‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !?

To prevent automated spam submissions leave this field empty.


ಶೀರ್ಷಿಕೆ ನೋಡಿ ಬಹಳಷ್ಟು ಮಂದಿಗೆ ನಗು ಬಂದಿರುತ್ತೆ,ಫೋಟೋ ನೋಡಿ ಇನ್ನ ನಗು ಬಂದು,ಈ ಹುಡ್ಗನಿಗೆ ಹುಚ್ಚು,ಅಹಂ ಅಥವಾ ತಿರುಕನ ಕನಸು ಅನ್ನಿಸಿರುತ್ತೆ ಅಲ್ವಾ? ಅನ್ನಿಸೊದು ಸಹಜ ಬಿಡಿ.ಆ ತರ ಅನ್ನಿಸೋದೊರೆಲ್ಲ ಅದನ್ನ ಈ ರೀತಿ ಓದ್ಕೊಳ್ಳಿ (ರಾಕೇಶ್ ಶೆಟ್ಟಿ= ಭಾರತದ ಸಾಮನ್ಯ ಪ್ರಜೆ.ಇಲ್ಲಿ ನನ್ನ ಹೆಸರು ಕಿತ್ತಾಕಿ ನಿಮ್ದೆ ಹಾಕೊಂಡು ಓದಿ,ನಾನೇನು ಪಿ.ಎಂ ಸೀಟಿಗಾಗಿ ಕಾಯ್ತಿಲ್ಲವಾದ್ದರಿಂದ ಖಂಡಿತ ಬೇಜಾರ್ ಮಾಡ್ಕೊಳ್ಳೋದಿಲ್ಲ ;))

ಸರಿ.ನಾನ್ ಪಿ.ಎಂ ಆಗ್ಬಹುದಾ? ಯಾಕ್ ಆಗಲ್ಲ, ಎಷ್ಟಾದ್ರೂ ನಮ್ದು ವಿಶ್ವದ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲೊಂದು.ಇಲ್ಲಿ ಅರ್ಹತೆಯಿರುವ ಯಾವುದಾದರು ಸಾಮನ್ಯ ಪ್ರಜೆ ಪಿ.ಎಂ ಆಗಬಹುದು ಬಿಡಪ್ಪ ಅಂತ ನೀವ್ಯಾರು ಹೇಳೋದಿಲ್ಲ.  ಹೇಳೋಕೆ ಸಾಧ್ಯಾನೆ ಇಲ್ಲ ಬಿಡಿ.ಈ ದೇಶದಲ್ಲಿ ಸದ್ಯ ಪ್ರಜಾಪ್ರಭುತ್ವದ ಹೆಸರಿನಲ್ಲಿ ನಡೆಯುತ್ತಿರೋದು ’ವಂಶ ಪ್ರಭುತ್ವ’ ಸದ್ಯಕ್ಕೆ ಈ ವಿಷಯದಲ್ಲಿ ಲೆಫ್ಟ್ ಪಾರ್ಟಿ ಅವ್ರು ಮಾತ್ರ ರೈಟ್ ಆಗಿದ್ದಾರೆ.ಉಳಿದಂತೆ ರೈಟ್ ಪಾರ್ಟಿಗಳು ಲೆಫ್ಟ್ ಆಗ್ಬಿಟ್ಟಿವೆ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಇನ್ನ ೧೨೫ ವರ್ಷಗಳ ಇತಿಹಾಸ ಹೊಂದಿರೋ ಈ ದೇಶದ ರಾಷ್ಟ್ರೀಯ ಪಕ್ಷದ ಕತೆ ಕೇಳೋದೇ ಬೇಡ ಬಿಡಿ.ಸ್ವತಃ ಗಾಂಧೀ ತಾತನೆ ಅಪ್ಪ (ಮೋತಿಲಾಲ್ ನೆಹರು) ಕೂತಿದ್ದ್ (ನೆಟ್ಟಿದ್ ಅಲ್ಲ ;)) ಮನೆ ಒಳ್ಗೆ ನೀನ್ ಕೂತ್ಕೊ ಬಾ ಅಂತ ಮಗನ (ಚಾಚ ನೆಹರು) ಕರ್ಕೊಂಡು ಬಂದು ವಂಶ ವೃಕ್ಷ ನೆಟ್ಟು ಹೋದ್ರು.ಆ ವೃಕ್ಷ ಇವತ್ತಿಗೆ ಅದ್ಯಾವ ಪರಿ ಗಟ್ಟಿಯಾಗಿ ಬೆಳೆದು ನಿಂತಿದೆ ಅಂದ್ರೆ ೧೨೫ ವರ್ಷಗಳ ಪುರಾತನ ಮನೆಯ ಬುಡ ಅಲುಗಾಡಿ ಬಕ್ಕಾ ಬೋರಲು ಬಿದ್ದು ‘ಆ ವಂಶ’ದ ಪಾಲಾಗಿದೆ..


ಅಂತ ವಂಶದ ೪೦ ಹರೆಯದ ಯುವಕ ರಾಹುಲ್ ಗಾಂಧೀ ಎಲ್ಲಿ?,ಇತ್ತ ಆಲದ ಮರವು ಇಲ್ಲ ,ವಂಶಸ್ಥರ ಮನೆಯು ಇಲ್ಲದ ೨೬ ರ ಹರೆಯದ ಈ ಬಾಲಕ ಎಲ್ಲಿ ಸ್ವಾಮೀ? (೪೦ರ ಹರೆಯದವನನ್ನ ಯುವಕ ಅನ್ನಬಹುದಾದರೆ ೨೬ ಹರೆಯದವನನ್ನ ಬಾಲಕ ಅನ್ನಬಹುದು ಅಂತ ನಾನ್ ಅನ್ಕೊಂಡಿದ್ದೀನಿ ;) ,೪೦ರ ಹರೆಯದ ಬೇರೆ ಯುವಕರು ಬೇಸರಿಸಿದರಿ :)) ಆ ಯುವಕ ಹೋದ ಕಡೆಗೆಲ್ಲ ಅವನ ವಂಧಿಮಾಧಿಗ ಮಾಧ್ಯಮಗಳು,ಕ್ಯಾಮೆರಾಗಳು ಎಲ್ಲ ಓಡಾಡ್ತವೆ.ಹುಡ್ಗ ಬೇರೆ ನೋಡೋಕೆ ಕೆಂಪ್ ಕೆಂಪ್ಗೆ ಇರೋದ್ರಿಂದ ಕಾಲೇಜ್ ಕ್ಯಾಂಪಸ್ಗೆ ಹೋದ ತಕ್ಷಣ ಹುಡ್ಗೀರು ಬಂದು ಸುತ್ತಾಕ್ಕೊಂಡು ಫೋಟೋ ತೆಗೆಸ್ಕೊತಾರೆ.ಅದನ್ನ ಮೀಡಿಯಾದವರು ಏಕ್ತಾ ಕಪೂರ್ ಸ್ಟೈಲ್ನಲ್ಲಿ ಮೇಘಾ ಸಿರಿಯಲ್ ಮಾಡಿ ಜನ ನಾಯಕನ (?) ನೋಡಿ ಸ್ವಾಮೀ ಅಂತ ತೋರ್ಸಿದ್ದೆ ತೋರ್ಸಿದ್ದು.ಅವ್ನು ಬೀದಿ ಬದಿ ಬಿದ್ದಿರೋ ಪ್ಲಾಸ್ಟಿಕ್ ಎತ್ತಿದ್ದು ದೊಡ್ಡ ನ್ಯೂಸ್,ಪ್ಲಾಸ್ಟಿಕ್ ಬೀದಿಗೆಸೆದ್ರು ನ್ಯೂಸ್,ಕೂಲಿ ಜನರ ಮಧ್ಯೆ ಹೋಗಿ ಖಾಲಿ ಬಾಂಡ್ಲಿ ತಲೆ ಮೇಲ್ ಹೊತ್ರು ನ್ಯೂಸ್.ಶೇವ್ ಮಾಡ್ಕೊಂಡು ಬಂದ್ರೆ ನೋಡಪ್ಪ ಎಷ್ಟು ನೀಟಾಗ್ ಬರ್ತಾನೆ ಅಂತ ಒಂದು ಎಪಿಸೋಡು,ಮಾಡದೆ ಗಡ್ಡಧಾರಿಯಾಗಿ ಬಂದ್ರೆ ದೇಸದ ಬಗ್ಗೆ ಚಿಂತೆ ಮಾಡಿ ಮಾಡಿ ಹೆಂಗಾಗವ್ನೆ ನೋಡಿ ನಮ್ ಜನ ನಾಯಕ (?) ಅಂತ ಇನ್ನೊಂದು ಎಪಿಸೋಡು.ಯಪ್ಪಾ ಸಿವ್ನೆ! ಈ ಸೀರಿಯಲ್ಗಳು ಸದ್ಯಕ್ಕೆ ಇಂಗ್ಲಿಷ್-ಹಿಂದಿ ಮಾಧ್ಯಮಗಳಲ್ಲಿ ಮಾತ್ರ ಪ್ರಸಾರವಾಗ್ತಾ ಇದೆ,ಸದ್ಯ ಕನ್ನಡದಲ್ಲಿ ಬಂದಿಲ್ವಲ್ಲಪ್ಪ ಅನ್ಕೊಳ್ಳೋ ಅಷ್ಟರಲ್ಲೇ ಹೊದ್ ತಿಂಗ್ಳು ತಾನೇ ‘ನೆಕ್ಸ್ಟ್’  ಬಂದ ನೋಡ್ರಪ್ಪ ಮುಂದಿನ ಪಿ.ಎಮ್ಮು ಅಂತ ಮೂರು ಮೂರು ಪುಟ ಮೀಸಲಾತಿ ಕೊಟ್ಬುಟ್ರಲ್ಲಪ್ಪ!!!


ಮಾಧ್ಯಮಗಳು ಕೊಡೋ ಈ ಪರಿ ಪ್ರಚಾರದಿಂದಲೋ ಏನೋ,ಇತ್ತೀಚೀಗೆ ಭರ್ಜರಿ ಕಮೆಂಟ್ಸ್ ಕೊಡೋಕೆ ಶುರು ಹಚ್ಕೊಂಡಿದ್ದಾರೆ ರಾಹುಲ್.ಬಂಗಾಳಕ್ಕೆ ಹೊದವ್ರು ಕಮ್ಯುನಿಸ್ಟರು ಕಾಲ ಇಲ್ಲಿ ಮುಗಿಯಲಿದೆ ಅಂದ್ರು,ಒಪ್ಪಿಕೊಳ್ಳೋ ಮಾತೆ ಬಿಡಿ.ಅದಕ್ಕೆ ಯಥಾ ಪ್ರಕಾರ ಭರ್ಜರಿ ಪ್ರಚಾರ ಸಿಕ್ಕಿತ್ತಲ್ಲ ಅದೆ ಜೊಶೀನಲ್ಲಿ ಆರ್.ಎಸ್.ಎಸ್ ನಂತ ದೇಶ ಭಕ್ತ ಸಂಘಟನೆಯನ್ನ ದೇಶ ದ್ರೋಹಿ ಕೆಲಸಗಳಿಂದಾಗಿ ನಿಷೇದಕ್ಕೊಳಪಟ್ಟಿರೋ ಸಿಮಿಯಂತ ಸಂಘಟನೆಯೊಂದಿಗೆ ಹೋಲಿಸುತ್ತಾರಲ್ಲ ಇದಕ್ಕೆ ಏನ್ ಹೇಳೋಣ ಸ್ವಾಮಿ!? “ನಾರ್ಮಲ್ ಆಗಿರೊವ್ರು ಇಂತ ಹೇಳಿಕೆ ಕೊಡೊದಿಲ್ಲ” ಅಂತ ಆರ್.ಎಸ್.ಎಸ್ನವ್ರು ಸರಿಯಾಗೆ ತಿರುಗೆಟು ನೀಡಿದ್ದಾರೆ.ದೇಶದ ಯಾವುದೆ ಮೂಲೆಯಲ್ಲಿ ಅವಘಡವಾದರೆ ಬಹುತೇಕ ಸಂದರ್ಭದಲ್ಲಿ ಸರ್ಕಾರಕ್ಕಿಂತ ಮೊದಲು ಅಲ್ಲಿ ತಲುಪಿ ಸಹಾಯ ಹಸ್ತ ಚಾಚುವವ್ರು ಇದೆ ಆರ್.ಎಸ್.ಎಸ್ಸಿಗರು ಅನ್ನುವುದು ಇವರಿಗೆ ಗೊತ್ತಿರಲಿಕ್ಕಿಲ್ಲ ಅಥವ ಗೊತ್ತಿದ್ದರು ಇಂತವೆಲ್ಲ ಹೇಳಿಕೊಳ್ಳಲಾಗದು ಬಿಡಿ ವೋಟಿನ ಮ್ಯಾಟರ್ ಅಲ್ವಾ?


ಅಷ್ಟಕ್ಕೂ ಈ ಹುಡ್ಗನಲ್ಲಿ ಪಿ.ಎಂ ಆಗೋಕೆ ಇರೋ ಅರ್ಹತೆಯಾದ್ರು ಏನು? ಸಂಸದನಾಗಿ ಒಳ್ಳೆ ಕೆಲ್ಸ ಮಾಡಿರೋದಾ? ಇಲ್ಲ ಜನರೊಂದಿಗೆ ಸುಲಭವಾಗಿ ಬೆರಿತಾರೆ ಅನ್ನೋದಾ? ಅವೆಲ್ಲ ಅಲ್ಲ ಅವೆಲ್ಲಕ್ಕಿಂತ ಮುಖ್ಯವಾಗಿ ಅವರು ‘ಆ ವಂಶಸ್ಥ’,ಅವ್ರ ಹೆಸರಿನ ಮುಂದೆ ಗಾಂಧೀ ಇದೆ ನೋಡಿ ಅದಿಕ್ಕೆ ಮುಂದಿನ ಪಿ.ಎಂ ಕ್ಯಾಂಡಿಟೇಟ್ ಅಷ್ಟೇ.ಅವರಲ್ಲಿ ಆ ಶಕ್ತಿ ಇದೆಯೋ ಇಲ್ವೋ ಗೊತ್ತಿಲ್ಲ ಆದರೆ ಭವಿಷ್ಯದ ಆಶಾಕಿರಣ ಎಂಬಂತೆ ಅವರನ್ನ ವ್ಯವಸ್ಥಿತವಾಗಿ ಪ್ರಚಾರ ಮಾಡಲಾಗುತ್ತಿದೆ.ಪಕ್ಷದಲ್ಲಿ,ಮಾಧ್ಯಮಗಳಲ್ಲಿ ವಂಧಿ ಮಾಧಿಗರಿರುವಾಗ ಈ ಕೆಲ್ಸ ಇನ್ನ ಸುಲಭ ಆಗಿದೆ.


ಇಷ್ಟಕ್ಕೂ ಆ ಹುಡ್ಗ ಆದರು ಏನ್ ತಾನೇ ಮಾಡಿಯಾನು ಪಾಪ! ಪಕ್ಷದಲ್ಲಿ ಸದ್ಯಕ್ಕೆ ‘ನಾಯಕ’ ಅವನೊಬ್ಬನೇ ತಾನೇ.ಅವ್ರಮ್ಮನೆ ಸತತ ೪ ಬಾರಿ ಅಧ್ಯಕ್ಷ ಪಟ್ಟದಲ್ಲಿ ಕೂತಿದ್ದಾರೆ.ಈ ವಿಷಯದಲ್ಲಿ ಗಿನ್ನೆಸ್ ರೆಕಾರ್ಡ್ ಏನಾದ್ರೂ ಆದರು ಆಗ್ಬಹುದು ಅನ್ನಿಸುತ್ತೆ ಈ ಪಕ್ಷದಲ್ಲಿ.ಇನ್ನುಳಿದವರೆಲ್ಲ ಅದಿನ್ನೆಷ್ಟೇ ಪ್ರತಿಭೆ ಹೊಂದಿದ್ದರು,.ಕಾರ್ಯಕರ್ತನಾಗಿ,ಕೌನ್ಸಿಲರ್,MLA,MP ಯಾಗಿ,ರಾಜ್ಯ ಮಂತಿ,ಕೇಂದ್ರ ಮಂತ್ರಿ ಆಗಿ ಎಷ್ಟೆಲ್ಲಾ ಅನುಭವ ಪಡೆದಿದ್ದರೂ ‘ಗಾಂಧೀ’ಗಿರಿ ಇಲ್ಲದೆ ಇರೋದ್ರಿಂದ ಅವ್ರಿಗೆ ಪಟ್ಟ ಸಿಗೋದಿಲ್ಲ.ಅವನಿಗೆ ಪಟ್ಟ ಕೊಡಬೇಡಿ ಅಂತ ಏನಾದ್ರೂ ಬಹಿರಂಗವಾಗಿ ಹೇಳಿದ್ರೆ ಆ ಪಕ್ಷದಲ್ಲೂ ಇರೋಕಾಗೋಲ್ಲ.ಹಾಗಾಗಿ ಎಲ್ಲರು ‘ಜೈ ಜೈ’ ಅಂತಿದ್ದಾರೆ.


ಮೊನ್ನೆ ಮೊನ್ನೆ ತಾನೆ ರಾಹುಲ್ ಅವ್ರ ಭಾವ ರಾಬರ್ಟ್ ವಾದ್ರ ಅವ್ರು ’ನಾನು ಈ ದೇಶದ ಯಾವುದೆ ಮೂಲೆಯಲ್ಲಿ ಚುನವಣೆಗೆ ನಿಂತ್ರು ಗೆದ್ದು ಬರ್ತಿನಿ’ ಅಂದಿದ್ದಾರೆ.ಅವ್ರಿಗೆ ನನ್ ಆಹ್ವಾನವಿದೆ.”ಮಿ.ವಾದ್ರ ದೇಶದ ಯಾವುದೋ ಮೂಲೆ ಯಾಕೆ, ಬನ್ನಿ ಸ್ವಾಮಿ ನಮ್ಮ್ ಕರ್ನಾಟಕಕ್ಕೆ.ಚುನಾವಣೆಗೆ ನಿಲ್ಲಿ, ನೋಡೆ ಬಿಡೋಣ ಯಾರ್ ಗೆಲ್ತಾರೆ ಅಂತ,ಬರ್ತಿರಾ?” (ಯಾರಾದ್ರು ಕಾಂಗ್ರೆಸ್ ಅಥವ ನೆಹರು ಫ಼್ಯಾಮಿಲಿ ಅಭಿಮಾನಿಗಳು ಇದನ್ನ ಆಂಗ್ಲ ಭಾಶೆಗೆ ತರ್ಜುಮೆ ಮಾಡಿ ತಲುಪಿಸಿ ಪುಣ್ಯ ಕಟ್ಕೊಳ್ಳಿ :),ಅವ್ರು ಹೇಳಿಕೆ ಕೊಟ್ಟಿರೋ ಆಂಗ್ಲ ಪತ್ರಿಕೆಯಲ್ಲೂ ಈ ಕಾಮೆಂಟ್ ಇದೆ ಅವ್ರು ಓದ್ಬೇಕಷ್ಟೇ )


ಭಟ್ಟಂಗಿತನದ ಮತ್ತೊಂದು ಉದಾಹರಣೆ ಅಂದ್ರೆ ಮೊನ್ನೆ ಆ ಪಕ್ಷದ ವಕ್ತಾರರು ರಾಹುಲ್ ಗಾಂಧಿ ಅವರನ್ನ ’ಲೋಕನಾಯಕ ಜಯಪ್ರಕಾಶ್ ನಾರಯಣ್’ ಅವರಿಗೆ ಹೋಲಿಸಿದ್ದು!! ಬಹುಶಃ ಮುಂದಿನ ಹೋಲಿಕೆ ’ಮಹಾತ್ಮ ಗಾಂಧಿ’ಯವರೊಂದಿಗಿರಬೇಕು!!


ಅಲ್ಲ ಇವ್ರೆಲ್ಲ ಈ ದೇಶವನ್ನ ಏನ್ ಅನ್ಕೊಂಡಿದ್ದಾರೆ ಅಂತ!? ಗಾಂಧಿ ನಾಮ ಹೇಳ್ತ ಇನ್ನ ಎಶ್ಟು ದಿನ ಅಂತ ರಾಜಕೀಯ ಮಾಡ್ತಾರೆ? ಸುಮ್ಮನೆ ಬಂದಿಲ್ಲ ನಮಗೆ ಸ್ವಾತಂತ್ರ್ಯ, ಅಲ್ಲಿ ಕೇವಲ ಗಾಂಧಿ,ನೆಹರು ಇರ್ಲಿಲ್ಲ ಸರ್.ಅಲ್ಲಿ ಬ್ರಿಟಿಷರ ಗುಂಡಿಗೆ ಎದೆ ಕೊಟ್ಟ ಗಂಡು ಮೆಟ್ಟಿದ ನಾಡು ಹುಬ್ಬಳ್ಳಿಯ ೧೩ ವರ್ಶದ ಪೊರ ನಾರಯಣ ಮಹದೇವ ಧೋನಿಯಿಂದ ಹಿಡಿದು ೮೩ರ ಇಳಿ ವಯಸ್ಸಿನಲ್ಲು ಬ್ರಿಟಿಷರ ನಿದ್ದೆಗೆಡಿಸಿದ್ದ ಕುವರ್ ಸಿಂಗ್ರಂತವರು ಇದ್ದಾರೆ.ನಮ್ಮ್ ದೇಶದ ದೌರ್ಭಾಗ್ಯವೋ ಏನೋ,೨೦ ರ ಹರೆಯದಲ್ಲೆ ದೇಶದ ಸಂವಿಧಾನದ ಬಗ್ಗೆ ಮಾತನಾಡುತಿದ್ದ ಭಗತ್ ಸಿಂಗ್,ಬ್ರಿಟಿಷರ ಬುಡ ಅಲುಗಾಡಿಸಿ ’ಕ್ವಿಟ್ ಇಂಡಿಯ’ ಚಳುವಳಿಗೆ ಪರೋಕ್ಷ ಕಾರಣಕರ್ತರಾದ ಸಮರ ಸೇನಾನಿ ಸುಭಾಶ್ ಚಂದ್ರ ಬೋಸ್,ಬಾಪುಜಿಯವರ ಆದರ್ಶದ ಮಾತುಗಳನ್ನ ವಾಸ್ತವಕ್ಕೆ ತರುತಿದ್ದ ಸರಳ ಸಜ್ಜನಿಕೆಯ ಸಾಕರ ಮೂರ್ತಿ ಲಾಲ್ ಬಹದ್ದೂರ್ ಶಾಸ್ತ್ರಿ ಇವರೆಲ್ಲರು ಅದೇನೋ ತುರ್ತು ಕೆಲಸವಿದೆ ಅನ್ನುವಂತೆ ಹೊರಟು ಹೋಗಿಬಿಟ್ಟರು :(


ಯಾವುದೇ ವಂಶ ಹಿನ್ನೆಲೆಯಿಂದ ಅಲ್ಲದೆ ಕೇವಲ ತನ್ನ ಸಾಮರ್ಥ್ಯದಿಂದಲೆ ಪ್ರಧಾನಿ ಹುದ್ದೆಯನ್ನ ಶಾಸ್ತ್ರಿಗಳು ಅಲಂಕರಿಸುವುದರ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕರವಾಗಿತ್ತು,ಆದರೆ ಅವರ ಹಠಾತ್ ನಿಧನದಿಂದ ಮತ್ತದು ವಂಶಾಡಳಿತದ ತೆಕ್ಕೆಗೆ ಬಿತ್ತು.


ಪ್ರಜಾಪ್ರಭುತ್ವದ ಅಣಕವಾದ ಈ ‘ವಂಶ ಪ್ರಭುತ್ವ’ ಮೊದಲು ಶುರು ಮಾಡಿದ ಶ್ರೇಯಸ್ಸು ‘ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ಸಿಗೆ’ ಸಲ್ಲಬೇಕು.ಇದೆ ವಿಷಯ ಹಿಡಿದು ಜೆ.ಪಿ ಕಾಲದಲ್ಲಿ ಕಾಂಗ್ರೆಸ್ಸ್ ಮೇಲೆ ಪ್ರಹಾರ ನಡೆಸುತಿದ್ದ ಪ್ರತಿಪಕ್ಷಗಳಿಗೂ ಈಗ ಈ ಬಗ್ಗೆ ಮಾತನಾಡುವ ಯಾವ ನೈತಿಕ ಹಕ್ಕು ಉಳಿದಿಲ್ಲ.ಈಗ ಅವರು ವಂಶಾಡಳಿತದ ಪಾಲುದಾರರೆ ಆಗಿದ್ದಾರೆ. ಬಿ.ಜೆ.ಪಿ,ಡಿ.ಎಂ.ಕೆ,ನ್ಯಾಷನಲ್ ಕಾನ್ಫಾರೆನ್ಸ್,ಸಮಾಜವಾದಿ ಪಾರ್ಟಿ,ಬಿಜು ಜನತಾದಳ,ಜೆ.ಡಿ.ಎಸ್,ಎನ್.ಸಿ.ಪಿ,ಶಿವ ಸೇನೆ,ಶಿರೋಮಣಿ ಅಕಾಲಿ ದಳ…ಇನ್ನ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.


ಬ್ರಿಟಿಷರ ಕಾಲದಲ್ಲಿ ಹಾಗು ಅವರು ಬರುವ ಮೊದಲು ರಾಜ ಪ್ರಭುತ್ವವಿತ್ತು.ಅವ್ರು ಬಂದು ಹೋದ್ಮೇಲೆ ಕೂಡ ಅದೇ ಮುಂದುವರೆದಿದೆ.ಪ್ರಜಾಪ್ರಭುತ್ವದ ಚಾದರದೊಳಗೆ ವಂಶಪ್ರಭುತ್ವದ *** ಸಾಗಿದೆ.’ಜನ ಗಣ ಮನ’ದಲ್ಲಿ ‘ಜನ’ ನಾಪತ್ತೆಯಾಗಿ ‘ಸಂತಾನ’ ಬಂದು ಕೂತಿದೆ.


ತುತ್ತಿನ ಚೀಲದ ತುರ್ತಿಗೆ ಬಿದ್ದ ದೇಶದ ಬಹುತೇಕ ಯುವ ಜನರಿಗೆ ಈ ಅಸಹ್ಯ ಕಂಡು ಸಾಕಾಗಿದೆ,ಬೇರೆನು ಮಾಡಲು ಸಾಧ್ಯವಾಗದೆ ಮತ ಚಲಾಯಿಸುವುದನ್ನ ನಿಲ್ಲಿಸಿದ್ದಾರೆ.ಅಸಹ್ಯಗಳಿಗೆ ಬೆನ್ನು ತೋರಿಸುವುದರ ಬದಲು ಕಡೆ ಪಕ್ಷ ಎದುರಿಸಿ ನಿಲ್ಲೋಣ.ಅಪ್ಪ-ಅಮ್ಮನ ನಾಮ ಬಲದಿಂದ ಬಂದು ನಿಲ್ಲುವ ಸೊ ಕಾಲ್ಡ್ ನಾಯಕರನ್ನ ಮನೆಗೆ ಕಳಿಸುವ ಚಿಕ್ಕ ಜವಭ್ದಾರಿ ನಿಭಾಯಿಸಲಾದರು ಇನ್ಮುನ್ದೆ ಮತ ಚಲಾಯಿಸೋಣ.ನಮ್ಮ “ಜನ’ ಯೋಚಿಸುವ ಶೈಲಿ ಬದಲಾದರೆ ಎಲ್ಲವು ಬದಲಾಗುತ್ತದೆ.


‘ಪ್ರಜೆ’ಗಳು ಬದಲಾಗದೆ ’ಪ್ರಜಾಪ್ರಭುತ್ವ’ವು ಬದಲಾಗದು.


 ರಾಕೇಶ್ ಶೆಟ್ಟಿ :)

 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಈ ರಾಹುಲ ನಿಜಕ್ಕೂ ಕೆಚ್ಚೆದೆಯ ಗಂಡು ಪ್ರತೀ ರಾತ್ರಿ ಏರಿಸುತ್ತಾನಂತೆ ಆ ಅಪ್ಪನಂಥೆಯೇ ಗುಂಡು ಮುಂದೆ ಈತ ಪ್ರಧಾನಿ, ಭಾರತ ರತ್ನ, ಕೊನೆಗೆ ಎದೆಗೊಂದು ಗುಂಡು!

ಸದ್ಯ ರಾಹುಲನ ವಿಷಯದಲ್ಲಿ ಕಡೆಯ ಸಾಲುಗಳು ಸುಳ್ಳಾಗಲಿ ಅನ್ನುವುದು ನನ್ನ ಆರೈಕೆ.ಸತ್ಯವಾದರೆ ಮತ್ತೆ ಅವನು 'ಮತ'ವಾಗಿ ಹೋಗುತ್ತಾನೆ.ಆಮೇಲೆ ಮತ್ತಿನ್ಯಾರನ್ನೆಲ್ಲ ತಡ್ಕೊಬೇಕೋ ನಾವುಗಳು..!! :(

ರಾಕೇಶ್ ಸುರೇಶ್ ಹೆಗ್ಡೆ ಹೇಳ್ತಿರೋದೆ ಸತ್ಯ ಎದೆಯಲ್ಲಿ ಗುಂಡು ತಿಂದು ರಸ್ತೆಯಲ್ಲಿ ಬಿದ್ದು ಪ್ರಾಣಬಿಡುವ ಇವರು ಮುಂದೆ ಅದೇ ಪಕ್ಷದ 'ಮತ’ ವಾಗಿ ಹೋಗ್ತಾರೆ. (ಭಾರತಕ್ಕೆ ಯಾರು ಹಾಕಿರುವ ಶಾಪ? ಇವರುಗಳು)

"ಪ್ರಜೆ’ಗಳು ಬದಲಾಗದೆ ’ಪ್ರಜಾಪ್ರಭುತ್ವ’ವು ಬದಲಾಗದು." >> ಸೂಪರ್!! ಇದನ್ನು ಯಥಾವತ್ ಪಾಲಿಸಲಾಗುತ್ತಿದೆ ಕಾಶ್ಮೀರದಲ್ಲಿ. ಅಲ್ಲಿದ್ದ ಪಂಡಿತರನೆಲ್ಲಾ ಓಡಿಸಿ, ಬೇರೆಯವರು ಒಳ ನುಸುಳುತ್ತಿದ್ದಾರೆ, ಪ್ರಜಾಪ್ರಭುತ್ವ ಬದಲಿಸಲು. !!

ಛೆ!!!!!!! ಪ್ರಜಾ"ಸತ್ತಾ"ತ್ಮಕ ಪಕ್ಷವಾದ ಕಾಂಗ್ರೆಸ್ಸ್ ಬಗ್ಗೆ ಹೀಗೆ ಮಾತನಾಡುವುದೆ? ಕಾಂಗ್ರೆಸ್ಸ್ ಬೆಂಬಲಿಗ ಪ್ರಜಾ"ಸತ್ತಾ" ಜನಗಳಿಗೆ ಎಷ್ಟು ಬೇಸರವಾಗಿರಬೇಡ? ಕಡೆ ಪಕ್ಷ ಅದೋಂದು ಪ್ರಜಾ"ಸತ್ತಾ"ತ್ಮಕ ಪಕ್ಷ ಎಂದು ಜುಟ್ಟು "ಜನಿವಾರ" ಕಿತ್ತು ಬರುವ ಹಾಗೆ ಅರಚಿಕೊಳ್ಳುವವರು ಏನೆಂದುಕೊಂಡಾರು?

<<ಯಾವುದೇ ವಂಶ ಹಿನ್ನೆಲೆಯಿಂದ ಅಲ್ಲದೆ ಕೇವಲ ತನ್ನ ಸಾಮರ್ಥ್ಯದಿಂದಲೆ ಪ್ರಧಾನಿ ಹುದ್ದೆಯನ್ನ ಶಾಸ್ತ್ರಿಗಳು ಅಲಂಕರಿಸುವುದರ ಮೂಲಕ ಪ್ರಜಾಪ್ರಭುತ್ವದ ಆಶಯ ಸಾಕರವಾಗಿತ್ತು,ಆದರೆ ಅವರ ಹಠಾತ್ ನಿಧನದಿಂದ ಮತ್ತದು ವಂಶಾಡಳಿತದ ತೆಕ್ಕೆಗೆ ಬಿತ್ತು.>> ಅದು ಹಠಾತ್ ನಿಧನ ಅಲ್ಲ. ಅದು ಕೊಲೆಯಾಗಿತ್ತು. ಕೊಲೆಯಿಂದ ಯಾರಿಗೆ ಲಾಭವಾಗಿತ್ತು ಮತ್ತು ಇನ್ನೂ ಆಗುತ್ತಿದೆ ಅನ್ನೋದು ತೆರೆದಿಟ್ಟ ಸತ್ಯ!

"ದೇಶದ ಯಾವುದೆ ಮೂಲೆಯಲ್ಲಿ ಅವಘಡವಾದರೆ ಬಹುತೇಕ ಸಂದರ್ಭದಲ್ಲಿ ಸರ್ಕಾರಕ್ಕಿಂತ ಮೊದಲು ಅಲ್ಲಿ ತಲುಪಿ ಸಹಾಯ ಹಸ್ತ ಚಾಚುವವ್ರು ಇದೆ ಆರ್.ಎಸ್.ಎಸ್ಸಿಗರು ಅನ್ನುವುದು ಇವರಿಗೆ ಗೊತ್ತಿರಲಿಕ್ಕಿಲ್ಲ ಅಥವ ಗೊತ್ತಿದ್ದರು ಇಂತವೆಲ್ಲ ಹೇಳಿಕೊಳ್ಳಲಾಗದು ಬಿಡಿ ವೋಟಿನ ಮ್ಯಾಟರ್ ಅಲ್ವಾ?" >> ವೋಟ್ ಮ್ಯಾಟರ್ ಅಷ್ಟೆ ಅಲ್ಲ ರಾಕೇಶ್! ಕೆಲವರಿಗೆ ಸಂಘದ ವಿರುದ್ದ ಸುಮ್ಮನೆ ಮಾತನಾಡುವ ಚಟ!! ಎಲ್ಲದಿಕ್ಕೂ ಸಂಘವನ್ನು ಎಳೆದು ತಂದು ನಾಲಿಗೆ ಚಪಲ ತೀರಿಸ್ಕೊಳ್ಳುವ ಹಂಬಲ ಅಷ್ಟೆ.. ಕೊ ಕೊ : ಆ ಕೆಲವರು ಯಾರು ಅಂತ ಕೇಳಬೇಡಿ :)

ರಾಹುಲ್ ’ಗಾ೦ಧಿ’, ರಾಕೇಶ್ ಶೆಟ್ಟಿ, ರಾಗಿಮುದ್ದೆ ದೇವೇಗೌಡ ಎಲ್ಲಾ ಪ್ರಧಾನ ಮ೦ತ್ರಿಗಳಾಗಬಹುದಾದರೆ ಈ ಮ೦ಜುನಾಥ ಏಕಾಗಬಾರದು? :-) ಲಜ್ಜೆಗೆಟ್ಟ ನೆಹರೂ ವ೦ಶದವರಿ೦ದ ಈ ದೇಶ ಹಾಳಾಗಿದ್ದು ಸಾಕು, ಇನ್ನಾದರೂ ಮತದಾರರು ಎಚ್ಚೆತ್ತು ಇವರಿಗೆ ಬುದ್ಧಿ ಕಲಿಸಬೇಕಿದೆ.

ಪವಾರ್ ಹೇಳಿರೋದು ಅಂತೇಳಿ ಫಿಟ್ಟಿಂಗ್ ಇಡೋಣ ಅಂತ :), ಯಾರ್ಯಾರೋ ಪಿ.ಎಂ ಆಗೋದಾದ್ರೆ ನಾವು-ನೀವು ಯಾಕ್ ಆಗ್ಬಾರ್ದು ಹೇಳಿ? :)

ಅಲ್ರೀ ಶೆಟ್ರೇ, ನಿಮ್ಮ ಲೇಖನ ಓದಿ ನನಗೂ ಆಸೆಯಾಗ್ಬಿಟ್ಟಿದೆಯಲ್ರೀ! ನೀವು ಆಗಿಯಪ್ಪಾ! ನಮ್ಮ ಬೆ೦ಬಲವಿದೆ. ರಾಹುಲ್ ಗಾ೦ಧಿ ತಾನೊಬ್ಬ ಮೂರ್ಖ ಅ೦ತ ತಾನೇ ಹೊದೆಡೆಯೆಲ್ಲಾ ಸಾಬೀತು ಮಾಡ್ತಿದಾನೆ! ಹೇಳಿಕೊಟ್ಟ ಪಾಠ ಕಟ್ಟಿಕೊಟ್ಟ ಬುತ್ತಿ ಎಷ್ಟು ದಿನದವರೆಗೂ ಸ್ವಾಮೀ? ಮೇಲೇರಿದವರೆಲ್ಲಾ ಕೆಳೆಗಿಳಿಯಲೇಬೇಕಲ್ವೇ! ಆದರೆ ತಾನು ಪುರಾತನ ಪಕ್ಷದವನು ಅ೦ಥ ಹುಚ್ಚುಚ್ಚಾಗೆಲ್ಲಾ ಆಡಬಾರದು! ಅವನ ಯೋಗ್ಯತೆ(?) ಗೆ ತಕ್ಕ ಮಾತು ಬಿಡಿ! ಲೇಖನ ಚೆನ್ನಾಗಿದೆ. ಯಾರಾದ್ರೂ ಅನುವಾದ ಮಾಡಿ, ಇಬ್ಬರಿಗೂ ತೋರಿಸಿದ್ರೆ ಒಳ್ಳೆದಾಗುತ್ತಿತ್ತು! ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನಾವಡರೆ, ಅವನಿಗಿಂತ ನಾವೇನು ಕಮ್ಮಿ ಅಂತ ಎಲ್ಲರು ಕೇಳುವಂತಾಗಲಿ ಅನ್ನುವುದೇ ಲೇಖನದ ಆಶಯ, ನನ್ನೀ :) ಹೌದು!ಅನುವಾದ ಮಾಡಿ ಅವ್ರಿಗೆ ಯಾರಾದ್ರೂ ತಲುಪಿಸಿದರೆ ಒಳ್ಳೆಯದು :)

ರಾಕೇಶ್, ತಮ್ಮ ಈ ಭಾವಚಿತ್ರವನ್ನು ಇಲ್ಲಿ ಪ್ರಕಟಿಸಿ, ಸಿರಿಗನ್ನಡ ಸಂಪದವನ್ನು ಕೇಸರೀಕರಣಗೊಳಿಸುವ ಪ್ರಯತ್ನ ಮಾಡಿದ್ದೀರಿ ಎನ್ನುವ ಗಂಭೀರ ಆಪಾದನೆ ಆಗಲಿದೆ ನಿಮ್ಮ ಮೇಲೆ! ಹುಷಾರ್! ಯಾವ ರೀತಿ ಅಂತೀರಾ? ಇಲ್ಲಿದೆ ನೋಡಿ ವರದಿ: ಇಲ್ಲಿ ಈ ಭಾವಚಿತ್ರವನ್ನು ಪ್ರಕಟಿಸತಕ್ಕಂತ ಈ ಕೆಲಸದ ಹಿಂದೆ ಇರತಕ್ಕಂತ ಉದ್ದೇಶ ಏನಿದೆ, ಅದರ ಬಗ್ಗೆ ನಾವೆಲ್ಲಾ ಗಮನಹರಿಸತಕ್ಕಂತ ಸಂದರ್ಭದಲ್ಲಿ ಏನಿದೆ, ಈ ಒಂದು ಸಿರಿಗನ್ನಡ ಅನ್ನತಕ್ಕಂತ ಸಂಪದ ಏನಿದೆ, ಅದನ್ನು ಕೇಸರೀಕರಣಗೊಳಿಸುವ ಒಂದು ಪ್ರಯತ್ನ ಏನಿದೆ, ಅದು ಎದ್ದು ಕಾಣುತ್ತಿರತಕ್ಕಂತದ್ದುದನ್ನು ನಾವು ಕಾಣಬಹುದಾಗಿದೆ ಎಂದು, ಗ್ರಾಮವಾಸ್ತವ್ಯ ಪ್ರವೀಣರಾದ, ಕುಮಾರ ಗೌಡ ಗಂಭೀರ ಆರೋಪ ಮಾಡಿದ್ದಾರೆ! :)

ನಿಮ್ಮೆಲ್ಲ ಆರೋಪಗಳು ನಕಲಿ ಸಿ.ಡಿ ತರ ನಿರಾಧರಗಳು.ಈ ಹೇಳಿಕೆಯನ್ನ ಖಂಡ-ತುಂಡವಾಗಿ ಖಂಡಿಸುತ್ತೇನೆ, ಸಿ.ಬಿ.ಐ ತನಿಖೆಯಾಗಲಿ :)

ಪ್ರಜೆಯನ್ನು ಬದಲಾಯಿಸೋಕೆ ಮೊದಲು ದಾರಿ ಹುಡುಕಬೇಕು ನಂತರ ಪ್ರಜಾಪ್ರಭುತ್ವವು ತಂತಾನೆ ಬದಲಾಗುತ್ತದೆ. ಕಂಗ್ರಾಟ್ಸ್ ಬಾಲಕ ಮುಂದಿನ ಪಿ.ಎಂ. ಹುದ್ದೆಗೆ ಅಂತ ಹೇಳಲೇ ಅಥವ ಹುಷಾರಾಗಿರಿ ಹುದ್ದೆ ಕಸಿದುಕೊಳ್ಳುವಾಗ ಅಂತ ಎಚ್ಚರಿಸಲೇ

ಯಾವ್ದಕ್ಕೂ ಮೊದ್ಲು ಬಾಲಕನಿಗೆ ಕಂಗ್ರಾಟ್ಸ್ ಹೇಳಿಬಿಡಿ ಕುರ್ಚಿಗೆ ಕುತ್ತು ಬಂದಾಗ ಆಪರೇಷನ್ ಮಾಡಿ ಉಳಿಸ್ಕೊತೀವಿ ಟೆನ್ಶನ್ ಬಿಡಿ :)

ಹಿಂದೆ ಮುಂದೆ ಗೊತ್ಹಿಲ್ಲದವ್ರಿಗೆಲ್ಲ ವೋಟು ಹಾಕಿದೀವಂತೆ ಇನ್ನು ದೇಶದ ಬಗ್ಗೆ ಸ್ವಲ್ಪ ಆದ್ರೂ ಕಾಳಜಿ ಇರೋ ನಿಮ್ಮಂಥವರಿಗೆ (ಇದೆ ಅಂದ್ಕೊಂಡಿದೀನಿ) ವೋಟು ಹಾಕೋದಿಕ್ಕೆ ಏನು ತೊಂದರೆ ಇಲ್ಲ ಬಿಡಿ.

ಅಡ್ಡಿ ಇಲ್ಲ ಶೆಟ್ರೇ ನೀವು ಪೀಯಮ್ಮಾದ್ರೆ. ಟೀವೀಯಲ್ಲಿ ಪೇಪರಿನಲ್ಲಿ ನೋಡುವುದಕ್ಕೆ ಸು೦ದರವಾಗಿದ್ದೀರಿ. ರಾಕೇಶ್ ಎನ್ನುವ ಹೆಸರೂ ಚೆನ್ನಾಗಿದೆ, ಶಿವಾ.. ಓದುವದಕ್ಕೆ, ಕೇಳುವದಕ್ಕೆ. ಸರ್ ನೇಮ್ ಸಹ ಪ್ರಸಿದ್ಧ: ಫೈಟರ್ ಶೆಟ್ಟಿ, ಸುನೀಲ್ ಶೆಟ್ಟಿ, ಶಿಲ್ಪಾ ಶೆಟ್ಟಿ, ಮು೦ತಾದವರೂ ಇದ್ದಾರೆ. ಬೋಲಿವುಡ್ಡಲ್ಲಿ ಶೆಟ್ಟಿ ಎನ್ನುವ ಹೆಸರು ಒಳ್ಳೆಯ ಮತ್ತು ಕೆಟ್ಟ ಎರಡೂ ತರದ ಪಾತ್ರಗಳಿಗಿವೆ. ವೋಟ್, ಗೀಟ್ ಎ೦ತ ಡೋ೦ಟ್ ವರೀ ಮಾಡುವುದೇನೂ ಬೇಕಿಲ್ಲ... ಅದಿಲ್ಲದೇ ಏನೂ ಆಗಬಹುದು... ಶುಭಾಶಯಗಳು...

ಬೇಜಾನ್ ಕಾಮ್ಪ್ಲಿಮೆಂಟ್ಸ್ ಕೊಟ್ಟಿದ್ದಿರಿ ಪ್ರಭುಕುಮಾರ್ ಧನ್ಯವಾದಗಳು :) ಈ ಲೇಖನಕ್ಕೆ ರಾಕೇಶ್ ಶೆಟ್ಟಿ ನೆಪ ಮಾತ್ರ, ಇದೆ ಪ್ರಶ್ನೆಯನ್ನ ಬಹುತೇಕ ಭಾರತೀಯರು ಕೇಳಲಿ ಅನ್ನುವುದು ಲೇಖನದ ಆಶಯ :)

‘ರಾಹುಲ್ ಗಾಂಧೀ’ ಪಿ.ಎಂ ಆಗ್ಬಹುದಾದರೆ ‘ರಾಕೇಶ್ ಶೆಟ್ಟಿ’ ಯಾಕ್ ಆಗ್ಬಾರ್ದು !? ಖಂಡಿತ ಆಗ್ಬಹುದು. ನಾನು ಎಂ ಪಿ ಆಗಿರ್ತಿನಿ ನಿಮ್ಗೆ (ಪಿ ಎಂ ಆಗ್ಲಿಕ್ಕೆ) ಮತ ಹಾಕ್ಲಿಕ್ಕೆಷ್ಟು ಸೂಟ್ಕೇಸ್ ಕೊಡ್ತಿರ ಹೇಳಿ? ಪ್ರಜಾಪ್ರಭುತ್ವ ನಮ್ಮಲ್ಲೆಲ್ಲಿದೆ? ದಯವಿಟ್ಟು ಯೋಚಿಸಿ ನೋಡಿ ಸ್ವಾತಂತ್ರ ಪೂರ್ವದಲ್ಲಿದ್ದ ರಾಜರುಗಳ ವಂಶಪಾರಂಪರ್ಯ ಬೇಡವೆಂದು ಆಂಗ್ಲರ ಮಾದರಿಯ ಪರೋಕ್ಷ ಪ್ರಜಾಪ್ರಭುತ್ವವನ್ನು ಒಪ್ಪಿಕೊಳ್ಳಲಾಯಿತು. ನಮ್ಮಲ್ಲಿ ನೇರ ಪ್ರಜಾಪ್ರಭುತ್ವ ಇಲ್ಲವೇ ಇಲ್ಲ. ದಯವಿಟ್ಟು ಹೇಳಿ, ನೀವೆಲ್ಲಾದರೂ ಇಂತವನೇ ಅಧ್ಯಕ್ಷ ಅಥವ ಪ್ರಧಾನಿ ಅಥವ ಮಂತ್ರಿಯಾಗಬೇಕೆಂದು ಮತ ಹಾಕಲು ಸಾಧ್ಯವೇ? ಇದೆಲ್ಲವೂ ಕೆಲವು ಪುಡಾರಿಗಳ ವೈಯಕ್ತಿಕ ಹಿತಾಸಕ್ತಿಯುಳ್ಳವರಿಗೆ ಅನುಕೂಲವಾಗಲೆಂದೆ ಯೋಚನೆ ಮಾಡದೆ ಹಿಂದು ಮುಂದೆ ನೋಡದೆ ತೆಗೆದುಕೊಂಡ ನಿರ್ಧಾರದ ಫಲ. ಹೆಸರಿಟ್ಟಿದ್ದು ಮಾತ್ರ ಪ್ರಜಾಪ್ರಭುತ್ವ ಕೊಟ್ಟ ಕಾರಣ ರಾಜರ ಆಡಳಿತ ಸರಿ ಇರುವುದಿಲ್ಲ ಎಂಬ ನೆಪ ಆದರೆ ಆದದ್ದು ಪ್ರಜೆ ಪ್ರಭುತ್ವದ ಹೆಸರಿನಲ್ಲಿ ವಂಶ ಪಾರಂಪರ್ಯ ಆಡಳಿತಕ್ಕೆ ಶರಣು. ಇಲ್ಲಿ ರಾಹುಲನನ್ನು ಟೀಕಿಸಿ ಪ್ರಯೋಜನವಿಲ್ಲ. ಅವರ ವಂಶದವರಿಲ್ಲದಿದ್ದರೆ ಕಾಂಗ್ರೆಸ್ ಉಳಿಯುವುದಿಲ್ಲ ಅದಕ್ಕಾಗಿ ಅವರಿದ್ದಾರೆ ಅಷ್ಟೆ. ಹೀಗೆ ಊಹಿಸಿಕೊಳ್ಳಿ ಒಂದೊಮ್ಮೆ ಆ ವಂಶದ ಎಲ್ಲರೂ ಯಾವುದೋ ಕಾರಣಕ್ಕೆ ಇಲ್ಲವಾದಂತ ಸಂದರ್ಭ ಎದುರಾದರೆ (ಇಲ್ಲದ) ರಾಹುಲನ ಗೆಳತಿಯ ಮಗುವನ್ನು ವಂಶದ ಉತ್ತರಾಧಿಕಾರಿಯೆಂದು ಕರೆತಂದು ಕೂರಿಸಿದರೆ ಮುಂದೆ ಅದೆ ಪ್ರಧಾನಿ. ನೀವಲ್ಲ! ಅಂದರೆ ಈ ವಿಷಯ ಕಾಂಗ್ರೆಸ್ಸಿಗರಿಗೆ ಸ್ಪಷ್ಟವಾಗಿ ಅರಿವಿದೆ ಅವರ ಹೆಸರಿನಲ್ಲಿ ಇವರು ರಾಜ್ಯಭಾರ ಮಾಡಬಹುದು ಉದಾಹರಣೆ ಎಂದೂ ಚುನಾವಣೆ ಗೆಲ್ಲದ ಆಸ್ಕರ್, ಅಂಬಿಕಾ, ಮನಮೋಹನ್ ಸಿಂಗ್, ಶಿವರಾಜ್ ಪಾಟೀಲ್ ಇತ್ಯಾದಿ ಅವರುಗಳಿಗೆ ಅಧಿಕಾರ ಸಿಗುವುದೇ ಇಲ್ಲ. ಆದರೆ ಅವರ ಹೆಸರು ಹೇಳಿದರೆ ಇನ್ನೂ ಮತ ಹಾಕುವ ಜನರಿರುವವರೆಗೆ ಇದು ಮುಂದುವರೆಯುತ್ತದೆ ಸಹಿಸಿಕೊಳ್ಳುವುದು ನಮ್ಮೆಲ್ಲರ ಕರ್ಮ

>> ಖಂಡಿತ ಆಗ್ಬಹುದು. ನಾನು ಎಂ ಪಿ ಆಗಿರ್ತಿನಿ ನಿಮ್ಗೆ (ಪಿ ಎಂ ಆಗ್ಲಿಕ್ಕೆ) ಮತ ಹಾಕ್ಲಿಕ್ಕೆಷ್ಟು ಸೂಟ್ಕೇಸ್ ಕೊಡ್ತಿರ ಹೇಳಿ? ನಿಮ್ಗೆ ಎಷ್ಟು ಖಾಲಿ ಸೂಟ್ಕೇಸ್ ಬೇಕು ಹೇಳಿ ? :) , ವ್ಯವಸ್ತೆ ಮಾಡುವ :) ಖಂಡಿತ ರಾಹುಲ್ನನ್ನು ದೂರುತ್ತಿಲ್ಲ ನಾನು.ಲೇಖನದಲ್ಲೂ ಅದನ್ನೇ ಹೇಳಿದ್ದೇನೆ ಅವನ ಜಾಗದಲ್ಲಿ ನಾನ್ ಇದ್ದಿದ್ರು ಅವನ ತರಾನೆ ಆಡ್ತಾ ಇದ್ದೆ ಬಿಡಿ :) ನೀವ್ ಹೇಳಿದ್ದು ನಿಜ.ಕಾಂಗ್ರೆಸ್ಸ್ ಅನ್ನೋ ನಾಯಕರಿಲ್ಲದ ಪಕ್ಷದ 'ನಾಯಕ' ಅವನು.ಆ ಫ್ಯಾಮಿಲಿ ಇಲ್ಲದೇ ಕಾಂಗ್ರೆಸ್ಸ್ ಅನ್ನೋ ಪಕ್ಷವಿಲ್ಲ ನಿಜ,ಅದು ಆ ಪಕ್ಷದ ಅನಿವಾರ್ಯತೆ, ಆ ಅನಿವಾರ್ಯತೆಯನ್ನ ದೇಶದ ಮೇಲೆ ಹೇರೋದು ಮಾತ್ರ ಅಸಹ್ಯಕರ, ನಮ್ಮ ಕರ್ಮ ಬಿಡಿ,ವಂಶದಾಲಿತವನ್ನ ಒಪ್ಪಿರೋ ಗುಲಾಮಿ ಮನಸ್ತಿತಿಯ ಜನಗಳಿರುವ ತನಕ ಪಟ್ಟಾಭಿಷೇಕ ಅದೇ-ತಡೆಯಿಲ್ಲದೆ ನಡೆಯುತ್ತಿರುತ್ತದೆ. ಅಸಹಾಯಕತೆಯಿಂದ ನೋಡುತ್ತಾ ಕೂರೋಣ.

ಉತ್ತಮ ಲೇಖನ ರಾಕೇಶ್, ಜೈ ಹೋ !!! >“ನಾರ್ಮಲ್ ಆಗಿರೊವ್ರು ಇಂತ ಹೇಳಿಕೆ ಕೊಡೊದಿಲ್ಲ” ಅಂತ ಆರ್.ಎಸ್.ಎಸ್ನವ್ರು ಸರಿಯಾಗೆ ತಿರುಗೆಟು ನೀಡಿದ್ದಾರೆ.< ಅವರೇನು ಸುಮ್ನೆ ಹೇಳ್ತಾರಂತ ಅನ್ದ್ಕೊಂಡಾವ್ರಿಗೆ ಸ್ಯಾಂಪಲ್ ಇರ್ಲಿ ಅಂತ.. http://newsgroups.de... http://indiatoday.in...

ಇನ್ನು ಮುಂದೆ ನಮ್ಮ ದೇಶಕ್ಕೆ ರಾಹು(ಲ)ಕಾಲವೇ. ಇವರದು ಪಕ್ಕ ಸೆಕ್ಯುಲರ್ ಕುಟುಂಬ, ಈ ವಯ್ಯ PM ಆಗೋದು ಗ್ಯಾರೆಂಟಿ. ಇದು ನಮ್ಮ ದೇಶದ ದುರ್ಭಾಗ್ಯ ! ಸ್ವಾಮೀ. ಸದನದಲ್ಲಿ ಒಮ್ಮೆ ಒಬ್ಬ ಸಂಸದ ,ನೆಹರುಗೆ " ಲಡಾಕ್ಕಿನ ಕೆಲವು ಭಾಗಗಳು ಚೀನೀಯರ ವಶ ವಾಯಿತಲ್ಲ " ಎಂದರಂತೆ ಪ್ರತ್ಯುತ್ತರವಾಗಿ ನೆಹರು " ಹೋದರೆ ಹೋಗಲಿ ಅದು ಬರಡು ಭೂಮಿ "ಎಂದರಂತೆ . ಅದಿಕ್ಕೆ ಸಂಸದ " ನಿಮ್ಮ ತಲೆ ಕೂಡ ಬರಡಾಗಿದೆ ಅದನ್ನು ಚೀನಿಯರಿಗೆ ಕೊಟ್ಟು ಬಿಡಿ "ಅಂದರಂತೆ. ಎಂತಹ ಮುತ್ತಾತ ?

ಅಯ್ಯೋ ಆ ತಾತನ ಕತೆಗಳು ಒಂದೇ ಎರಡೇ, ಕೋಕೋ ದ್ವೀಪಗಳನ್ನ ಬರ್ಮಾ ದೇಶದವರು ಕೇಳಿದ್ರು ಅಂತ ಕೊಟ್ರು. 'ಯಾಕ್ರೀ ಅವ್ರಿಗೆ ಕೊಟ್ರಿ?' ಅಂತ ಕೇಳಿದ್ದಕ್ಕೆ 'ದೊಡ್ಡ ದೊಡ್ಡ ದೇಶಗಳು ಚಿಕ್ಕ ದೇಶಗಳಿಗೆ ಹಿಂಗೆ ಕೊಡ್ಬೇಕಪ್ಪ' ಅಂತ ಸ್ವಂತ ಆಸ್ತಿಯನ್ನ ಕೊಟ್ಟ ಹಾಗೆ ಮಾತಾಡಿದ್ರು. ಇವತ್ತು ಅದೇ ಕೋಕೋ ದ್ವೀಪದಲ್ಲಿ ಚೀನೀಗಳು ಕ್ಷಿಪಣಿಯನ್ನ ಭಾರತದೆಡೆಗೆ ಗುರಿಯಿಟ್ಟು ಕೂರಿಸಿದ್ದಾರೆ! ಹ್ಮ್ ತಾತನ ಬಗ್ಗೆ ಹೇಳ್ತಾ ಗ್ರಂಥವೇ ಆದೀತು.

ರಾಕೇಶ್ , ನಮಗೆ ಅನ್ನಿಸಿದ್ದ ಎಲ್ಲವನ್ನ ಬರಹಕ್ಕೆ ಇಳಿಸಿ ಅದ್ನ (ಒಳ್ಳೆಯ ಉದ್ದೇಶಕ್ಕಾಗಿ) ಪ್ರಚುರ ಪಡಿಸಿ ಜಾಗೃತಿ ಮೂಡಿಸುವವರು ಕಡಿಮೆ(ನನ್ನೂ ಸೇರಿ) ... ನೀವ್ ಅ ಕೆಲಸ ಮಾಡಿದೀರಾ, ಅದ್ಕೆ ಅಭಿನಂದನೆಗಳು.. ಇದಕ್ಕೆ ಬಂದ ಪ್ರತಿಕ್ರಿಯೆಗಳು ನೋಡಿ-ಓದಿ ಮನ ತುಂಬಿ ಬಂತು, ಎಷ್ಟು ಜನ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ್ದರ್ ಅಂತ.. >>>>ಅದೇನೋ ಗೊತ್ತಿಲ್ಲ ಈಗೀಗ ಆ ರಾಹುಲ ಎದರೂ-ಬಿದ್ದರೂ- ಕೆಮ್ಮಿದರೂ-ಕ್ಯಾಕರಿಸಿದರೂ!! ಅದೂ ಸುದ್ಧಿಯೇ. ರಾಹುಲನಿಗೆ ಮುತ್ತಾತ-ತಾತ-ತಂದೆ-ಅಜ್ಜಿ-ತಾಯಿ-ಅವ್ರ ನಾಮ ಬಲ, ರಾಹುಲ ಒಬ್ಬ ಸಾಮಾನ್ಯಾ ಮನುಷ್ಯ ಆಗಿದ್ದರೆ ಅದ್ಕೆ ಪ್ರಾಮುಖ್ಯತೆ ಇರ್ಲಿಲ್ಲಾ:೦.. ನೀವು-ನಾನು-ಅವ್ರು-ಇವ್ರು ಯಾರದ್ರೂ ಆಗಲಿ ಪೀ ಎಮ್ಮು-ಮೊದಲು ಆಗಲಿ ಸಾಲ್ವ್ -ನಮ್ಮೆಲ್ಲ ಪ್ರಾಬ್ಲಮ್ಮು... ಒಳ್ಳೆ ಬರಹ ಸ್ಸಾರ್.. ಹೊಸ ವರ್ಷದ ಶುಭಶಯಗಳು

ಬನ್ನಿ ಸಂಪದಿಗರೆಲ್ಲರೂ ಒಂದು ಪಕ್ಷ ಕಟ್ಟೋಣ, ಭಾಸಂಪಾ ಎಂದು. ’ಭಾರತೀಯ ಸಂಪದಿಗರ ಪಾರ್ಟಿ’. ನೋಡಿ ಪಕ್ಷಕ್ಕೆ ಒಂದು ಒಳ್ಳೆ ಹೆಸರು ಸೂಚಿಸಿದ್ದೇನೆ. ನನಗೆ ಪಿ.ಎಂ ಪದವಿ ಬೇಡ, ನಂ ಚಿದಣ್ಣ ಅಥ್ವಾ ಪ್ರಣಬ್ ದಾದಾ ಥರ ಚಿಕ್ಕ ಖಾತೆ ಕೊಟ್ಟರೆ ಸಾಕು. ಮನಮೋಹನ್ ರ ಥರ (ಸೋನಿಯಾಜಿ,ರಾಹುಲ್ ಜಿ) ರಾಕೇಶ್ ಜಿ,ರಾಕೇಶ್ ಜಿ ಅಂದುಕೊಂಡು ನೆಮ್ಮದಿಯಾಗಿ ಇದ್ಬಿಡ್ತೀನಿ. ಏನಂತೀರ?