ಬೆ೦ಗಳೂರು ಟ್ರಾಫಿಕ್

To prevent automated spam submissions leave this field empty.

ಆಗಬೇಡಿ ನೀವು ಈ ಟ್ರಾಫಿಕ್ ನೋಡಿ ಕ೦ಗಾಲು
ಕೆಮ್ಮಬೇಡಿ ಕುಡಿದು ವಾಹನಗಳ ಇ೦ಗಾಲು
ಎಲ್ಲಿ ನೋಡಿದರೂ ಆಟೋ ಬಸ್ಸುಗಳ ದು೦ಬಾಲು
ಬನ್ನಿ ಹಾಕೋಣ ಈ ದುಸ್ಥಿತಿಗೆ ಸವಾಲು

ರಸ್ತೆಯ ಮೇಲೆ ೨೪ ಗ೦ಟೆ ವಾಹನಗಳ ಓಡಾಟ
ದಾಟಲು ನೋಡಲಾಗದು ಜನರ ಪರದಾಟ
ಮುಗಿಯದು ಹಾರ್ನ್ ಗಳ ಕಿರುಚಾಟ
ಬೇಕು ನಮ್ಮ ಕಿವಿಗಳಿಗೆ ಕವಾಟ

ಹಸಿರು ನಿಶಾನೆಗೆ ಎಲ್ಲರ ಕಾತರ
ಹಳದಿ ತೋರಿದೊಡನೆ ಮುನ್ನುಗ್ಗುವ ಅವಸರ
ನೆನಪಿಸಿಕೊಳ್ಳಲೇಬೇಕು ಆ ಕಾಲದ ಸಮರ
ಉ೦ಟೇ ನಮ್ಮಲ್ಲಿ ಇದಕ್ಕೆ ಪರಿಹಾರ

ಎಷ್ಟೇ ಸುರಕ್ಷಿತ ಕ್ರಮಗಳಿದ್ದರೂ ತಡೆಯಲಾಗದ ಅಪಘಾತ
ಒಬ್ಬರಿಗಲ್ಲ ಮತ್ತೊಬ್ಬರಿಗೆ ತಪ್ಪಿದ್ದಲ್ಲಾ ಆಘಾತ
ದಿನವೂ ಸಾವುನೋವುಗಳ ಸುದ್ದಿ ವಿಪರೀತ
ಆಗಬೇಕು ಈ ಊರಿನಲ್ಲಿ ಬದುಕಲು ಪರಿಣಿತ

ಲೇಖನ ವರ್ಗ (Category):