಸಿದ ಸಂಪದ ಮಿತ್ರರಿಗೆ ಧನ್ಯವಾದಗಳು. ನಿಮ್ಮೆಲ್ಲರ ಅಭಿಪ್ರಾಯವನ್ನು ಓದಿದಾಗ ಮತ್ತೆ ಅವರಿಗೆ ಮೇಲ್ ಕಳಿಸಿದೆ. ನನ್ನ ಹಣ ನಾ ಹೇಗೆ ಪಡೆಯಲಿ, ಬೇಗ ನನ್ನ ಅಕೌಂಟ್ ಗೆ ಜಮಾ ಮಾಡಿ ಬಿಡಿ ಅಂದೆ. ಆಗ ಅವರ ಮೇಲ್ ಕೂಡ ಶೀಘ್ರವೇ ಬಂದಿತು. ಅದನ್ನು ಕೋರಿಯರ್ ಮೂಲಕ ಕಳಿಸುತ್ತೇವೆ, ನಿಮ್ಮ ಅಡ್ರೆಸ್ಸು ಕೊಡಿ ಅಂತ ಬರೆದಿದ್ದರು. ಆಗ ನಾನು ಮೊದಲು ನಿಮ್ಮ ರೂಲ್ಸ್ ಗಳ ಬಗ್ಗೆ ತಿಳಿಸಿ ಎಂದು ಉತ್ತರಿಸಿದೆ. ಆಗ ಬಂತು ನೋಡಿ ಮೇಲ್ ನಾನು ಕೇವಲ ೪೨ಸಾವಿರ ರೂ ಗಳನ್ನು ತುಂಬಿದರೆ ಆ ಕೋರಿಯರ್ ಪಡೆದುಕೊಳ್ಳ ಬಹುದಂತೆ, ಅತಿ ಬೇಗ ಬೇಕೆಂದರೆ ೫೩ ಸಾವಿರ ತುಂಬಿದರೆ ಒಂದು ವಾರದಲ್ಲಿ ಕಳಿಸುತ್ತಾರಂತೆ ಅಂತ ಇತ್ತು. ಆಗ ನಾನು ಇಲ್ಲ ನನ್ನ ಪೇಪಾಲ್ ಅಕೌಂಟ್ ಗೆ ಜಮಾ ಮಾಡಿ ಎಂದೆ. ಮತ್ತೆ ಅವರು ಇಲ್ಲ ನಮ್ಮ ರೂಲ್ಸ್ ಪ್ರಕಾರ ಕೋರಿಯರ್ ಮೂಲಕವೆ ಪಡೆದುಕೊಳ್ಳಬೇಕು ಅಂದರು. ನನ್ನ ಹಣ ನಾನು ಹೇಗೆ ಬೇಕೊ ಹಾಗೆ ಪಡೆದುಕೊಳ್ಳೊ ಅವಕಾಶವಿಲ್ಲವೇ ಎಂದೆ. ಸರಿಯಾಗಿ ವಿಚಾರಿಸಿದಾಗ, ಆ ಮೇಲ್ ಅಡ್ರೆಸ್ಸ್ ನಲ್ಲಿರುವ ಕಂಪನಿಯೇ ಇಲ್ಲ, ಮೈಕ್ರೊಸಾಫ್ಟ್ ನಂತಹ ಕಂಪನಿಯ ಹೆಸರನ್ನು ಬಳಸಿಕೊಂಡು ವಂಚಿಸುವ ಜಾಲವೆಂದು ತಿಳಿಯಿತು. ಈಗ ನಾನು ಗ್ರಾಹಕರ ವೇದಿಕೆಗೆ ಹೋಗುತ್ತೇನೆ ಎಂದು ಹಾಗೇ ಒಂದು ಮೇಲ್ ಹಾಕಿದ್ದೇನೆ, ಎರಡು ದಿನವಾದರೂ ಉತ್ತರ ಬಂದಿಲ್ಲ. ಆದರೂ ಕೆಲವು ಕ್ಷಣವಾದರೂ ನನ್ನನ್ನು ಮಿಲಿಯನಿಯರ್ ಮಾಡಿದ ಆ ಪುಣ್ಯಾತ್ಮರಿಗೆ ನನ್ನ ಧನ್ಯವಾದಗಳು. ಕನಸನ್ನು ಮಾರುವವರಲ್ಲಿ ಇವರೊಬ್ಬರು ಎಂದರೆ ಅದನ್ನು ನಂಬಿ ಹಣ ಕಳೆದುಕೊಂಡವರು ನನ್ನನ್ನು ಬೈತಾರೆ, ಆದರೆ ಆ ಮೇಲ್ ಗಳನ್ನು ನಾನು ಡಿಲೀಟ್ ಮಾಡಿಲ್ಲ, ಆಗಾಗ ನೋಡಿ ಸವಿ ಸವಿ ಕನಸು ಆಗಲಿಲ್ಲ ನನಸು ಎಂದು ಹಾಡುತ್ತಿರುತ್ತೇನೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಲಾಟರಿ ಅಂದರೆ ಅದೃಷ್ಟದಾಟವೇ ಅಲ್ಲವೇ. ಅದರಲ್ಲಿಯೂ ಇಂತಹ ಬೋಗಸ್ ಸಂಸ್ಥೆಗಳ ಲಾಟರಿ ಎಂದರೆ ದುರಾದೃಷ್ಟದಾಟವೇ ಸರಿ. ಹೆಡ್ ಐ ವಿನ್, ಟೈಲ್ ಯೂ ಲೂಸ್ ಎಂಬುದು ಅವರ ಥಿಯರಿ. ನಿಮ್ಮ ಅನುಭವದ ಪೂರ್ಣ ವಿವರವನ್ನು ಪೊಲೀಸಿಗೆ ಕೊಟ್ಟಲ್ಲಿ ಅವರ ಜನ್ಮ ಜಾಲಾಡುತ್ತಾರೆ. ಅರಿಯದ ಮುಗ್ದರನ್ನು ಇಂತಹವರ ಹಿಡಿತದಿಂದ ಬಚಾಯಿಸುತ್ತಾರೆ ಎಂಬುದು ನನ್ನ ಅಭಿಪ್ರಾಯ. ನಿಮ್ಮ ಅನುಭವವನ್ನು ಸಂಪದದ ನನ್ನಂಥ ಓದುಗರಿಗೆ ತಿಳಿಸಿಕೊಟ್ಟದ್ದಕ್ಕೆ ಧನ್ಯವಾದಗಳು.

ಕೇರಳದಲ್ಲಿ ಇ೦ತಹ ಒ೦ದು ಘಟನೆಯೂ ನಡೆದಿದೆ. ಬಡಪಾಯಿ ಹುಡುಗನೊಬ್ಬ ಒ೦ದು ಲಕ್ಷ ರೂಪಾಯಿಗೂ ಹೆಚ್ಚಿಗೆ ಹಣವನ್ನು ಕಳೆದುಕೊ೦ಡಿದ್ದಾನೆ.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು