ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು?

To prevent automated spam submissions leave this field empty.

 

 

 

 

 

 

 

 

 

ಸಂಪದಾ ನೀನು ನಮಗಾಗಿ
ಸಾವಿರ ವರುಷ ಹಿತವಾಗಿ
ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ
//ಸಂಪದಾ ನೀನು ನಮಗಾಗಿ//1

 

ಸಾವಿರ ಬ್ಲಾಗೂ ಬಂದರೆ ಏನು
ಸಂಪದಕೆಂದೂ ಸರಿ ಸಾಟಿಯೇನು
ಜತೆಯಲಿ ಎಂದೆಂದು ನೀನಿರಬೇಕು
ನಿನ್ನಯ ಸಂಗವೇ ನಮಗೆಲ್ಲಾ ಸಾಕು
//ಸಂಪದಾ ನೀನು ನಮಗಾಗಿ//2

 

ಹಾಸ್ಯದ ನೆರೆಯೋ ಕಾವ್ಯದ ಹೊರೆಯೋ
ರಾಜಕೀಯಕೆ ಚಾಟಿಯ ಬರೆಯೋ
ಹರಿಪ್ರಸಾದರು ಬೆಳೆಸಿದ ಕುಡಿಯೋ
  ಕನ್ನಡಮ್ಮನ ಹೆಮ್ಮೆಯ ನುಡಿಯೋ
//ಸಂಪದಾ ನೀನು ನಮಗಾಗಿ//3

 

ಬಿಸಿ ಬಿಸಿ ಚರ್ಚೆಯೋ , ಚಿತ್ರವೋ, ಪತ್ರವೋ
ಎಲ್ಲರ ಮನಸ್ಸನೂ ಅರಳಿಸೋ ಚೈತ್ರವೋ
ಜ್ಞಾನದ ಅನುಪಮ ಹೊಸತಿದು ಮಾತ್ರವೋ
ಸಂಪದ ಎಲ್ಲರ ಪ್ರೀತಿಗೆ ಪಾತ್ರವೋ
//ಸಂಪದಾ ನೀನು ನಮಗಾಗಿ//4

 

ಕೋಟಿ ಬಾಷೆ ಕಲಿತರೇನು
ಕನ್ನಡ  ಭಾಷೆಯು ಆಡಲು ತಾನೇ
ನೂರು ಸಮಸ್ಯೆ  ಕಾಡಿದರೇನು
ಸಂಪದ ನೆಮ್ಮದಿ ನೀಡಲು ತಾನೇ

//ಸಂಪದಾ ನೀನು ನಮಗಾಗಿ//5

 

ಎಲ್ಲರೂ ಸೇರುತ ಹರಸುವ ಇಂದು
ನಮ್ಮಯ ಉಸಿರಲಿ ಬೆರೆಯಲಿ ಎಂದು
ಕನ್ನಡ ಬಳಸುತ ಬೆಳೆಯಲಿ ಎಂದೂ
ಸಂಪದ ಸರ್ವರ ಭರಿಸಲಿ ಮುಂದೂ
//ಸಂಪದಾ ನೀನು ನಮಗಾಗಿ//6

 


(ಧಾಟಿ:   ಅಮ್ಮಾ  ನೀನೂ ನಮಗಾಗೀ)

ಲೇಖನ ವರ್ಗ (Category): 
ಸರಣಿ: 

ಪ್ರತಿಕ್ರಿಯೆಗಳು

ಗೋಪೀನಾಥ ಸರ್ ಇದು ಪ್ರತಿಯೊಬ್ಬ ಸಂಪದನ ಆಶೆಯ . ಸಂಪದ ನನ್ನ ಆತ್ಮಿಯ ಗೆಳೆಯನಾಗಿ ಬಿಟ್ಟಿದ್ದಾನೆ . ದಿನಾಲೂ ನೋಡದಿದ್ದರೆ ತೀವ್ರ ತಳಮಳ ಸಂಪದ ಇನ್ನು ತುಂಬಾ ಎತ್ತರಕ್ಕೆ ಬೆಳೆಯಲಿ.

ನಿಜ ಮೊದಲು ಸುಮ್ಮನೆ ಪ್ರವೇಶಿಸುವ ನಾವು ನಂತರ ಸಂಪದದ ಮತ್ತೇರಿದಂತೆ ಆಡುತ್ತೇವೆ (ಕ್ಷಮಿಸಿ ಅಂಗ್ಲಬಾಷೆಯ addiction ಗೆ ಸರಿಸಮನಾದ ಕನ್ನಡ ಪದ ತಿಳಿಯುತ್ತಿಲ್ಲ)

ವಾಹ್! ಅದೆ೦ಥಾ ಕ್ರಿಯಾಶೀಲತೆ ರಾಯರೆ ನಿಮ್ಮದು, ಹ್ಯಾಟ್ಸಾಫ್. ಈ ಹಾಡನ್ನು ಥೇಟ್ ಅಣ್ಣಾವ್ರ ಧಾಟಿಯಲ್ಲಿ "ಸ೦ಪದ - ಸ೦ವಾದ"ದಲ್ಲಿ ನೀವು ಹಾಡಿದರೆ ಇನ್ನೂ ಚೆನ್ನಾಗಿರುತ್ತದೆ.

ಮಂಜೂ ಅವರೇ ನಮ್ಮ ಸಂಪದದಲ್ಲಿ ಥೇಟ್ ಅಣ್ಣಾವ್ರ ಹಾಗೇ ಹಾಡುವ ರಾಯರು( ನಾವಡರು) ಇದ್ದಾರಲ್ಲ . ಅವರ ದನಿಯಲ್ಲೇ ಕೇಳಿದರಾಯ್ತು. ನಿಮ್ಮ ಅಭಿಮಾನೀ ಮೆಚ್ಚುಗೆಗೆ ಅನಂತ ಶರಣು

====== ಸಂಪದಾ ನೀನು ನಮಗಾಗಿ / ಸಾವಿರ ವರುಷ ಹಿತವಾಗೀ // ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗೀ // ಸಂಪದಾ ನೀನು ನಮಗಾಗಿ // ಸಾವಿರ ಬ್ಲಾಗೂ ಬಂದರೆ ಏನೂ ಸಂಪದಕೆಂದೂ ಸರಿ ಸಾಟಿಯೇನೂ ಜತೆಯಲಿ ಎಂದೆಂದು ನೀನಿರಬೇಕೂ ನಿನ್ನಯ ಸಂಗವೇ ನಮಗೆಲ್ಲ ಸಾಕೂ// ಸಂಪದ ನೀನೂ ನಮಗಾಗೀ // ೧ ಹಾಸ್ಯದ ನೆರೆಯೋ ಕಾವ್ಯದ ಹೊರೆಯೋ ರಾಜಕೀಯಕೆ ಚಾಟಿಯ ಬರೆಯೋ ಹರಿ ಪ್ರಸಾದರು ಬೆಳೆಸಿದ ಮರಿಯೋ ಮುದ್ದಿನ ಸಂಪದ ಹೆಮ್ಮೆಯ ಸಿರಿಯೋ // ಸಂಪದ ನೀನೂ ನಮಗಾಗೀ // ೨ ಬಿಸಿ ಬಿಸಿ ಚರ್ಚೆಯೋ , ಚಿತ್ರವೋ ಪತ್ರವೋ ಎಲ್ಲರ ಮನಸ್ಸನೂ ಅರಳಿಸೋ ಚೈತ್ರವೋ ಜ್ಞಾನದ ಅನುಪಮ ಹೊಸತಿದು ಮಾತ್ರವೊ ಸಂಪದ ಎಲ್ಲರ ಪ್ರೀತಿಗೆ ಪಾತ್ರವೋ // ಸಂಪದ ನೀನೂ ನಮಗಾಗೀ // ೩ ಎಲ್ಲರೂ ಸೇರುತ ಹರಸುವ ಇಂದೂ ನಮ್ಮಯ ಉಸಿರಲಿ ಬೆರೆಯಲಿ ಎಂದೂ ಕನ್ನಡ ಬಳಸುತ ಬೆಳೆಯಲಿ ಎಂದೂ ಸಂಪದ ಸರ್ವರ ಭರಿಸಲಿ ಮುಂದೂ // ಸಂಪದ ನೀನೂ ನಮಗಾಗೀ // ೪ ====== ಇದನ್ನು ನಾನು ಹೀಗೆ ಬರೆಯಲು ಇಷ್ಟಪಡುತ್ತೇನೆ: ಸಂಪದಾ ನೀನು ನಮಗಾಗಿ ಸಾವಿರ ವರುಷ ಹಿತವಾಗಿ ಬೆಳೆಯಲೇ ಬೇಕೂ ಎಲ್ಲರ ಕಣ್ಣಾಗಿ //ಸಂಪದಾ ನೀನು ನಮಗಾಗಿ// ಸಾವಿರ ಬ್ಲಾಗೂ ಬಂದರೆ ಏನು ಸಂಪದಕೆಂದೂ ಸರಿ ಸಾಟಿಯೇನು ಜತೆಯಲಿ ಎಂದೆಂದು ನೀನಿರಬೇಕು ನಿನ್ನಯ ಸಂಗವೇ ನಮಗೆಲ್ಲಾ ಸಾಕು //ಸಂಪದಾ ನೀನು ನಮಗಾಗಿ// ಹಾಸ್ಯದ ನೆರೆಯೋ ಕಾವ್ಯದ ಹೊರೆಯೋ ರಾಜಕೀಯಕೆ ಚಾಟಿಯ ಬರೆಯೋ ಹರಿಪ್ರಸಾದರು ಬೆಳೆಸಿದ ಮರಿಯೋ ಮುದ್ದಿನ ಸಂಪದ ಹೆಮ್ಮೆಯ ಸಿರಿಯೋ //ಸಂಪದಾ ನೀನು ನಮಗಾಗಿ// ಬಿಸಿ ಬಿಸಿ ಚರ್ಚೆಯೋ , ಚಿತ್ರವೋ, ಪತ್ರವೋ ಎಲ್ಲರ ಮನಸ್ಸನೂ ಅರಳಿಸೋ ಚೈತ್ರವೋ ಜ್ಞಾನದ ಅನುಪಮ ಹೊಸತಿದು ಮಾತ್ರವೋ ಸಂಪದ ಎಲ್ಲರ ಪ್ರೀತಿಗೆ ಪಾತ್ರವೋ //ಸಂಪದಾ ನೀನು ನಮಗಾಗಿ// ಎಲ್ಲರೂ ಸೇರುತ ಹರಸುವ ಇಂದು ನಮ್ಮಯ ಉಸಿರಲಿ ಬೆರೆಯಲಿ ಎಂದು ಕನ್ನಡ ಬಳಸುತ ಬೆಳೆಯಲಿ ಎಂದೂ ಸಂಪದ ಸರ್ವರ ಭರಿಸಲಿ ಮುಂದೂ //ಸಂಪದಾ ನೀನು ನಮಗಾಗಿ//

ಗೋಪ್ಯಣ್ಣಾ, ತುಂಬ ಚೆನ್ನಾಗಿದೆ ಸಂಪದ ಗೀತೆ. <ಹರಿಪ್ರಸಾದರು ಬೆಳೆಸಿದ ಮರಿಯೋ> ಎಂಬ ಸಾಲನ್ನು ಹರಿಪ್ರಸಾದರ ಕನಸಿನ ಕುಡಿಯೋ ಅಥವಾ ಹರಿಪ್ರಸಾದರು ಬೆಳೆಸಿದ ಕುಡಿಯೋ ಎಂದಾಗಿಸಿದರೆ ಹೇಗೆ? ಇದು ನನ್ನ ಅಭಿಪ್ರಾಯ ಮಾತ್ರ, ದಯವಿಟ್ಟು ಅನ್ಯಥಾ ಭಾವಿಸ ಬೇಡಿ.

ಬೇಸರವಿಲ್ಲ ಶಾನಿಯವರೇ ಅಲ್ಲಿ ಕುಡಿಯೋ ಅಂತ ಬರೆದರೆ ಎರಡನೇ ಅಕ್ಷರ "ರ" ಬರುವುದಿಲ್ಲವಲ್ಲಾ ಅಥವಾ ಅದರ ಕೆಳಗೆ ಪುನ ಎರಡನೇ " ಡಿ" ಅಕ್ಷರದ ಶಬ್ದ ಬೇಕಲ್ಲಾ? ಹೀಗೆ ಸರಿಯಾಗುತ್ತಾ? " ಹರಿಪ್ರಸಾದರು ಬೆಳೆಸಿದ ಕುಡಿಯೋ ಕನ್ನಡಮ್ಮನ ಹೆಮ್ಮೆಯ ನುಡಿಯೋ" ಅಂತ ಆಗಬೇಕಾಗುತ್ತದಲ್ಲಾ? ನೋಡೋಣ !!!

ಗೋಪಿನಾಥರೇ, ಸುಮಾರು 20 ದಿನಗಳು ಸಂಪದಕ್ಕೆ ಭೇಟಿ ಕೊಡಲಾಗಿರಲಿಲ್ಲ. ಹಾಗಾಗಿ ತಕ್ಷಣ ನೋಡಿರಲಿಲ್ಲ. ಸುಂದರ ಸಂಯೋಜನೆ, ಹಾಡಲು ಹೊಂದುತ್ತದೆ. ಉತ್ತಮ ರಚನೆ.

ಗೋಪಿನಾಥ್, ನಮಸ್ಕಾರ, ನಿಮ್ಮ ರಚನೆ ಬಹಳ ಚೆನ್ನಾಗಿದೆ. ಅದರ ಮೊದಲ ಸಾಲು ಓದುತ್ತಲೆ ನಾನು ಅದನ್ನು ರಾಜ್ ರ ಹಾಡಂತೆ ಹಾಡುತ್ತಾ ಓದಿದೆ. ಕೋನೆಯಲ್ಲಿ ನಿಮ್ಮ ಸೂಚನೆಯು ಇತ್ತು. ಇದನ್ನು ಸಂಪದ ಗಾನವಾಗಿ ಸಮ್ಮೇಳನದಲ್ಲಿ ಒಟ್ಟಾಗಿ ಕಲಿತು ಹಾಡಿದರೆ ಅದೂಂದು ಅನುಭವವಾಗಿ ಮನದಲ್ಲಿ ನಿಲ್ಲುತ್ತದೆ. ಅದಕ್ಕೆ ನಮ್ಮ ಸುರೇಶರ ಕೊಡುಗೆಯೊ ಭೇಷಾಗಿದೆ. ವಂದನೆಗಳು. ಮಧ್ವೇಶ್.