ವಿದೇಶದಲ್ಲಿಯ ಕೆಲಸ : ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ

To prevent automated spam submissions leave this field empty.

ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ
----------------------------------

ವಿದೇಶದಲ್ಲಿಯ ಕೆಲಸ ಹಣದ ಕೊರತೆಯ ನೀಗಿಸಿ
ಕೆಲಕಾಲ ಕನಸಿನ ಉಲ್ಲಾಸದಿ ನಮ್ಮ ಮೆರೆಸಿ
ಹುಟ್ಟೂರ ಬಂಧು ಬಳಗದ ನೆನಪುಗಳಲ್ಲಿ ಅಲೆಸಿ
ಕೆದಕುತಿದೆ ಮನಸ್ಸಿನ ಶಾಂತಿಯ ಸತತ ದಾಳಿ ನಡೆಸಿ

ತಾಯ್ತಂದೆ ತಾಯ್ನಾಡು ಗೆಳೆಯರು ಬಲುದೂರ
ಎಂದು ಸೇರುವುದೋ ಈ ಜೀವ ಚೆಲುವಾದ ನಮ್ಮೂರ
ವೈಶಾರಾಮ ಜೀವನವಿದ್ದರೂ ಏಕೋ ಮನಸ್ಸು ಭಾರ
ಸಹಿಸದು ಮನವು ಏಕಾಂಗಿಯಾಗಿ ಅನುಭವಿಸಲು ಈ ಜೀವನಸಾರ..

ಮನದಲ್ಲಿತ್ತು ಒಂದೇ ಒಂದು ಸಣ್ಣ ಬಯಕೆ
ವಿದೇಶ ನೋಡಿ ಸುತ್ತುವ ಸಣ್ಣ ಹರಕೆ
ಹಣಗಳಿಸುವ ಉದ್ದೇಶವಿಲ್ಲ ನನಗೆ
ಹೋದ್ರೆ ಸಾಕು ಮಾರಾಯ ಬೇಗ ನಮ್ಮೂರ್‍ಗೆ

ಮತ್ತೆ ಬರುವ ಯೋಚನೆ ಇದೆ ವಿದೇಶಕ್ಕೆ
ಆದ್ರೆ ಅದು ಅನಿವಾರ್ಯವಾದರೆ ಮಾತ್ರ ಓಕೆ
ಏನೇ ಹೇಳಿ ಇಲ್ಲಿನ ಸೌಕರ್ಯಗಳ ಬಗ್ಗೆ
ಬಂದು ಹೋಗುವುದಕ್ಕೆ ಮಾತ್ರ ಸರಿ ಹೀಗೆ

ರವಿಕುಮಾರ ವೈ.ಎಂ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಕಾವ್ಯವಾಗಿರ ಬೇಕಾದ ಭಾವನೆ - ಕೇವಲ್ ವಾಕ್ಯವಾಗಿದೆ.
ಪೋನ್ ಮಾಡಿ ಹೇಳಿದ ಹಾಗಿದೆ.
ಇನ್ನೂ ಭಾವನೆಗೆ ಸರಿಯಾದ ಪದ ಜೋಡಿಸಿ ಹಾಡಬೇಕು..
ಮುರಳಿ,

ಮುರಳಿಯವರೆ, ನಿಮ್ಮ ಸಲಹೆಗೆ ತುಂಬಾ ಧನ್ಯವಾದಗಳು. ಖಂಡಿತ ಇನ್ನು ಮುಂದೆ ಉತ್ತಮವಾಗಿ ಬರೆಯಲು ಪ್ರಯತ್ನ ಮಾಡುವೆ.
ರವಿಕುಮಾರ ವೈ.ಎಂ

ಈ ತರನೂ ಇರಲಿ ಬಿಡಿ... ಬರೀ ಪದ್ಯ ಅತ್ವ ಬರೀ ಗದ್ಯ ಆಗೋದರೆ ಒಂದೇ ತರ ಇದೆ ಅನ್ಸುತ್ತೆ.
ಈ ಹಿಂದೆ ಅದಕ್ಕೆ ಚಂಪೂ ನಮ್ಮ ಕಬ್ಬಿಗರು 'ಚಂಪೂ' ಕಂಡುಕೊಂಡಿದ್ದರು. ವಸಿ ಗದ್ಯ ವಸಿ ಪದ್ಯ ಹೀಗೆ ಹದವಾಗಿ ಕಲಸಿ ಬರೆಯುತ್ತಿದ್ದರು.

----
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ರವಿ ಯವ್ರೆ..

ನಿಮ್ಮ ಈ ಕವಿತೆ ಯಾರಿಗೆ ಎಷ್ಟು ಅರ್ಥವಾಯ್ತೋ ಗೊತ್ತಿಲ್ಲ, ಆದ್ರೆ ನಂಗೆ ಅರ್ಥವಾಯ್ತು.
ಒಂದೊಂದು ಸಾಲುಗಳು ಸತ್ಯ. ( ನನ್ನ ಪಾಲಿಗೆ).

ಅದಕ್ಕೆ .. ಮ್ಯಾನೇಜ್ಮೆಂಟ್ ಮೇಲೆ ಸ್ವಲ್ಪ( ಸ್ವಲ್ಪ ಏನೂ , ಜಾಸ್ಟೀನೆ!) ಒತ್ತಡ ಹಾಕಿ ವಾಪಾಸು ಭಾರತಕ್ಕೆ ಬರ್ತಾ ಇದೀನಿ.

ಒನ್ದೆರಡು ತಿನ್ಗಳು ನಮ್ಮ ದೇಶದಾಗಿದ್ದು ವಾಪಸು ಮತ್ತೆ ಇಲ್ಲಿಗೆ ಬರ್ಬೇಕು!;)

ಸವಿತೃ ಅವರೆ.. ನಿಮ್ಮ ಅಬಿಪ್ರಾಯಕ್ಕೆ ಧನ್ಯವಾದಗಳು..
ನಿಮ್ಮ ರಜಾದಿನಗಳು ಸಂತೋಷದಿಂದ ಕೂಡಿರಲೆಂದು ಹಾರೈಸುತ್ತೇನೆ...