ನೆನಪು

To prevent automated spam submissions leave this field empty.

ಕೂತಿಹೆನು ನಾನಿಲ್ಲಿ,
ಬೆಳಕು ಬರಲಂಜುವ ಕತ್ತಲಲಿ
ನೆನಪುಗಳು ಲಗ್ಗೆಯಿಡುತಿವೆ
ಎದೆಯಾಳದಲಿ
ಕೂಗುತಿದೆ
ಕತ್ತಲ ಭಯವಿಲ್ಲ
ನನಗೆ

ಮೌನವ ಹೆದೆಯೇರಿಸಿಯೂ
ನಿರಾಯುಧ ನಾನಿಲ್ಲಿ
ಒಂಟಿ ಯೋಧನ ಮೇಲೆ
ಬೇಡವೊ ಸಮರ!
ಕೇಳುವುವರಾರು?
ನಡೆಯುತಲಿದೆ
ನೆನಪುಗಳ ಪ್ರಹಾರ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ನೆನಪಿನ ಪ್ರಹಾರದ ಕುರಿತು ತುಂಬಾ ಚೆನ್ನಾಗಿ ವರ್ಣನೆ ಮಾಡಿದ್ದೀರಾ
:-) ವೈಭವ