ದುನಿಯಾ ವಿಜಯ್ ಗೆ ಯಾಕೆ ಹೀಗೆ- ರಘೋತ್ತಮ್ ಕೊಪ್ಪರ

To prevent automated spam submissions leave this field empty.

ಈ ವರ್ಷದ ಅತ್ಯುತ್ತಮ ನಟ ಪ್ರಶಸ್ತಿಯನ್ನು ಬಾಚಿಕೊಂಡ ದುನಿಯಾ ಖ್ಯಾತಿಯ ವಿಜಯ್ ಅವರಿಗೆ ಒಂದು ವರ್ಷದ ವರೆಗೆ ಚಿತ್ರರಂಗದಿಂದ ದೂರವಿರಬೇಕೆಂಬ ಚಲನಚಿತ್ರ ವಾಣಿಜ್ಯ ಮಂಡಳಿಯ ನಿರ್ಣಯ ನಿಜಕ್ಕೂ ಬೇಸರ ತಂದಿದೆ. ಕನ್ನಡದಲ್ಲಿ ಹೊಸ ಹೊಸ ಯುವಕರು ಬಂದು ಮಿಂಚುತ್ತಿದ್ದಾರೆ. ಒಳ್ಳೆಯ ಅಭಿರುಚಿಯ ಚಿತ್ರಗಳು ಬರುತ್ತಿವೆ. ಗಂಧದ ನಾಡಿನಲ್ಲಿ ಗಂಧದ ಗಾಳಿ ಬೀಸುತ್ತಿದೆ. ಅಂಥ ಸಮಯದಲ್ಲಿ ಹೊಸ ನಟರಿಗೆ ಈ ರೀತಿ ಮಾಡಿದರೆ ಹೇಗೆ. ಅವರ ಭವಿಷ್ಯ ಬಗ್ಗೆ ಚಿಂತಿಸಬೇಡವೆ. ನಿರ್ಮಾಪಕ ಅನ್ನದಾತ ನಿಜ. ಆದರೆ ಅದಕ್ಕೂ ಮೊದಲು ಅವಕಾಶ ಕೊಟ್ಟ ನಿರ್ಮಾಪಕನ ಬಗ್ಗೆ ಯೋಚಿಸಿ ವಿಜಯ್ ಆ ನಿರ್ಧಾರ ತೆಗೆದುಕೊಂಡಿರಬೇಕು ಅಲ್ಲವೇ. ಅಷ್ಟೆ ಅಲ್ಲ ಮೊದಲೇ ವಿಜಯ್ ಹೇಳಿದ್ದರು. ಯುಗ ಬಿಡುಗಡೆಯಾದ ೫೦ ದಿನಗಳ ನಂತರ ಚಂಡ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು. ಪಾಪ ಆ ನಿರ್ಮಾಪಕರಿಗೆ ಕೆಟ್ಟಾಗಬಾರದೆಂದು ತೆಗೆದುಕೊಂದ ನಿರ್ಧಾರ ವಿಜಯ್ ಗೆ ಮುಳುವಾಯಿತಲ್ಲ. ಇರಲಿ ಆದರೆ ಅರಳುವ ಪ್ರತಿಭೆಗಳನ್ನು ತುಳಿಯುವ ಹುನ್ನಾರ ಯಾರದ್ದೆ ಇರಲಿ ತಪ್ಪಲ್ಲವೇ. ಒಟ್ಟಾರೆ ಈಗ್ ವಿಜಯ್ ಈ ಪಾಪಿ ದುನಿಯಾ ಅವಕಾಶ ಕೊಟ್ಟು ಕಸಿತಲ್ಲ, ವಾಣಿಜ್ಯ ಮಂಡಳಿಯನ್ನು ನೋಡಿ ನೀನುನು ಹಾಗೆನಾ ಎಂದು ಗುನುಗುತ್ತಿದ್ದಾರೆ. ವಿಜಯ್ ಗೆ ಒಳ್ಳೆಯದಾಗಲಿ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಪಾಪಿ ದುನಿಯಾದಲ್ಲಿ... ವಿಜಯ್ ನಂತಹ ಒಬ್ಬ ಒಳ್ಳೆಯ ಪ್ರತಿಭೆ ಇದ್ದರೆ.... ಅದ್ನ್ನ ತುಳಿಯೋದಿಕ್ಕೇ ನಾರಯಣ್ನಂತಹ ಹತ್ತು ಜನ ತಗಡು ನಿರ್ದೇಶಕರು ಇರೋದ್ಲಿಂದೆ ತಾನೆ ನಮ್ಮ ಕನ್ನಡ ಚಿತ್ರರಂಗ ಇನ್ನೂ ಹೊರಗಿನ ಪ್ರಪಂಚದಲ್ಲಿ ಗುರುತಿಸ್ಕೊಳ್ಳೊ ಹಂತದಲ್ಲೇ ಇರೋದು.... ಇಶ್ಟಕ್ಕೂ ಎಲ್ಲರಿಗೂ ಶಿಸ್ತನ್ನ ಕಲಿಸೋ ಕರ್ನಾಟಕ ವಾಣಿಜ್ಯ ಚಲನಚಿತ್ರ ಮಂಡಳಿ ಶನಿವಾರ ತೆರೆಕಂಡ ಚಂಡ ನಿರ್ದೇಶಕರ ವಿರುದ್ದ ಯಾವ ರೀತಿ ಕ್ರಮ ಕೈಗೊಳ್ತಾರೊ ನೋಡಬೇಕಾಗಿದೆ... ಯಾಕೆಂದರೆ ಅಂಬರೀಶ್ ರವರ ನೇತ್ರುತ್ವ ಸಂದಾನದ ಸಮಿತಿ ಯುಗ ತೆರೆಕಂಡ ಎರೆಡು ವಾರದ ನಂತರ ಬಿಡುಗಡೆ ಮಾಡುವಂತೆ ಸೋಚಿಸಿತ್ತಲ್ಲಾ......