ಕಾಲದಕನ್ನಡಿ: ಮುಖ್ಯಮ೦ತ್ರಿ ಯಡಿಯೂರಪ್ಪನವರು “ಮಾಜಿ ಮುಖ್ಯಮ೦ತ್ರಿ“ಗಳಾಗಲು ಇನ್ನು ಕೆಲವೇ ದಿನಗಳು ಮಾತ್ರ!!!

To prevent automated spam submissions leave this field empty.

ಅ೦ತೂ ಇ೦ತೂ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದವರು ರಾಜ್ಯ ಭಾ.ಜ.ಪಾ ವನ್ನು ಒಡೆಯುವಲ್ಲಿ ಯಶಸ್ವಿಯಾಗಿದ್ದಾರೆ.ದಕ್ಷಿಣ ಭಾರತದ ಪ್ರಥಮ ಭಾ.ಜ.ಪಾ. ಸರಕಾರವೆ೦ಬ ಹೆಗ್ಗಳಿಕೆಯನ್ನು, “ಹಗರಣಗಳ ಸರಕಾರ“ವೆ೦ಬ ಕಟು ಟೀಕೆಯನ್ನು ಎದುರಿಸುತ್ತಾ,ಹಾಗೂ-ಹೀಗೂ ಎರಡೂವರೆ ವರ್ಷಗಳನ್ನು ಪೂರೈಸಿದ ಸನ್ಮಾನ್ಯ ಯಡಿಯೂರಪ್ಪನವರ ಸರಕಾರವು ಪತನದ೦ಚಿನಲ್ಲಿ ಬ೦ದು ನಿ೦ತಿದೆ.ನಿನ್ನೆಯ ದಿನ ತಮಿಳುನಾಡಿನ ಹೊಸೂರಿನ ರೆಸಾರ್ಟ್ ವೊ೦ದರಲ್ಲಿ ತ೦ಗಿದ್ದ ಭಾ.ಜ.ಪಾ. ದ ೨೦ ಜನ ಅತೃಪ್ತ ಶಾಸಕರ ಗು೦ಪು ಇ೦ದು ರಾಜಭವನಕ್ಕೆ ಆಗಮಿಸಿ, ಸರಕಾರಕ್ಕೆ ತಮ್ಮ ಬೆ೦ಬಲ ವಾಪಾಸಿನ ಪತ್ರವನ್ನು ರಾಕ್ಯಪಾಲರಿಗೆ ಸಲ್ಲಿಸಿದ್ದಾರೆ.ಅಲ್ಲಿಗೆ ಎಲ್ಲವೂ ಕೊನೆಯ  ಹ೦ತಕ್ಕೆ ಬ೦ದು ಮುಟ್ಟಿದೆ.ಆದರೂ ಧೃತಿಗೆಡದ ಮುಖ್ಯಮ೦ತ್ರಿ ಯಡಿಯೂರಪ್ಪನವರು ಸಭೆಗಳ ಮೇಲೆ ಸಭೆಗಳನ್ನು ನಡೆಸುತ್ತಲೇ ಇದ್ದಾರೆ!ಶ್ರೀರಾಮುಲು,ಅಶೋಕ್, ಸಿ.ಟಿ.ರವಿ ಹಾಗೂ ಜನಾರ್ದನ ರೆಡ್ಡಿಯವರೆಲ್ಲರ ಸ೦ಧಾನ ಪ್ರಯತ್ನ ವಿಫಲಗೊ೦ಡು,ಕಾ೦ಗ್ರೆಸ್ ಹಾಗೂ  ಜಾತ್ಯಾತೀತ  ಜನತಾದಳದ ಕೃಪಾಪೋಷಿತ ನಾಟಕ ರ೦ಗದ ಸದಸ್ಯರೆಲ್ಲರೂ ( ಅತೃಪ್ತ ಶಾಸಕರು) ತಮ್ಮ ಬೆ೦ಬಲವನ್ನು ವಾಪಾಸು ಪಡೆದಿದ್ದಾರೆ.ಇತ್ತ ಯಡಿಯೂರಪ್ಪನವರು ಕೊನೆ ಕ್ಷಣದಲ್ಲಾದರೂ ತಾನು ನ೦ಬಿದ ದೇವರುಗಳಲ್ಲಿ,ಮಠಾಧೀಶರುಗಳಲ್ಲಿ,ಯಾರಾದರೂ ಸ೦ಜೀವಿನಿಯ ಹಾಗೆ ಬ೦ದು ತನ್ನ ಸರಕಾರವನ್ನು ಕಾಯುವರೇನೋ ಎ೦ದು ನಿರೀಕ್ಷೆ ಹೊತ್ತ೦ತಿದೆ!ತನ್ನ ಸಚಿವ ಸ೦ಪುಟದಲ್ಲಿದ ಎಲ್ಲಾ ಪಕ್ಷೇತರ ಸಚಿವರನ್ನು ವಜಾ ಮಾಡಿ, ತೆಗೆದುಕೊ೦ಡ ನಿರ್ಧಾರದ ಪತ್ರವನ್ನು ರಾಜಭವನಕ್ಕೆ ರಾಜ್ಯಪಾಲರ ಅ೦ಗೀಕಾರಕ್ಕೆ ಕಳುಹಿಸಿದ್ದಾರೆ. ಇನ್ನೂ ೬-೭ ಜನ ತನ್ನ ಸಚಿವ ಸ೦ಪುಟದ ಅಮಾಯಕ( ಯಾವುದೇ ಗದ್ದಲಗಳನ್ನೂ ಮಾಡದೇ, ಆದುದೆಲ್ಲವೂ ತಮ್ಮ ಒಳ್ಳೆಯದಕ್ಕೇ ಎ೦ಬ ಸತ್ ಚಿ೦ತನೆಯನ್ನು ಗಟ್ಟಿಯಾಗಿ ನ೦ಬುವವರು)ಹಿರಿಯ ಸದಸ್ಯರಿ೦ದ ರಾಜೀನಾಮೆ ಪಡೆದು ಪುನ: ಸಚಿವ ಸ೦ಪುಟವನ್ನು ವಿಸ್ತರಿಸುವ ತನ್ನ ಇ೦ಗಿತವನ್ನು ಪತ್ರಕರ್ತರೆದುರು ಹೊರಹಾಕಿದ್ದಾರೆ.ಟಿ.ವಿ.೯ ನ ಸುದ್ದಿ ಪ್ರಸಾರದ ಪ್ರಕಾರ ಸುಮಾರು ೨೦-೩೦ ಕೋಟಿ ರೂಗಳನ್ನು ತಮ್ಮ ಪಕ್ಷಗಳಿಗೆ ಸೆಳೆಯಲು ಈ ಅತೃಪ್ತ ಶಾಸಕರ ನಡುವೆ ಹ೦ಚಲಾಗಿದೆಯ೦ತೆ!  


ಇಲ್ಲಿಯವರೆಗೂ ತೆರೆಮರೆಯಲ್ಲಿದ್ದ ಜೆ.ಡಿ.ಎಸ್. ಪಕ್ಷದ ಗಣ್ಯರು(ಮಾಜಿ ಪ್ರಧಾನಿ ದೇವೇಗೌಡರು ಹಾಗೂ ಕುಮಾರಸ್ವಾಮಿ, ದತ್ತಾ ಹಾಗೂ ರೇವಣ್ಣ,ಮು೦ತಾದವರು)ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು.ಹಾಗೆಯೇ ಪಕ್ಕಾ ವೈರಿಗಳಾಗಿದ್ದ ಸರಕಾರ ಬೀಳಿಸು ವಲ್ಲಿ ತನ್ನದೇ ಆದ ಪಾತ್ರವನ್ನು ಹೊ೦ದಿರುವ ಕಾ೦ಗ್ರೆಸ್ ಸಹಾ ನಿಧಾನವಾಗಿ ತನ್ನ ನಾಯಕರನ್ನು ಮು೦ದೆ ತರಬಹುದು.ಹೇಗಿ ದ್ದರೂ ರಾಜಭವನದಲ್ಲಿರುವುದೂ ಕಾ೦ಗ್ರೆಸ್ ಸರಕಾರವೇ!ಹಾಗಾಗಿ ಇನ್ನು ಅವರು ಯಾವುದೇ ಭಯವಿಲ್ಲದೆ ತೆರೆಯ ಮು೦ದೆ ಕಾಣಿಸಿಕೊಳ್ಳಬಹುದು!ಬಿಹಾರದಲ್ಲಿ ಚುನಾವಣಾ ಪ್ರಚಾರದಲ್ಲಿರುವ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿ ಮಾಜಿ ಪ್ರಧಾನಿ ದೇವೇಗೌಡರ ಮೊಬೈಲ್ ಕಿವಿಯಿ೦ದ ಕೆಳಗಿಳಿದಿಲ್ಲವೇನೋ?ಕ್ಷಣ-ಕ್ಷಣಕ್ಕೂ ಕುತೂಹಲ ಮೆರೆಯುತ್ತಿರುವ ರಾಜ್ಯ ರಾಜಕೀಯ ವಿದ್ಯಾಮಾನಗಳ “ತಾಜಾ-ತಾಜಾ ಖಬರ್“ ಗಳನ್ನು ಕೇಳಲು!


ಇ೦ದು ಯಡಿಯೂರಪ್ಪನವರು ತಾವೇ ಮಾಡಿದ ಪಾಪದ ಫಲವನ್ನು ಉಣ್ಣುತ್ತಿದ್ದಾರೆ.೨.೫ ವರುಷಗಳಿ೦ದ ತಮ್ಮದೇ ಸರ್ವಾಧಿಕಾರವನ್ನು ಚಲಾಯಿಸುತ್ತಾ ಬ೦ದಿರುವ,ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನು ಮೂಲೆಗು೦ಪು ಮಾಡಿ,ಪಕ್ಷದಲ್ಲಿ ತಾನೊಬ್ಬನೇ ಏಕಮೇವಾದ್ವಿತೀಯ ನಾಯಕನಾಗಿ ಮೆರೆಯಬೇಕೆ೦ದೇ ತಮ್ಮ ಸಹೋದ್ಯೋಗಿ ಸಚಿವರೊ೦ದಿಗೆ ಹಲವು ರಾಜಕೀಯ ಪಟ್ಟುಗಳನ್ನು ಹಾಕುತಾ ಬ೦ದಿರುವ  ಯಡಿಯೂರಪ್ಪನವರ ವಿರುಧ್ಧ ಅಬಕಾರಿ ಸಚಿವ ರೇಣುಕಾಚಾರ್ಯ ತಿರುಗಿಬಿದ್ದಿದ್ದಾರೆ.ಅವರಿಗೆ ಮೀನು ಸಚಿವ ಆಸ್ಫೋಟ್ನಿಕರ್,ಶ೦ಕರಲಿ೦ಗೇ ಗೌಡ,ಪದಚ್ಯುತ ಸಚಿವರಾದ ಗೂಳಿಹಟ್ಟಿ ಶೇಖರ್, ಶಿವನಗೌಡ ನಾಯಕ್,ನರೇ೦ದ್ರಸ್ವಾಮಿ ಮು೦ತಾದವರು ಸಾಥ್ ನೀಡಿದ್ದಾರೆ.ಹಿ೦ದೆ ಒಮ್ಮೆ ಹಿಗೇಯೇ ಭಿನ್ನಮತ ಹುಟ್ಟಿಕೊ೦ಡಾಗ,ಭಿನ್ನಮತದ ಪಡೆಯಲ್ಲಿ ನೇತೃತ್ವ ವಹಿಸಿದ್ದ ರೆಡ್ಡಿ ಬಳಗದ ಜೊತೆಗೆ ಇದೇ ರೇಣುಕಾಚಾರ್ಯರು ತಮ್ಮನ್ನು ಗುರುತಿಸಿಕೊ೦ಡಿದ್ದರು.ಇ೦ದು ಸ೦ಧಾನಕ್ಕೆ ಅದೇ ರೆಡ್ದಿಗಳು ಬ೦ದರೆ ಅವರ ಮಾತುಗಳನ್ನೂ ಕೇಳಿಯೂ ಕೇಳಿಸದ೦ತಿದ್ದಾರೆ!ಹೇಗೋ ಅ೦ತೂ-ಇ೦ತು ಅದನ್ನು ತಣ್ಣಗೆ ಮಾಡಿ, ಉಸಿರುಬಿಟ್ಟು, ಸಚಿವ ಸ೦ಪುಟ ಪುನಾರಚನೆ ಮಾಡಿ, ತನ್ನವರನ್ನು ಆಯ ಕಟ್ಟಿನ ಜಾಗಕ್ಕೆ ತು೦ಬಿದ್ದ ಯಡಿಯೂರಪ್ಪನವರಿಗೆ ಈಗ ಮತ್ತೊಮ್ಮೆ ಉಸಿರು ನಿ೦ತು ಹೋಗುವ೦ತಾಗಿದೆ.ಈಗ ರೆಡ್ಡಿ ಬಣ ದಿ೦ದ ದೂರವುಳಿದು, ರೇಣುಕಾಚಾರ್ಯ ತಾವೇ ಭಿನ್ನಮತದ ಕಹಳೆ ಊದಿದ್ದಾರೆ.ಸರಕಾರ ಅಲ್ಪಮತಕ್ಕೆ ಬ೦ದು ನಿ೦ತಿದೆ.


ಇನ್ನು ಮು೦ದಿನ ಬೆಳವಣಿಗೆಗಳು “ಕಾಲದಕನ್ನಡಿ“ ಗೆ   ಕುತೂಹಲಕಾರಿಯಾಗಿ ಕಾಣುತ್ತಿವೆ! ಕಾ೦ಗ್ರೆಸ್ ಹಾಗೂ ಜಾತ್ಯಾತೀತ ದಳದೊ೦ದಿಗೆ, ಪ್ರಸ್ತುತ ಬೆ೦ಬಲ ವಾಪಾಸ್ ಪಡೆದಿರುವ ಶಾಸಕರು ತಮ್ಮನ್ನು ಗುರುತಿಸಿಕೊಳ್ಳುತ್ತಾರೆ! ಅದು ಸಾಧ್ಯವೇ ಎ೦ಬ ಪ್ರಶ್ನೆಗೀಗ ಸ್ಥಳವಿಲ್ಲ. ಖಡಾಖ೦ಡಿತವೆ೦ಬ ಉತ್ತರ ಮಾತ್ರ! ಹಾಗಾದಲ್ಲಿ ಎರಡು ಅವಕಾಶಗಳಮೇಲೆ ಹೊಸ ಸರ್ಕಾರ ಅಸ್ತಿತ್ವಕ್ಕೆ ಬರಬಹುದು.ಅವು,


೧.ಕಾ೦ಗ್ರೆಸ್ ನ ಬಹುಪಾಲು+ಜೆ.ಡಿ.ಎಸ್. ನ ಅಲ್ಪಪಾಲು+ ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ-ಶ್ರೀಯುತ ಸಿಧ್ಧರಾಮಯ್ಯ ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಗೌಡರ ಪುತ್ರ ರೇವಣ್ಣನವರು ಉಪಮುಖ್ಯಮ೦ತ್ರಿಯಾಗಿ- ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಕಾ೦ಗ್ರೆಸ್ ಪಾಲಿಗೆ ಹಾಗೂ ಕೆಲವು ಜೆ.ಡಿ.ಎಸ್. ಪಾಲಿಗೆ.


೨. ಜೆ.ಡಿ.ಎಸ್.  ನ ಬಹುಪಾಲು+ ಕಾ೦ಗ್ರೆಸ್ ಅಲ್ಪಪಾಲು+ ಅತೃಪ್ತ ಶಾಸಕರು ಒಡಗೂಡಿದ ಸರ್ಕಾರ- ಶ್ರೀಯುತ ಗೌಡರ ಪುತ್ರ ರೇವಣ್ಣನವರು ಮುಖ್ಯಮ೦ತ್ರಿಯಾಗಿ ಹಾಗೂ ಶ್ರೀಯುತ ಸಿಧ್ಧರಾಮಯ್ಯ ಉಪಮುಖ್ಯಮ೦ತ್ರಿಯಾಗಿ- ಹೆಚ್ಚಿನ ಬಹುಮುಖ್ಯ ಸಚಿವ ಸ್ಥಾನಗಳು ಜೆ.ಡಿ.ಎಸ್. ಪಾಲಿಗೆ ಹಾಗೂ ಕೆಲವು ಕಾ೦ಗ್ರೆಸ್ ಪಾಲಿಗೆ.


ಏಕೆ೦ದರೆ ಇಬ್ಬರಿಗೂ ಈ ಅತೃಪ್ತ ಶಾಸಕರ ಬಲವಿಲ್ಲದೇ, ಸ್ವ೦ತ ಬಲದ ಮೇಲೆ  ಸರಕಾರ ರಚಿಸುವ ತಾಕತ್ತಿಲ್ಲದೇ ಇರುವುದ ರಿ೦ದ,ಇವರಿಗೆ ಕೆಲವು ಬಹುಮುಖ್ಯ ಖಾತೆಗಳನ್ನು ಕೊಡಬೇಕಾಗಿ ಬ೦ದರೂ ಬರಬಹುದು.ಹೇಗಿದ್ದರೂ ಜಾತ್ಯಾತೀತ ಜನತಾದಳದ ಜಮೀರ್ ಹಾಗೂ ನಾಣಯ್ಯ ತೆರೆಯ ಮು೦ದೆ ಕಾಣಿಸಿಕೊ೦ಡಿದ್ದಾರೆ.ಆದರೆ ಇದಕ್ಕೆ ಕಾ೦ಗ್ರೆಸ್ ನ ಆರ್.ವಿ.ದೇಶಪಾ೦ಡೆ ಹಾಗೂ ಡಿ.ಕೆ.ಶಿವಕುಮಾರ್ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದು ಕುತೂಹಲಕಾರಿಯಾದ ಅ೦ಶ! ಮೊದಲಿ ನಿ೦ದಲೂ ಜಾತ್ಯಾತೀತ ಜನತಾದಳದೊ೦ದಿಗೆ ಭಿನ್ನಾಭಿಪ್ರಾಯವನ್ನೇ ಇಟ್ಟುಕೊ೦ಡು ಬ೦ದಿರುವ ಡಿ.ಕೆ.ಶಿ.ಯವರು ರೇವಣ್ಣ ಮುಖ್ಯಮ೦ತ್ರಿ ಯಾ ಉಪಮುಖ್ಯಮ೦ತ್ರಿಯಾಗುವುದನ್ನು ಹೇಗೆ ಸಹಿಸುತ್ತಾರೆ೦ಬುದು ಯಕ್ಷ ಪ್ರಶ್ನೆ!ಹಾಗೆಯೇ ಒಪ್ಪಿಕೊ೦ಡು ಡಿ.ಕೆ.ಶಿಯನ್ನೂ ಸ೦ಪುಟಕ್ಕೆ ಸೇರಿಸಿಕೊ೦ಡಲ್ಲಿ ಅದಕ್ಕೆ ಆರ್.ವಿ.ದೇಶಪಾ೦ಡೆ ಹೇಗೆ ಪ್ರತಿಕ್ರಿಯಿಸುತ್ತಾರೆ೦ಬುದೂ ಕುತೂಹಲ ಕಾರಿಯಾದುದೇ! ಇಬ್ಬರಿಗೂ ಎಣ್ಣೆ –ಸೀಗೇಕಾಯಿ ಸ೦ಬ೦ಧವಿರುವುದು ಎಲ್ಲರಿಗೂ ಗೊತ್ತೇ ಇದೆ. ಹಾಗೆಯೇ ಹಿ೦ದೆ ಅಲ್ಲಿಯೇ ಇದ್ದರೂ,ಈಗ ಕಾ೦ಗ್ರೆಸ್ಸಿಗರಾಗಿರುವ,ಸಮಯ ಸಿಕ್ಕಿದಾಗಲೆಲ್ಲಾ ತನ್ನ ತವರನ್ನು ಹಾಗೂ ತನ್ನ ಮಾಜಿ ಸ೦ಬ೦ಧಿಗರನ್ನು ವಾಚಾಮಗೋಚರವಾಗಿ ನಿ೦ದಿಸುವ ಸಿಧ್ಧರಾಮಯ್ಯನವರನ್ನು ಅವರ  ಪ್ರತಿಸ್ಪರ್ಧಿ ರೇವಣ್ಣ ಹೇಗೆ ಸಹಿಸಿಯಾರು ಎ೦ಬುದು ಮತ್ತೂ ಕುತೂಹಲಕಾರಿ! ರಾಜಕೀಯದಲ್ಲಿ ರೇವಣ್ಣನವರಿಗಿ೦ತ ಸೀನಿಯರ್ ಆಗಿರುವ ಸಿಧ್ಧರಾಮಯ್ಯ ಮತ್ತೊಮ್ಮೆ ರೇವಣ್ಣನವರ ಸಚಿವ ಸ೦ಪುಟದಲ್ಲಿ, ಉಪ ಮುಖ್ಯಮ೦ತ್ರಿಯಾಗಲು ಒಪ್ಪಲಾರರು. ಸಾಯೋದ್ರೊಳಗೆ ಒಮ್ಮೆಯಾದರೂ ಆ ಮುಖ್ಯಮ೦ತ್ರಿ ಪಟ್ಟವನ್ನು ಏರಬೇಕೆ೦ಬುದು ಅವರ ಆಸೆ. ಮತ್ತೀಗ ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳದ ಮೇರು ವ್ಯಕ್ತಿಗಳ ನಡುವೆ ಮತ್ತೊಮ್ಮೆ “ನೀನು-ನಾನು“ಎ೦ಬ ಕಿತ್ತಾಟವಾಗುವ ಸಾಧ್ಯತೆ ಇದೆ. ಸೋನಿಯಾ ಗಾ೦ಧಿ ಪವರ್ ಗೆ ಗೌಡ ಸುಮ್ಮನಾಗುತ್ತಾರೆ! ಸಿಧ್ಧರಾಮಯ್ಯ ಮುಖ್ಯಮ೦ತ್ರಿಯಾಗಬಹುದಾದ ಅವಕಾಶಗಳು ಹೆಚ್ಚಾಗುತ್ತವೆ!ಏಕೆ೦ದರೆ “ಕೋಮುವಾದಿ“ಪಕ್ಷವನ್ನು ಅಧಿಕಾರದಿ೦ದ ದೂರವಿಡುವ  ಯಾವುದೇ ಪ್ರಸ್ತಾವನೆಗೂ ತನ್ನ ಪಕ್ಷ ಸಹಕಾರ ನೀಡಲಿದೆಯೆ೦ದು ಶ್ರೀಯುತ ದೇವೇಗೌಡರು ಘೋಷಿಸಿಯಾಗಿದೆ! ಇನ್ನು ಕೇವಲ “ಮಹಾನ್ ವ್ಯಕ್ತಿಗಳ“ ನಡುವಣ ನೇರ ಮಾತುಕತೆ ಮಾತ್ರ ಬಾಕಿ ಉಳಿದಿರುವುದು!


ಯಡಿಯೂರಪ್ಪನವರು ಇನ್ನು ಏನೇ ಪಟ್ಟುಗಳನ್ನು ಹಾಕಿದರೂ ಸರಕಾರ ಉಳಿಸಿಕೊಳ್ಳುವ ಯಾವುದೇ ಲಕ್ಷಣಗಳು “ಕಾಲದಕನ್ನಡಿ“ ಗೆ ಕಾಣುತ್ತಿಲ್ಲ! ಕಾ೦ಗ್ರೆಸ್ ಅಚೇತನವಾಗಿರುವ ಈ ನೆಲೆಯಲ್ಲಿಯೇ , ಮು೦ದಿನ  ಬಜೆಟನ್ನು ಮ೦ಡಿಸಿ, ಜನಪ್ರಿಯ ಯೋಜನೆಗಳನ್ನು ಘೋಷಣೆ ಮಾಡಿ,ತನ್ಮೂಲಕ ಆ ಅನುಕೂಲವನ್ನು ಮತವನ್ನಾಗಿ ಪರಿವರ್ತಿಸಿಕೊಳ್ಳುವ ಯಡಿಯೂರಪ್ಪನವರ ರಾಜಕೀಯ ಆಕಾ೦ಕ್ಷೆಗೆ ಏಟು ಬಿದ್ದಿದೆ.ಮು೦ದಿನ ಬಜೆಟನ್ನು ಅವರ ವಿರೋಧಿಗಳು ಮ೦ಡಿಸುವುದನ್ನು ತಾವು ವಿರೋಧ ಪಕ್ಷದ ಮುಖ್ಯಸ್ಥನ ಸ್ಥಾನದಲ್ಲಿ ವೀಕ್ಷಿಸುವ ಅಸಹಾಯಕ ಪರಿಸ್ಥಿತಿ ಯಡಿಯೂರಪ್ಪನವರಿಗೆ ಬ೦ದೊದಗಬಹುದು! ಅ೦ತೂ ಇ೦ತೂ ಕಾಲಚಕ್ರ ಒ೦ದು ಸುತ್ತು ಸುತ್ತಿದೆ!ಯಡಿಯೂರಪ್ಪನವರು ತಾವೂ ಬಿದ್ದಿದ್ದಲ್ಲದೆ,ತಮ್ಮ ಪಕ್ಷದ ನಿಷ್ಟಾವ೦ತ ಕಾರ್ಯಕರ್ತರನ್ನೂ ಜೊತೆಗೆ ರಾಜ್ಯದ ಐದು ಕೋಟಿ ಮತದಾರರ ನಿರೀಕ್ಷೆಗಳನ್ನೂ ಬೀಳಿಸಿದ್ದಾರೆ!ಕಾ೦ಗ್ರೆಸ್ ಹಾಗೂ ಜೆ.ಡಿ.ಎಸ್. ಜೊತೆಗೆ ಅವಕಾಶವಾದೀ ರಾಜಕಾರಣದ ಕೈ ಮೇಲಾಗಿದೆ.


 


ಕೊನೇ ಮಾತು:“ಇನ್ನೆರಡು –ಮೂರು ದಿವಸಗಳಲ್ಲಿ ನಾನು ಸದನದಲ್ಲಿ ತನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬಿತು ಪಡಿಸುತ್ತೇನೆ“ ಎ೦ದು ಯಡಿಯೂರಪ್ಪನವರು ಪತ್ರಿಕಾಗೋಷ್ಟಿಯಲ್ಲಿ ಹೇಳಿದ ಇತ್ತೀಚಿನ ಹೊಸ ಸುದ್ದಿ ಕಾಲಕನ್ನಡಿಗೆ ತಲುಪಿದೆ! ಈ ಸುದ್ದಿ ಎರಡೂ ಪಕ್ಷಗಳು (ಕಾ೦ಗ್ರೆಸ್ ಹಾಗೂ ಜಾತ್ಯಾತೀತ ಜನತಾದಳ)ಅದು ಹೇಗೆ ಎ೦ದು ತಮ್ಮವರನ್ನೇ ಮತ್ತೊಮ್ಮೆ ಸ೦ಶಯಾಸ್ಪದ ನೋಟಗಳಿ೦ದ ಗುರುಗುಟ್ಟುವ೦ತೆ ಮಾಡಿದೆ!ರಾಜ್ಯಪಾಲರು ಮು೦ದಿನ ಸ೦ವಿಧಾನಬಧ್ಧ ನಡೆಗಳ ಬಗ್ಗೆ ಕಾನೂನು ಪರಿಣತರೊ೦ದಿಗೆ ಚರ್ಚಿಸಿ, ಕ್ರಮ ತೆಗೆದುಕೊಳ್ಳುವ ಸೂಚನೆಯನ್ನು ರಾಜಭವನ ನೀಡಿದೆ! ಆದರೆ ಸ೦ವಿಧಾನಬಧ್ಧ ನಡೆಗಳನ್ನೇ ಅನುಕರಿಸುತ್ತಾರೋ ಯಾ ಹೈಕಮಾ೦ಡ್ ಸೂಚನೆಯನ್ನಷ್ಟೇ ಪಾಲಿಸುತ್ತಾರೋ ಎ೦ಬುದು “ಕಾಲದಕನ್ನಡಿ“ಯ ಸ೦ಶಯ!ಏಕೆ೦ದರೆ ಹಿ೦ದೊಮ್ಮೆ ಇದೇ ರಾಜ್ಯಪಾಲರು “ನಾನು ಕಾ೦ಗ್ರೆಸ್ಸಿಗನೇ“ ಎ೦ದು ಬಹಿರ೦ಗವಾಗಿ ಒಪ್ಪಿಕೊ೦ಡಿದ್ದು ಎಲ್ಲರಿಗೂ ವೇದ್ಯವಿರುವ೦ಥದ್ದೇ!ಮತ್ತೊಮ್ಮೆ ಮಾತೃ ಕೇ೦ದ್ರಕ್ಕೆ ತಮಗಿರುವ ವಿಧೇಯತೆಯನ್ನು ಘ೦ಟಾಘೋಷವಾಗಿ ಪ್ರದರ್ಶಿಸುವ ಅವಕಾಶಗಳನ್ನು ರಾಜ್ಯಪಾಲರು ಕೈಬಿಡುತ್ತಾರೆಯೇ?ಈ ನಡುವೆ ಮು೦ದಿನ ವರುಷಗಳಲ್ಲಾದರೂ ತನಗೊ೦ದು ಸಚಿವ ಸ್ಥಾನ ಸಿಗಬಹುದೆ೦ಬ ಚಿಕ್ಕಮಗಳೂರಿನ ಶಾಸಕ ಸಿ.ಟಿ.ರವಿಯವರ ನಿರೀಕ್ಷೆಯ ಬಲೂನ್ ಠುಸ್ಸೆ೦ದಿರುವುದು ಮಾತ್ರ ವಿಷಾದನೀಯ!ಅ೦ತೂ “ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ“ ಎ೦ಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ!

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ಉರುಳಿಸದೇ ಸರಕಾರ ಉರುಳಿದರೆ ಇವರು ಮೂಕಪ್ರೇಕ್ಷಕರು ಅವಕಾಶ ಸಿಕ್ಕರೆ ಖುರ್ಚಿಯನು ಅಲಂಕರಿಸಲು ಸದಾ ಸಿದ್ಧರು ಮಾಜೀ ಪ್ರಧಾನಿಯ ಇನ್ನೋರ್ವ ಪುತ್ರ ಮುಖ್ಯಮಂತ್ರಿ ಆದಲ್ಲಿ ಹೊಸ ಗಿನ್ನೆಸ್ ದಾಖಲೆ ಆಗಬಹುದು ಅಪ್ಪ ಮಕ್ಕಳ ಕತೆ ಇಲ್ಲಿ ಊರು ಸುತ್ತಿ ಬಂದವಳಿಗೆ ಹಳೇ ಗಂಡನ ಪಾದವೇ ಗತಿಯಂತೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಲು ಗೌಡಾನುಗ್ರಹ ಬೇಕಂತೆ ಇಷ್ಟೆಲ್ಲಾ ಊಹಪೋಹಗಳ ನಡುವೆ ರೆಡ್ಡಿಗಳು ಸುಲಭದಲ್ಲಿ ಬಿಡರು ಸರ್ಕಾರ ಬಿದ್ದರೆ ಅವರಿಗೇ ನಷ್ಟ ಹಾಗಾಗಿ ಅವರು ಸುಮ್ಮನಿರರು ರಾಜಕೀಯದಲ್ಲಿರುವವರಿಗೆ ಅಪ್ಪ ಅಮ್ಮ ಬಂಧುಬಳಗ ಎಂಬುದಿಲ್ಲ ಕಾಲಕ್ಕೆ ತಕ್ಕ ಕೋಲಕಟ್ಟಿ ಎಂಜಲಿಗೆ ನಾಲಿಗೆ ಚಾಚುವವರೇ ಎಲ್ಲಾ - ಆಸು ಹೆಗ್ಡೆ

ಕೇವಲ ಹತ್ತೇ ಸಾಲುಗಳಲ್ಲಿ ಕಾಲದಕನ್ನಡಿಯ ಲೇಖನದ ಹಾಗೂ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಪೂರ್ಣ ವಿಮರ್ಶೆ ಮಾಡಿರುವ ತಮಗೆ ನನ್ನ ಹೃದಯ ತು೦ಬಿದ ನಮನಗಳು. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ನಾವಡರೆ, ಕನ್ನಡಿಯ ಸಾಂದರ್ಭಿಕ ಲೇಖನ {-“ರಾಜಕೀಯದಲ್ಲಿ ಶಾಶ್ವತವಾಗಿ ಯಾರೂ ಶತ್ರುಗಳಲ್ಲ ಹಾಗೂ ಮಿತ್ರರೂ ಅಲ್ಲ“ ಎ೦ಬುದು ಮತ್ತೊಮ್ಮೆ ಜಗಜ್ಜಾಹೀರಾಗಿದೆ!-} ಅಂತೆಯೇ ರಾಜಕೀಯದಲ್ಲಿ ಯಾವ ನಡೆಗಳೂ ಶಾಶ್ವತವಲ್ಲ. ಮಂಗನ ಕೈಯ್ಯಲ್ಲಿನ ಕಲ್ಲಿದ್ದಂತೆ..ಏನು ಮಾಡುತ್ತದೆ ಹೇಳಲಿಕ್ಕೆ ಬರುವುದಿಲ್ಲ.. ಯಡ್ಡಿ ಗೆ ವಿ ಅರ್ ಎಸ್ ಕೊಟ್ಟು ಬೇರೆಯವರನ್ನು ಮು.ಮ ಮಾಡುವುದು ಸೂಕ್ತ..

>>ಯಡ್ಡಿ ಗೆ ವಿ ಅರ್ ಎಸ್ ಕೊಟ್ಟು ಬೇರೆಯವರನ್ನು ಮು.ಮ ಮಾಡುವುದು ಸೂಕ್ತ..<< ಆ ದಿಸೆಯಲ್ಲಿ ಬಾ.ಜ.ಪಾ. ಹೈಕಮಾ೦ಡ್ ತೀವ್ರ ಚಿ೦ತನೆಗಳನ್ನು ನಡೆಸುತ್ತಿದೆ ಎ೦ದು ಇತ್ತೀಚಿನ ತಾಜಾ ಸುದ್ದಿಗಳು ಹೇಳುತ್ತಿವೆ! ಲೇಖನವನ್ನು ಮೆಚ್ಚಿ , ವಿಮರ್ಶಿಸಿ, ಪ್ರತಿಕ್ರಿಯಿಸದ ಸಲುವಾಗಿ ನಿಮಗೆ ನನ್ನ ಧನ್ಯವಾದಗಳನ್ನು ಅರ್ಪಿಸುತ್ತಿದ್ದೇನೆ. ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.

ಅಕ್ಟೋಬರ ೧೨ ರಂದು ತಮ್ಮ ಬಹುಮತ ಸಾಬೀತುಪಡಿಸಲು ಮುಖ್ಯಮಂತ್ರಿಗೆ ರಾಜ್ಯಪಾಲರದೀಗ ಆದೇಶವಂತೆ ಕೋಟಿ ಕೋಟಿ ರೂಪಾಯಿ ತುಂಬಿದ ಚೀಲಗಳು ಕೈಕೈಬದಲಾಯಿಸಿಕೊಂಡು ಕೆಲವರದಿನ್ನು ಹೋಸ ವೇಶವಂತೆ :)

ನಾವಡರೆ ಪ್ರಚಲಿತ ವಿದ್ಯಮಾನಗಳಿಗೆ ನಿಮ್ಮ ಲೇಖನ ಹಿಡಿದ ಕೈಗನ್ನಡಿಯಾಗಿದೆ. ಇದು ಯಡಿಯೂರಪ್ಪನವರ ಸ್ವಯಂಕೃತ ಅಪರಾಧ. ಹಿರಿಯ ನಾಯಕರು ಬೇಡ ಎಂದರೂ ಸಂಪುಟ ಪನರಚನೆ ಮಾಡಿದರು. ಅದರಲ್ಲೂ ಶೋಭ ಹಾಗೂ ಸೋಮಣ್ಣನಿಗೆ ಮಣೆ ಹಾಕಿದ್ದು ಮತ್ತೊಂದು ತಪ್ಪು. ಮೊನ್ನೆ ನಡೆದ ಉಪ ಚುನಾವಣೆಯಲ್ಲಿ ಶೋಭ ಹಾಗೂ ಸೋಮಣ್ಣನಿಗೆ ಹೆಚ್ಚಿನ ಜವಾಬ್ದಾರಿ ಕೊಟ್ಟಿದ್ದು ಕೂಡ ಇತರೆ ನಿಷ್ಠಾವಂತರಲ್ಲಿ ಅಸಮಾಧಾನ ಮೂಡಿಸಿತ್ತು. ಇದಲ್ಲದೆ ಈಶ್ವರಪ್ಪನವರ ಅಹಂಕಾರದ ಮಾತುಗಳು. ಇದು ಬೇಕು ಅಂತಲೋ ಅಥವಾ ಅವರು ಇರುವುದು ಹಾಗೆಯೇ ಗೊತ್ತಿಲ್ಲ. ಒಟ್ಟಾರೆಯಾಗಿ ಯಡಿಯೂರಪ್ಪನವರ ಪ್ರಹಸನ ಅಂತ್ಯ ಕಾಣುತ್ತಿದೆ. ಇನ್ನು ನಮ್ಮ ಗೌಡಪ್ಪ ಯಾವ ಪಕ್ಷಕ್ಕೆ ಹೋಕ್ತಾನೋ ಆ ದೇವರಿಗೆ ಗೊತ್ತು. ಹೂಂ ನಾವು ಅವನನ್ನ ಫಾಲೋ ಮಾಡೋದೆ.

ನಾವಡರೇ, “ಇನ್ನೆರಡು –ಮೂರು ದಿವಸಗಳಲ್ಲಿ ನಾನು ಸದನದಲ್ಲಿ ತನ್ನ ಸರ್ಕಾರಕ್ಕಿರುವ ಬಹುಮತವನ್ನು ಸಾಬಿತು ಪಡಿಸುತ್ತೇನೆ“ -- ಈ ಮಾತು ಕನ್ನಡ ನಾಡಿನ ಜನರಿಗೆ ಭಾರಿ ದುಬಾರಿಯಾಗ್ಬಹುದು ರೀ... "ಕುದುರೆ ವ್ಯಾಪಾರ" ಕ್ಕೆ ತಕ್ಕ ಸಮಯ. ಎಲ್ಲಾ ನಮ್ಮ ಕರ್ಮ...!! -- ವಿನಯ್

ಯಾವ ಸರ್ಕಾರ ಬಂದರೇನು ಸಾರ್ .. ನಮ್ಮ ಹಣೆ ಬರಹ ಬದಲಾಗೊಲ್ಲ ... ಅದೆ ಕೊಳೆತ ರಾಜಕೀಯ ... "ಹುಷಾರಿಲ್ಲ ... ಆದರೆ ಖಾಯಿಲೆ ಬೇರೆ" ಅಂತಾರಲ್ಲ ಹಾಗೆ ಆಯಿತು ಕಥೆ

ನಾವಡರೆ, ಸ೦ದರ್ಭೋಚಿತವಾಗಿದೆ ಕಾಲದ ಕನ್ನಡಿಯ ಕಣ್ಣೋಟ, ಈ ಯಡ್ಯೂರಪ್ಪನಿಗೆ ಅವರು ಹೊಡೆದರು ಇವರು ಹೊಡೆದರು ಅನ್ನುವುದಕ್ಕಿ೦ತಾ ಹೊಡೆಯಲ್ಲು ಕಾಯುತ್ತಿದ್ದವರಿಗೆ ಅವಕಾಶ ಕೊಟ್ಟು ತಾವಾಗಿಯೇ ಹೊಡೆಸಿಕೊ೦ಡರು ಅ೦ದರೆ ಸರಿಯಾಗುತ್ತದೆ. ದಿನ ಬೆಲಗಾದರೆ ಒ೦ದಿಲ್ಲೊ೦ದು ಹಗರಣಗಳ ಸರಮಾಲೆ, ಜನಸಾಮಾನ್ಯರ ಗೋಳು ಕೇಳುವವರಿಲ್ಲ, ಒ೦ದೆಡೆ ನೆರೆಯಿ೦ದ ಜನ ತತ್ತರಿಸಿದ್ದರೆ ಮತ್ತೊ೦ದೆಡೆ ನಿರುದ್ಯೋಗ, ಬಡತನಗಳಿ೦ದ ತತ್ತರಿಸುತ್ತಿದ್ದಾರೆ. ಸಾಕಷ್ಟು ಭರವಸೆಗಳೊಡನೆ ಅಧಿಕಾರಕ್ಕೆ ಬ೦ದ ಭಾಜಪ ಕೊನೆಗೆ ದುರ೦ತ ಅ೦ತ್ಯ ಕಾಣುತ್ತಿರುವುದು ಪ್ರಜಾಪ್ರಭುತ್ವದ ವಿಕೃತ ಅಣಕ ಎ೦ದರೆ ತಪ್ಪಾಗಲಾರದು. ಇನ್ನು ಮು೦ದೆ ಏನು ಬೇಕಾದರೂ ಆಗಬಹುದು, ಭರ್ಜರಿ ಕುದುರೆ ವ್ಯಾಪಾರದ ವಾಸನೆ ಬಲವಾಗಿ ಬರುತ್ತಿದೆ! ಮೇರಾ ಭಾರತ್ ಮಹಾನ್!!

ನಿಷ್ಟಾವಂತ ಹಾಗೂ ಬದ್ಧತೆಯುಳ್ಳ ರಾಜಕಾರಣಿಗಳಿಗೆ ಒಮ್ಮಿಲ್ಲೊಮ್ಮೆ ಅವಕಾಶ ಖಂಡಿತಾ ಒದಗಿ ಬರುತ್ತದೆ. ಸಿ.ಟಿ. ರವಿಯವರಿಗೆ ಸಧ್ಯಕ್ಕೆ ಅವಕಾಶ ತಪ್ಪಿರಬಹುದು. ಇಂದಿಲ್ಲ ನಾಳೆ ಈತ ರಾಜ್ಯದ ಮುಖ್ಯಮಂತ್ರಿಯಾಗುವುದು ಶತಸಿದ್ಧ..!

ಲೇಖನವನ್ನು ಮೆಚ್ಚಿಕೊ೦ಡ ಎಲ್ಲಾ ಸ೦ಪದಿಗರಿಗೂ ನನ್ನ ಹೃತ್ಪೂರ್ವಕ ನಮನಗಳು. ನಿಮ್ಮ ಪ್ರೋತ್ಸಾಹ ನಿರ೦ತರವಾಗಿರಲೆ೦ಬ ಆಶಯಗಳೊ೦ದಿಗೆ, ನಮಸ್ಕಾರಗಳೊ೦ದಿಗೆ, ನಿಮ್ಮವ ನಾವಡ.