ಬುದ್ಧಿಗೆ ಕಸರತ್ತು: "ಸಂ-ಪದಬಂಧ"-೧

To prevent automated spam submissions leave this field empty.

ಆತ್ಮೀಯ ಸಂಪದಿಗರೇ,

ಪದಬಂಧವನ್ನು ಬಿಡಿಸುವುದು ಈಗೀಗ ಕೊಂಚ ಕಡಿಮೆಯಾಗುತ್ತಿರುವ ಹವ್ಯಾಸ. ನಾನು ಚಿಕ್ಕವನಿದ್ದಾಗ ಭಾನುವಾರದ ದಿನ ಬೆಳ್ಳಂಬೆಳಗ್ಗೆ ಪ್ರಜಾವಾಣಿಯನ್ನು ಅಂಗಳದ ತುಂಬ ಹರಡಿಕೊಂಡು, ಅಪ್ಪ, ಅಮ್ಮ, ಅತ್ತೆ, ಅಜ್ಜ, ಅಜ್ಜಿ ಹೀಗೆ ಮನೆಮಂದಿಗೆಲ್ಲ ತಲೆಕೆಡಿಸಿ ಪದಬಂಧಗಳನ್ನು ತುಂಬುತ್ತಿದ್ದೆ. ನಿಮ್ಮಲ್ಲೂ ಸಾಕಷ್ಟು ಜನರು ಸುಧಾ, ಪ್ರಜಾವಾಣಿಗಳ ಪದಬಂಧಗಳಲ್ಲಿ ಹುದುಗಿ ಭಾನುವಾರದ ಅರ್ಧ ದಿನವನ್ನೇ ಕಳೆದಿರಬಹುದು ಅಲ್ಲವೇ?

ಅದನ್ನೇ ನೆನೆಯುತ್ತಾ ಪದಬಂಧವೊಂದನ್ನು ರಚಿಸಲು ಪ್ರಯತ್ನಿಸಿದ್ದೀನಿ. ಬಿಡಿಸಿ, ಹೇಗಿತ್ತು ಅಂತ ಹೇಳುತ್ತೀರಾ? ಇದು ಕೇವಲ "ಪದಗಳ ಬಂಧ" ಆಗದಿರಲಿ ಎಂದು ಅಲ್ಲಲ್ಲಿ ನಮ್ಮ ಕನ್ನಡನಾಡು-ನುಡಿಯ ಬಗ್ಗೆ ಕೆಲವು ರಸಪ್ರಶ್ನೆಗಳನ್ನೂ ಸೇರಿಸಿದೆ. ಇಷ್ಟವಾಯಿತೋ ಇಲ್ಲವೋ ಹೇಳಿ.

ಈ ಪದಬಂಧಕ್ಕೆ ಉತ್ತರ ಶುಕ್ರವಾರ (ಮಾರ್ಚಿ ೨) ಪ್ರಕಟಗೊಳ್ಳುತ್ತದೆ.

1 2 3 4
5 6 7
8 9
10 11
12 13 14
15
16 17 18 19
20
21 22 23

ಮೇಲಿನಿಂದ ಕೆಳಕ್ಕೆ
1. ನಮ್ಮ ಹೃದಯ ಸುಮಾರು ಇಷ್ಟು ಗಾತ್ರದ್ದಾಗಿರುತ್ತದೆ ಎಂದು ತಜ್ಞರ ಅಭಿಪ್ರಾಯ (2)
2. ಒಂದು ಬಗೆಯ ಅಂಟು; ಜಿಗುಟಾದ ದ್ರವ (2)
3. ಇಂದಿನ ಕಾಲದಲ್ಲಿ ಜಿಮ್ ಇರುವಂತೆ, ಹಿಂದಿನ ಕಾಲದಲ್ಲಿ ಅಂಗ ಸಾಧನೆಗೆ ಇವುಗಳಿದ್ದವು (3)
4. ಕರ್ನಾಟಕದ ಅತಿ ಎತ್ತರದ ಬೆಟ್ಟ (6)
5. ಭೂಮಿಯಿಂದ ಹೊರತೆಗೆದ ಲೋಹವೊಂದರ ಕಚ್ಚಾ ರೂಪ (3)
7. ರಾಗವಾಗಿ ಪದ್ಯಗಳನ್ನು ಹಾಡುವ ಕಲೆ. ಈಗೀಗ ನಶಿಸಿ ಹೋಗುತ್ತಿದೆ (3)
12. ಕರ್ನಾಟಕದಲ್ಲಿ ಅತಿ ಹೆಚ್ಚು ಕೆರೆಗಳನ್ನು ಹೊಂದಿರುವ ಜಿಲ್ಲೆ (3)
13. ಹತ್ತಿಯನ್ನು ಹೀಗೂ ಕರೆಯುತ್ತಾರೆ ಗೊತ್ತಾ, ಮರುಳೆ? (3)
14. "ಹಾರ ಮತ್ತು ---"ಗಳನ್ನು ಹಾಕಿ ಸ್ವಾಗತ ಕೋರುವುದು (ಅಥವಾ ಸನ್ಮಾನಿಸುವುದು) ನಮ್ಮ ಸಂಪ್ರದಾಯ ಅಲ್ಲವೇ? (3)
15. ಕುದುರೆಯ ಕಾಲಿಗೆ ಹಾಕುವುದು; ಅದೃಷ್ಟದ ಸಂಕೇತವೂ ಹೌದು (2)
17. ಎಣಿಸುವುದು (3)
18. ಫರ್ಮಂಟೇಶನ್ ಎನ್ನುವುದಕ್ಕೆ ಕನ್ನಡದಲ್ಲಿ ಹೀಗೆ ಹೇಳಬಹುದು (3)
19. ಜಗತ್ತಿನ ಅತಿ ಎತ್ತರದ ಏಕಶಿಲಾ ವಿಗ್ರಹ; ಇದು ಕರ್ನಾಟಕದಲ್ಲಿದೆ ಅನ್ನುವುದು ನಮಗೆ ಹೆಮ್ಮೆ ಅಲ್ಲವೇ? (3)
20. ಅಂತರ್ಜಾಲದಲ್ಲಿ ನಮಗೆ ದಕ್ಕಿರುವ ಡೈರಿ! (2)

ಎಡದಿಂದ ಬಲಕ್ಕೆ
1. ಎತ್ತಲೋ ಮಾಯವಾದ ಮುತ್ತಿನ ಮೂಗುತಿ ತಂದ ಈತ ಯಾರು ಹೇಳಿ ನೋಡೋಣ? (5)
3. ಎಲ್ಲದರಲ್ಲೂ ಈತನಿಗೇ ಮೊದಲ ಪೂಜೆಯಂತೆ (4)
6. ನಾಡಪ್ರಭು ಕೆಂಪೇಗೌಡರ ಊರು (3)
8. ಪತಿವ್ರತೆ ಎನ್ನುವುದಕ್ಕೆ ಕನ್ನಡದ ಪದ. ಇದರಿಂದ ಪ್ರಾರಂಭವಾಗುವ ಪ್ರಸಿದ್ಧ ಕಾವ್ಯವೂ ಇದೆ. (3)
9. "ಕಾಗಿನೆಲೆ ಆದಿಕೇಶವ" ಈ ದಾಸರ ಕಾವ್ಯನಾಮ (3)
10. ಮೂರಕ್ಷರದ ನರಕವನ್ನು ಬಲು ಬೇಗ ಸ್ವರ್ಗ ಮಾಡುವುದು ಹೀಗೆ! (2)
11. ಹಸು ಕರು ಹಾಕಿದಾಗ, ಅದರ ಹಾಲನ್ನು ಬಳಸಿ ಮಾಡುವ ಒಂದು ರುಚಿಕರ ತಿನಿಸು (2)
13. ಇವರಿಗಿಂತ ದೊಡ್ಡ ಬಂಧುವಿಲ್ಲ ಎಂದು ಗಾದೆಮಾತು ಹೇಳುತ್ತದೆ (2)
14. ಕಸ್ತೂರಿ ಕಾಸಿಗೆ ಕೊಂಡದ್ದು ಏನನ್ನು ಎಂದು ನಿಮಗೇನಾದರೂ ಗೊತ್ತೇ? (3)
16. ಇದು ಗೋಳಾಟ/ಪಿರಿಪಿರಿ ಅಲ್ಲ ಮಾರಾಯ್ರೇ, ಹಳೆಗನ್ನಡದ ಕವಿಯೊಬ್ಬನ ನೆಚ್ಚಿನ ಕಾವ್ಯ ಪ್ರಕಾರ (3)
18. ನಮ್ಮ ಚೆಲುವ ಕನ್ನಡನಾಡು ಉದಯವಾಗಲಿ ಎಂದು ಹಾಡಿದ ಕವಿಯ ಊರು ಹೇಳಿ ನೋಡೋಣ? (5)
21. ಪತಿ ಅಲ್ಲ ಸ್ವಾಮಿ. ಗಿಡಗಳಿಗೆ ನೀರು ಹಾಯಿಸಲು ಮಾಡಿದ "--" (2)
22. ನಮ್ಮಷ್ಟಕ್ಕೆ ನಾವೇ ಹಾಡಿಕೊಳ್ಳುವುದಕ್ಕೆ ಹೀಗೆಂದು ಹೇಳಬಹುದು (3)
23. ಕಿಟಕಿ ಅಲ್ಲ, ಚುಚ್ಚು ಮಾತಿದು (3)

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಧನ್ಯವಾದಗಳು ಹಂಸಾನಂದಿಯವರೇ. ನೀವು ಇದನ್ನು ಕಾಪಿ ಮಾಡಿ xl sheet ಒಂದಕ್ಕೆ ಪೇಸ್ಟ್ ಮಾಡಿದರೆ ಆಯ್ತು. ಸ್ವಲ್ಪ ಅಡ್ಡ ಸಾಲುಗಳ ಮತ್ತು ಲಂಬಸಾಲುಗಳ (row and column) ಎತ್ತರ, ಅಗಲಗಳನ್ನು ಹೊಂದಿಸಿಕೊಳ್ಳಬೇಕಾಗುತ್ತದೆ ಅಷ್ಟೇ. xl sheet ನಲ್ಲಿ ಕನ್ನಡದಲ್ಲೇ ತುಂಬಬಹುದು.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

1     ಮು     2     3             ಮು      4
ಷ್ಟಿ                     ಳ್ಳ  
  5             6          ಮಾ 7                          ಡಿ   ಯ್ಯ  
8           ದಿ ದೆ     9                   
  ರು     10        ನಾ            11     ಗಿ          ಣ್ಣು
12    ಕೋ        13      ಮ್ಮ     14      ತು         ತ್ತೂ    ರಿ  
ಲಾ         ರಾ     15
16          17        ಳೆ     18     ಹು ಯಿ 19      ಗೋ          
      20       ಬ್ಲಾ   ಳ್ಯಾ     ಮ್ಮ  
21     ಪಾ     ತಿ   22     ಗೊ     ಗು   23  ಕು       ಕು

ಶ್ಯಾಮ್ ರವ್ರೆ,

    ೩ ಪದಗಳು ಗೊತ್ತಾಗ್ಲಿಲ್ಲ.....ಉಳಿದಿದ್ದೆಲ್ಲ ಸರಿ ಅನ್ಕೊಂಡಿದೀನಿ.

ತುಂಬ ಚೆನ್ನಾಗಿತ್ತು XL ಲ್ಲಿ ಪದಬಂಧ ಬಿಡಿಸೋದು ....ಹೀಗೆ ಪದಬಂಧಗಳನ್ನು ಕೊಡ್ತಾ ಇರೀ ಸಾರ್

-ಜೈ ಕರ್ನಾಟಕ

ನನಗೆ 2 ಪದಗಳು ಸಿಕ್ಕಿಲ್ಲ. ಹೆಚ್ಚು ಕಡಿಮೆ ವೈಭವ ಅವರು ಪಡೆದ ಉತ್ತರಗಳೇ ನನಗೂ ಸಿಕ್ಕಿವೆ. ಆದರಿಂದ ವ್ಯತ್ಯಾಸ ಇರುವ ಪದಗಳನ್ನು ಹಾಕಿದ್ದೇನೆ.

ಮೇಲಿಂದ ಕೆಳಗೆ

15. ಲಾಳ
18. ಹುದುಗು

ಸ್ವಲ್ಪ ಅನುಮಾನ ಇರುವಂತಹವು

ಮೇಲಿಂದ ಕೆಳಗೆ

1. ಹಿಡಿ / ಮುಷ್ಟಿ?
2. ಗೋಂದು / ಅಂಟು?

ಎಡದಿಂದ ಬಲದಲ್ಲಿ 1 ಯಾವುದು ಎಂದೇ ಹೊಳೆಯುತ್ತಿಲ್ಲ.

ಅಂದಹಾಗೆ ಪದಬಂಧಗಳನ್ನು ರಚನೆ ಮಾಡುವಾಗ ಒಂದು ನಿಯಮ - ಪದಬಂಧ vertical-horizontal/circular symmetric ಆಗಿರಬೇಕು. ಇದು ಎಲ್ಲಾ ಆಂಗ್ಲ ಪದಬಂಧಗಳಲ್ಲೂ ಸಾಮಾನ್ಯ. ತರಂಗದಲ್ಲಿ symmetry ಇರುತ್ತಿರಲಿಲ್ಲ. ನನಗೆ ನೆನಪಿದ್ದಂತೆ ಸುಧಾ ಪತ್ರಿಕೆಯ ಪದಬಂಧಗಳು symmetrical ಆಗಿರುತ್ತಿದ್ದವು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಶ್ರೀನಿಧಿ,

ನಿಮ್ಮ ಮತ್ತು ವೈಭವ ಅವರ ಉತ್ತರಗಳು "ಬಹುತೇಕ ಸರಿಯಿದೆ" ಅಂದಷ್ಟೇ ಈಗ ಹೇಳುತ್ತೇನೆ. ನಾಳೆ ಮಧ್ಯಾಹ್ನ ಉತ್ತರ ಹಾಕುತ್ತೀನಿ. ಅಲ್ಲೀವರೆಗೆ ಸ್ವಲ್ಪ ತಿಣುಕಾಟ ನಡೆಸಿದರೇನೇ "ಪದಬಂಧ"ದ ರುಚಿ ಸಿಕ್ಕಿದಂತಾಗೋದು, ಅಲ್ವಾ?  Wink

ಅಂದಹಾಗೆ symmetry ವಿಚಾರ: ನಿಮ್ಮ ಅನಿಸಿಕೆಗಳಿಗೆ ಸ್ವಾಗತ. ಇದರ ಬಗ್ಗೆ ಹಲವಾರು ಅಭಿಪ್ರಾಯಗಳಿವೆ. ಕೆಲವರು ಇದು ಅತ್ಯಗತ್ಯ ಅನ್ನುತ್ತಾರೆ. ಇನ್ನು ಕೆಲವರು ಇದು ನಾವೇ ವಿಧಿಸಿಕೊಂಡಿರುವ ಕಟ್ಟಳೆಯಷ್ಟೇ ಎನ್ನುತ್ತಾರೆ. ಅದು ಹೇಗಾದರೂ ಇರಲಿ, ನನಗೆ ಕನ್ನಡ ನಾಡು-ನುಡಿಯ ಬಗೆಗಿನ ಕೆಲವು ಪ್ರಶ್ನೆಗಳನ್ನು ಸೇರಿಸುವಾಗ, ಈ symmetry ಸ್ವಲ್ಪ ತೊಂದರೆ ಕೊಡ್ತು. ಬರಿಯ ಪದಗಳ ಆಟಕ್ಕಷ್ಟೇ ಪದಬಂಧ ರಚಿಸುವಾಗ ಮೊದಲು ಒಂದು ವಿನ್ಯಾಸ ಮಾಡಿಟ್ಟುಕೊಂಡು, ನಂತರ ಅದಕ್ಕೆ ತಕ್ಕಂತೆ ಪದಗಳನ್ನು ಹುಡುಕಬಹುದು. ಆದರೆ ನನ್ನ ಮುಖ್ಯ ಉದ್ದೇಶ ವಿನ್ಯಾಸಕ್ಕಿಂತ ಹೆಚ್ಚು ಪ್ರಶ್ನೆಗಳ ಕಡೆಗಿತ್ತು (ಉದಾಹರಣೆಗೆ: ಅತಿ ಹೆಚ್ಚು ಕೆರೆಗಳನ್ನು ಹೊಂದಿದ ಜಿಲ್ಲೆ, ಕವಿಯೊಬ್ಬರ ಊರು, ಕಾವ್ಯ ಪ್ರಕಾರ ಇತ್ಯಾದಿ). ಹಾಗಾಗಿ symmetryಯನ್ನು ಕಡೆಗಣಿಸಿದೆ.

ಆದರೆ ಒಂದಂತೂ ನಿಜ; ಸ್ವಲ್ಪ ಹೆಚ್ಚು ಶ್ರಮಪಟ್ಟರೆ (ತಿಣುಕಾಡಿದರೆ) symmetryಯನ್ನು ಇಟ್ಟುಕೊಂಡೇ, ಈ ರೀತಿಯ ಪ್ರಶ್ನೆಗಳನ್ನು ಹೊಸೆಯಬಹುದು. ನೋಡೋಣ, ಮುಂದೊಮ್ಮೆ, ಪದಬಂಧದ ರಚನೆಯಲ್ಲಿ ಸ್ವಲ್ಪ ಕೈ ಕುದುರಿದ ನಂತರ ಆ ರೀತಿ ರಚಿಸಲು ಖಂಡಿತ ಪ್ರಯತ್ನವನ್ನಂತೂ ಪಡಬಹುದು.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

ಮೇಲಿಂದ ಕೆಳಗೆ
15. ಲಾಳ ಸರಿ
18. ಹುದುಗು ಸರಿ

ಮತ್ತು
ಮೇಲಿಂದ ಕೆಳಗೆ

೧ ಮುಷ್ಷ್ಟಿ
೨ ರಾಳ

ಇವು
ಎಡದಿಂದ ಬಲಕ್ಕೆ
೧ - ಮುತ್ತೆತ್ತಿರಾಯ - ಕ್ಕೆ ಹೊಂದಿಕೆಯಾಗುತ್ತವೆ .
ನೆನಪಿಸಿಕೊಳ್ಳಿ . ಡಾ.ರಾಜಕುಮಾರ್ ಹಾಡಿರುವ 'ಎತ್ತಲೋ ಮಾಯವಾದ ಮುತ್ತಿನ ಮೂಗುತಿ ನೀನು ಮತ್ತೆ ಎತ್ತಿ ತಂದೆ ಎಲ್ಲಿಂದ , ರಾಯ , ಮುತ್ತೆತ್ತಿರಾಯ ' ( ಬಹುಶಃ 'ಹನುಮನ ನೋಡಿದಿರಾ' ಧ್ವನಿಸುರುಳಿ.- ಈಗಾಗಲೇ ಕೇಳಿರದಿದ್ದರೆ ಕೊಂಡು ಕೇಳಿ - ಚೆನ್ನಾಗಿವೆ) - ಸೀತೆ ಸ್ನಾನ ಮಾಡುವಾಗ ಮೂಗುತಿ ಸರೋವರದಲ್ಲಿ ಬಿದ್ದು ಹೋಗಿರುತ್ತದೆ . ಆಂಜನೇಯನು ಅದನ್ನು ಹುಡುಕಿಕೊಡುತ್ತಾನೆ.

"ಕನ್ನಡದ ಪುಲ್ಲೆನಗೆ ಪರಮ ಪಾವನ ತುಳಸಿ"

ವೈಭವರವರೇ,

ಬಹುತೇಕ ಸರಿಯಾಗಿ ಬಿಡಿಸಿದ್ದೀರಿ. ಒಂದೆರಡು ಉತ್ತರಗಳು ತಪ್ಪಾಗಿವೆ. ಉತ್ತರಗಳೇನೇ ಇರಲಿ, ನಿಮ್ಮೆಲ್ಲರ ಉತ್ಸಾಹಕ್ಕೆ ಅಭಿನಂದನೆಗಳು.

ನೀವೆಲ್ಲ ಪದಬಂಧಗಳನ್ನು ಬಿಡಿಸುವತ್ತ ಆಸಕ್ತಿದೋರಿ ಪ್ರೋತ್ಸಾಹ ನೀಡಿದಲ್ಲಿ, ತಿಂಗಳಿಗೆರಡಾದರೂ ಹೊಸ ರೀತಿಯ ಪದಬಂಧ ಹೊಸೆಯಲು ಖಂಡಿತ ಪ್ರಯತ್ನಿಸುತ್ತೀನಿ.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

                   
ಮು ತ್ತ ತ್ತಿ ರಾ   ಮು
ಷ್ಟಿ             ಳ್ಳ  
      ಮಾ ಡಿ    
ದಿ ದೆ      
  ರು     ನಾ     ಗಿ ಣ್ಣು
ಕೋ   ಪ್ಪ     ತು ತೂ ರಿ  
ಲಾ         ರಾ     ಲಾ
ಳೆ     ಯಿ ಗೊ
    ಬ್ಲಾ         ಮ್ಮ  
ಪಾ ತಿ   ಗು ನು ಗು   ತಾ ಕಿ

ಮಿತ್ರರೇ ನಿಮ್ಮ ಪದಬಂಧ ಚನ್ನಾಗಿದೆ ಈ ರೀತಿಯ ಬಂಧಗಳು ನಿಮ್ಮಿಂದ ನಿಲ್ಲದೆ ಸರಾಗವಾಗಿ ಹರಿದು ಬರಲೆಂಬ ಶುಭಾರೈಕೆ

ಕೃಷ್ಣಮೊರ್ತಿ ಐ ಇ ಎಂ ಬಿ ಎಂ ಎಸ್ ಸಿ ಇ

ಪ್ರಿಯರಾದಶ್ಯಾಮಕಿಶೋರ್ ಅವರಿಗೆ,

ನಿಮ್ಮ ವಿಚಾರ ಮತ್ತು ಈ ಪದಬಂಧ ಎರಡೂ ಬಹಳ ಚೆನ್ನಾಗಿವೆ. ಆವುಗಳನ್ನು ಬಿಡಿಸಿದವರು ಇಲ್ಲಿಯೇ ಪೋಸ್ಟ್ ಮಾಡುವ ಬದಲು, ನಿಮಗೆ ಈ-ಮೇಲ್ ಮಾಡಿದರೆ ಒಳ್ಳೆಯದೇನೋ. ಈಗಿರುವಂತೆ ಒಬ್ಬರು ಮಾಡಿಮುಗಿಸಿದ ನಂತರ ಉಳಿದವರಿಗೆ ಸವಾಲು ಇರುವುದಿಲ್ಲ. ನನ್ನ ಸೂಚನೆಯಂತೆ ಮಾಡಿದರೆ, ಎಲ್ಲರೂ ನೀವು ಉತ್ತರಗಳನ್ನು ಪ್ರಕಟಿಸುವ ತನಕ ಕಾಯುತ್ತಾರೆ. ನಿಮ್ಮ ಪ್ರಯತ್ನ ಹೆಚ್ಚು ಸ್ಪರ್ಧಾತ್ಮಕವಾಗುತ್ತದೆ. ಈ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಎಚ್.ಎಸ್.ಆರ್.

H.S.Raghavendra Rao

ಸರ್, ತಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು.

ಉತ್ತರಗಳನ್ನು ಹಾಕುವ ಬಗ್ಗೆ ತಮ್ಮ ಅನಿಸಿಕೆ ಖಂಡಿತ ನಿಜ. ಬಹುಶಃ ಪದಬಂಧವನ್ನು ಪ್ರಕಟಿಸಿದಾಗ ಈ ಸೂಚನೆಯನ್ನೂ ಹಾಕಬೇಕಿತ್ತು; ನಾನೇ ಮರೆತೆ. ಒಬ್ಬರ ಉತ್ತರವನ್ನು ನೋಡದೇ, ಸ್ವತಂತ್ರವಾಗಿ ಪದಬಂಧವನ್ನು ಬಿಡಿಸಿ, ಅಂತಿಮ ಉತ್ತರಕ್ಕಾಗಿ ಕಾಯುವುದೇ ಹೆಚ್ಚು ಸೂಕ್ತ ಅಂತ ನನ್ನ ಅನಿಸಿಕೆ ಕೂಡಾ. ಮುಂದಿನ ಬಾರಿಯಿಂದ ಈ ಬಗ್ಗೆ ಗಮನ ಹರಿಸೋಣ.

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)

ಆತ್ಮೀಯರೆ,

"ಸಂಪದಬಂಧ-೧"ರಲ್ಲಿ ಉತ್ಸಾಹದಿಂದ ಭಾಗವಹಿಸಿ, ಪ್ರತಿಕ್ರಿಯೆ, ಸಲಹೆ ಮತ್ತು ಪ್ರೋತ್ಸಾಹಗಳನ್ನಿತ್ತ ಎಲ್ಲರಿಗೂ ಧನ್ಯವಾದಗಳು. ನಿಮ್ಮೆಲ್ಲರ ಈ ಪ್ರತಿಕ್ರಿಯೆ ಮತ್ತು ಪ್ರೋತ್ಸಾಹಗಳಿಂದಾಗಿ ನನಗೆ ಇನ್ನಷ್ಟು ಪದಬಂಧಗಳನ್ನು ರಚಿಸಿ, ನಿಯಮಿತವಾಗಿ ಪ್ರಕಟಿಸೋಣವೆನ್ನುವ ಉತ್ಸಾಹ ಬಂದಿದೆ. ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತೇನೆ.

ಮುಂದಿನ ಸಂಪದಬಂಧವನ್ನು ಮಾರ್ಚಿ 12, ಸೋಮವಾರದಂದು ನಿಮ್ಮ ಮುಂದಿಡುವೆ; ನಿರೀಕ್ಷಿಸಿ.

"ಸಂಪದಬಂಧ-೧"ರ ಸರಿಯುತ್ತರಗಳು ಇಲ್ಲಿದೆ.

1 ಮು ತ್ತೆ ತ್ತ 2 ರಾ   3 4 ಮು
ಷ್ಟಿ           ಳ್ಳ  
  5     6 ಮಾ 7 ಡಿ   ಯ್ಯ  
8 ದಿ ದೆ     9
  ರು     10 ನಾ     11 ಗಿ ಣ್ಣು
12 ಕೋ   13 ಮ್ಮ     14 ತು ತ್ತೂ ರಿ  
ಲಾ         ರಾ     15 ಲಾ
16 17 ಳೆ     18 ಹು ಯಿ 19 ಗೋ
    20 ಬ್ಲಾ   ದು      
21 ಪಾ ತಿ   22 ಗು ನು ಗು   23 ಕಿ

- ಶ್ಯಾಮ್ ಕಿಶೋರ್ (ಒಲವೆ ಜೀವನ ಸಾಕ್ಷಾತ್ಕಾರ)