ಮೊಟ್ಟೆಯನ್ನು ಬೇಯಿಸುವ ಮೊಬೈಲ್!

To prevent automated spam submissions leave this field empty.

ಮೊಬೈಲ್ ಫೋನ್ ಒಂದು ಅನಿವಾರ್ಯ ಶನಿ! (ನೆಸಸರಿ ಈವಿಲ್!). ಇವು ನಮ್ಮ ಆರೋಗ್ಯಕ್ಕೆ ಮಾರಕವೇ ಎಂಬ ಬಗ್ಗೆ ಜಾಗತಿಕ ಚರ್ಚೆ ನಡೆದಿದೆ. ಅವು ಮಾರಕ ಎಂದು ಕೆಲವು ಸಂಶೋಧನೆಗಳು ತಿಳಿಸಿದರೆ, ಉಳಿದವು ಮಾರಕವಲ್ಲ ಎನ್ನುತ್ತವೆ. ಈ ಬಗ್ಗೆ ತಿಳಿದವರಲ್ಲಿಯೇ ಭಿನ್ನಾಭಿಪ್ರಾಯಗಳಿವೆ. ಈ ಬಗ್ಗೆ ನಾನು ಆಸಕ್ತ. ಇತ್ತೀಚೆಗೆ ನನ್ನ ಗಮನಕ್ಕೆ ಬಂದ ಒಂದು ಮಾಹಿತಿಯನ್ನು ನಿಮ್ಮೊಡನೆ ಹಂಚಿಕೊಳ್ಳುತ್ತಿದ್ದೇನೆ.

- ಒಂದು ಕೋಳಿಮೊಟ್ಟೆಯನ್ನು ತೆಗೆದುಕೊಂಡರು.

- ಅದನ್ನು ಎರಡು ಮೊಬೈಲ್ ಫೋನ್‍ಗಳ ನಡುವೆ ಇಟ್ಟರು. ಆನ್ ಮಾಡಿದರು.

- ಮೊಬೈಲ್ ಫೋನ್‍ಗಳನ್ನು ೬೫ ನಿಮಿಷಗಳ ಕಾಲ ನಿರಂತರವಾಗಿ ಚಾಲೂವಿನಲ್ಲಿಟ್ಟರು.

* ಮೊದಲ ೧೫ ನಿಮಿಷ: ಮೊಟ್ಟೆಯಲ್ಲಿ ಯಾವುದೇ ಬದಲಾವಣೆ ಕಂಡು ಬರಲಿಲ್ಲ.

* ೨೫ ನಿಮಿಷ: ಮೊಟ್ಟೆ ಬೆಚ್ಚಗಾಯಿತು!

* ೪೫ ನಿಮಿಷ: ಮೊಟ್ಟೆ ಬಿಸಿಯಾಯಿತು!

* ೬೫ ನಿಮಿಷ: ಮೊಟ್ಟೆ ಪೂರ್ಣ ಬೇಯಿತು!!!

೨ ಮೊಬೈಲ್ ಫೋನುಗಳಿಂದ ಹೊರಬಂದ ವಿಕಿರಣವು ೬೫ ನಿಮಿಷಗಳಲ್ಲಿ ಮೊಟ್ಟೆಯನ್ನು ಬೇಯಿಸಿತು. ನಾವು ಮೊಬೈಲ್ ಫೋನನ್ನು ನಮ್ಮ ಕಿವಿಗೆ ಒತ್ತಿ ಹಿಡಿದು ಗಂಟೆಗಟ್ಟಲೆ ಮಾತನಾಡುತ್ತೇವೆ. ನಮ್ಮ ಮಿದುಳೂ ಹೀಗೆ `ಬೆಂದು` ಹೋಗಬಹುದೆ?

ಗೊತ್ತಿಲ್ಲ!!!

ಸೂಚನೆ: ೨-೩ ನಿಮಿಷಗಳ ಕಾಲ ಮಾತನಾಡಲು ಮೊಬೈಲನ್ನು ಬಳಸೋಣ. ಅದಕ್ಕಿಂತಲೂ ಹೆಚ್ಚಿನ ಕಾಲ ಮಾತನಾಡಬೇಕಾದರೆ ಲ್ಯಾಂಡ್ ಲೈನ್ ಉಪಯೋಗಿಸೋಣ. ಏನಂತೀರಿ?

-ನಾಸೋ

-

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಆಶ್ಚರ್ಯವೆನಿಸೋದಿಲ್ಲ. ಮೊಬೈಲು ಒಂದೆರಡು ನಿಮಿಷ ಕಿವಿಗೆ ಹಿಡಿದರೇ ಕಿವಿ ಬೆಚ್ಚಗಾಗತ್ತೆ. ತುಂಬಾ ಹೊತ್ತು (ಗಂಟೆಗಟ್ಟಲೆ) ಮೊಬೈಲು ಫೋನಿನಲ್ಲಿ ಮಾತನಾಡಿದ ಮೇಲೆ ಒಂದು ರೀತಿಯ ಹ್ಯಾಂಗೋವರ್ ಕೂಡ ಇರತ್ತೆ.

ಹೆಚ್ಚು ಹೊತ್ತು ಮಾತನಾಡುವಾಗ ಲೆಕ್ಕ ಹಾಕಿದರೆ ಖರ್ಚು ಮತ್ತು ಆರೋಗ್ಯ ಎರಡಕ್ಕೂ ಲ್ಯಾಂಡ್ ಲೈನ್ ಉತ್ತಮ. :)
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಅಮ್ಮ ಯಾವಾಗಲೂ ಹೇಳುತ್ತಿರುತ್ತಾರೆ - ಕಿವಿಗೆ ಹಾಕಿಕೊಳ್ಳೋದು ಉಪಯೋಗಿಸೋ, ಮೊಬೈಲು ಜಾಸ್ತಿ ಕಿವಿಗೆ ಇಟ್ಟುಕೊಳ್ಬೇಡ ಅಂತ. ಆದರೂ ಮೊಬೈಲ್ ಹೆಚ್ಚು ಉಪಯೋಗಿಸೋದು ಇಲ್ಲವಲ್ಲ ಏನಾಗಲ್ಲ ಅಂತ ದಿನ ತಳ್ಳೋದಾಗಿದೆ. ಈಗೀಗ ಮೊಬೈಲು ದೂರ ಇಟ್ಟಷ್ಟೂ ಒಳ್ಳೇದು ಅನ್ಸತ್ತೆ.
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಒಂದೂವರೆ ಎರಡು ಗಂಟೆಗೂ ಹೆಚ್ಚು ಹೊತ್ತು ಒಂದೇ ಕಿವಿಗೆ ಹಿಡಿದು ಮಾತನಾಡಿ ನೋಡಿ... ಒಂದೆರಡು ನಿಮಿಷ ಆ ಕಿವಿ ಒಂಥರಾ ಆಗೋದುಂಟು. ಕಿವಿ ಕೂಡ ಬಿಸಿಯಾಗುವುದು. ತಮಾಷೆಯಲ್ಲ :P
--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

ಇದೊಂದು hoax (ವಂಚನೆ ಅನ್ನೋದು ಸರಿನಾ?)
ಈ ಲೇಖನ ಮೊದ್ಲು ಪ್ರಕಟಣೆ ಆದದ್ದು ಇಲ್ಲಿ. ಇದನ್ನ ಬರ್ದವ್ನು ಯಾಕೆ ಹಾಗೆ ಬರ್ದ ಅನ್ನೋದನ್ನ ಇಲ್ಲಿ ಓದಿ
ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಇಲ್ಲಿದೆ
ನೂರು ಮೊಬೈಲ್ ಫೋನ್‍ಗಳನ್ನ ಮೊಟ್ಟೆ ಸುತ್ತ ಇಟ್ಟು ಬೇಯ್ಸೋದಕ್ಕೆ ಪ್ರಯತ್ನ ಮಾಡ್ದ್ರಂತೆ, ಆಗ್ಲಿಲ್ಲ, ಇನ್ನು ೨ ಫೋನಿಂದ ಮೊಟ್ಟೆ ಬೆಯೋದು ಕಷ್ಟಾನೇ. ಇದು ನಿಜ ಆಗಿದ್ರೆ ಎಷ್ಟೋ ಜನ ಇಷ್ಟೊತ್ತಿಗೆ ಕಿವಿನ ಸುಟ್ಕೊಂಡಿರೊವ್ರು (ಮೆದುಳು ಕೂಡ).

createam ಅವರಿಗೆ ಧನ್ಯವಾದಗಳು. ನನಗೆ ನನ್ನ ವೈದ್ಯ ಮಿತ್ರರೊಬ್ಬರಿಂದ ಬಂದಂತಹ ಮೇಲ್ ಇದು. ಈ ಬಗ್ಗೆ ಲಭ್ಯವಿರುವ ಮಾಹಿತಿಯನ್ನೆಲ್ಲ ನಾನು ಓದಿದ್ದೆ. ಮೇರಿ ಕ್ಯೂರಿ ಪಿಚ್‍ ಬ್ಲೆಂಡಿನ್ನು ಶುದ್ಢಗೊಳಿಸುವಾಗ, ಅದರ ವಿಕಿರಣ ತನಗೆ ರಕ್ತಾರ್ಬುದವನ್ನು ಉಂಟುಮಾಡಬಹುದು ಎಂಬ ಕಲ್ಪನೆಯೂ ಇರಲಿಲ್ಲ. ಈಗ ಋಜುವಾತಾಗಿದೆ. ಮೊಬೈಲ್ ವಿಕಿರಣಗಳ ಬಗ್ಗೆ `ಇಧಮಿತ್ಥಂ` ಎಂಬಂತೆ ತೀರ್ಮಾನ ನೀಡುವ ಮಾಹಿತಿ ಎಲ್ಲಿಯೂ ದೊರೆಯುತ್ತಿಲ್ಲ. ಹಾಗಾಗಿ ನಮ್ಮ ಸುರಕ್ಷತೆಯಲ್ಲಿ ನಾವಿರಬೇಕು ಎಂಬ ಅಭಿಪ್ರಾಯ ನನ್ನದು. ಆ ಹಿನ್ನೆಲೆಯಲ್ಲಿ ಈ ಲೇಖನವನ್ನು ಬರೆದೆ. ಇದರ ಹಿಂದೆ ಇಷ್ಟೆಲ್ಲ ಭಾನಗಡಿ ಇರುವುದು ನನಗೆ ತಿಳಿದಿರಲಿಲ್ಲ. ಮಾಹಿತಿಯನ್ನು ನೀಡಿದ createam ಅವರಿಗೆ ಮತ್ತೊಮ್ಮೆ ಧನ್ಯವಾದಗಳು.

- ನಾಸೋ

ಋಜುವಾತಲ್ಲ ರುಜುವಾತು. ಋಜುವಾತೆ೦ಬುದು ಒಬ್ಬರ ಬ್ಲಾಗಿನ ಹೆಸರು. ಅದೇಕೆ ಹಾಗೆ ನೀಡಿದ್ದಾರೆ೦ಬುದಕ್ಕೆ ಅವರದ್ದೇ ಆದ ಕಾರಣಗಳನ್ನು ಹೇಳಿದ್ದಾರೆ. ನೀವು ಬರೆದಿರುವ ಸ೦ದರ್ಭದ೦ತೆ ಅದು ರುಜುವಾತೇ ಆಗಬೇಕು.
_______________________
ಮುಟ್ಟುತಲೆ ಗುರಿ ತಾನ್ ದೂರವಾಗುತಿರಲಿ!
ಕೃಷ್ಣಪ್ರಕಾಶ ಬೊಳುಂಬು

ಹೌದು, ಮೊಟ್ಟೆ ಬೇಯಿಸುವ ಕಸರತ್ತು ತಮಾಷೆಗಾಗಿ ಇರಬಹುದು, ಆದರೆ ಸುದೀರ್ಘ ಮೊಬೈಲ್ ಬಳಕೆಯ ಪ್ರಭಾವದ ಅವಲೋಕನ ಗಂಭೀರವಾದದ್ದು. ನಾವುಗಳು ಬಳಸುವ ಎಷ್ಟೋ ಸಲಕರಣೆಗಳು ಏನೇನು ಬೇಡದ ಪ್ರಭಾವಗಳನ್ನುಂಟು ಮಾಡುತ್ತದೆ ಎಂಬುದರ ಬಗ್ಗೆ ಅವಲೋಕಿಸಿ ನೋಡಿರುವುದಿಲ್ಲ... ಉದಾಹರಣೆಗೆ wi-fi - ಅಲ್ಲಿ ಕೂಡ ಬಳಕೆಯಾಗುವ ರೇಡಿಯೋ ವೇವ್ಸ್ ಆರೋಗ್ಯದ ಮೇಲೆ ಏನು ಪ್ರಭಾವ ಬೀರಬಲ್ಲುದು ಎಂಬುದರ ಮೇಲೆ ಹೆಚ್ಚು ಸಂಶೋಧನೆ ನಡೆದಿಲ್ಲ. ಆಗಾಗ ಕೆಲವೊಂದು ಸೀರಿಯಸ್ ಪ್ರಯೋಗಗಳ ಅಡ್ಡಗೋಡೆ ಫಲಿತಾಂಶಗಳು ವಿಷಯದ ಗಂಭೀರತೆಯನ್ನು ಕ್ಷೀಣಿಸಿಬಿಟ್ಟಿವೆ.

ಮೇಲೆ ನಾವು ಚರ್ಚಿಸುತ್ತಿರುವ ವಿಷಯದ ಕುರಿತು ಹೆಚ್ಚಿನ ಓದು, /. ನಿಂದ:
* http://science.slashdot.org/article.pl?sid=06/05/12/1228221 - Mobile Phone Transmitter Causes Brain Tumours?
* http://hardware.slashdot.org/article.pl?sid=05/01/12/0741209 - UK Report Suggests Dangers In Cell Phone Use
* http://science.slashdot.org/article.pl?sid=06/03/03/1452215 - Testing Cell Phone Radiation on Humans
* http://science.slashdot.org/article.pl?sid=05/03/07/129248 - The Story Behind Cell Phone Radiation Research

--
ನನ್ನ ಬ್ಲಾಗ್:
[:http://www.sampada.net/blog/hpn|ಪರಿವೇಶಣ] | [:http://www.hpnadig.net/blog|PariveshaNa]

Createam ಹೇಳಿದ ಹಾಗೆ ಇದೊಂದು ನಿಜವಾದ ವಂಚನೆ. www.hoax-slayer.com ತಾಣದಲ್ಲಿ ಇಂತಹ ಅನೇಕ ವಂಚನೆಗಳ ಬಗ್ಗೆ ಓದಬಹುದು. ಇದೇ ರೀತಿಯ ಇನ್ನೊಂದು ವಂಚನೆಯ ಬಗ್ಗೆ ಬೇರೊಂದು ಚರ್ಚಾವೇದಿಕೆಯಲ್ಲಿ ಬರೆದಿದ್ದೆ. ಅದರ ಪ್ರಕಾರ ಮೋಬೈಲ್ ಬಳಸುವಾಗ ಬರೀ ಎಡಗಿವಿಯನ್ನು ಮಾತ್ರ ಬಳಸಬೇಕಂತೆ!! (http://www.hoax-slayer.com/use-left-ear-mobile.html)

ಇದೊಂದು hoax ಎಂದು ಓದಿದ ತಕ್ಷಣ ಗೊತ್ತಾಯಿತು. ನಾನು Electromagnetic Radiation ಬಗ್ಗೆ ಸ್ವಲ್ಪವಾದರೂ ಓದಿರುವವ. ಮೊಟ್ಟೆಯೊಂದನ್ನು ಬೇಯಿಸುವಷ್ಟು ವಿಕಿರಣ ಶಕ್ತಿ ಎರಡೇಕೆ ನೂರು ಮೋಬೈಲ್ ಫೋನುಗಳಿಂದಲೂ ಸಾಧ್ಯವಿಲ್ಲ.

ಮೋಬೈಲ್ ಫೋನುಗಳಿಗಿಂತ ಮೊದಲು ಇದೇ ರೀತಿಯ ವಿವಾದ high voltage transmision lines ಬಗ್ಗೆಯಿತ್ತು. ಇವುಗಳಿಂದಾಗುವ ದುಷ್ಪರಿಣಾಮಗಳ ಬಗ್ಗೆ ಸಾಕಷ್ಟು ಚರ್ಚೆ ನಡೆದಿದ್ದರೂ ಇಲ್ಲಿಯವರೆಗೆ ಸೂಕ್ತವಾದ ವೈಜ್ಞಾನಿಕ ಪುರಾವೆ ದೊರಕಿಲ್ಲ್.

ಇಂತಹ ವಿಷಯಗಳನ್ನು ಸಂಪದದಲ್ಲಿ ಬರೆಯುವ ಮುನ್ನ ಸ್ವಲ್ಪ ಗೂಗಲಿಂಗ್ ಮಾಡಿದರೆ ಒಳ್ಳೆಯದು :)

ಮೊಬೈಲ್ನಿಂದ ಮೊಟ್ಟೆ ಬೇಯುವುದು ಸತ್ಯ.

ಮೊದಲಿನಿಂದಲೂ ನನ್ನ ವಿರೋಧವಿದ್ದರೂ, ಹೊಸ ಹೊಸ ಮೊಬೈಲ್ ಮತ್ತು offerನಿಂದಾಗಿ ನಮ್ಮಲ್ಲಿ ಅವುಗಳ ಸಂಖ್ಯೆ ಜಾಸ್ತಿಯಾಗುತ್ತಾ ಹೋಯಿತು. ಹೊಸದು ಬಂದಂತೆ ಹಳೆಯದು ನನ್ನ ಕುತ್ತಿಗೆಗೆ. ಎಲ್ಲಾ ಮೊಬೈಲ್ಗಳೂ life time ಆದುದರಿಂದ ನನಗೆ ಜೀವಾವಧಿ ಶಿಕ್ಷೆ. ಬೆಕ್ಕು ಸಾಕಿದಾಗ ಅದರ ಮರಿಗಳು
ಕೈಕಾಲಿಗೆ ಸಿಕ್ಕಿಕೊಂಡ ಹಾಗೆ ಈವಾಗ ಮೊಬೈಲ್‌ಗಳು ಕೈಕಾಲಿಗೆ ಸಿಕ್ಕಿಕೊಂಡಿರುತ್ತವೆ. ಯಾವ ಮೊಬೈಲ್ ಎಲ್ಲಿ ಮಿಯಾಂವ್ ಎನ್ನುತ್ತದೆ, ಹುಡುಕುವುದು, ಎದ್ದುಬಿದ್ದು ಓಡಿ ಮೊಬೈಲ್ on ಮಾಡಿದರೆ -“ಅದೇ ಹಳೇ ಟ್ರಿನ್ ಟ್ರಿನ್ ಕೇಳಿ ಬೇ’ಸತ್ತಿದ್ದೀರಾ'....“ ಈ ನೋವಿನ ನಡುವೆ ‘ಸತ್ತಿದ್ದೀರಾ’ಎಂದು ಕೇಳುವ ಧೈರ್ಯ!!ಉಪೇಂದ್ರ ಸ್ವರ ಆದುದರಿಂದ ಬಿಟ್ಟಿದ್ದೇನೆ.
ಈಗೀಗ ನನ್ನಾಕೆ ಮೊಬೈಲ್‌ಗಳನ್ನು ನನ್ನ ಸುತ್ತಲೂ ಇಟ್ಟು, ಮೊಟ್ಟೆ ಒಡೆದು ತಲೆ ಮೇಲೆ ಹಾಕುವಳು.ಆಮ್ಲೆಟ್ ರೆಡಿ.
ಅದು ಯಾರು ಸಾರ್, ಮೊಟ್ಟೆ ಬೇಯುವುದಿಲ್ಲ ಎಂದು ಹೇಳಿದ್ದು?

ರೀ ಗಣೇಶ್, ನಿಮಗೆ ತುಂಬಾ ಒಳ್ಳೆ ಹಾಸ್ಯ ಪ್ರಜ್ನೆ ಇದೇರಿ. ಎಲ್ಲರೂ ಗಂಭೀರವಾಗಿ ಚರ್ಚಿಸ್ತಿರೊವಾಗ ತುಂಬಾ ತಮಾಷೆಯಾಗಿದೆ ನಿಮ್ಮ ಅಭಿಪ್ರಾಯ. ಅಭಿನಂದನೆಗಳು!!!

ಚಿ.ರಂ.ಶಿ

ನೀನು ಅವನ ಸ್ಥಾನದಲ್ಲಿ ಯೋಚಿಸು!!! ಜಗಳಕ್ಕೆ ಜಾಗವೆಲ್ಲಿ???

ತುಂಬ ಸಮಯದವರೆಗೆ ಮೊಬೈಲ್ ಬಳಸಿದರೆ ಕಿವಿ ಬಿಸಿಯಾಗಿ ಆ ಭಾಗದ ಸೆನ್ಷನ್ ಇಲ್ಲದಿರೊ ಹಾಗೆ ಅಗುತ್ತೆ ಅನ್ನೊದು ನನ್ನ ಸ್ವಂತ ಅನುಭವ... ಇವಾಗಲಂತು ನನಗೆ ಕಿವಿ ನೊವು ಶುರುವಾಗಿದೆ, ನೀವು ಹೇಳಿದ ಪ್ರಕಾರ ಬಳಕೆ ಕಡಿಮೆ ಮಾಡೊದೆ ಮಾರ್ಗವೇನೊ...