ರಾಜ ಮಾರ್ಗ

To prevent automated spam submissions leave this field empty.

ರಾಜ ಮಾರ್ಗ

ಇಲ್ಲ, ರಾಜಮಾರ್ಗ ಮುಚ್ಚಲೂ  ಇಲ್ಲ

ಅದು ಪ್ರತಿಬಂದಿತವೂ ಅಲ್ಲ

ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ

ಗಮ್ಯದ ತನಕ ಸುದೃಢ ಘನ ಗಂಭೀರ

ಆದರೆ ಕ್ರ ಮಿಸರು ಅದರಲಿ ಹಲವರು

ಅವರೋ ತಾವೇ ಕಿರುದಾರಿ ಹುಡುಕುವರು

ಅಲೆದಲೆದು ಬಳಲಿ ಗಮ್ಯವ ತಲುಪದವರು

ಸೋತು ಕೈ ಕೈ ಹಿಸುಕಿ ಮರುಗುವರು

ಆದರೂ ರಾಜಮಾರ್ಗ ಇನ್ನೂ ಹಾಗೆಯೇ ಇದೆ

ಸುವಿಹಾರಿ ಚೇತೋಹಾರಿ  ಘನ ಗಂಭೀರದೆ

ಕಾಯುತಲಿದೆ ಅದು ಒಯ್ಯಲು ತೀರಕೆ

ಸೋತು ಬಳಲಿ ಬರುವರೆಲ್ಲರ ಗಮ್ಯಕೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

<<ಇಲ್ಲ, ರಾಜಮಾರ್ಗ ಬಂದಾಗಲೂ ಇಲ್ಲ>> - ರಾಜಮಾರ್ಗ ಬಂದ ಮೇಲೂ ಇಲ್ಲ ಅನ್ನುವ ಅರ್ಥ ಬರುತ್ತಿದೆ. ರಾಜಮಾರ್ಗ ಬಂದಾಗ ಏನು ಇಲ್ಲವಾಗಿತ್ತು ಎನ್ನುವ ಪ್ರಶ್ನೆ ಮೂಡುತ್ತದೆ. <<ಅದು ಪ್ರತಿಬಂದಿತವೂ ಅಲ್ಲ>> - ಅದು ಪ್ರತಿಬಂಧಿತವೂ ಅಲ್ಲ <<ಅದು ಹಾಗೆಯೇ ಇದೆ, ಸುವಿಹಾರಿ, ಚೇತೋಹಾರಿ ಗಮ್ಯದ ತನಕ ಸುದೃಢ ಘನ ಗಂಭೀರಿ>> - ಗಮ್ಯದ ತನಕ ಸುದೃಢ ಘನ ಗಂಭೀರ <<ಆದರೆ ಕೃಮಿಸರು ಅದರಲಿ ಮಾನವರು>> -ಆದರೆ ಕ್ರಮಿಸರು ಅದರಲಿ ಮಾನವರು - ಮಾನವರು ಅದರಲ್ಲಿ ಕ್ರಮಿಸರು ಎಂದಾದರೆ, ಅದರಲ್ಲಿ ಕ್ರಮಿಸುವವರು ಯಾರು ಎನ್ನುವ ಪ್ರಶ್ನೆ ಮೂಡುತ್ತದೆ. ಕೆಲ ಮಾನವರು ಎಂದರೆ ಅರ್ಥಪೂರ್ಣವಾದೀತೇನೋ. ಅಲೆದಲೆದು ಬಳಲಿ ಗಮ್ಯಕೆ ತಲುಪದವರು - ಅಲೆದಲೆದು ಬಳಲಿ ಗಮ್ಯವ ತಲುಪದವರು ಕಾಯುತಲಿದೆ ಅದು ಒಯ್ಯಲು ತೀರಕೆ ಸೋತು ಬಳಲಿ ಬರುವರೆಲ್ಲರ ಗಮ್ಯಕೆ - ಅದು ಕಾಯುತಿರುವುದು ತೀರಕ್ಕೆ ಒಯ್ಯಲೋ? - ಅಥವಾ ತೀರಕ್ಕೆ ಸೋತುಬಳಲಿ ಬಂದವರನ್ನು ಗಮ್ಯಕ್ಕೆ ಒಯ್ಯಲೋ? ಹಾಗಾದರೆ ತೀರ ಅಂದರೆ ಯಾವುದು? - ಆಸು ಹೆಗ್ಡೆ

ಹೆಗಡೆಯರೆ ತಪ್ಪುಗಳನ್ನು ತಿದ್ದಿದ್ದಕ್ಕೆ ಅಬಾರಿ "ಬಂದ್" ಅನ್ನುವ ಶಬ್ದ ನಮ್ಮ ಆಡು ಭಾಷೆಯಲ್ಲಿ ಮುಚ್ಚುವುದು ಅನ್ನುತ್ತಾರಲ್ಲಾ ಅದನ್ನೇ ಉಪಯೋಗಿಸಿದ್ದೆ. ಇದು ಪ್ರಾಯಷ: ೧೯೮೪-೮೫ ರಲ್ಲಿ ಬರೆದ ಕವನ. ಹಿಂದಿಯ ಶಬ್ದವನ್ನೇ ಪರ್ಯಾಯವಾಗಿ ತೆಗೆದುಕೊಂಡಿರ ಬಹುದಾಗಿದೆ , ಈಗ ಬದಲಿಸಿದೆ ಇಲ್ಲಿ "ತೀರ" ಅನ್ನುವುದನ್ನು "ಗಮ್ಯ"ದ ಇನ್ನೊಂದು ರೂಪವನ್ನಾಗಿ ಬಳಸಿಕೊಂಡಿದ್ದೇನೆ. ಹೇಳಿ ಈಗ ಹೇಗಿದೆ..?

ಬಳಕೆ ಹೀಗಿದ್ದರೆ ಅರ್ಥಗರ್ಭಿತ: "ಬಂದ್" ಆಗಿಲ್ಲ ಅಥವಾ ಬಂದ್ ಆಗಿಲ್ಲ ಪ್ರತಿಬಂಧಿತ ಇನ್ನೂ ಪ್ರತಿಬಂಧಿತ ಆಗಿಲ್ಲ. ಸುವಿಹಾರಿ - ಸಂತೋಷಕ್ಕಾಗಿ ಅಲೆದಾಡುವವನು. ರಾಜಮಾರ್ಗ ಅಲೆದಾಡುತ್ತಿದೆ ಅನ್ನುವ ಅರ್ಥ ಬರುತ್ತದೆ ತಾನೇ? [ವಿಹಾರ (ನಾಮಪದ) (ಸಂ) ೧ (ಸಂತೋಷಕ್ಕಾಗಿ) ಕಾಲ ಕಳೆಯುವುದು, ಅಲೆದಾಟ, ತಿರುಗಾಡುವುದು] <<ಕಾಯುತಲಿದೆ ಅದು ಒಯ್ಯಲು ತೀರಕೆ ಸೋತು ಬಳಲಿ ಬರುವರೆಲ್ಲರ ಗಮ್ಯಕೆ>> ಇದು ನಾನು ಇಲ್ಲಿ ಕೆಳಗೆ ಬರೆದಿರುವ ಹಾಗೆ ಇದೆ: ಕಾಯುತಲಿದೆ ಅದು ಒಯ್ಯಲು ಬೆಂಗಳೂರಿಗೆ ಸೋತು ಬಳಲಿ ಬರುವರೆಲ್ಲರ ಬೆಂಗಳೂರಿಗೆ - ಆಸು ಹೆಗ್ಡೆ ಆಭಾರಿ ನಾಮಪದ (<ಸಂ. ಆಭಾರಿನ್) ಉಪಕೃತ, ಋಣಿ