ಎಲೆ

To prevent automated spam submissions leave this field empty.

ಎಲೆ
ನೀನೇಕೆ ನಡುಗುವೆ
ಬೀಸುವ ಗಾಳಿಗೆ ತಲೆ ಬಾಗಿ ನಡೆದರೆ
ನಡುಗಬೇಕಿಲ್ಲವಲ್ಲೆ

ನಿನ್ನ ಈ ನಡು-ಗುವ
ಬಳುಕುವ
ಬಡನಡುವನು ನೋಡಿ
ಗಾಳಿಯೇ ನಾಚಿ ಓಡಿ ಹೋಯಿತಲ್ಲೆ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ತಿಳಿಯಾಗಿ ಚಿಕ್ಕದಾಗಿದ್ದರೂ ಚೊಕ್ಕವಾಗಿದೆ. ಚನ್ನಾಗಿದೆ. ಬರಲಿ ಇನ್ನು ಈ ತೆರನಾದ ಸಾಲುಗಳು.

---
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ತಿರುಕ್ಕುರಳರಿಗೆ ಇದೋ ನನ್ನ ದೊಡ್ಡ ನಮನ.
ನೀವಂದಾಗೆ ನಮ್ಮಲ್ಲಿ ಅಂತಹ ದೊಡ್ಡ ವ್ಯಕ್ತಿತ್ವದ ಮೂರ್ತಿ ಇಲ್ಲಾಂತೀರಾ? ಹಾಗಾದ್ರೆ ನಮ್ಮ ಮುದ್ದು ಗೊಮ್ಮಟ ನಿಮಗೆ ಚೆನ್ನ ಎನಿಸಲಿಲ್ಲವೆ? ಎಲ್ಲರೊಡನಿದ್ದೂ, ಎಲ್ಲವನೂ ಬಿಟ್ಟ ಗೊಮ್ಮಟ ಮಾನವತೆಗೆ ಒಂದು ಕಿರೀಟ. ಹನ್ನೆರಡು ವರ್ಷಕ್ಕೊಂದು ಸಾರಿ ಅವನಿಗೆ ಏನೆಲ್ಲಾ ಬಳಿಯುತ್ತಾರೆ, ಬಣ್ಣ ಬರಿಸುತ್ತಾರೆ, ಮೀಯಿಸುತ್ತಾರೆ. ಆದರೇನೆಂತೆ, ಅವನಿಗದೆಲ್ಲಾ ಬೇಕಿಲ್ಲ. ಮಸ್ತಕಾಭಿಷೇಕ ಮುಗಿಯಿತೆಂದರೆ, ಅವನು ಗೊಮ್ಮಟನೇ. ಎಲ್ಲವನೂ ಮೀರಿ ನಿಂತ ಬೊಮ್ಮಟನೇ.
ಬೇಡಾಪ್ಪ, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿ ಬಂದವರನ್ನು ಬೆದರಿಸುವಂತೆ ನಿಂತಿರುವ ಮಹಿಷಾಸುರನೇನು ಕಡಿಮೆಯೇ? ಕೆಟ್ಟದ್ದನ್ನು ಬಿಡಿ, ಒಳಿತನ್ನು ಹಿಡಿದು ನಡಿ ಎಂದು ಗದರಿಸುವವನಂತೆ ನಿಂತಿರುವ ಮಹಿಷಾಸುರನೂ ಸುಂದರನೇ, ಭೀಕರಸುಂದರ. ಅಲ್ವೇ ಮತ್ತೆ?
ಎ.ವಿ. ನಾಗರಾಜು

ಮನ್ನಿಸಿ,
ನಿಮ್ಮ ಮಾತಿನ ತಿರುಳು ನನಗೆ ಅರಿತವಾಗಲಿಲ್ಲ. ನಿಮ್ಮ ಪದ್ಯದ ಬಗ್ಗೆ ನಾನು ಬರೆದದ್ದು. ಗೊಮ್ಮಟ, ಮಹಿಶ ಇವರೆಲ್ಲ ಹೇಗೆ ಬಂದರು ಇಲ್ಲಿ. ? :(
--
ಕನ್ನಡಕ್ಕೆ ಬೇಕು ಕನ್ನಡದೇ ಸೊಬಗು,ಸೊಗಡು

ಕ್ಷಮಿಸಿ, ನಾನು ನಿಮ್ಮನ್ನುದ್ದೇಶಿಸಿ ಬರೆದಿದ್ದಲ್ಲ. ಮಹೇಶ್ ತಮ್ಮ ಗುರುತಾಗಿ ತಿರುಕ್ಕುರುಳ್ ಚಿತ್ರವನ್ನು ಹಾಕಿಕೊಂಡಿರುವುದಕ್ಕೆ ನಾನು ಸೂಚಿಸಿರುವುದು ನಮ್ಮದೇ ಕರ್ನಾಟಕದ ವೈಭವೋಪೇತ ಮೂರ್ತಿಗಳಲ್ಲಿ ಒಂದನ್ನು ಆರಿಸಿಕೊಳ್ಳಬಾರದೆ ಎಂದು. ಇದರ ಅರ್ಥ ತಿರುಕ್ಕುರುಳ್ ಬಗ್ಗೆ ನನಗೆ ಗೌರವವಿಲ್ಲವೆಂದಲ್ಲ. ಅವರ ಬಗ್ಗೆ ಬರೆಯುವಷ್ಟು ದೊಡ್ಡವನೂ ನಾನಲ್ಲ.
ಧನ್ಯವಾದಗಳು,
ಎ.ವಿ. ನಾಗರಾಜು