ಲಾಟರಿ ಹೊಡಿತು ನೋಡಿ-ಸಂಪದ ಮಿತ್ರರೆ ನಿಮ್ಮ ಸಹಾಯ ಬೇಕು-ರಘೋತ್ತಮ್ ಕೊಪ್ಪರ

To prevent automated spam submissions leave this field empty.

ಲಾಟರಿ ಹೊಡಿತು ನೋಡಿ-ಸಂಪದ ಮಿತ್ರರೆ ನಿಮ್ಮ ಸಹಾಯ ಬೇಕು-ರಘೋತ್ತಮ್ ಕೊಪ್ಪರ
ಗುರುವಾರ ಮುಂಜಾನೆ ನನ್ನ ಮೇಲ್ ಬಾಕ್ಸ್ ಗೆ ಯು ವನ್ ಫ್ರಾಮ್ ಮೈಕ್ರೊಸಾಫ್ಟ್ ಪ್ರ್ರಮೊಷನ್ಸ್ ಅಂತ ಒಂದು ಮೇಲ್ ಬಂತು. ಬೆಳಿಗ್ಗೆ ಬೆಳಿಗ್ಗೆ ಇದೆಂತಾ ಚೋಕ್ ಅಂತೀರಾ. ನಾನು ಓದಿದೆ ಒಟ್ಟು ಒಂದು ಮಿಲಿಯನ್ ಪೌಂಡ್ಸ್ ಅಂತ ಇತ್ತು. ಇದೆನಪಾ ನನಗೆ ಅಷ್ಟು ಹಣ ಬಂದರೆ ಯಾವ ಕಾರನ್ನು ಕೊಳ್ಳಲಿ, ಮನೆ ಎಲ್ಲಿ ಕಟ್ಟಲಿ ಎಂಬ ನೂರಾರು ಆಸೆಗಳು ತಟ್ಟನೆ ಮನದಲ್ಲಿ ಹುಟ್ಟಿದವಾದರೂ, ಇದು ನಿಜವೇ ಎಂದು ಕಂಪ್ಯೂಟರ್ ಪರದೆ ನೋಡಿದಾಗ ಸುಳ್ಳಿದ್ದರೆ ಎಂಬ ಶಂಕೆಯಿಂದ ದೂರ ಓಡಿದವು. ಒಂದೊಂದು ಸಾರಿ ಬಂದರೂ ಬಂದಿತೆ ಎಂಬ ಆಸೆಯೂ ಇನ್ನು ಮನದಳ್ದಲ್ಲಿ ಅಡಗಿದೆ. ಕೆಲಸ ಮಾಡಿದ ಅಥವಾ ದುಡಿದ ದುಡ್ಡೆ ಉಳಿಯಲ್ಲ, ಇನ್ನು ಇಂಥಹ ದುಡ್ಡು ನಮ್ಮ ಕೈ ಹತ್ತುತ್ತಾ, ಅಥವಾ ಅಂಥಹ ಮೇಲ್ ನಿಂದ ಮೋಸವೇನಾದರೂ ಆಗುವ ಸಂಭವಗಳಿವೆಯಾ. ಸಂಪದ ಮಿತ್ರರೆ ನಿಮ್ಮ ಸಹಾಯವನ್ನು ಕೋರುವೆ. ಆ ಮೇಲ್ ಕೊನೆಯಲ್ಲಿ ಹೀಗಿತ್ತು. ಅದು ಹೇಗಿತ್ತೊ ಹಾಗೇ ಕಾಪಿ, ಪೇಸ್ಟ್ ಮಾಡಿದಿನಿ.

Your email address won 1,000,000.00 (One Million Great Britain Pounds) as one of the 10 jackpot winners in this draw. You have therefore won the sum of 1,000,000.00 (One Million Great Britain Pounds). The! draws registered as Draw number one was conducted in Brockley, London United Kingdom on the 1st of December 2007. These Draws are commemorative and as such special.

Please be informed by this winning notification, to file your claims, you are to make contact with your designated agent who shall by duty guide you through the process to facilitate the release of your prize. To file for your claim Please Contact your fiduciary agent

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನೈಜೀರಿಯನ್ ಸ್ಕ್ಯಾಮ್ ಇರ್ಬೇಕು!! ಸುಮ್ನೇ ಯಾರಾದ್ರು ರೊಕ್ಕಾ ಕೊಡ್ತಾರೇನ್ರಿ? ಸ್ವಲ್ಪಾ ಗೂಗಲ್ ಮಾಡಿ ನೋಡಿ. ಎಷ್ಟೋದು ವಂಚನೆಗಳು ನಡೀತಾ ಇವೆ ಅಂಥ ಗೊತ್ತಾಗುತ್ತೆ. ಇಲ್ಲೊಂದು ಉದಾಹರಣೆ ನೋಡಿ - http://www.vincentchow.net/843/microsoft-promotion-award-team-spam-email.

ದಿನಕ್ಕೆ ಹತ್ತಾರು ಈ ರೀತಿಯ ಇ-ಮೇಯ್ಲುಗಳು ಬರುತ್ತಲೇ ಇರುತ್ತವೆ. ಈ ಲೆಕ್ಕದಲ್ಲಿ ನಾನಂತೂ ಆಗಲೇ ನೂರಾರು ಬಾರಿ ಲಾಟರಿ ಗೆದ್ದು ಮಿಲಿಯನೇರ್ ಆಗಿಬಿಟ್ಟಿದ್ದೇನೆ. :P

ಇಂತಹ ಮೇಯ್ಲುಗಳನ್ನು ಸುಮ್ಮನೆ ಇಗ್ನೋರ್ ಮಾಡಿ ಅಥವ spam ಎಂದು ಮಾರ್ಕ್ ಮಾಡಿ.

ಸ್ವಲ್ಪ ಶೆರ್ಲಾಕ್ ಹೋಮ್ಸ್ ಕೆಲಸ ಮಾಡಬೇಕು ಅನಿಸಿದರೆ ಮೇಯ್ಲ್ ಹೆಡರ್ ಓದಿಕೊಂಡು ಟ್ರಾಕ್ ಮಾಡಿ. ಬಹುಶಃ gcಯವರು ಹೇಳಿದಂತೆ ಯಾವುದೋ ನೈಜೀರಿಯನ್ ಐಪಿಗೇ ಹೋಗಿಬೀಳುತ್ತದೆ ನಿಮ್ಮ ಶೋಧನೆ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಖಾಸಗಿ ಬ್ಯಾ೦ಕೊ೦ದರ ಜಾಹೀರಾತು ಹೀಗಿತ್ತು: "ನಿಮ್ಮ ಖಾತೆಯ ವಿವರಗಳನ್ನು ಪರಿಚಯವಿಲ್ಲದ ವ್ಯಕ್ತಿಗಳಿಗೆ ನೀಡಬೇಡಿ."

ಇ೦ತಹ ಮಿನ್ನೋಲೆಗಳಲ್ಲಿ ಕೇಳುವ ವಿವರಗಳನ್ನು ಗಮನಿಸಿದ್ದೀರಾ? ನಿಮ್ಮ ಬ್ಯಾ೦ಕಿನ ಹೆಸರು ಮತ್ತು ಖಾತೆಯ ವಿವರಗಳು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ರಘೋತ್ತಮರೆ,
ನೀವು ನಿಜವಾಗಿಯೂ ಅದೃಷ್ಟವಂತರೇ ಕಣ್ರಿ! ಒಂದು ಮಿಲಿಯ ಬ್ರಿಟೀಷ್ ಪೌಂಡ್ ಅಂದರೆ ಸುಮ್ಮನೆ ಆಯಿತ?
ನನಗಂತೂ ಇಂತ ಒಂದು ಮೈಲೂ ಬರುವ ಅದೃಷ್ಟವೇ ಇಲ್ಲವಲ್ಲ ರೀ... ಎಲ್ಲ ನನ್ನ ಸ್ಪಾಮ್ ಫಿಲ್ಟರ್‍ ತೊಡೆದು ಹಾಕಿ ಬಿಡತ್ತೆ ;)

ಮಾನ್ಯ ಕೊಪ್ಪರರೆ,

ಇವತ್ತಿನ ಪ್ರಜಾವಾಣಿಯ ಮೂರನೆ ಪುಟ ನೋಡಿ. ಬೆಂಗಳೂರಿನ ಒಬ್ಬ ಸಾಫ್ಟವೇರ್ ಇಂಜಿನೀಯರ್ ಇಂತಹ ಇಮೈಲ್ ನೋಡಿ ತನ್ನ ಬ್ಯಾಂಕ್ ಮಾಹಿತಿಯನ್ನು ಕೊಟ್ಟು ಮೋಸ ಹೋಗಿದ್ದಾನೆ. ಅಂತರ್ಜಾಲದಲ್ಲಿ ಇಂತಹ ನೂರಾರು ಮೋಸಗಳು ಯಾವಾಗಲೂ ನಡೀತಾ ಇರ್ತವೆ. ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರಿಗೂ ಅಂತರ್ಜಾಲ ಅಥವಾ ಫೋನಿನ ಮೂಲಕ ಕೊಡುಬಾರದು.

ಮೇಲೆ ಹೇಳಿರುವವರ ಮಾತು ಕೇಳಬೇಡಿ....ನಿಮ್ಮ ಪೂರ್ವ ಜನ್ಮದಲ್ಲಿ ಮಾಡಿದ ಪುಣ್ಯದ ಫಲ ಈಗ ಬೀಜ ಬಿಟ್ಟಿದೆ.
ನಿಮ್ಮ ಬಳಿ ಅಷ್ಟು ಹಣ ಬ೦ದಾದ ಮೇಲೆ ವಿದಾನ ಸೌಧ ಕೊ೦ಡುಕ್ಕೊಳ್ಳಬಹುದು.
ಕಾರ್ ಯಾಕೆ ? ಒ೦ದು ಹೆಲಿಕಾಫ್ಟರ್ ಕೂಡಾ ತಗೋಬಹುದು.
ನ೦ಗೂ ಒ೦ದು ರೌ೦ಡ್ ಕರ್ಕೊ೦ಡು ಹೋಗಿ ಪ್ಲೀಸ್ ..

ನೀವು ಇದೇ ರೀತಿ ಒ೦ದೈದು ಲಾಟರಿಯನ್ನು ಗೆದ್ದರೆ , ಶಿಲ್ಪಾ ಶೆಟ್ಟಿಯನ್ನೇ ಮದುವೆಯಾಗಬಹುದು....ಅದೂ ಲ್೦ಡನ್ ನ ಬಕಿ೦ಗ್ ಹ್ಯಾಮ್ ಪ್ಯಾಲೆಸ್ಸ್ ನಲ್ಲಿ ...ನಿಮ್ಮ ಮದುವೆ ಪೋಟೋಗಳನ್ನು ಸ೦ಪದದಲ್ಲಿ ಹಾಕಲು ಮರೆಯದಿರಿ..