ಕಪ್ಪುಕುಳಿಯಲ್ಲಿ(black hole) ಮಾಯವಾದ ವಸ್ತು ಏನಾಗುತ್ತದೆ?

To prevent automated spam submissions leave this field empty.

 

 

 

ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಏನಾಗುತ್ತದೆ ಅನ್ನುವುದಕ್ಕೆ ಎರಡು ವಾದಗಳಿವೆ ಆದರೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲ

 

 

 

1. ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ಇನ್ನೊದು ವಿಶ್ವಕ್ಕೆ ರವಾನೆಯಾಗುತ್ತದೆ ಅಥವಾ ನಮ್ಮ ವಿಶ್ವದಲ್ಲಿಹೆ ಬೇರೆಡೆಗೆ ರವಾನೆಯಾಗುತ್ತದೆ

 

 

2. ಹಾಕಿ೦ಗ್ ಪ್ರಕಾರ ಕಪ್ಪುಕುಳಿಯಲ್ಲಿ ಮಾಯವಾದ ವಸ್ತು ವಿಕಿರಣವಾಗಿ ಹೊರಹೊಮ್ಮುತ್ತದೆ ಅದನ್ನೇ ಹಾಕಿ೦ಗ್ ರೇಡಿಯೇಶನ್ ಎನ್ನುವುದು .ಹಾಕಿ೦ಗ್ ರೇಡಿಯೇಶನ್ ಪತ್ತೆಹಚ್ಚುವಲ್ಲಿ ವಿಜ್ಞಾನಿಗಳು ಹಗಲಿರುಳು ಪ್ರಯತ್ನದಲ್ಲಿದ್ದಾರೆ ಆದರೆ ಇದುವರೆಗೆ ಯಾವುದೆ ಸಿಹಿಸುದ್ದಿ ಇಲ್ಲಾ ಇದೆ ಕಾರಣಕ್ಕೆ ಹಾಕಿ೦ಗ್ ರವರಿಗೆ ನೋಬಲ ಪ್ರಶಸ್ತಿ ವಿಳಂಬವಾಗಿದೆ .ಹಾಕಿ೦ಗ್ ರೇಡಿಯೇಶನ್ ಬೇಗ ಪತ್ತೆ ಆಗಬೇಕಿದೆ ಯಾಕೆಂದರೆ ನೋಬಲ ಪ್ರಶಸ್ತಿ ಯನ್ನು ಮರಣಾನಂತರ  ನೀಡಲಾಗುವುದಿಲ್ಲ

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಮೊದಲನೆಯ ವಾದ ಖಂಡಿತವಾಗಿಯೂ ತಪ್ಪು, ಏಕೆಂದರೆ ಅದು ಸರಿಯಾದಲ್ಲಿ ಬ್ಲ್ಯಾಕ್ ಹೋಲಿನ ವಿಷಯವೇ ಅರ್ಥ ಕಳೆದುಕೊಳ್ಳುತ್ತದೆ., ಏಕೆಂದರೆ ಬ್ಲ್ಕ್ಯಾಕ್ ಹೋಲ್ ಒಳಗೆ ಹೋದ ವಸ್ತು ಎಂದಿಗೂ ಹೊರಗೆ ಬರಲಾರದು. ಬ್ಲ್ಯಾಕ್ ಹೋಲಿನಲ್ಲಿ ಗುರುತ್ವಾಕರ್ಷಣ ಶಕ್ತಿ ಎಷ್ಟು ಬಲವಾದದ್ದೆಂದರೆ ಅದರ ಆಟಮ್ ಆಕಾರದವರೆಗೆ ಅದನ್ನು ಎಳೆದು ಬಿಡುವುದು. ಇದರಿಂದ ವಸ್ತು ಮಾಯವಾಗುತ್ತದೆ ಎಂಬ ಸಂಶಯ. ಬೆಳಕಿನ ಕಿರಣಗಳನ್ನೇ ಸೆಳೆದು ಹಾಕುವ ಮಟ್ಟಿನ ಶಕ್ತಿ ಅದರ ಗುರುತ್ವಾಕರ್ಷಣೆಗಿದೆ

ಸಂತೋಷ ಅವರೆ ನಾನು ಮೊದಲೇ ಹೇಳಿದ್ದೇನೆ ಯಾವುದನ್ನೂ ಸರ್ವವ್ಯಾಪಿಯಾಗಿ ಸ್ವೀಕರಿಸಿಲ್ಲವೆಂದು . ಕಪ್ಪುಕುಳಿಯ ಬಗ್ಗೆ ನೀವು ನೀಡಿದ ಮಾಹಿತಿ ಸರಿಯಾಗಿದೆ ಅದೇ ರೀತಿ ನಾನು ಓದಿ ನಿಮಗೆ ತಿಳಿಸಿದ ಮೊದಲನೇ ವಾದವುಕೂಡ ಅಸ್ಟೆ ಸತ್ಯ ಹೆಚ್ಹಿನ ಮಾಹಿತಿಗೆ scientific america ಅಕ್ಟೋಬರ್ 2008 ರ ಸಂಚಿಕೆಯನ್ನು ನೋಡಿ .ಲಬ್ಯ ವಿಲ್ಲದಿದ್ದರೆ ಹೇಳಿ ಫೋಟೋ ಕಾಪಿ ಕಳಿಸುವೆ . ಧನ್ಯವಾದಗಳು

ಸ೦ತೋಷ್ ಅವರ ಪ್ರತಿಕ್ರಿಯೆಯನ್ನು ನಾನೂ ಒಪ್ಪುತ್ತೇನೆ. ಅದೇ ರೀತಿ ಎರಡನೇ ವಾದವನ್ನೂ ಒಪ್ಪಲಾಗದು. "ವಿಕಿರಣವಾಗಿ ಹೊರಹೊಮ್ಮುತ್ತದೆ" ಎ೦ಬುದು ಹೇಗೆ ಸಾಧ್ಯ? ಕಪ್ಪುಕುಳಿಯ ವಿಪರೀತ ಗುರುತ್ವಾಕರ್ಷಣ ಬಲದ ಕಾರಣ ಅಲ್ಲಿ೦ದ ಏನೂ ಹೊರಹೊಮ್ಮಲು ಸಾಧ್ಯವಿಲ್ಲ. ಹಾಕಿ೦ಗ್ ರೇಡಿಯೇಶನಲ್ಲಿ ಏನು ಹೇಳಲಾಗಿದೆ ಎ೦ದು ಸರಿಯಾಗಿ ತಿಳಿದವರು ಇಲ್ಲಿ ವಿವರಣೆ ನೀಡಬಲ್ಲರೇನೋ!

ಮಾನ್ಯರೆ ,ಹಾಕಿ೦ಗ್ ರೇಡಿಯೇಶನಲ್ಲಿ ಇನ್ನು ಏನು ಹೆಚ್ಚಿಗೆ ಹೇಳಲಾಗಿದೆ ಎ೦ದು ಸರಿಯಾಗಿ ತಿಳಿದವರು ನಿಮಗೆ ತಿಳಿಹೇಳಿದರೆ ನನಗೂ ತಿಳಿಸಿ ಧನ್ಯವಾದಗಳು

ಮಾನ್ಯರೆ, ಹಾಕಿ೦ಗ್ ರೇಡಿಯೇಶನ್ ಹಾಗೂ ಕಪ್ಪು ಕುಳಿಯಿ೦ದ ಪ್ಯಾರೆಲಲ್ ಅ೦ತರಿಕ್ಷದಲ್ಲಿ ಬಿಳಿ ಕುಳವಾಗಿ ಒ೦ದು ವರ್ಮ್ ಕುಳಿಯ೦ತೆ ಪದಾರ್ಥಗಳನ್ನು ಸಾಗಿಸುವ ಸಾಧ್ಯತೆ ಕೇವಲ ಥಿಯರಿಗಳಷ್ಟೇ. ಇವೆರಡೂ ಇಲ್ಲಿಯವರೆಗೂ ಸಾಬೀತಾಗಿಲ್ಲ. ಕಪ್ಪು ಕುಳಿಯೊಳಗೆ ಸ೦ಶೋಧನೆ ನಡೆಸುವುದು ಕಷ್ಟಸಾಧ್ಯ. ಆದರೆ ಡಾರ್ಕ್ ಮ್ಯಾಟರ್ ಬಗ್ಗೆ ಹೆಚ್ಚಿನ ಅರಿವು ಮೂಡಿದಲ್ಲಿ ಕಪ್ಪು ಕುಳಿಗಳ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಒದಗುವುದು. ಜೆನೀವಾದಲ್ಲಿನ ಎಲ್.ಎಚ್.ಸಿ. ಈ ಕಾರಣಕ್ಕಾಗಿಯೇ ಹಲವು ಸ೦ಶೋಧನೆಗಳನ್ನು ಮಾಡುತ್ತಿದೆ. ಕಪ್ಪು ಕುಳಿಯಲ್ಲಿ ವಸ್ತುವೊ೦ದು ವಿಪರೀತವಾಗಿ ಎಳೆಯಲ್ಪಟ್ಟು ಅದರಲ್ಲಿನ ಶಕ್ತಿಯು ಗುರುತ್ವಾಕರ್ಷಣೆಗೆ ಒಡ್ಡಿ ಹಾಕಿ೦ಗ್ ರೇಡಿಯೇಶನ್ ಆಗುವುದು ಒ೦ದು ಬಹಳ ವಿಜ್ನಾನಿಗಳು ಸರಿಯೆ೦ದು ತಿಳಿದಿರುವ ಥಿಯರಿ. ಕಪ್ಪು ಕುಳಿಗಳಲ್ಲಿನ ಸಿ೦ಗುಲಾರಿಟಿ(ಇಲ್ಲಿ ಸಮಯ ಕೂಡ ಸ್ಥಗಿತವಾಗುತ್ತದೆ) ದೇವರ ಮನೆಯಾಗಿರಬಹುದೆ? ಎ೦ಬುದು ನನ್ನ ಪ್ರಶ್ನೆ. ಹಾಗಾಗಿ ಸ೦ತೋಷ್ ಹಾಗೂ ಸುನಿಲ್ರವರು ಒ೦ದೊ೦ದು ರೀತಿಯಲ್ಲಿ ಸರಿಯೆನ್ನಬಹುದು. ಇದರ ಬಗ್ಗೆ ಹೆಚ್ಚಿನ ಮಾಹಿತಿ ಇದ್ದಲ್ಲಿ ತಿಳಿಪಡಿಸಿ.

ಸರ್, ನಿಮ್ಮ ಮಾತಿಗೆ ನನ್ನ ಪೂರ್ಣ ಸಮ್ಮತಿ ಇದೆ . ಅದಕ್ಕೆ ನಾನು ಮೊದಲೇ ಹೇಳಿದ್ದೇನೆ ಯಾವುದನ್ನೂ ಸರ್ವವ್ಯಾಪಿಯಾಗಿ ಒಪ್ಪಿಲ್ಲವೆಂದು . ಬಹುಶ ಸಂತೋಷ್ ಆವರೆಗೆ ನಿಮ್ಮ ಮಾತಿನಿಂದ ಅಸಮಾಧಾನ ವಾಗಬಹುದು .ಆದರು ಸತ್ಯವನ್ನು ಒಪ್ಪಿಕೊಳ್ಳುವ ಗುಣ ಅವರಲ್ಲಿದೆ ವೆನಿಸುತ್ತದೆ