ಭಾರತದಲ್ಲಿ ಮುಸ್ಲಿಮರಿಗೆ ಮನೆಯಿಲ್ಲ

To prevent automated spam submissions leave this field empty.

ದಿನಾಂಕ ೧೬ / ೦೯ / ೨೦೧೦ ರ - ೯ ಗಂಟೆಯ ಸಿ, ಏನ್ , ಏನ್. ಪ್ರೈಮ್  ಟೈಮ್ ನ್ಯೂಸ್ ನೋಡಿ ನಿಜವಾಗಲು ಗಾಬರಿಯಾಯ್ತು, ಅಲ್ಲ ಈ ಮಾಧ್ಯಮದವರಿಗೆ ಮಾಡಲು ಬೇರೆ ಏನು ಕೆಲಸ ಇಲ್ಲವೇ.

ಇಲ್ಲಿ ರಾಜದೀಪ್ ಸರ್ ದೇಸಾಯಿ ಎಂಬ (ಮೇಡಂ ಬಾಲ) ಮತ್ತೊಂದು ಪ್ರಶಸ್ತಿ ಆಸೆಗಾಗಿ, ಇಂತ ಕೀಲು ವಿಷಯಗಳ ಮೇಲೆ ಸರ್ವೇ ಮಾಡಿಸಿ ಜನರ ಮನಸ್ಥಿತಿ ಬದಲಿಸುವ ಮತ್ತು ಗಮನವನ್ನು ಬೇರೆಡೆಗೆ ಸೆಳೆಯುವ ಕೀಲು ಪ್ರಯತ್ನಮಾಡಿದ್ದೂ .

ನೆಡೆದಿದ್ದೆನೆಂದರೆ ಸಿ, ಏನ್ , ಏನ್ ನ ಒಂದು ತಂಡ ದೇಶದ ಪ್ರಮುಖ ನಗರಗಳಲ್ಲಿ ಸರ್ವೇ ಮಾಡಿ " ಮುಸ್ಲಿಮರಿಗೆ ಮನೆಯಿಲ್ಲ" ಎಂಬ ಶೀರ್ಷಿಕೆಯಡಿ , ಪ್ರೈಮ್ ಟೈಮ್ ನಲ್ಲಿ ಪ್ರಸಾರ ಮಾಡಿದೆ.

ವಿಷಯವೇನೆಂದರೆ ಸರ್ವೇ ತಂಡದವರು (ಏಜೆಂಟ್ ತರ ) ಬಾಡಿಗೆಗೆ ಖಾಲಿ ಇರುವ ಮನೆಗಳಿಗೆ ಹೋಗಿ, ನಮ್ಮ ಮುಸ್ಲಿಂ ಗ್ರಾಹಕರಿಗೆ ಮನೆ ಬಾಡಿಗೆ ಕೊಡುತ್ತೀರಾ ಎಂದು ಕೇಳುವುದು ಮತ್ತು ಆ ಮನೆ ಮಾಲೀಕನ ಅಭಿಪ್ರಾಯವನ್ನು ರೆಕಾರ್ಡ್ ಮಾಡಿ ತೋರಿಸುವುದು.

ಸರ್ವೆಯಲ್ಲಿ ಬಂದ ಗರಿಷ್ಠ ಉತ್ತರಗಳು ನಾವು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡುವುದಿಲ್ಲ, ಇನ್ನು ಒಂದು ಹೆಜ್ಜೆ ಮುಂದೆ ಹೋದ ಸರ್ವೇ ತಂಡವು ಕ್ರಿಶ್ಚಿಯನ್ ಮನೆ ಮಾಲಿಕರನ್ನು ಸಂದರ್ಶಿಸಿ ಅವರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸಿದಾಗ.

" ಬರೀ ಹಿಂದೂಗಳು  ಮಾತ್ರವಲ್ಲ ಕ್ರಿಶ್ಚಿಯನ್ನರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸುತ್ತಿದ್ದಾರೆ ಎಂದು ತನ್ನ oxford ಇಂಗ್ಲಿಷ್ ನಲ್ಲಿ ಬಾರೀ ಬಾರೀ ಕಿರಿಚುತ್ತಿದ್ದರೆ ಈ ರಾಜದೀಪ್ ಗೆ ಒಂದು ಸಣ್ಣ ಕಾಮನ್ ಸೆನ್ಸ್ ಇಲ್ಲದೆ ಇಷ್ಟು ದೊಡ್ಡ ಹುದ್ದೆಗೆ ಹೇಗೆ ಹೋದ  ಅನ್ನೋ ಅನುಮಾನ ಕಾಡುತ್ತದೆ.

ನನಗಿಲ್ಲಿ ಅರ್ಥವಾಗದ ಪ್ರಶ್ನೆಯೆಂದರೆ ಈ ಸರ್ವೇಯನ್ನು ಒಂದು ಪ್ರಮುಖ ವಿಷಯವಾಗಿ ಬಿಂಬಿಸಿದ್ದು.

ಈ ನಮ್ಮ ಬೆಂಗಳೂರಲ್ಲಿ ಕೆಲವೆಡೆ ಹಿಂದುಗಳಿಗೂ ಮನೆ ಕೊಡುವುದಿಲ್ಲ , ಮನೆ ಮಾಲೀಕನ ಷರತ್ತುಗಳ ಸರಮಾಲೆಯೇ ತೆರೆದುಕೊಳ್ಳುತ್ತದೆ.

ಕೆಳಕಂಡ ವಿಷಯಗಳಿಗೆ ಕೆಲವರು ಹಿಂದುಗಳಿಗೂ ಮನೆ ಕೊಡುವುದಿಲ್ಲ.

ಮಾಂಸಾಹಾರ 

ಬ್ಯಾಚುಲರ್ 

ದೊಡ್ಡ ಸಂಸಾರ 

ಒಳ್ಳೆ ಕೆಲಸವಿಲ್ಲ 

ವಿಷಯ ಹೀಗಿರುವಾಗ ಬರೀ ಒಂದು ಧರ್ಮವನ್ನು ಕೇಂದ್ರಿಕರಿಸಿ ಈ ರೀತಿಯ ಸರ್ವೇ ಮಾಡುವುದು ಎಷ್ಟು ಸಮಂಜಸ.

ಈ ದೇಶವನ್ನು ಗುರುತರವಾಗಿ ಕಾಡುತ್ತಿರುವ ಎಷ್ಟೋ ಸಮಸ್ಯೆಗಳಿವೆ ಅವು ಯಾವು ನಿಮ್ಮ ಕಣ್ಣಿಗೆ ಕಾಣಲಿಲ್ಲವೇ ರಾಜದೀಪ್ ರವರೆ.

ಅಷ್ಟಕ್ಕೂ ಆ ಮನೆ ಮಾಲೀಕರು ಮುಸ್ಲಿಮರಿಗೆ ಮನೆ ಬಾಡಿಗೆ ಕೊಡಲು ನಿರಾಕರಿಸಿದ್ದಕ್ಕೆ ಕಾರಣಗಳಾದರೂ ಎಂಥವು.

೧. ಹೆಣ್ಣು ಮಕ್ಕಳು ಬುರ್ಖಾ ಹಾಕಿ ಓಡಾಡುತ್ತಾರೆ ಅದು ನಮ್ಮ ನೆರೆ ಹೊರೆಯವರಿಗೆ ಮುಜುಗರ ತರುತ್ತದೆ.

೨. ಮನೆಯನ್ನು ಸ್ವಚ್ಚವಾಗಿಡಲ್ಲ 

೩. ಮಾಂಸಾಹಾರ 

೪. ನೆರೆ ಹೊರೆಯವರೊಂದಿಗೆ ಬೆರೆಯುವುದಿಲ್ಲ .

 

ಈ ಎಲ್ಲಾ ಕಾರಣಗಳು ಅಕ್ಷರಶ ನಿಜ ಅಂತ ನಿಮಗೆ ಅನ್ನಿಸಲಿಲ್ಲವೇ ರಾಜದೀಪ್ ರವರೆ 

ಇಷ್ಟೆಲ್ಲಾ ಹೇಳಿದ ನೀವು ಭಾರತೀಯ ಹಿಂದೂಗಳು  ಈ ಮನಸ್ಥಿತಿಗೆ ಬರಲು ಕಾರಣವೇನು ಎಂಬುದನ್ನು ಹೇಳಲು ಮರೆತಿರಲ್ಲ , ಇದು ನಿಮ್ಮ ಜಾಣ ಮರೆವಲ್ಲವೇ.

ಈಗಾಗಲೇ ನಿಮ್ಮ ಚಾನಲ್ ಕಾಂಗ್ರೆಸ್ಸ್ ಪರ ಎಂಬುದು ಜಗ್ಗಜಾಹಿರಾಗಿದೆ , ಆದರು ನಿಮ್ಮ ಇಂತ ಕಾರ್ಯಕ್ರಮಗಳು ಏನನ್ನು ಸೂಚಿಸುತ್ತವೆ ?.

ಈ ಕಾರ್ಯಕ್ರಮ ನೋಡಿದ ನನಗೆ ಅನ್ನಿಸಿದ್ದು ಏನೆಂದರೆ , ಅಲ್ಪಸಂಖ್ಯಾತರ ಪರ ಮತ್ತಾವುದೋ ಮಸೂದೆಯನ್ನೋ / ಮಿಸಲಾತಿಯನ್ನೋ  ಜಾರಿಗೆ ತರಲು ನಿಮ್ಮ ಚಾನಲ್ ಬಳಸಿಕೊಳ್ಳಲಾಗಿದೆ ಅಥವ ನಿಮ್ಮ ಮುಖಾಂತರ ಮುನ್ನುಡಿ ಬರೆಸಲಾಗಿದೆ .

ಏನಂತೀರ ರಾಜದೀಪ್ ರವರೆ - ಬರೀ ಒಂದು ಪ್ರಶಸ್ತಿಗಾಗಿ ಇಷ್ಟೊಂದು ..................?? 

ಲೇಖನ ವರ್ಗ (Category): 

ಪ್ರತಿಕ್ರಿಯೆಗಳು

ರಘು ಅವರೆ, ಅದಕ್ಕೇನಂತೆ, ಮುಸ್ಲಿಮರಿಗೆ ಮನೆ ಬಾಡಿಗೆಗೆ ಕೊಟ್ಟರಾಯ್ತು. ಆಮೇಲೆ ಯಾರೂ ಟೆರರಿಸ್ಟು ಅದು ಇದು ಅಂತ ಹೇಳದಿದ್ದ್ರಾಯ್ತು. ರಾಜದೀಪ್ ಸರ್ ದೇಸಾಯಿ ಕೂಡ ಹಿಂದೂ ಅಲ್ವ. ಅವರ ಮನೆ ಬಾಡಿಗೆಗೆ ಖಾಲಿ ಇದ್ರೆ ಅವರೇ ಕೊಡ್ಲಿ.

ಹೇಳಕ್ಕೆ ಹಾಗಲ್ಲ ಗೌಡ್ರೆ , ಮೇಡಂ ಅವದಿಯಲ್ಲಿ ಏನು ಬೇಕಾದ್ರೂ ಆಗಬಹುದು, ಅದು ಅಲ್ಲದೆ ನಮ್ಮ ದೇವೇಗೌಡರು ಮುಂದಿನ ಜನ್ಮದಲ್ಲಿ ನಾನು ಅಲ್ಪಸಂಖ್ಯತನಾಗಿ (?) ಹುಟ್ಟಲು ಬಯಸುತ್ತಿನಿ ಅಂತ ಹೇಳಿಕೆ ಬೇರೆ ಕೊಟ್ಟಿದ್ದಾರೆ

ದೇಶದ ಅಲ್ಪ ಸಂಖ್ಯಾತರ ಪರಿಸ್ಥಿತಿ ಹೇಗಿದೆ ಎಂದು ಬಿಂಬಿಸಿದ್ದಾರೆ ಕಣ್ರೀ.... ನಿಮ್ಗೇನು ನೀವು ಬಹು ಸಂಖ್ಯಾತರು! :) :-) ಹಿಂದೂಗಳಿಗೆ ಮನೆ ಕೊಡದಿದ್ದರೆ ಅದು ದೊಡ್ಡ ವಿಷಯವಲ್ಲ ಆದರೆ ಮುಸಲ್ಮಾನರ ವಿಷಯಗಳು ಸುದ್ದಿ ಮಾಧ್ಯಮದಲ್ಲಿ ಒಂದು top selling product ಇದ್ದ ಹಾಗೆ. ಅವರವರ ದಾರಿಗೆ ಅವರವರು ಬಳಸಿಕೊಳ್ಳುತ್ತಾರೆ.

ಆದರು ಒಂದು ಧರ್ಮವನ್ನು ಕೇಂದ್ರವಾಗಿಸಿಕೊಂಡು ಈ ರೀತಿಯ ಸರ್ವೇ ನಡೆಸುವುದು ಆಸಮಂಜಸ ಅಲ್ಲವೇ , ಮಾಧ್ಯಮದವರು ಪಕ್ಷತೀತವಾಗಿ, ಧರ್ಮತೀತವಾಗಿ ಇರಬೇಕಲ್ಲವೇ , ಬರೀ ಒಂದು ಪ್ರಶಸ್ತಿ ಆಸೆಗಾಗಿ ಈ ಪರಿಯ ಬೆಣ್ಣೆ ಹಚ್ಚುವುದೇ.

<ಮಾಧ್ಯಮದವರು ಪಕ್ಷತೀತವಾಗಿ, ಧರ್ಮತೀತವಾಗಿ ಇರಬೇಕಲ್ಲವೇ> ಹೌದು. ಆದರೆ ಹಾಗಿಲ್ಲ ಅನ್ನುವುದೂ ವಾಸ್ತವ! ಯಾವುದೇ ಧರ್ಮಕ್ಕೆ ಪ್ರೋತ್ಸಾಹ ಕೊಡುತ್ತಾರೆ ಎಂದಲ್ಲ ಆದರೆ TRP ಅವರಿಗೇ ಎಲ್ಲದಕಿಂತ ದೊಡ್ಡ ಧರ್ಮ!

ನಾನು ಯಾರ ಪರವೂ ಇಲ್ಲ ರಘು. ನನ್ನ ಮಟ್ಟಿಗೆ ಅರ್ಥವಾದ ವಿಷಯಗಳನ್ನ ಹೇಳ್ತೇನೆ ಅಷ್ಟೇ. ಇರುವ ವಿವಾದಗಳನ್ನು ಮುಚ್ಚದಂತೆ ಸರ್ಕಾರ ನೋಡಿಕೊಂಡರೆ ವಿವಾದಗಳಿಗೆ ಉಪ್ಪು ಖಾರ ಹಾಕಿ ಅದನ್ನು exaggerate ಮಾಧ್ಯಮಗಳು ಮಾಡುತ್ತವೆ.

ಇದು ಯಾವಾಗಲೂ ಇದ್ದಿದ್ದೆ. ಆಮೇಲೆ ಆ ಬುರ್ಖಾ ಅಲ್ಲಲ್ಲ, ಬರ್ಖಾ ದತ್.. ಅದು ಇನ್ನೊಂದು ಥರ.. ನಾಚ್ಕೆಯಾಗುತ್ತೆ ಅವನ್ನು ನೋಡೊಕ್ಕೆ..ಇರೋದ್ರಲ್ಲೇ ಅರ್ನಬ್ ಪರವಾಯಿಲ್ಲ. ಮತ್ತೆ ಹೆಡ್ ಲೈನ್ಸ್ ರಾಹುಲ್ ಸಿಕ್ಕಾಪಟ್ಟೆ ಹಾರಾಡ್ತಾ ಇದ್ದ. ಈ ಮುತಾಲಿಕ್ ಅವನ ಮೇಲೇನೇ ಕೇಸ್ ಹಾಕಿದ್ಮೇಲೆ ಈಗ ಬಾಲ ಮುದುರ್ಕೊಂಡು ಸುಮ್ನಿದ್ದಾನೆ. ಮತ್ತೆ ಸಾಗರಿಕಾ ಘೋಷ್.. ಆಕೆ ರಜದೀಪ್ ಬುರ್ಖಾ ಗಿಂತ ವಾಸಿ..

ಭಾರತೀಯರನು ಒಡೆದು ಸಾಮ್ರಾಜ್ಯ ನಡೆಸಿದ ಬ್ರಿಟಿಷರು ಇವರಿಗೆ ಕಲಿಸಿಹೋಗಿಹರು ಪಾಠ ಪ್ರತಿದಿನ ಹೊಸ ತಂತ್ರವನು ಉಪಯೋಗಿಸಿ ಕಲಿತ ಪಾಠ ಮರೆತಿಲ್ಲವೆಂದು ತೋರಿಸುವ ಆಟ "ವರ್ಲ್ಡ್ ದಿಸ್ ವೀಕ್", "ಸ್ಟಾರ್ ನ್ಯೂಸ್" ನೋಡಿ ಮೈಮರೆಯುತ್ತಿದ್ದ ಕಾಲ ಒಂದಿತ್ತು ನಿಜದಿ ಆದ್ರೆ ವಯಸ್ಸಾದಂತೆ ಪ್ರಣಯ್ ರಾಯ್ ಕೂಡ ವ್ಯಾಪಾರಿಯೇ ಆಗಿ ಹಣ ಗಳಿಸುತ್ತಿದ್ದಾನೆ ಮಜದಿ ಸಾಗರಿಕಾ ಘೋಷ್, ಬರ್ಖಾಗಿಂತ ವಾಸಿ ಅನಿಸಿದ್ದರೆ ಕಾರಣವಿದೆ, ಬಿಡಿ ಗಂಡ ರಾಜದೀಪ ಆಕೆಯನ್ನು ತನಗಿಂತ ಎತ್ತರಕ್ಕೆ ಏರಲು ಬಿಡಲಾರ ನೋಡಿ :)

ರಘು ಅವ್ರೇ.. ನನಗನಿಸುತ್ತೆ ಇಲ್ಲಿ ನಾವೇ ಅಲ್ಪ ಸಂಖ್ಯಾತರು ಅಂತ... ಅವರ ಮನೆಯಲ್ಲಿ ಕನಿಷ್ಟ ಅಂದ್ರೂ "೮ ಜನರ ಚಿಕ್ಕ ಕುಟುಂಬ" ಅಂತಾರೆ ಅವ್ರು....... ಪ್ರತಿ........

ಹೌದು ರೀ ಕಣಿವೆ ರಾಜ್ಯದಲ್ಲಿದ್ದ ನಮ್ಮ ಪಂಡಿತರನ್ನೆಲ್ಲ ಓಡಿಸಿ, ಅಲ್ಲಿ ನಾವೀಗ ಅಲ್ಪಸಂಖ್ಯಾತರು .........ಇನ್ನು ಕೆಲವೇ .........ಎಲ್ಲಾ ರಾಜ್ಯಗಳಲ್ಲೂ ನಾವು ಅಲ್ಪಸಂಖ್ಯಾತರು. ಕುತೂಹಲವೆಂದರೆ ಸರ್ಕಾರ ಅವಾಗದ್ರು ನಮಗೆ ಮೀಸಲಾತಿ ಕೊಡುತ್ತ ನೋಡ್ಬೇಕು ........ನಂಬಿಕೆಯಿಲ್ಲ , ಯಾಕೆಂದರೆ ಈಗಿರುವ ಅಲ್ಪಸಂಖ್ಯಾತರು ಬಹುಸಂಖ್ಯತರಾದರೆ ಏನಾಗುತ್ತೆ ಅನ್ನೋದು ಇತಿಹಾಸ ಪುಟಗಳಲ್ಲಿಸ್ಪಷ್ಟವಾಗಿದೆ

ಈ ಚಾನೆಲ್ ನ ಮಾಲೀಕರೂ, ಕಾರ್ಯಕ್ರಮ ನಡೆಸಿಕೊಟ್ಟ್ತವರು ತಮ್ಮ ಮನೆಗಳನ್ನ್ನು , ತಮ್ಮ ಸಂಬಂಧಿಕರ ಮನೆಗಳನ್ನು ಎಷ್ಟು ಜನ ಮುಸಲ್ಮಾನರಿಗೆ ಬಾಡೀಗೆ ಕೊಟ್ಟಿದ್ದಾರೆ? ಮದನಿ, ಕಸಬ್, ರಿಯಾಜ಼್ ಬಟ್ಕಳ್, ಅಫ್ಜಲ್ ಗುರು ಇವರಿಗೆಲ್ಲ ಬಾಡೀಗೆಗೆ ಕೊಟ್ಟು ಆಮೇಲೆ ಮನೆ ಮಾಲಿಕರು ದಿನ ಪೋಲಿಸ್ ಠಾಣೆಗೆ ಅಲಿಯಬೇಕೆ? ೨೦೦೬ ರಲ್ಲಿ ಮೈಸೂರಿನಲ್ಲಿ ನಡೆದ ಘಟನೆ, ಆಗ ಇದ್ದಕ್ಕಿದ್ದಂತೆ ಮನೆಗೆ ಪೋಲಿಸರು ಬಂದು ಹುಡೂಕಾಟ ನಡೆಸಿ, ಆ ಮನೆಯ ಹೆಂಗಸಿನ ಸ್ಥಿತಿ ಹೇಗಿರಬೇಡ? http://www.ourkarnat... ಇದೇ ರಾಜ್ದೀಪ್ ಮತ್ತು ತಂಡ ಎಷ್ಟು ಬಾರಿ ಕಾಶ್ಮೀರಿ ಪಂಡಿತರ ಬಗ್ಗೆ ಕಾರ್ಯಕ್ರಮ ಮಾಡಿದೆ? ಭಯೋತ್ಪಾದನೆಗೆ ಬೆಂಬಲ ನೀಡದೆ ರಸ್ತೆಗೆ ಇಳ್ದು ಪ್ರತಿಭಟಿಸಿ ಎಂದು ಮುಸ್ಲೀಮರಿಗೆ ಎಷ್ಟು ಬಾರಿ ಕರೆ ನೀಡಿದೆ? ಈ ರೀತಿಯ ದೃಶ್ಯಮಾಧ್ಯಮಗಳು ನಡೆಸುವ ಕಾರ್ಯಕ್ರಮಗಳು, ಭಯೋತ್ಪಾದನೆಗಿಂತ ಹೀನಕರ. ಪಶ್ಚಿಮ ಬಂಗಾಳದಲ್ಲಿ ಕೆಲ ತಿಂಗಳಿನ ಹಿಂದೆ, sports center ನಲ್ಲಿ ಹುಡುಗಿಯರ ಮೇಲೆ ನಡೆದ ಹಿಂಸಾಚಾರ, ಅದನ್ನು ನಡೆಸಿದ ಬಾಡಿಗೆ ಮನೆ ಸಿಗದ ಹುಡುಗರ ಬಗ್ಗೆ ಈ ಚಾನೇಲ್ ಬಾಯೇ ಬಿಡುವುದಿಲ್ಲ. . http://hinduexistenc... ಪ್ರಜಾ"ಸತ್ತಾ"ತ್ಮಕ ಕಾಂಗ್ರೆಸ್ಸ್ ಪಕ್ಷದ ಸಿಪಾಯಿಗಳಿಗೆ, ಅದರ ಬೆಂಬಲಿಗರಿಗೆ, "ಮಜಾ"ವಾದಿಗಳಿಗೆ ಇದೆಲ್ಲಾ ಚಿಕ್ಕ ಪುಟ್ಟ ವಿಷಯ ಅಷ್ಟೆ.

ಸ್ವಾಮಿ, ದಯವಿಟ್ಟು ಅಂತಹ ಚಾನ್ನೆಲ್ಲುಗಳನ್ನು ನೋಡುವುದನ್ನು ಮೊದಲು ನಿಲ್ಲಿಸಬೇಕು. ಬಹು ಸಂಖ್ಯಾತರಾದ ನಾವಲ್ಲವೇ ಅವರ TRP ಹೆಚ್ಚು ಮಾಡುತ್ತಿರುವುದು. ನೋಡಿದ್ದೇ ಆದರೆ ನಮಗದು ಇಷ್ಟವಾಗದೆ ಇದ್ದಾರೆ ಅದನ್ನು ಅವರಿಗೆ ತಿಳಿಸುವ ಪ್ರಯತ್ನವನ್ನು ಮಾಡಬೇಕು. ಎ-ಲಿಂಕ್ ಗೆ ಹೋಗಿ ಮತ್ತು ಪ್ರತಿಕ್ರಿಯೆ ತಿಳಿಸಿ http://ibnlive.in.co...

ಬಹಳಷ್ಟು ಬಲ್ಲ ಸಂಪದಿಗ ಮಿತ್ರರೊಬ್ಬರಿಂದ ಹಿಡಿದು ಓರ್ವ ಮಹಿಳೆಯವರೆಗೂ, ಸಾಫ್ಟ್ ವೇರ್ ಇಂಜಿನಿಯರ್ ನಿಂದ ಹಿಡಿದು ಪ್ರಾಥಮಿಕ ವಿದ್ಯಾಭ್ಯಾಸ ಮಾಡಿದ ವ್ಯಕ್ತಿಯವರೆಗೂ ಎಲ್ಲರದೂ ಒಂದೇ ನಿಲುವು; ಮುಸ್ಲಿಮರಿಗೆ ಮನೆ ನೀಡ ಬಾರದು ಎನ್ನವುದಕ್ಕೆ ಅಸಮ್ಮತಿ ಸೂಚಿಸದ ಹೇಳಿಕೆಗಳು. ಇಲ್ಲಿ ಬಂದ ಪ್ರತಿಕ್ರಿಯೆಗಳನ್ನು ಓದಿದ ನಂತರವೂ ನಮ್ಮ ಭಾರತ ಒಂದು ಜಾತ್ಯಾತೀತ ದೇಶ, ಧರ್ಮ ನಿರಪೇಕ್ಷ ನಾಡು, ಎಲ್ಲಾ ಧರ್ಮೀಯರೂ ಶಾಂತಿಯಿಂದ ಸಹಬಾಳ್ವೆ ನಡೆಸುವ ಭೂಮಿ ಎಂದು ಯಾರಿಗಾದರೂ ತೋಚಿದರೆ ಅಂಥವರು ಕುಸಿಯುತ್ತಿರುವ ತಮ್ಮ IQ ಕಡೆ ತೀವ್ರ ಗಮನ ಹರಿಸಬೇಕಾದ ಅವಶ್ಯಕತೆ ಎದ್ದು ಕಾಣುತ್ತದೆ. ಲೇಖನ ಬರೆದ ಸನ್ಮಾನ್ಯ ರಘು ಅವರೇ, ರಾಜ್ ದೀಪ್ ಸರ್ದೇಸಾಯಿ ಒಬ್ಬ ವಿಶಾಲ ಮನೋಭಾವದ, ಭಾರತೀಯ ಸಂಸ್ಕಾರವನ್ನು ಮೈಗೂಡಿಸಿ ಕೊಂಡ, ಈ ದೇಶ ಎಲ್ಲರಿಗೂ ಸೇರಿದ್ದು ಎಂದು ಬಲವಾಗಿ ನಂಬಿರುವ ವ್ಯಕ್ತಿ. ಅಷ್ಟೇ ಅಲ್ಲ ಅಸಹನೆಯ ಕಾರ್ಮೋಡ (ದೇಶ ಅವಮಾನದಿಂದ ತಲೆ ತಗ್ಗಿಸಿದ ನಮ್ಮ ಗೃಹ ಮಂತ್ರಿಗಳ ಮಾತನ್ನು ನೆನಪಿಗೆ ತರಬೇಕಾದ ಅವಶ್ಯಕತೆ ಇಲ್ಲ ಎಂದು ಕೊಳ್ಳುತ್ತೇನೆ) ನಮ್ಮ ದೇಶವನ್ನು ಆವರಿಸಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾನ ಕಾಪಾಡುತ್ತಿರುವ true samaritan. ಮುಸ್ಲಿಮರಿಗೆ ಮನೆ ನೀಡಕೂಡದು ಎಂದು ಭಾವಿಸುವ ಹಿಂದೂಗಳಂತೆಯೇ ಮುಸ್ಲಿಮರಲ್ಲೂ ಇದ್ದಾರೆ ಹಿಂದೂಗಳಿಗೆ ಮನೆ ಕೊಡಬಾರದು ಎಂದು ಹೇಳುವ ಜನ. ಹಾಗೆ ಹೇಳುವ ಮುಸ್ಲಿಮರ ಸಂಖ್ಯೆ ತುಂಬಾ ಕಡಿಮೆಯಾದರೂ (ಅವರ ಸಂಸ್ಕೃತಿ ಒಪ್ಪದ ಕಾರಣ) ತೀರಾ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಪರ ಧರ್ಮೀಯರಿಗೆ ಮನೆ ಕೊಡಬಾರದು ಎನ್ನುವ ನಿಲುವಿಗೆ ಪರಸ್ಪರರ ಬಗ್ಗೆ ಇರುವ ಅಸಹನೆ ಮಾತ್ರವಲ್ಲ ಕಾರಣ. ಕಾರಣ ಏನೇ ಆದರೂ ಈ ಸಮಸ್ಯೆಯನ್ನ ಚರ್ಚಿಸಿದ ದೇಸಾಯಿ ಯವರ ಮೇಲೆ ತಾವು ಮತ್ತು ಇತರರು ಹರಿಹಾಯುವುದು ಎಂಥ ನಾಗರೀಕತೆ ಎಂದು ನಾವು ಯೋಚಿಸಬೇಕಾಗುತ್ತದೆ. ಕನ್ನಡ ಸಾಹಿತ್ಯವನ್ನ ಬೆಳೆಸಲು ಮತ್ತು ನವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಿಸಿದ ಸಂಪದ ದಂಥ ಸುಂದರ ತಾಣವನ್ನು “ಹಗೆ ವರ್ತಕರು” ಹೈ ಜಾಕ್ ಮಾಡಿರುವುದು ದುಃಖದಾಯಕ.

ನಿಜವಾದ ಸಾಮನ್ಯ ಜನರಿಗೆ ಅಗತ್ಯವಿರುವ ದೇಶದ ಅಭಿವೃದ್ದಿಗೆ ಪೂರಕವಾದ ವಿಷಯಗಳನ್ನು ಬಿತ್ತರಿಸಬೇಕಾದ ಮಾಧ್ಯಮಗಳು, ರಾಜಕೀಯ ಪಕ್ಷಗಳ "ಕೈ" ಸನ್ನೆಗೆ ಕುಣಿದು ಬೇಕಾದಂತೆ, ಒಂದು ಕೋಮಿಗೆ ಓಲೈಸುವ, ಅದಕ್ಕೆ ತಕ್ಕಂತೆ ಜನರನ್ನು ಸೃಷ್ಟಿಸಿ ವರದಿ ತಯಾರು ಮಾಡುವ "ಸಮಾಚರ ವರ್ತಕ"ರಾಗಿರುವುದು, ಅದನ್ನು ಜನ ಸಮರ್ಥಿಸಿ ಬೆರೆಯವರನ್ನು ವರ್ತಕರಂತೆ ಕಾಣುವುದು ಇನ್ನೂ ದು:ಖಕರ ಮತ್ತು ಖೇದಕರ, ಮತ್ತು ಅವರ ಬಿರುದು ಬಾವಲಿಗಳಿಗೆ , ಪ್ರಶಸ್ತಿಗೆ ಕಾರಣವೂ ಏನು ಎಂದು ಜನಕ್ಕೆ ಚೆನ್ನಾಗಿ ತಿಳಿದಿದೆ. ರಾಜದೀಪ್ ಸರ್ದೇಸಾಯಿ ಯನ್ನು ಈ ಮಟ್ತಕ್ಕೆ ಹೊಗಳುವವರು "ಕೈ" ಗೊಂಬೆಗಳು, ಇಲ್ಲ ಸಾಚಾರ್ ವರದಿ ಫಲಾನುಭವಿಗಳೆ ಆಗಿರಬೇಕು ಎಂದು ಮಿತ್ರನೊಬ್ಬ ಇತ್ತೀಚೆಗೆ ಹೇಳಿದ್ದ, ಈಗ ಅದು ನಿಜ ಅಂತ ಗೊತ್ತಾಗುತ್ತಾ ಇದೆ. ಹಿಂದೂ ಗಳಿಗೆ ಮನೆ ಕೊಡಬಾರದು ಎಂದು ಒಪ್ಪದ ಸಂಸ್ಕೃತಿಯ ಜನ ಕಾಶ್ಮೀರಿ ಪಂಡಿತರನ್ನು ನಿರ್ಗತಿಕರನ್ನಾಗಿ ಮಾಡಲು ಕಾರಣ? ಕಾಶ್ಮೀರದಲ್ಲಿ ಉರಿಯುತ್ತಿರುವ ಬೆಂಕಿ? ಪಶ್ಚಿಮಬಂಗಾಳದಲ್ಲಿ ನಡೆದ ಹೆಣ್ಣು ಮಕ್ಕಳ ಮೇಲಿನ ದೌರ್ಜನ್ಯ ಇದೆಲ್ಲ ಅವರ ಸಂಸ್ಕುತಿ ನೀಡಿರುವ "ಹಸಿರು" ನಿಶಾನೆ?

ನಮಸ್ಕಾರ ಭಾಸ್ಕರ್. ಪ್ರಪ್ರಥಮ ಬಾರಿಗೆ “ಲಿಂಕು” ಗಳಿಲ್ಲದ ತಮ್ಮ ಪ್ರತಿಕ್ರಿಯೆ ನೋಡಿ ತಬ್ಬಿಬ್ಬಾದೆ. ಈ ಸಲ ಮಳೆ ಜೋರಾಗೇ ಬಂದಿದೆ, ಮತ್ತೇಕೆ ಲಿಂಕುಗಳಿಗೆ ಬರ, ಹುಲುಸಾಗಿ ಬೆಳೆದಿರಬೇಕಿತ್ತಲ್ವಾ? ತುಂಬಾ ದಿನಗಳ ನಂತರ ನಮ್ಮ ಭೇಟಿ, ಮತ್ತೊಮ್ಮೆ ಸ್ನೇಹಪೂರ್ವಕ ನಮಸ್ಕಾರಗಳು.

ತಮಗೂ ಪ್ರತಿ ನಮಸ್ಕಾರಗಳು. ಕರ್ಕರೆ ಯ ಆಕರ ತರದೆ ಮೊದಲ ಬಾರಿಗೆ ತಮ್ಮ ಪ್ರತಿಕ್ರಿಯೆ ನೋಡಿ ನನಗೂ ಮಹದಾಶ್ಚರ್ಯವಾಯಿತು. ಅಗತ್ಯ ಬಿದ್ದಾಗೆಲ್ಲ ಲಿಂಕು ಕೊಟ್ಟೆ ಕೊಡುತ್ತೇನೆ. ತಮಗೆ ಇದ್ದ ಒಂದು ಆಕರ ಇಲ್ಲದ ಹಾಗೆ ಅಗಿಲ್ಲ ನನ್ನ ಸ್ಥಿತಿ. ಸತ್ಯವಿರುವ ಕೊಂಡಿಗಳನ್ನೆ ನಾನು ಕೊಟ್ಟಿರುವುದು ಮತ್ತು ಚರ್ಚೆಯ ಸಂಬಂಧ ಪಟ್ಟ್ಟವು ಮಾತ್ರ. ಎಲ್ಲದಿಕ್ಕೂ ಒಂದೆ ಆಕರ ತಂದು, ಈಗ ಅದಿಲ್ಲದೆ ಜರ್ಜರಿತವಾದ ಮೊಂಡುವಾದ ವಾದ ಮಂಡಿಸುತ್ತಿಲ್ಲ ತಮ್ಮಂತೆ. ನಾನು ಕೊಟ್ಟ ಕೊಂಡಿಗಳ ಬಗ್ಗೆ ತಮ್ಮ ಅಭಿಪ್ರಾಯ ತಿಳಿಸಿದೆ, ಈ ರೀತಿ ವೈಯಕ್ತಿಕ ತೇಜೊವಧೆಗೆ ಇಳಿಯಲು ಪ್ರಯತ್ನಿಸಿ ಫಲಾಯನವಾದಕ್ಕೆ ಪ್ರಯತ್ನಿಸುತ್ತಿರುವ ನಿಮನ್ನು ಕಂಡು ಮರುಕವಾಗುತ್ತಿದೆ ಅಷ್ಟೆ.

ಮಾನ್ಯ ಅಬ್ದುಲ್ ರವರೆ ಮೊದಲಿಗೆ ನಾನು ನಿಮ್ಮ ಬ್ಲಾಗ್ ಓದುತ್ತಿರುತ್ತಿನಿ , ನಿಮ್ಮ ಕೆಲವು ಬರಹಗಳಲ್ಲಿ ನೀವು ಭಯೋತ್ಪಾದನೆ ವಿರುಧ ತಳೆದಿರುವ ನಿಲುವು ಮೆಚ್ಚತಕ್ಕದು , ನನ್ನ ಈ ಲೇಖನದ ಉದ್ದೇಶ ರಾಜದೀಪ್ ರವರು ಬರೀ ಒಂದು ಕೋಮನ್ನು ಕೇಂದ್ರಿಕರಿಸಿ ಈ ಕಾರ್ಯಕ್ರಮವನ್ನು ಮಾಡಿದ್ದನ್ನು ವಿರೋಧಿಸುವುದು, ಪ್ರಸ್ತುತದಲ್ಲಿ ಈ ಕಾರ್ಯಕ್ರಮದ ಅವಶ್ಯಕತೆ ಇತ್ತೇ ಎಂಬುದೇ ಒಂದು ದೊಡ್ಡ ಪ್ರಶ್ನೆ , ತಿಳಿಯಾಗಿದ್ದ ನೀರನ್ನು ಕಲಕಿ ಮನಸ್ಸಿಗೆ ಮುದ ಮಾಡಿಕೊಳ್ಳುವ ಇಂತ ಮಾಧ್ಯಮದವರು ತಿಳಿ ಮನಸುಗಳನ್ನು ಕಲ್ಮಶಗೊಲಿಸುತ್ತಿಲ್ಲವೇ, ಇದರ ಪರಿಣಾಮ ಸಮಾಜದ ಮೇಲೆ ಬಿರುವುದಿಲ್ಲವೇ ನೀವೇ ಯೋಚಿಸಿ. ನನ್ನ ಲೇಖನದಲ್ಲಿ ತಿಳಿಸಿರುವ ಹಾಗೆ ಬೆಂಗಳೂರಲ್ಲಿ ಹಿಂದುಗಳಿಗೂ ಮನೆ ಸಿಗುವುದು ಕಷ್ಟವಿದೆ , ಅದನ್ನು ನಾನು ಸ್ಪಷ್ಟವಾಗಿ ಉಲ್ಲೇಖಿಸಿದ್ದೇನೆ . ನನ್ನ ಕೋಪ ರಾಜಕೀಯ ಪ್ರೇರಿತವಾದ ಇಂತ ಕಾರ್ಯಕ್ರಮಗಳ ವಿರುದ್ಧ, ಯಾವುದೇ ಒಂದು ಕೋಮಿನ ಮೇಲಲ್ಲ. ಹೌದು ಕೆಲವಮ್ಮೆ ಸತ್ಯ ಕಟುವಾಗಿರುತ್ತದೆ. ಸಮಜವಾಹಿನಿಯಾದ ಲೇಖನಗಳು ಸಾಹಿತ್ಯದ ಒಂದು ಪ್ರಕಾರ ಎಂಬುದು ನನ್ನ ಅಂಬೋಣ, ಸಂಪದ ಸಾಹಿತ್ಯ ವೇದಿಕೆ ಎಂದು ಭಾವಿಸಿದ್ದೇನೆ. ನಿಮ್ಮ ಉತ್ತರಕ್ಕಾಗಿ ...............

ಹೌದು ನನ್ನ ಭಾರತ , ನಮ್ಮ ಭಾರತ , ನಮ್ಮೆಲ್ಲರ ಭಾರತ .. ಜಾತ್ಯತೀತ ರಾಷ್ಟ್ರ ಎಂದು ಹೇಳಿಕೊಳ್ಳಲು ಹೆಮ್ಮೆ ಅನ್ನಿಸುತ್ತದೆ , ಹೌದು ನನ್ನ ಜಾತ್ಯತೀತ ಭಾರತವೇ ದೇಶದ ಪರಮೊಚ್ಹ ಸ್ಥಾನವನ್ನು ಒಬ್ಬ ಅಲ್ಪಸಂಖ್ಯಾತನಿಗೆ ಕೊಟ್ಟು ೫ ವರ್ಷ ಪ್ರೀತಿಯಿಂದ ಹೋದ ಕಡೆ ಬಂದ ಕಡೆ ಎಲ್ಲಾ ಸನ್ಮಾನ ಮಾಡಿದ್ದೂ , ಆ ವ್ಯಕ್ತಿಗೆ ಸಮಾಜದೆಡೆಗಿರುವ ಪ್ರೀತಿಯನ್ನು ನೋಡಿ ಮುಂದಿನ ೫ ವರ್ಷ ಅಧಿಕಾರದಲ್ಲಿ ಮುಂದುವರೆಯಲಿ ಎಂದು ಬಯಸಿದವರು. ಹೌದು ನನ್ನ ಜಾತ್ಯತೀತ ಭಾರತವೆ ದೇಶವೇ ಒಬ್ಬ ವಿದೇಶಿ ಮಹಿಳೆಗೆ ದೇಶದ ಒಂದು ಪ್ರಮುಖ ಪಕ್ಷದ ಅದ್ಯಕ್ಷ ಗಾದಿಯಲ್ಲಿ ಸತತ ಮೂರನೆ ಬಾರಿ ಕೂರಿಸುತ್ತಿರುವುದು ಹೌದು ನನ್ನ ಜಾತ್ಯತೀತ ಭಾರತವೆ ಮತ್ತೊಂದು ಅಲ್ಪಸಂಖ್ಯಾತ ವ್ಯಕ್ತ್ತಿಯ ಕೈಗೆ ಭಾರತದ ರಕ್ಷಣಾ ವ್ಯವಸ್ಥೆಯ ಮಂತ್ರಿಯನ್ನಾಗಿ ಮಾಡಿರುವುದು. ಮಾನ್ಯ ಅಬ್ದುಲ್ಲರೆ .. ನನ್ನ ಭಾರತ ದೇಶದ ಜಾತ್ಯತೀತ ಉದಾಹರಣೆಗಳು ಇನ್ನು ಬೇಕಾದಷ್ಟಿವೆ ......ಅದು ನಿಮಗೂ ಗೊತ್ತಿದೆ ಅನ್ನೋ ಅನಿಸಿಕೆ.

ಇಬ್ರಾಹಿಂ ರಾಜಕೀಯಕ್ಕೆ ಬಂದ ಹೊಸತರಲ್ಲಿ, ಆತ ಬಾಯಿ ತೆರೆದರೆ ಸಂಸ್ಕೃತ ಶ್ಲೋಕಗಳು, ಬಸವಣ್ಣನ ವಚನಗಳು ಉದುರುತ್ತಿದ್ದವು. ಈಗ ಅದೇ ಬಾಯಲ್ಲಿ ಕೊಳಕು ಬೈಗಳ ಖಜಾನೆಯೇ ತುಂಬಿದೆ. >>>ಕನ್ನಡ ಸಾಹಿತ್ಯವನ್ನ ಬೆಳೆಸಲು ಮತ್ತು ನವ ಬರಹಗಾರರನ್ನು ಉತ್ತೇಜಿಸುವ ನಿಟ್ಟಿನಲ್ಲಿ ಆರಂಭಿಸಿದ ಸಂಪದ ದಂಥ ಸುಂದರ ತಾಣವನ್ನು “ಹಗೆ ವರ್ತಕರು” ಹೈ ಜಾಕ್ ಮಾಡಿರುವುದು ದುಃಖದಾಯಕ.-ಅಂದಿದ್ದೀರಲ್ಲಾ.. -ಯಾರ್ರೀ ಇಲ್ಲಿ "ಹಗೆ ವರ್ತಕರು"?-ರಘು? ಹೆಗ್ಡೆ? ಸಂತೋಷ್? ಮಹೇಶ್? ಚಿಕ್ಕೂ? ಅಥವಾ ತಮಗೆ ತಾವೇ ಹೇಳಿಕೊಂಡಿರಾ? -ಜಾತಿ ರಾಜಕಾರಣ ಮಾಡುತ್ತಿರುವ ರಾಜಕಾರಣಿಗಳು ಹಗೆ ವರ್ತಕರು. ವಿನಾಕಾರಣ ಧರ್ಮ ವಿಷಯ ಎತ್ತಿ ಚರ್ಚೆಮಾಡುವ ಟಿ.ವಿ.ವಾಲಾಗಳು ಹಗೆ ವರ್ತಕರು. ಪ್ರತಿಯೊಂದೂ ಕೊಲೆ/ಹೊಡೆದಾಟಗಳಲ್ಲೂ ಧರ್ಮವನ್ನು ಹುಡುಕಿ, ಒಂದು ಧರ್ಮವಾದರೆ ಸುಮ್ಮನಿದ್ದು, ಬೇರೊಂದಾದರೆ ಬೊಂಬಡಾ ಬಜಾಯಿಸೋ ಬುದ್ಧಿಜೀವಿಗಳು ಹಗೆ ವರ್ತಕರು. (ಇದೆಲ್ಲದರ ತಲೆಬಿಸಿಯಿಲ್ಲದೇ "ಗಡಿಯಾಚೆಗಿರುವ" ಮಂದಿ "ಹಗೆ ಉತ್ಪಾದನೆ" ಮಾಡಿ, ಮಾಡಿ, ನಮ್ಮ ದೇಶಕ್ಕೆ ರಫ್ತು ಮಾಡುತ್ತಾ ಇದ್ದಾರೆ.) ರಾಮಜನ್ಮಭೂಮಿಯ ವಿವಾದದ ತೀರ್ಪು ಹೊರಬೀಳಲು ಕೆಲವೇ ದಿನಗಳಿರುವಾಗ ರಾಜ್ದೀಪ್ ಬಳಗ ತನ್ನ ಕೊಳಕು ಬುದ್ಧಿ ತೋರಿಸಿದ್ದು ತಪ್ಪು. "ಬ್ಯಾಚುಲರ್ರಾ... ಮನೆ ಬಾಡಿಗೆಗೆ ಇಲ್ಲಾ..." ಎಂದು ಮನೆ ಮಾಲಿಕ ಹೇಳುತ್ತಿದ್ದ ಕಾಲವಿತ್ತು. ಅದೇ ಈಗ ಬ್ಯಾಚುಲರ್ಸ್ ಬಿಡಿ, ಮುಸ್ಲಿಂ‌ರನ್ನೂ ಬಿಡಿ, ಸಾಕಷ್ಟು ಅಡ್ವಾನ್ಸ್ ಕೊಡುತ್ತಾರೆಂದರೆ ಪಾ(ತ)ಕಿ "ಕಸಬ್"ಗೂ ಬಾಡಿಗೆ ಮನೆ ಸಿಗುವುದು. ನಮ್ಮ ಜನಕ್ಕೆ ಯಾವಾಗ ಒಳ್ಳೆಯ ಬುದ್ಧಿ ಬರುವುದೋ.. -ಗಣೇಶ.

<<ಲೇಖನ ಬರೆದ ಸನ್ಮಾನ್ಯ ರಘು ಅವರೇ, ರಾಜ್ ದೀಪ್ ಸರ್ದೇಸಾಯಿ ಒಬ್ಬ ವಿಶಾಲ ಮನೋಭಾವದ, ಭಾರತೀಯ ಸಂಸ್ಕಾರವನ್ನು ಮೈಗೂಡಿಸಿ ಕೊಂಡ, ಈ ದೇಶ ಎಲ್ಲರಿಗೂ ಸೇರಿದ್ದು ಎಂದು ಬಲವಾಗಿ ನಂಬಿರುವ ವ್ಯಕ್ತಿ. ಅಷ್ಟೇ ಅಲ್ಲ ಅಸಹನೆಯ ಕಾರ್ಮೋಡ (ದೇಶ ಅವಮಾನದಿಂದ ತಲೆ ತಗ್ಗಿಸಿದ ನಮ್ಮ ಗೃಹ ಮಂತ್ರಿಗಳ ಮಾತನ್ನು ನೆನಪಿಗೆ ತರಬೇಕಾದ ಅವಶ್ಯಕತೆ ಇಲ್ಲ ಎಂದು ಕೊಳ್ಳುತ್ತೇನೆ) ನಮ್ಮ ದೇಶವನ್ನು ಆವರಿಸಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾನ ಕಾಪಾಡುತ್ತಿರುವ true samaritan.>> ನಿಜ ಅಬ್ದುಲ್, ನನಗೂ ರಾಜದೀಪ ಸರ್ದೇಸಾಯಿಯಲ್ಲಿ, ನಮ್ಮ ದೇಶದ ಮಾನ ಕಾಪಾಡುವಲ್ಲಿನ ನಿಜ ಸೋಮಾರಿತನ (ನೀವು ತಪ್ಪಾಗಿ "ನಿಜ ಸಮರಿತನ" ಅಂತ ಬರೆತಿದಿದ್ದೀರಿ ಅಲ್ವೇ... ತಿದ್ದಿದ್ದೇನೆ) ಆಗಾಗ ಕಂಡುಬರುತ್ತದೆ. ಈ ಸೋಮಾರಿತನ ಯಾವಗ ಹೋಗುತ್ತೋ...!

ಭಾಳ ಬುಧ್ಧಿವಂತರು ಮುಸ್ಲಿಮರು. ಅವರ ಸಂಖ್ಯೆ ಕಮ್ಮಿ ಇದ್ದಾಗ ಜಾತ್ಯಾತೀತತೆ ಬೇಕು, ಜಾಸ್ತಿಯಾದಾಗ ಶರಿಯತ್ ಬೇಕು (ಉದಾ ಕಾಶ್ಮೀರ, ಕೇರಳ). ಯಾವ ಮುಸ್ಲಿಮ್ ಬಾಹುಳ್ಯ ದೇಶದಲ್ಲಿ ಜಾತ್ಯಾತೀತತೆ ಉಳಕೊಂಡಿದೆ ಸ್ವಾಮಿ ಸಲ್ಪ ತೋರಿಸ್ತೀರ??

ಮಹೇಶ್, “ಕೂಪ ಮಂಡೂಕ” ತನ ದಿಂದ ಸ್ವಲ್ಪ ಹೊರಬಂದು ಸಾಗರೋಲ್ಲಂಘನ ಮಾಡಬಹುದೇ? ಜಗತ್ತನ್ನು ಕಾಮಾಲೆ (ಕೇಸರೀ?) ಕಣ್ಣುಗಳಿಂದ ನೋಡೋದನ್ನು ಬಿಟ್ಟು ಆ ಭಗವಂತ ನೀಡಿದ ಸತ್ಯ ದೃಷ್ಟಿಯಿಂದ ನೋಡಬಹುದೇ? ಹಾಗಾದರೆ ಬನ್ನಿ, ಶೇಕಡಾ ೯೮ ರಷ್ಟಿರುವ ತುರ್ಕಿ ದೇಶಕ್ಕೆ. ಜಗತ್ತಿಗೇ ಒಂದು ಮಾದರಿಯಾಗಿದೆ ಈ ದೇಶ ಜಾತ್ಯಾತೀತತೆ ಕಾಪಾಡಿ ಕೊಳ್ಳುವುದರಲ್ಲಿ. ಭಾರತ ಮತ್ತು ತುರ್ಕಿ ದೇಶದ ನಡುವಣ ಧರ್ಮ ನಿರಪೇಕ್ಷತನದ ವ್ಯತ್ಯಾಸದ ಕುರಿತು ಒಂದು ಲೇಖನ ಬರೆಯುತ್ತೇನೆ, ಆಗ ಮತ್ತಷ್ಟನ್ನು ತಿಳಿದುಕೊಂಡು ಕಾಲ್ಕಿತ್ತಿರುವ ಜ್ಞಾನವನ್ನು ಮರಳಿ ಪಡೆಯಬಹುದು. ಕೇರಳದಲ್ಲಿ ಮುಸ್ಲಿಮರು ಬಹು ಸಂಖ್ಯಾಕರು ಎನ್ನುವ ಹೊಸ ವಿಷಯ ಹೊರಗೆಡಹಿದ್ದೀರಿ. ಇಂಥದ್ದೇ ಹೊಸ ಹೊಸ ವಿಷಯಗಳು ತಮ್ಮ ಜೋಳಿಗೆಯಲ್ಲಿ ಖಂಡಿತಾ ಇರಬಹುದು,ಅಲ್ಲವೇ?

ಧರ್ಮಗಳ ಮೂಲಭೂತ ನಿಲುವುಗಳಿಗೆ ಸಂಬಂಧಿಸಿದಂತೆ ವಿವಿಧ ಧರ್ಮೀಯರಲ್ಲಿ ಅದರಲ್ಲೂ ವಿದ್ಯಾವಂತರು ಅನ್ನಿಸಿಕೊಂಡವರಲ್ಲಿ ಇರುವ ನಂಬಿಕೆಗಳು , ಮತ್ತು ಈ ನಿಲುವುಗಳಿಂದಾಗಿ ಪಬ್ಲಿಕ್ ಸ್ಪೇಸ್ ಗಳಲ್ಲಿ ಉಂಟಾಗುತ್ತಿರುವ ಸಮಸ್ಯೆಗಳ ಸ್ವರೂಪ ಏನು ಎಂಬ ಬಗ್ಗೆ ಯಾರೂ ಅಷ್ಟಾಗಿ ಚಿಂತನೆ ಮಾಡುವುದಿಲ್ಲ. ಮೇಲು ಮೇಲಿಂದ ಸಮಸ್ಯೆಗಳನ್ನು ಹೇಳುವುದು , ಎಲ್ಲರೂ ಸೌಹಾರ್ದದಿಂದ ಇರಬೇಕು ಎಂದು ಹಾರೈಸುವುದು ತುಂಬ ಸುಲಭ. ಟಿ.ವಿ. ಚಾನೆಲ್ ಗಳು ಅದನ್ನಷ್ಟೇ ಮಾಡುತ್ತವೆ. ಸಮಸ್ಯೆಗಳು ಉಂಟಾಗಲು ಇರುವ ಕಾರಣಗಳ ಶೋಧನೆಯಾಗದೆ ಸಮಸ್ಯೆ ನಿವಾರಣೆಯಾಗುವುದಿಲ್ಲ. ಮೂಲಭೂತ ಪ್ರಶ್ನೆಗಳನ್ನು ಕೇಳಿದಾಗ ಅಬ್ದುಲ್ಲರಂಥ, ಚಿಂತನೆ ಮಾಡುವ ಶಕ್ತಿಯಿರುವವರೂ ಉತ್ತರಿಸದೆ ನುಣುಚಿಕೊಳ್ಳುತ್ತಾರೆ . ಉದಾಹರಣೆಗೆ ಅವರ " ನಾ ಕಂಡುಕೊಂಡ ಇಸ್ಲಾಂ" ಎಂಬ ಲೇಖನಕ್ಕೆ ನಾನು ಬರೆದ ಪ್ರತಿಕ್ರಿಯೆಗೆ ( ಎರಡೆರಡು ಬಾರಿ ಕೇಳಿದರೂ ,ಆನಂತರ ಬೇರೆಯವರಿಗೆ ಉತ್ತರಿಸಿದ್ದರೂ ಕೂಡ) ಅವರು ಉತ್ತರ ನೀಡುವ ಗೋಜಿಗೆ ಹೋಗಿಲ್ಲ. ಇಲ್ಲೂ ಅಷ್ಟೆ, ಟರ್ಕಿಯ (ಅಥವಾ ಇಂಡೊನೇಶಿಯದಂಥ) ಒಂದು ಉದಾಹರಣೆ ಸಮಸ್ತ ಇಸ್ಲಾಂ ರಾಷ್ಟ್ರಗಳನ್ನು ಪ್ರತಿನಿಧಿಸುತ್ತದೆ ಅಂತ ಅವರು ಸೂಚಿಸಿ ನುಣುಚಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಧರ್ಮಾಧಾರಿತವಲ್ಲದ ರಾಷ್ಟ್ರಕಲ್ಪನೆಯೇ ಮುಸ್ಲಿಮಾರಿಗೆ ಸಮಸ್ಯಾತ್ಮಕವಾದದ್ದರಿಂದ ಪಾಕಿಸ್ತಾನ ಪ್ರತ್ಯೇಕವಾದದ್ದಲ್ಲವೇ? ಇದಕ್ಕೆ ವಿರುದ್ಧವಾಗಿ ಸಾವಿರಾರು ಮುಸ್ಲಿಮ್ ದೇಶಭಕ್ತರ ಪಟ್ಟಿಯನ್ನು ಅವರು ನೀಡಬಹುದು. ಎಲ್ಲ ಮುಸ್ಲಿಮರೂ ಹಾಗೆ ಎಂದಲ್ಲ. ಅದೊಂದು ಜನರಲ್ ಟ್ರೆಂಡ್ ಅಷ್ಟೆ. ಈಗ ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿ ಚಳುವಳಿ ಯಾಕ್ಎ ಆಗುತ್ತಿದೆ? ಅಲ್ಲಿ ಹಿಂದುಗಳಿಗಿಂತ ಹೆಚ್ಚು ಮುಸ್ಲಿಮರು ಕೊಲ್ಲಲ್ಪಟ್ಟಿದ್ದಾರೆ ಎನ್ನುತ್ತಾ ಪ್ರತ್ಯೇಕತಾವಾದಿಗಳನ್ನು ಸೆಕ್ಯುಲರ್ ಎಂದು ಹೇಳುವ ಬುದ್ಧಿಜೀವಿಗಳಿಗೆ ಕೊರತೆಯಿಲ್ಲ. ಆದರೆ ಯಾಕೆ ಕೊಂದಿದ್ದಾರೆ? ತಮ್ಮ ಪ್ರತ್ಯೇಕತಾವಾದಕ್ಕೆ ಸಾಕಷ್ಟು ಬೆಂಬಲ ಕೊಟ್ಟಿಲ್ಲ ಅಂತ ಕೊಲ್ಲುತ್ತಿದ್ದಾರೆ. ಕಾಶ್ಮೀರಕ್ಕೆ ಹೆಚ್ಚು ಸ್ವಾಯತ್ತೆ ಬೇಕು ಅಂತ ಅಲ್ಲಿಯ ಜನಾಭಿಪ್ರಾಯ ಎಂದು ತೋರುತ್ತದೆ.ಹಾಗಾದರೆ ಅವರು ಧರ್ಮದ ನೆಲೆಯಲ್ಲಿ ರಾಷ್ಟ್ರೀಯತೆಯನ್ನು ನೋಡುವುದಲ್ಲದೆ ಇನ್ನೇನು? ಇದನ್ನು ಇನ್ನೊಂದು ನೆಲೆಯಿಂದಲೂ ನೋಡಬಹುದು, ಮುಸ್ಲಿಮರಿಗೇ ಅಲ್ಲಿ ಅಷ್ಟು ಅಪಾಯವಿರುವಾಗ ಇನ್ನು ಹಿಂದುಗಳಿಗೆ ಎಷ್ಟು ಹೆದರಿಕೆಯಿರಬಹುದು? ಮುಸ್ಲಿಮರು ಎಂಬ ಕಾರಣಕ್ಕೆ ಮನೆ ಬಾಡಿಗೆಗೆ ನೀಡದಿರುವುದು ಖಂಡಿತಾ ತಪ್ಪು . ಆದರೆ ಅದಕ್ಕೆ ಕಾರಣವಾಗಬಹುದಾದ ಈ ಮೇಲೆ ಹೇಳಿದ ರೀತಿಯ ಇಶ್ಯೂಗಳನ್ನು ಅಡ್ರೆಸ್ ಮಾಡೋದು ಕೂಡ ಅಬ್ದುಲ್ಲರಂಥ , ಗುಡ್ ಸಮರಿಟ್ಅನ್ನುಗಳ, ಮಾಧ್ಯಮಗಳ ,ಬರ್ಖಾ ದತ್ತುಗಳ ಕರ್ತವ್ಯವೇ ಆಗಿದೆ. ಆದ್ರೆ ಇವರು ಏನು ಮಾಡುತ್ತಾರೆ ಅನ್ನೋದಕ್ಕೆ ಒಂದು ಉದಾ:ಬರ್ಖಾ ದತ್ ಒಂದು ಚರ್ಚೆಯನ್ನು ಅವರ ವಾಹಿನಿಯಲ್ಲಿ ಸುಮಾರು ಹದಿನೈದು ದಿನಗಳ ಹಿಂದೆ ನಡೆಸುತ್ತಿದ್ದರು ಅಲ್ಲಿ ಕಾಶ್ಮೀರಿ ಯುವಕರ ಪ್ರಕಾರ ಸೊಲುಶನ್ ಏನು ಎಂಬ ಚರ್ಚೆ ಇತ್ತು. ಮಿಲಿಟರಿ, ಪೋಲಿಸರ ,ಅರೆಸೇನಾಪಡೆಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎನ್ನುವುದನು ಬಿಟ್ಟರೆ ಕಾಶ್ಮೀರಿಗಳಿಗೆ ಬೇರೆ ಏನು ಬೇಕು ಎನ್ನುವುದನ್ನು ಹೇಳಲು ಅಲ್ಲಿದ್ದ ಕಾಶ್ಮೀರಿಮುಸ್ಲಿಮ್ ಯುವಕರೇ ಆಗಲಿ ಬರ್ಖಾದತ್ತರೇ ಆಯ್ಕೆ ಮಾಡಿಕೊಂಡಿದ್ದ್ಪ(ಕಾಶ್ಮೀರದಲ್ಲಿ ಕಷ್ಟಕ್ಕೊಳಗಾದ ಪಂಡಿತರ ಸಮಸ್ಯೆ ಆ ಪಂಡಿತ್ ಯುವಕರಿಗೆ ಮುಖ್ಯ ಅನ್ನಿಸಿರಲಿಲ್ಲ. ಹಾಗಾಗಿ ಬರ್ಖಾ ಆಯ್ಕೆಯಿರಬೇಕು ಅವರು) ಪಂಡಿತ ಯುವಕರೇ ಆಗಲೀ ಸಮರ್ಥರಾಗಲಿಲ್ಲ. ಆ ಇಡೀ ಚರ್ಚೆ ದೆಲ್ಲಿಯನ್ನು ಟಾರ್ಗೆಟ್ ಮಾಡಿದಂತಿತ್ತು ಅಷ್ಟೆ. ಪ್ರತ್ಯೇಕತಾವಾದಕ್ಕೆ ಧರ್ಮವೇ ಕಾರಣ ಅನ್ನು ಸೀಕ್ರೆಟನ್ನು ಯಾರೂ ಯಾಕೆ ಹೇಳೊಲ್ಲ? ಕಾಶ್ಮೀರಿ ಸಂಸ್ಕೃತಿ, ಅನನ್ಯತೆ ಅನ್ನೋ ಒಳ್ಳೆ ನೆಲೆಯನ್ನೇ ಹೇಳಲಾಗುತ್ತೆ ಯಾಕೆ?

"ಪ್ರತ್ಯೇಕತಾವಾದಕ್ಕೆ ಧರ್ಮವೇ ಕಾರಣ ಅನ್ನು ಸೀಕ್ರೆಟನ್ನು ಯಾರೂ ಯಾಕೆ ಹೇಳೊಲ್ಲ?" ಹಾಗೆ ಹೇಳಿದರೆ, ಅವರ ಜತ್ಯಾತೀತ ವಾದಕ್ಕೆ ಧಕ್ಕೆ ಬರುವುದಲ್ಲ್ವೆ? ಅಂತರರಾಷ್ಟೀಯ ಮಟ್ಟದಲ್ಲಿ "ಗುಡ್ ಸಮರಿಟ್ಅನ್ನು" ಎಂದು ಪಡೆದ ಪಟ್ಟಕ್ಕೆ ಧಕ್ಕೆ ಉಂಟಾಗುವುದಲ್ಲವೆ!! ಇದೇ ರಜ್ದೀಪ್. ಒಬ್ಬ ವಯೋವೃದ್ದ ಹಿಂದುಗಳಿಗೆ ಧಕ್ಕೆ ಉಂಟಾಗುವಂತೆ ಚಿತ್ರ ರಚಿಸಿ, ಇಲ್ಲಿ ಉಳಿಯಲಾಗದೆ, ೯೬ ರ ವಯಸಿನಲ್ಲೆ ದೇಶದ ಪಾಸ್ ಪೋರ್ಟ್ ಹಿಂತಿರುಗಿಸಿದರೆ ಅದು ದೊಡ್ಡ ವಿಷಯ ಮಾಡಿ,, ಆದರೆ ಧಾರ್ಮಿಕ ಕಾರಣಕ್ಕಾಗಿ ಕೈ ಮತ್ತು ಕೆಲಸ ಎರಡನ್ನೂ ಕಳೆದು ಕೊಂಡ ವ್ಯಕ್ತಿಯದ್ದು ಸಣ್ಣ ವಿಷಯ. ಇವರು ಯಾಕೆ ಹಿಡೆನ್ ಕ್ಯಾಮೆರ ಬಳಸಿ ಕೇರಳದಲ್ಲಿನ ಧಾರ್ಮಿಕ ನ್ಯಾಯಲಗಳ ಚಟುವಟಿಕೆಗಳನ್ನು ಬಯಲಿಗೆ ಎಳೆಯುವುದಿಲ್ಲ? ಇದೆಲ್ಲ ಬೇರೆ ದೇಶದ ಧರ್ಮ ನಿರಪೇಕ್ಶ ಗುಣಗಳ ಬಗ್ಗೆ, ಪ್ರಜಾಸತ್ತಾತ್ಮಕ ಪಕ್ಷದ ಹಿಂಬಾಲಕರಿಗೆ ಜಾಣ ಕುರುಡಿನ ಕಾರಣ ಕಾಣಿಸುವುದೇ ಇಲ್ಲ. ಇಂತಹ ಅಕ್ಷರ ಭಯೋತ್ಪಾದಕರು ದೇಶಕ್ಕೆ ನಿಜವಾದ ಮಾರಕ.

<< ಶೇಕಡಾ ೯೮ ರಷ್ಟಿರುವ ತುರ್ಕಿ ದೇಶಕ್ಕೆ >> ಮೊದಲು ಹತ್ತಿರದಲ್ಲಿರುವ ಪಾಕಿಸ್ಥಾನ ಬಂಗ್ಲಾದೇಶ ನೋಡಿ ಆಮೇಲೆ ದೂರದಲ್ಲಿರುವ ತುರ್ಕಿಗೆ ಹೋಗುವುದು ಚೆನ್ನ ಅನ್ಸುತ್ತೆ. ಏನಕ್ಕೂ ಲೇಖನ ಬರೆಯಿರಿ. ಆಮೇಲೆ ನೋಡೋಣ ಭಗವಂತ ನೀಡಿದ ಸತ್ಯದ ಬಗ್ಗೆ. << ಕೇರಳದಲ್ಲಿ ಮುಸ್ಲಿಮರು ಬಹು ಸಂಖ್ಯಾಕರು ಎನ್ನುವ ಹೊಸ ವಿಷಯ ಹೊರಗೆಡಹಿದ್ದೀರಿ >> ಅವರು ಬಹುಸಂಖ್ಯಾಕರು ಅಂತ ಹೇಳಿಲ್ಲ. ದೇಶದ ಉಳಿದ ಕಡೆ ಹೋಲಿಸಿದಲ್ಲಿ ಅವರ ಸಂಖ್ಯೆ ಹೆಚ್ಚು (೨೫%) ಅಂತ ಹೇಳಿದೆ. ೨೫% ನಲ್ಲೇ ಹಿಂದೂ ಗಳು ಜಿಹಾದಿಗಳ ಭಯದಲ್ಲಿ ಬದುಕುವಂತಾಗಿದೆ, ಇನ್ನು ೫೦% ಆದರೆ ಕೇಳಬೇಕಿಲ್ಲ.

ಹಿಲ್ಡಾರಾಜ ಅವರ ಲೇಖನ ಈ ವಿಷಯದ ಬಗ್ಗೆ http://hildaraja.wor... "I like to narrate my own experience. I had rented my upstairs when I lived in Chennai to Salim(name changed). He agreed on a whole lot of things-like not parking his car within the compound during the day, with a month’s notice he would quit etc. Salim unfortunately did not abide with any of conditions in the agreement. Payment was not a problem. But when I decided to sell the house Salim refused to quit in spite of giving him two months notice. He point blank told me to go to court. I even tried looking out for a house for Salim but could not tell the prospective leasers that he was reliable. Would anyone point a finger at me and accuse me of being anti Muslim?"

ಸರ್ ಮನೆ ಕಟ್ಟಿಸೊದು ಮತ್ತು ಅದನ್ನು ಬಾಡಿಗೆಗೆ ಕೊಡೊದು ಅದರ ಮಾಲಿಕನಿಗೆ ಬಿಟ್ಟ ವಿಚಾರ...ಅವನಿಗೆ ಅದನ್ನು ಕೊಡುವ ಮತ್ತು ತಿರಸ್ಕರಿಸುವ ಸ೦ಪೂರ್ಣ ಅಧಿಕಾರ ಇದೆ..ಅ೦ದ ಮೇಲೆ ಅವರಿಗಿಷ್ಟ ಬ೦ದವರಿಗೆ ಬಾಡಿಗೆಗೆ ಕೊಡಲಿ...ಅ೦ತಹುದರಲ್ಲಿ ಇದನ್ನು ಟಿ.ವಿ. ಯಲ್ಲಿ ರಹಸ್ಯ ಕಾರ್ಯಾಚರಣೆ ನೆಡಸಿ ತೊರಿಸುವ ಅವಶ್ಯಕತೆ ಏನಿದೆ.....? ಅಷ್ಟಾಗಿಯೂ ಇವರಿಗೆ ಅಲ್ಪಸಂಖ್ಯಾತರಿಗೆ ಮನೆ ಕೊಡುವ ಉದ್ದೇಶವಿದ್ದರೆ..... ಸಿ, ಏನ್ , ಏನ್. ಪ್ರೈಮ್ ಟೈಮ್ ನ್ಯೂಸ್ ಕಡೆಯಿ೦ದ ಅಲ್ಪಸ೦ಖ್ಯಾತರಿಗೆ ಅಪಾರ್ಟ್ಮೆ೦ಟ್ ಕಟ್ಟಿಸಿ ಬಾಡಿಗೆ ಕೊಡಲಿ......ಉಪಯುಕ್ತತೆ ಇಲ್ಲದ ಇ೦ತಹ ಕಾರ್ಯಕ್ರಮಗಳನ್ನು ನೆಡಸಿ ಸಮಾಜದ ಸ್ವಾಸ್ಥತೆಯನ್ನು ಹಾಳುಗೆಡವಲು ಹೊರಟಿರುವ ರಾಜದೀಪ್ ಸರ್ ದೇಸಾಯಿ ಅ೦ತಹ ಡೊ೦ಘಿ ಮಾದ್ಯಮದವರಿಗೆ ನಮ್ಮ ವಿರೋಧವಿದೆ......

ಅಲ್ಪ ಸಂಖ್ಯಾತರು ಎನ್ನುವವರು ಇಂದು ಬಹು ಸಂಖ್ಯಾತರಾಗಿದ್ದಾರೆ. ಓಟ್ ಬ್ಯಾಂಕ್ ರಾಜಕಾರಣದಿಂದಾಗಿ ಅವರಿಗೆ ಸಿಗುವ ಸವಲತ್ತುಗಳು ಇತರೆ ಧರ್ಮೀಯರಿಗೆ ಸಿಗುತ್ತಿಲ್ಲ. ಹತ್ತು ಹಿಂದು ಮನೆ ಇರುವ ಕಡೆ ಮುಸ್ಲಿಂ ಮನೆ ಇರುತ್ತದೆ. ಅದೇ ಹತ್ತು ಮುಸ್ಲಿಂ ಮನೆ ಇರೋ ಕಡೆ ಹಿಂದೂಗಳ ಮನೆ ಇರುತ್ತದೆಯಾ ಸ್ವಲ್ಪ ಗಮನಿಸಿ. ಎಲ್ಲೋ ಕೆಲವೊಂದು ಕಡೆ. ಇದನ್ನು ಮುಸ್ಲಿಂರನ್ನು ದೂರುವುದಕ್ಕಾಗಿ ಹೇಳುತ್ತಿಲ್ಲ. ಅವರಲ್ಲಿನ ಒಗ್ಗಟ್ಟು ಹಾಗಿದೆ. ಯಾರಾದರೂ ಮುಸ್ಲಿಂನ ವಿರುದ್ದ ದೂರು ದಾಖಲಾದರೆ ಠಾಣೆಯ ಮುಂದೆ ಇಡೀ ಸಮುದಾಯವೇ ನೆರೆದಿರುತ್ತದೆ. ಅದೇ ಹಿಂದೂಗಳಲ್ಲಿ ನಮಗೆ ಯಾಕೆ ಎನ್ನುವ ಕೆಟ್ಟ ಮನೋಭಾವ. ಕಾಶ್ಮೀರವನ್ನು ಪಾಕಿಸ್ತಾನಕ್ಕೆ ಕೊಡಬೇಕು ಇಲ್ಲವಾದರೇ ನಮಗೇ ಪ್ರತ್ಯೇಕ ಸಂವಿಧಾನ ರಚಿಸಬೇಕು ಎನ್ನುತ್ತಿರುವ ಅಲ್ಲಿನ ಮುಸ್ಲಿಂ ಹುರಿಯತ್ ಸೇರಿದಂತೆ ಹಲವು ಸಂಘಟನೆಯವರಿಗೆ ಏನು ಹೇಳಬೇಕು. ಅಲ್ಲಿ ಹಿಂದೂಗಳು ಅದರಲ್ಲೂ ಪಂಡಿತರುಗಳು ಪ್ರಾಣಿಗಳಂತೆ ಬದುಕುತ್ತಿಲ್ಲವೆ. ಯಾವತ್ತು ನಮ್ಮ ಜೀವ ಹೋಗುತ್ತದೋ ಎನ್ನುವ ಭಯದಲ್ಲಿದ್ದಾರೆ. ಈಗಾಗಲೆ 200ಜನ ಸತ್ತಿದ್ದಾರೆ. ಆದರೂ ಕೇಂದ್ರ ಸರ್ಕಾರ ಸತ್ತಂತೆ ವರ್ತಿಸುತ್ತಿದೆ. ಅಲ್ಲಿ ಹಿಂದೂಗಳು ಹೋದರೆ ಮನೆ ಸಿಗುತ್ತದೆಯೆ, ಮನೆ ಕೊಡುವುದು ಅವರವರ ಸ್ವಂತ ವಿಚಾರ ಇದನ್ನು ಹಿಡನ್ ಕಾಮೆರಾ ಇಟ್ಟು ಏನೋ ಸಾಧಿಸಿದಂತೆ ತೋರುವುದು ಖಂಡಿತಾ ಒಳ್ಳೆಯ ಬೆಳವಣಿಗೆಯಲ್ಲ. ಇದೊಂದು ಟಿ ಆರ್ ಪಿ ಹೆಚ್ಚಿಸಿಕೊಳ್ಳುವುದಕ್ಕಾಗಿ ಮಾಡಿರುವ ವರದಿ.

ಉತ್ತಮ ಪ್ರತಿಕ್ರಿಯೆ ಸಾರ್. ಎಲ್ಲದಕ್ಕೂ ಕೆಸರಿ ಕಣ್ಣು, ಹಿಂದು ಬಹು ಸಂಖ್ಯಾತರು ಎಂದು ದೂರಿಡುವ ಮಹನೀಯರುಗಳು , ತಾವು ಅಂಟಿಸಿಕೊಂಡಿರುವ ಹಸಿರು ಬಣ್ಣದ ಕನ್ನಡಕವನ್ನು ತೆಗೆಯುವುದೇ ಇಲ್ಲ..

ಅಲ್ಲಿ ಹಿಂದೂಗಳು ಅದರಲ್ಲೂ ಪಂಡಿತರುಗಳು ಪ್ರಾಣಿಗಳಂತೆ ಬದುಕುತ್ತಿಲ್ಲವೆ.** ಇಲ್ಲ ಸುರೇಶ್, ಪ್ರಾಣಿಗಳಂತೆ ಬದುಕುತ್ತಿಲ್ಲ. ನೀವು ಅಲ್ಲಿನ ಪರಿಸ್ಥಿತಿ ಅರಿಯದೆ ಬರೆದಿರಬಹುದು.

"ಸಮಾಜದ ಸ್ವಾಸ್ಥತೆಯನ್ನು ಹಾಳುಗೆಡವಲು ಹೊರಟಿರುವ ರಾಜದೀಪ್ ಸರ್ ದೇಸಾಯಿ ಅ೦ತಹ ಡೊ೦ಘಿ ಮಾದ್ಯಮದವರಿಗೆ ನಮ್ಮ ವಿರೋಧವಿದೆ......" ಮಂಜುನಾಥರೆ, ಕರ್ಕರೆ ಆಕರವಿಲ್ಲದೆ, ಇಲ್ಲೊಬ್ಬರು, ರಾಜ್ದೀಪರ ಬಗ್ಗೆ ಹೀಗೆ ಹೇಳಿದ್ದಾರೆ. "ಅಂತಾರಾಷ್ಟ್ರೀಯ ಮಟ್ಟದಲ್ಲಿ ನಮ್ಮ ಮಾನ ಕಾಪಾಡುತ್ತಿರುವ true samaritan." ಈಗ, ಅವರು ಹೇಳಿದ ಪದಗಳ ಬಗ್ಗೆ ನಿಘಂಟುಗಳನ್ನು ಹುಡುಕಬೇಕಾಗಿದೆ. ಈ ಮಾಧ್ಯಮಗಳಿಗೆ ಟಿಆರ್‍ ಪಿ ಹೆಚ್ಚಿಸುವ ಹುನ್ನಾರವೆ ಹೊರತು, ದೇಶದ ಬಗ್ಗೆ ಯಾವ ಕಾಳಜೀಯೂ ಇಲ್ಲ ಅನ್ನುವುದಕ್ಕೆ ಮುಂಬೈ ನಲ್ಲಿ ನಡೆದ ದಾಳಿಯ ಎರಡು ಸಂಗತಿಗಳು ಸಾಕ್ಷಿ. ೧) ಅಲ್ಲಿ ಸೈನಿಕರು ಜೀವದ ಹಂಗು ತೊರೆದು ಕಾರ್ಯಾಚರಣೆ ನಡೆಸುತ್ತಿದ್ದರೆ , ಇವರು ಅದನ್ನ ನೇರ ಪ್ರಸಾರ ನಡೆಸುತ್ತಿದ್ದರು. ಒಳಗೆ ಇರುವ ಭಯೋತ್ಪಾದಕರು [ಸಾರಿ, ಕೆಲವರಿಗೆ ದೇಶ ಭಕ್ತರು] ಹೊರಗಡೆ ಇರುವ ದೇಶ ಭಕ್ತರೊಂದಿಗೆ ಸಂಪರ್ಕ ಇಟ್ಟು ಕೊಂಡಿರುತ್ತಾರೆ, ಈ ರೀತಿ ನೇರ ಪ್ರಸಾರದಿಂದ ಕಾರ್ಯಚರಣೆಯ ವಿವರ ನೇರವಾಗಿಯೆ ಸಿಗುವುದಿಲ್ಲವೆ? ಇದರಿಂದ ಕಾರ್ಯಾಚರಣೆಗೆ ಧಕ್ಕೆ ಉಂಟಾಗುವುದಿಲ್ಲವೆ? ಇದರ ಪರಿಜ್ಞಾನವೂ ಇಲ್ಲದೆ ನೇರ ಪ್ರ್ಸಾರಕ್ಕೆ ಇಳಿದಿದ್ದು , ದೇಶದ ಮಾನ ಕಾಪಡಲು ಹೊರಟ ಪರಿಯೆ? ೨) ಮುಂಬೈ ದಾಳಿಯಲ್ಲಿ ಪಾಕಿಸ್ತಾನದ "ಕೈ"ವಾಡವೇ ಇಲ್ಲ ಎಂಡು ಸಾರಿದ ಸಲ್ಮಾನ್ "ಖಾನ್" ನ ಪ್ರಕರಣವನ್ನು ನಡೆಸಿಕೊಂಡ ಬಗೆ "film personalities are soft targets?" ಆ ದೇಶದಲ್ಲ್ಲಿ ಸಿನೆಮಾ ಒಡಬೇಕು ಅನ್ನುವ ಕಾರಣಕ್ಕೆ ಈ ರೀತಿ ಬೇಜವಾಬ್ದಾರಿ ಹೇಳಿಕೆ ಕೊಟ್ಟವನ್ನು ಸಮರ್ಥಿಸಿ ಕೊಂಡು, ಯಾರ ಮಾನ ಕಾಪಾಡಿದ true samaritan? ಕೆಲ ಮಹನೀಯರೂ ಇದಕ್ಕೆಲ್ಲ ಉತ್ತರ ಕೊಡಲಾಗದೆ, ಕೊಂಡಿ ಕೊಟ್ಟಿಲ್ಲ, ಕರ್ಕರೆಯ ಆಕರ ಇಲ್ಲ ಎಂದು ವ್ಯಥೆ ಪಟ್ಟು , ತಮ್ಮಷ್ಟಕ್ಕೆ ತಾವೆ ಮರುಕ ಹುಟ್ಟಿಸಿಕೊಳ್ಳುತ್ತಾರೆ ಅಷ್ಟೆ.

ಭಾಸ್ಕರ್ ಸರ್...ಕೆಲವರಿಗೆ ನಕ್ಸಲರು "ಮಣ್ಣಿನ ಮಕ್ಕಳಾದರೆ" ಕೆಲವರಿಗೆ ಭಯೊತ್ಪಾದಕರು "ದೇಶ ಭಕ್ತರು."............ ಹೀಗೆ ಕೆಲವು ದಿನಗಳ ಹಿ೦ದೆ ಬ೦ದ ಒ೦ದು ಎಸ್.ಎಮ್.ಎಸ್ ನಲ್ಲಿ ಓದಿದ್ದೆ.......: 'ಬೋಟ್' ನಿ೦ದ ಬ೦ದ ಭಯೊತ್ಪಾದಕರಿಗಿ೦ತ 'ವೋಟ್' ನಿ೦ದ ಬ೦ದ ಭಯೋತ್ಪಾದಕರಿಗೆ ಇ೦ದು ಭಾರತಾ೦ಭೆ ಮಕ್ಕಳು ಹೆದರುವ ಪರಿಸ್ಥಿತಿ ಬ೦ದಿದೆ......

ನಿಜ ಸಾರ್, ವೋಟ್ ನಿಂದ ಬಂದವರಿಂದಲೆ ಇಂದು ಅಫ್ಜಲ್ ಗುರು, ಕಸಬ್ ಎಲ್ಲಾ ಇನ್ನೂ ಖುಶಿಯಾಗಿ ತಿಂದು ಉಂಡು ನೆಮ್ಮದಿಯಿಂದ ಇದ್ದಾರೆ.. ಇನ್ನು "ಕೈ" ಗೆ ಸಿಗದ ಈ ರೀತಿಯ ಅಫ್ಜಲ್,ಕಸಬ್ ಗಳು ಎಷ್ಟೊ? ಅದೆಷ್ಟು ಪಡೀತರ ಚೀಟಿ, ಮತದಾರರ ಗುರುತು ಚೀಟಿ ಪಾಸ್ಪೋರ್ಟ್ ಆಗಲೆ ಸಿಕ್ಕಿದೆಯೊ ಆ ದೇಶ ಭಕ್ತರಿಗೆ!!! ಜೈ ಭಾರತಾಂಬೆ..

ನಾನು ಮುಸಲ್ಮಾನರಿಗೆ ಮನೆಯನ್ನು ಭಾಡಿಗೆಗೆ ಕೊಟ್ಟಿದ್ದೆ. ನನಗೆ ಯಾವ ತೊಂದರೆಯೂ ಆಗಲಿಲ್ಲ. ಅದೇ ಮನೆಯನ್ನು ನಾನು ಮಾರಲು ಹೊರಟಾಗ. "ಮುಸಲ್ಮಾನರಿಗೆ ಮನೆಯನ್ನು ಮಾರಾಠಮಾಡಬೇಡಿ" ಎಂದು ಕಿವಿಮಾತನ್ನು ಹೇಳಿದವರೂ ಇದ್ದರು. ಮನೆಯನ್ನು ನೋಡಲು ಮುಸಲ್ಮಾನರ ಗಂಡು ಹೆಣ್ಣು ಬರುತ್ತಿದ್ದರು. ಮನೆಯಲ್ಲಿ ಬರುವಾಗ ಅತಿ ವಿನಯದಿಂದ ಮುಜುಗರ ಪಟ್ಟು ಒಳಗೆ ಬರಬಹುದೇ? ಎಂದು ವಿಚಾರಿಸಿ ಬರುತ್ತಿದ್ದರು. ನಮ್ಮಲ್ಲಿ ಹಿಂದುಗಳಬಗ್ಗೆ ಮುಸಲ್ಮಾನರಿಗೆ ಭಯ ಹಾಗೂ ಮುಸಲ್ಮಾನರಬಗ್ಗೆ ಹಿಂದುಗಳಿಗೆ ಭಯ ಇದ್ದದ್ದು ಸುಳ್ಳಲ್ಲ ಪರಸ್ಪರ ಅಪನಂಬಿಕೆಯು ಯಾವಾಗ ನಶಿಸುತ್ತದೆಯೋ ಗೊತ್ತಿಲ್ಲ.

ಇಂದಿನ ಟೈಂಸ್ ಆಫ್ ಇಂಡಿಯಾ ದಲ್ಲಿ ಶೋಭಾಡೇ ಇದೆ ತೆರನಾದ ಒಂದು ಲೇಖನ ಬರೆದಿದ್ದಾರೆ. ಅದರ ಸಾರ ಮುಂಬೈಲ್ಲಿ ಧರ್ಮದಾರಿತ ಕಾರಣಗಳಿಂದ ಮುಸ್ಲಿಂ ಹುಡುಗರಿಗೆ ಕಾಲೇಜುಗಳಲ್ಲಿ ಪ್ರವೇಶ ದೊರೆಯುತ್ತಿಲ್ಲ ಎಂಬುದು ಆಕೆಯ ಅಳಲು. ಇರಬಹುದು ಸುಳ್ಳೆನಿರಲಿಕಿಲ್ಲ. ಹಿಂದೊಮ್ಮೆ ಇಮ್ರಾನ್ ಹಶ್ಮಿಯೂ ಕೂಡ ನಾನು ಮುಸ್ಲಿಂ ಎನ್ನುವ ಕಾರಣಕ್ಕೆ ಮನೆ ಸಿಗ್ತಿಲ್ಲ ಎಂದು ಬೊಬ್ಬೆ ಹೊಡೆದಿದ್ದ. ಅಬ್ದುಲ್ ಅಂತಹ ಪೂರ್ವಗ್ರಹ ಪೀಡಿತರಲ್ಲದ ಸಂಪದಿಗರು ಕೂಡ ಈ ಸಮಸ್ಯೆ ಕಾರಣವನ್ನು ತೀಳಿಯಲರಿಯದೇ ಸುಮ್ಮನೆ ಪ್ರತಿಕ್ರಿಯಿಸುತ್ತಾ ಗುಮ್ಮನೆ ಬೇರೆಯವರನ್ನು ಪ್ರಚೋದನೆಗಳಿಸುತ್ತಿರುವುದು ವಿಷಾದನೀಯ. ಕಾಶ್ಮೀರ ಬೆಂಕಿ ಎಂಬ ಲೇಖನದಲ್ಲಿ ಸುಳ್ಳು ಕಾರಣಗಳ ಪೊಳ್ಳು ಲೇಖನಗಳಿಗೆ ಸಂಪದಿಗ ಚಾಮರಾಜ ಸವಡಿಯವರು ಕೊಟ್ಟ ಉತ್ತರಕ್ಕೆ ಪ್ರತ್ಯುತ್ತರವಿಲ್ಲದೆ ಮುಖ ಮರೆಸಿಕೊಂಡ ಲೇಖಕರಂತವರೆ ಇಂತಹ ಸಮಸ್ಯೆಗಳಿಗೆ ನೇರ ಕಾರಣ. ಮುಸ್ಲಿಂ ಬುದ್ದಿಜೀವಿಗಳಿಗೆ ಎಚ್ಚರಿಸಲು ಹೊರಟವರು ಬುದ್ದಿ ಹೇಳಿ ಮುಸ್ಲಿಮರು ಮುಖ್ಯವಾಹಿನಿ ಸೇರುವಂತೆ ಮಾಡುವುದು ಬಿಟ್ಟು, ಹಿಂದೂಗಳ ಮೇಲೆ ದ್ವೇಷ ಕಾರುವ ಲೇಖನಗಳು ಏನು ಸಾಧಿಸುತ್ತವೆ. ದೇಶದ್ರೋಹದಲ್ಲಿ ತೊಡಗಿಕೊಳ್ಳುವಂತೆ ಕರೆ ನೀಡುವ ಮುಸಲ್ಮಾನರಿಂದ ದೂರವಿರಿ ಎಂದು ಯಾವಗಲಾದರೂ ಈ ಬುದ್ದಿಜೀವಿಗಳು ಕರೆ ನೀಡಿದ್ದಾರೆಯೆ? ವಿಶಾಲ ಹೃದಯದ ಸೆಕ್ಯುಲರಿಸ್ಟ್ ಎಂದು ಕರೆದುಕೊಳ್ಳುವವರು ಮುಸ್ಲಿಮರಿಗೆ ಅವರ ಎಲ್ಲ ಕೆಟ್ಟ ಕೆಲಸಗಳಿಗೂ ಬೆಂಬಲ ನೀಡುವುದಷ್ಟಕ್ಕೆ ಮತ್ತು ಹಿಂದೂಗಳ ಪ್ರತಿಯೊಂದನ್ನು ವಿರೋಧಿಸುವುದನ್ನಷ್ಟಕ್ಕೆ ಸೀಮಿತಗೊಳಿಸಿರುವುದು ವಿಷಾದನೀಯ. ನಿರೀಶ್ವರವಾದಿಗಳೆನಿಸಿಕೊಳ್ಳುವವರು ಬರೀ ಹಿಂದೂಗಳನ್ನೆ ಹೀಗಳೆಯುವುದು ಬಿಟ್ಟು ಎಲ್ಲ ಧರ್ಮ ದೇವರನ್ನು ಹೀಗಳೆಯಲಿ ಆಗಲಾದರೂ ಸಮಾನತೆ ಸಾಧಿಸಲಿ. ಇಂದು ಅವರಿಗೆ ಮನೆ ಸಿಗದಿರಲು ಕಾಲೇಜುಗಳಲ್ಲಿ ಪ್ರವೇಶ ದೊರಕದಿರಲು ಅನ್ಯ ಧರ್ಮೀಯರು ಕಾರಣರೆ? ಶಾಂತಿಯುತವಾಗಿದ್ದ ಕಾಶ್ಮೀರದಲ್ಲಿ ಇಂದು ಭಯೋತ್ಪಾದನೆ ತಾಂಡವಾಡಿದ್ದಕ್ಕೆ ಕಾರಣರು ಹಿಂದೂಗಳೆ? ಅನ್ಯ ಧರ್ಮೀಯರನ್ನು ಹುಡುಕಿ ಕೊಂಡ ಮುಂಭೈ ಭಯೋತ್ಪಾದನೆಯನ್ನು ಸಮರ್ತಿಸಿದ ಗಣೇಶ ಭಕ್ತ ಸಲ್ಮಾನನ ಮಾತುಗಳು ಮುಸ್ಲಿಮರ ಮೇಲೆ ವಿಶ್ವಾಸ ತರಿಸುತ್ತದೆಯೆ? ಭಯೋತ್ಪಾದನೆಗೆ ಬೆಂಬಲ ನೀಡುತ್ತಾ, ವಿದ್ಯಾಭ್ಯಾಸ ತ್ಯಜಿಸಿ ಅಪರಾಧ ಸಮಾಜವಿದ್ರೋಹ ಸಮಾಜಘಾತುಕ ಶಕ್ತಿ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ದಾರಿಬಿಟ್ಟ ಮುಸ್ಲಿಮ್ ಯುವಕರನ್ನು ಸರಿದಾರಿಗೆ ತರುವ ಯಾವುದಾದರೂ ಕಾರ್ಯಕ್ರಮಗಳು ಆ ಸಮಾಜದಲ್ಲಿ ನಡೆದಿದೆಯೆ? ಆತ್ಮಾವಲೋಕನ ಮಾಡಿಕೊಳ್ಳಲಿ ಮುಸ್ಲಿಮರು. ಅಂತಹ ಕೆಲಸ ಅಬ್ದುಲ್ಲರಿಂದಲೇ ಪ್ರಾರಂಭವಾಗಲಿ ಎಂದು ಆಶಿಸೋಣವೆ?

"ವಿದ್ಯಾಭ್ಯಾಸ ತ್ಯಜಿಸಿ ಅಪರಾಧ ಸಮಾಜವಿದ್ರೋಹ ಸಮಾಜಘಾತುಕ ಶಕ್ತಿ ಕಾರ್ಯಗಳಲ್ಲಿ ಭಾಗಿಯಾಗುತ್ತಿರುವ ದಾರಿಬಿಟ್ಟ ಮುಸ್ಲಿಮ್ ಯುವಕರನ್ನು ಸರಿದಾರಿಗೆ ತರುವ ಯಾವುದಾದರೂ ಕಾರ್ಯಕ್ರಮಗಳು ಆ ಸಮಾಜದಲ್ಲಿ ನಡೆದಿದೆಯೆ?" >>ನಿನ್ನೆ ದೆಹಲಿಯಲ್ಲಿ ನಡೆದ ಶುಟೌಟ್ ಮತ್ತು ಕಾರು ಸ್ಪೋಟ ನೋಡಲಿಲ್ಲವೆ , True Samaritan ರಾಜ್ದೀಪ್ ಸರ್ದೇಸಾಯಿ ಚಾನೆಲ್ ನಲ್ಲಿ? ಅಂದ ಹಾಗೆ, ಪಲಾಯನವಾದಿಗಳಿಂದ ಯಾವ ರೀತಿ ಉತ್ತರ ನಿರೀಕ್ಷಿಸಲು ಸಾಧ್ಯ ಎಂದು ಸವಡಿ ಅವರ ಲೆಖನಕ್ಕೆ ಬಂದ ಪ್ರತಿಕ್ರಿಯೆ ಯೆ ಉತ್ತಮ ಸಾಕ್ಷಿ ;) ಇವರ modus operandi ಯೆ ಹಾಗೆ. ಉತ್ತರ ಕೊಡಲಾಗದೆ, ಅಲ್ಲಿ ಅದು ಇದೆ, ಇಲ್ಲಿ ಇದು ಇಲ್ಲ, ನಿವು ಒಬ್ಬ ಕೋಮುವಾದಿ, ಕೇಸರಿ ಕಣ್ಣಿನವನು, ನಿನ್ನ ಉತ್ತರದಲಲ್ಲಿ ಇರಬೇಕಾದ್ದೆ ಇಲ್ಲ ಎಂದು ಪ್ರತಿಕ್ರಯಿಸುತ್ತಾರೆಯೆ ಹೊರತು, ವಿಷಯದ ಬಗ್ಗೆ ವಸ್ತುನಿಷ್ಟವಾಗಿ ಉತ್ತರಿಸಲು ಯಾವ ಸರಕನ್ನೂ ಇಟ್ಟುಕೊಂಡಿಲ್ಲ ಅವರು.

ಮತ್ತೆ ಮಿತ್ರ ಅಬ್ದುಲ್ ಅವರು ನಡುವೆ ರಂಗ ಪ್ರವೇಶಿಸಿ ನಿಲ್ಲಲಾರದೆ ಪಲಾಯನ ಹೇಳಿದ್ದಾರೆ ನಾವು ಹುಬ್ಬಳ್ಳಿ ಕಡೆ ಈ ತರಹದವರನ್ನು "ಕಿತಬಿ ಮಾಡಾವ್ರು" ಅಂತೇವಿ , ಅಬ್ದುಲ್ಜೊತೆ ಇದು ಭಾಳ ಸಲ ಆಗೇದ ಸುಳ್ಳ ಕಾಲಕೆದರಿ ಜಗಳಕ್ಕ ಬರತಿರತಾರ ಅವರ ಮೇಲೆ ಅನುಕಂಪವಿದೆ

ಇದೊಂದು ಮುಗಿಯದ ಸಮಸ್ಯೆ ಎಂದು ಎಲ್ಲರಿಗು ಗೊತ್ತು , ಆದರು ಎಲ್ಲೋ ನಮ್ಮ ಭಾವನೆಗಳನ್ನು ಕೆರಳಿಸುವಂತ ವಿಚಾರಗಳು ಕಾರ್ಯಕ್ರಮಗಳು ಅಥವ ಹೇಳಿಕೆಗಳು ನಮ್ಮವರಿಂದಲೇ ಬಂದಾಗ ಮನಸ್ಸಿಗೆ ನೋವಾಗುತ್ತದೆ , ಯಾಕೆಂದರೆ ಇಲ್ಲಿ ಹೇಳಿಕೆ ವಿಚಾರಗಳನ್ನು ತಮ್ಮ ಸ್ವಾರ್ಥಕ್ಕೆ ಬಳಸಿರುತ್ತಾರೆ. ಇಲ್ಲಿ ರಾಜದೀಪ್ ಅವರಿಗೂ ಅರ್ಥವಾಗಿರುವ ಸತ್ಯ ಅಂದರೆ ೧೫ % ಜನರ ಪರವಾಗಿ ಮಾತಾಡಿದಾಗ ಅಥವ ಕಾರ್ಯಕ್ರಮ ಮಾಡಿದಾಗ ೮೫ % ಜನ ಸ್ಪಂದಿಸುತ್ತಾರೆ ಮತ್ತು ಚರ್ಚೆಗಳಾಗುತ್ತವೆ ಟಿ. ಆರ್. ಪಿ ಏರುತ್ತದೆ , ಅದೇ ೮೫ % ಜನರ ಪರವಾಗಿ ಮಾತನಾಡಿದಾಗ ಸ್ಪಂದಿಸುವುದು ಬರೀ ೧೫ % ಮಾತ್ರ ಆದಾಗಿ ಯಾವುದು ಲಾಭದಾಯಕ ಎಂದು ಅವರಿಗೆ ಚೆನ್ನಾಗಿ ಅರ್ಥವಾಗಿದೆ. ಜಾತ್ಯತೀತ ರಾಷ್ಟ್ರವೆಂದು ಕರೆಸಿಕೊಳ್ಳುವ ನಾವು ಇಲ್ಲಿವರೆಗೂ ಅದೇ ರೀತಿ ನೆಡೆದುಕೊಂಡಿದ್ದೀವಿ ಎಂದು ಎಲ್ಲಿ ಬೇಕಾದರೂ ಸಾರಿ ಹೇಳಬಹುದಾಗಿದೆ , ಇದಕ್ಕೆ ನಾವು ಅಲ್ಪಸಂಖ್ಯಾತರಿಗೆ ಕೊಟ್ಟಂತ ಹುದ್ದೆಗಳೇ ಉದಾಹರಣೆ , ಎಲ್ಲಿಂದಲೋ ಬಂದ ಪಾರ್ಸಿಗಳು , ನೆಪಾಲಿಗಳು, ತಿಬೇಟ್ಟರು ನಮ್ಮೆಲ್ಲರೊಂದಿಗೆ ಸಮಾಜಮುಖಿಯಾಗಿ ಬದುಕುತ್ತಿರುವುದು ನಿಜಕ್ಕೂ ಜಾತ್ಯತಿತೆಯನ್ನು ಸಾರುತ್ತದೆ, ಇವರು ಯಾರು ನಮ್ಮ ವಂದೇ ಮಾತರಂ ಹಾಡಲ್ಲ ಎಂದು ಹೇಳಲಿಲ್ಲ , ಇವರು ಯಾರು ನಿಮ್ಮ ನೆಲದ ಕಾನೂನುಗಳು ನಮಗೆ ಅನ್ವಯಿಸುವುದಿಲ್ಲ ಎಂದು ಹೇಳಲಿಲ್ಲ. ಇವರ ಗುರುಗಳು ಯಾರು ನಮ್ಮ ನೆಲದ ಕಾನೂನನ್ನು ಪಾಲಿಸಬೇಡಿ ಎಂದು ಆದೇಶ ಹೊರಡಿಸಲಿಲ್ಲ.... ಇಷ್ಟೆಲ್ಲಾ ಇದ್ದರು ನಾವು ಪದೇ ಪದೇ ಕೆಲ ಜನರಿಗೆನಮ್ಮದು ಜಾತ್ಯತೀತ ರಾಷ್ಟ್ರ ಎಂಬುದನ್ನು ಮನವರಿಕೆ ಮಾಡಿಕೋಡಬೇಕಾಗುತ್ತೆ ಎಂತಹ ವಿಪರ್ಯಾಸ. ನಮ್ಮ ಸಹನೆಗೂ ಒಂದು ಮಿತಿ ಇಲ್ಲವೇ , ಮೇಲೆ ಹೇಳಿರುವ ಇತರೆ ಕೋಮುಗಳ ರೀತಿ ಈ ಕೋಮಿನವರು ನಮ್ಮೊಂದಿಗೆ ಹೊಂದಿಕೊಂಡು ಹೋಗಬೇಕಾಗಿರುವುದು ಅವರ ಧರ್ಮವಲ್ಲವೇ ....ಇದನ್ನು ಕೆಲವರು ಹೇಳಿಕೆ ಕೊಡುವ ಮೊದಲು ಯೋಚಿಸಬಾರದೇ. ಈ ಮೂಲಕ ಚರ್ಚೆಗೆ ಹಚ್ಚಿಕೊಂಡ ಎಲ್ಲರಿಗು ನನ್ನ ನಮಸ್ಕಾರಗಳು ಮತ್ತು ತುರ್ಕಿ ಎಂದಿಗೂ ತುರ್ಕಿಯಾಗೆ ಇರಲಿ ಅದು ಬೇರೆ ಯಾವ ದೇಶದ ಪ್ರಭಾವಕ್ಕೂ ಒಳಗಾಗದಿರಲಿ ಎಂದು ಆಶಿಸುವೆ

Pages