ಬ್ರೆಕ್ಟ್ ನ ವಿಶಿಷ್ಟ ನಾಟಕ 'ಚಾಕ್ ಸರ್ಕಲ್'ಪ್ರದರ್ಶನ ಕುರಿತ ವಿಮಶರ್ೆ

To prevent automated spam submissions leave this field empty.

ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕ ಪ್ರದರ್ಶನ

ರಾಷ್ಟ್ರೀಯ ನಾಟಕ ಶಾಲೆಯ ಪ್ರಾಯೋಜನೆಯಲ್ಲಿ ಕುಂದಾಪುರದ ರಂಗಕಲಾ ತಂಡದವರಿಂದ ಪ್ರಸಿದ್ದ ನಾಟಕಕಾರ ಬಟರ್ಾಲ್ ಬ್ರೆಕ್ಟ್ ರವರ 'ಚಾಕ್ ಸರ್ಕಲ್' ನಾಟಕದ ಕನ್ನಡ ರೂಪಾಂತರವನ್ನು ಎ.ಡಿ.ಎ ರಂಗಮಂದಿರದಲ್ಲಿ ದಿ: 09.12.2006 ರಂದು ಪ್ರದಶರ್ಿಸಲಾಯಿತು. ಪಾತ್ರಗಳ ಲಯಸಾಧನೆ, ನಾಟಕದುದ್ದಕ್ಕೂ ಕೇಳಿಬರುವ ಸಂಗೀತ ಮತ್ತು ದೃಶ್ಯಗಳ ಸಮ್ಮಿಲನ ಸಾಧಿಸುವಲ್ಲಿ ಕೆಲಮಟ್ಟಿಗೆ ಕೊರತೆ ಕಂಡರೂ ಪ್ರೇಕ್ಷಕರನ್ನು ಭಾವನಾತ್ಮಕವಾಗಿ ಸೆರೆಹಿಡಿಯುವಲ್ಲಿ ಈ ಕನ್ನಡ ರೂಪಾಂತರ ಅವತರಣಿಕೆಯು ಒಂದು ಉತ್ತಮ ಪ್ರಯತ್ನವೆನ್ನಬಹುದು.

ಬಟರ್ಾಲ್ಟ್ ಬ್ರೆಕ್ಟ್ (1898-1956) ಜರ್ಮನಿ ಕಂಡ ವಿಶ್ವದ ಅತಿ ಶ್ರೇಷ್ಟ ನಾಟಕಕಾರ. ಬ್ರೆಕ್ಟ್ ರಂಥಹ ನಾಟಕೀಯ ಪರಿಣಾಮವನ್ನು ಪ್ರಪಂಚದ ಕೆಲವೇ ಕೆಲವು ನಾಟಕಕಾರರು ಹೊಂದಿದ್ದಾರೆ. ಅವರ ನಾಟಕಗಳು ಹಲವಾರು ನಾಟಕಕಾರರು, ಬರಹಗಾರರು, ವಿಚಾರವಾದಿಗಳು ಸೇರಿದಂತೆ ನವ ಪ್ರೇಕ್ಷಕರ ಪೀಳಿಗೆಯನ್ನೇ ರೂಪಿಸಿವೆ ಹಾಗೂ ನಾಟಕರಂಗದ ಆಯಾಮವನ್ನೇ ಬದಲಾಯಿಸಿದ ಅವರ ಬರಹಗಳನ್ನು ವಿಶ್ವದಾದ್ಯಂತ ಗಂಭೀರವಾಗಿ ಅಭ್ಯಸಿಸಲಾಗುತ್ತದೆ.

ಬಟರ್ಾಲ್ಟ್ ಬ್ರೆಕ್ಟ್ ದ್ವಿತೀಯ ಮಹಾಯುದ್ದ ಸಮಯದಲ್ಲಿ ಆರು ವರ್ಷಗಳ ಕಾಲ ಅಮೇರಿಕಾದಲ್ಲಿ ಭೂಗತರಾಗಿದ್ದಾಗ 'ಚಾಕ್ ಸರ್ಕಲ್' ನಾಟಕವನ್ನು ಜಾಜರ್ಿಯಾದ ಕಕೇಷಿಯ ಪರ್ವತದ ತಪ್ಪಲಿನ ಪರಿಸರದಲ್ಲಿ ರೂಪಿಸಿದ್ದು ಪುರಾತನ ಚೀನಾದ ದಂತಕಥೆ & ದೊರೆ ಸಾಲೋಮನ್ ಜನಪದ ಕಥೆಯ ಆಧಾರದ ಮೇಲೆ ರಚಿಸಿದ್ದಾರೆ.

ಪೂತರ್ಿ ಹಾಡಿನಿಂದ ತುಂಬಿರುವ ಹಾಸ್ಯ ಮತ್ತು ನಾಟಕೀಯ ಕ್ಷಣಗಳಿಂದ ರಂಜಿಸುತ್ತಲೇ ಸಾಮಾನ್ಯ ವ್ಯಕ್ತಿಗಳ ಮೇಲೆ ರಕ್ಕಸ ಯುದ್ದ ತರುವ ಸಂಚಕಾರಗಳನ್ನು, ವೈಯುಕ್ತಿಕ ಜವಾಬ್ದಾರಿ, ಹಿಂಸೆ, ನೋವು ನರಳಾಟ, ಸಂಕಷ್ಟ ಕಾಲದಲ್ಲಿ ಮತ್ತು ಜೀವನದ ವಿರೋಧಾಭಾಸದ ಮಜಲುಗಳಲ್ಲಿ ಮಾನವ ಮಾಡುವ ಆಯ್ಕೆ, ಇವೆಲ್ಲವುಗಳನ್ನು ಕಲಾವಿದ ಬ್ರೆಕ್ಟ್ ಅದ್ಭುತ ರೀತಿಯಲ್ಲಿ ಭಾವನಾತ್ಮಕವಾಗಿ ಸೆರೆಹಿಡಿದಿದ್ದಾರೆ. ಇದು ಬಹುತೇಕ ಇಂದಿನ ಇಸ್ತ್ರೇಲ್-ಪ್ಯಾಲೇಸ್ಟೀನ್ ಚಿತ್ರಣವನ್ನು, ಯುದ್ದ ಭೂಮಿಯಲ್ಲಿ ನರಕಸದೃಶವಾಗಿರುವ ಇರಾಕ್ನ ಯಾತನೆಗಳನ್ನು ಪ್ರೇಕ್ಷಕನ ಕಣ್ಣಿಗೆ ಕಟ್ಟಿಕೊಡಲೆತ್ನಿಸುತ್ತದೆ.

ಕಕೇಷಿಯಾ ರಾಜ್ಯದ ದುರ್ಬಲ ರಾಜ ಆಂತರಿಕ ಯುದ್ದದಲ್ಲಿ ಶತ್ರುಗಳಿಂದ ಕೊಲ್ಲಲ್ಪಡುತ್ತಾನೆ. ಶತ್ರುಸೇನೆ ರಾಜ್ಯವನ್ನು ಮುತ್ತಿಗೆ ಹಾಕಿ ವಶಪಡಿಸಿಕೊಳ್ಳಲು ಆಕ್ರಮಿಸಿದಾಗ ರಾಣಿ ನಟೆಲ್ಲಾ ವಜ್ರ, ವೈಡೂರ್ಯ, ವಸ್ತ್ರಗಳನ್ನು ಕೊಂಡೊಯ್ಯುವ ಭರದಲ್ಲಿ ತನ್ನ ಮಗು ಮೈಕೆಲ್ನ್ನೇ ಮರೆತು ಸೇವಕಿಯರೊಂದಿಗೆ ಅರಮನೆ ಬಿಟ್ಟು ಶತ್ರುಸೇನೆಯಿಂದ ತಪ್ಪಿಸಿಕೊಂಡು ಓಡಿಹೋಗುತ್ತಾಳೆ. ಆದರೆ ರಾಣಿಯ ಮತ್ತೊಬ್ಬ ಸೇವಕಿ ಗ್ರೂಷಾ ಅನಾಥವಾಗಿ ಬಿದ್ದಿರುವ ಮಗುವನ್ನೆತ್ತಿಕೊಂಡು ಅದನ್ನು ಕೊಲ್ಲಲು ಬೆಂಬತ್ತಿ ಬರುತ್ತಿರುವ ಶತ್ರುಸೇನೆಯ ಕಣ್ಣುತಪ್ಪಿಸಿ ಹಗಲಿರುಳೆನ್ನದೆ ನಿದ್ರಾಹಾರಗಳಿಲ್ಲದೆ ಪವಾಡ ಸದೃಶ ರೀತಿಯಲ್ಲಿ ಪಕ್ಕದ ರಾಜ್ಯದಲ್ಲಿರುವ ತನ್ನ ಅಣ್ಣನ ಮನೆಗೆ ಓಡಿಹೋಗಿ ತಪ್ಪಿಸಿಕೊಳ್ಳುತ್ತಾಳೆ.

ಇವಳ ಪ್ರಿಯಕರ ಸೈಮನ್ ಯುದ್ದ ಮುಗಿಸಿ ಬರುತ್ತೇನೆಂದು ಹೋದವನು ಯುದ್ದ ಮುಗಿಯುತ್ತಾ ಬಂದರೂ ಪತ್ತೆಯೇ ಇರುವುದಿಲ್ಲ. ಗ್ರೂಷಾಳ ಅಂಜುಬುರುಕ ಅಣ್ಣ ತನ್ನ ಹೆಂಡತಿಗೆ ಹೆದರಿ ಮಹಾನ್ ಸಾಹಸವನ್ನೇ ಮಾಡಿ ಮಗುವನ್ನು ಹೊತ್ತು ಬಳಲಿ ಬೆಂಡಾಗಿ ಬರುವ ಗ್ರೂಷಾಳಿಗೆ ಆಶ್ರಯ ನೀಡಲೂ ಹೆಣಗುತ್ತಾನೆ. ಯುದ್ದಕರೆಗೆ ಬೆದರಿ ಮರಣಶಯ್ಯೆಯಲ್ಲಿ ಈಗಲೋ ಆಗಲೋ ಸಾಯುವವನಂತೆ ಬಿದ್ದಿರುವವನೊಂದಿಗೆ ಅಣ್ಣನ ಬಲವಂತಕ್ಕೂ ಮಗುವಿಗೊಬ್ಬ ತಂದೆಯಿರಬೇಕೆಂಬ ಸಮಾಜದ ಒತ್ತಡಕ್ಕೂ ಸಿಲುಕಿ ಗ್ರೂಷಾಳ ಮದುವೆಯಾಗುತ್ತದೆ. ಯುದ್ದ ಮುಗ್ಧ ಜೀವಗಳನ್ನು ಬಲಿತೆಗೆದುಕೊಂಡು ರಕ್ತದ ಕೋಡಿ ಹರಿಸುತ್ತದೆ, ಬದುಕುಳಿದವರಿಗೆ ವಾಸಿಯಾಗದ ಗಾಯವನ್ನುಂಟುಮಾಡುತ್ತದೆ.

ಯುದ್ದ ಮುಗಿದ ಸುದ್ದಿ ಕೇಳಿ ಅತ್ಯಾಶ್ಚರ್ಯಕರವಾಗಿ ಆರೋಗ್ಯಗೊಂಡು ಸೆಟೆದೆದ್ದು ನಿಲ್ಲುವ ಗ್ರೂಷಾಳ ಗಂಡ, ಮತ್ತು ಅವಳ ಪ್ರಿಯಕರ ಸೈಮನ್ ಯುದ್ದ ಮುಗಿಸಿ ಗ್ರೂಷಾಳನ್ನು ಹುಡುಕಿಕೊಂಡು ಬರುವ ಚಿತ್ರಣಗಳು ಗ್ರೂಷಾಳನ್ನು ಸಾಯಲೂ ಬಿಡದೆ ಬದುಕಲೂ ಬಿಡದೆ ತ್ರಿಶಂಕು ಸ್ಥಿತಿಯಲ್ಲಿ ತೂಗೂಯ್ಯಾಲೆಯಾಡಿಸುತ್ತವೆ.

ಏಳೆಂಟು ವರ್ಷಕಾಲ ಅರಮನೆ ಮಗುವನ್ನು ತಾನೇ ಹೊತ್ತು ಬೆಳೆಸುವ ಗ್ರೂಷಾಳಿಗೆ ಮತ್ತೊಂದು ಆಘಾತ ಕಾದಿರುತ್ತದೆ. ಇವಳ ಬಳಿಯೇ ಮಗುವಿದೆಯೆಂದು ಹೇಗೋ ಪತ್ತೆ ಹಚ್ಚಿದ ರಾಣಿ ನಟೆಲ್ಲಾ ತನ್ನ ಮೈಕೆಲ್ನ್ನು ತನಗೇ ಕೊಡಬೇಕೆಂದು ದುಂಬಾಲು ಬೀಳುತ್ತಲೇ ಇಬ್ಬರೂ ನ್ಯಾಯಾಲಯದ ಕಟಕಟೆ ಹತ್ತುತ್ತಾರೆ. ಭ್ರಷ್ಟಗೊಂಡಿರುವ ನ್ಯಾಯಾಲಯದಲ್ಲಿ ತನಗೆ ನ್ಯಾಯ ಸಿಗುವ ಸಾಧ್ಯತೆಯೇ ಇಲ್ಲವೆಂದು ಗ್ರೂಷಾ ಆತಂಕ ಪಡುತ್ತಿರುವಾಗಲೇ ಅಸಂಬದ್ಧತೆ ಮತ್ತು ಸಿನಿಕತನದಿಂದ ಕೂಡಿರುವ ಜಾಣ-ಮೂರ್ಖ ನ್ಯಾಯಾಧಿಪತಿ ಅಸ್ದಾಕ್ 'ಚಾಕ್ (ಸೀಮೆ ಸುಣ್ಣದ) ಸರ್ಕಲ್' ಬರೆದು ಮಗು ಮೈಕೆಲ್ ನ 'ನೈಜ ತಾಯಿ' ಯನ್ನು ಪತ್ತೆಹಚ್ಚುವ ಮೂಲಕ ನಾಟಕ ಅಂತ್ಯ ಕಾಣುತ್ತದೆ. ಪರರಿಗೆ ಒಳಿತು ಬಯಸುವ ಸ್ವಾರ್ಥರಹಿತ ಬದ್ದತೆಯ ವ್ಯಕ್ತಿಯಾಗಿ ತನ್ನ ಜೀವನವನ್ನು ಮುಡಿಪಾಗಿಟ್ಟು ಅಂತಿಮವಾಗಿ ವಿಜಯಸಾಧಿಸುತ್ತಾ ಹೊರಹೊಮ್ಮುವುದು ಗ್ರೂಷಾಳ ಪಾತ್ರ.

ದುಲರ್ಾಭ ಪಡೆಯಲೆತ್ನಿಸುವ ಧರ್ಮ, ಅನ್ಯಾಯ ಮತ್ತು ಸಾಮಾಜಿಕ ಅಸಮಾನತೆಗಳ ಮೇಲೆ ಬ್ರೆಕ್ಟ್ ರವರ ನಾಟಕ ತನ್ನ ಪ್ರತಿಯೊಂದು ಪಾತ್ರಗಳ ಮೂಲಕ ನಿದರ್ಾಕ್ಷಿಣ್ಯವಾಗಿ ದಾಳಿ ಮಾಡುತ್ತದೆ. ಅಂತಃಕರುಣವಿಲ್ಲದ ಅಧಿಕಾರದ ಅಸ್ಥಿತ್ವವನ್ನು ವ್ಯಂಗ್ಯ ಮಾತುಗಳಿಂದ, ಬ್ರೆಕ್ಟ್ ಇಕ್ಕೆಲಗಳಿಂದ ತೀಕ್ಷ್ಣವಾಗಿ ಇರಿದು ಘಾಸಿಗೊಳಿಸುತ್ತಾರೆ. ಹಾಗೆಯೇ ಪ್ರೇಕ್ಷಕರು ಪಾತ್ರಗಳಲ್ಲಿ ವಿಲೀನವಾಗಿ ಮೈಮರೆಯುವಂತೆ ಮಾಡುವ ಬದಲು ಅವರು ಮತ್ತಷ್ಟು ಆಲೋಚಿಸುವಂತೆ ಮಾಡುವುದು ಬ್ರೆಕ್ಟ್ ರವರ ಕಲೆ.

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು